For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷದಲ್ಲಿ ಪ್ರಯಾಣ ಮಾಡಬಹುದೇ?

|

ಪಿತೃಪಕ್ಷವೆಂಬ 16 ದಿನ ಸ್ವರ್ಗಸ್ಥರಾದ ಹಿರಿಯರಿಗೆ ಮೋಕ್ಷ ನೀಡುವ ದಿನವಾಗಿದೆ. ಈ ಸಮಯದಲ್ಲಿ ತರ್ಪಣ ನೀಡುವುದರಿಂದ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.

Pitru Paksha

ಹಿಂದೂ ಸಂಪ್ರದಾಯದ ಪ್ರಕಾರ ಈ ದಿನಗಳಲ್ಲಿ ಪಿತೃಗಳಿಗೆ ತರ್ಪಣ ನೀಡಲಾಗುವುದು, ಇದರಿಂದ ಅವರಿಗೆ ಮೋಕ್ಷ ಸಿಗುವುದು, ಹೀಗಾಗಿ ನಮ್ಮನ್ನು ಹರಿಸುತ್ತಾರೆ ಎಂದು ಹೇಳಲಾಗುವುದು. ಪಿತೃ ದೋಷವಿದ್ದರೆ ಬದುಕಿನಲ್ಲಿ ಅನೇಕ ತೊಂದರೆಗಳು ಎದುರಾಗುವುದು. ಈ ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷ ಸೂಕ್ತವಾದ ಸಮಯವಾಗಿದೆ.

ಯಾವುದೇ ಶುಭ ಕಾರ್ಯಕ್ಕೆ ಸೂಕ್ತವಲ್ಲ

ಯಾವುದೇ ಶುಭ ಕಾರ್ಯಕ್ಕೆ ಸೂಕ್ತವಲ್ಲ

ಪಿತೃ ಪಕ್ಷದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂದು ಹೇಳಲಾಗುವುದು. ಏನಾದರೂ ಹೊಸ ಕಾರ್ಯಗಳನ್ನು ಮಾಡಲು ಇದು ಸೂಕ್ತವಲ್ಲ. ಈ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು, ಈರುಳ್ಳಿ- ಬೆಳ್ಳುಳ್ಳಿ ಕೂಡ ತಿನ್ನಬಾರದು ಎಂದು ಹೇಳುತ್ತಾರೆ.

ವಿದೇಶ ಪ್ರಯಾಣ ಮಾಡಬಹುದೇ?

ವಿದೇಶ ಪ್ರಯಾಣ ಮಾಡಬಹುದೇ?

ಮೊದಲೇ ನಿಗದಿಪಡಿಸಿದ ದಿನಾಂಕವಾದರೆ ಹೋಗಬಹುದು. ವಿದೇಶಕ್ಕೆ ಪ್ರಯಾಣ ಮಾಡುವುದಾದರೆ ಒಳ್ಳೆಯ ಸಮಯ ನೋಡಿ ಪ್ರಯಾಣಿಸಿ.

ಯಾತ್ರಾ ಸ್ಥಳಗಳಿಗೆ ಹೋಗಲು ಶುಭ ಸಮಯ

ಯಾತ್ರಾ ಸ್ಥಳಗಳಿಗೆ ಹೋಗಲು ಶುಭ ಸಮಯ

ಪಿತೃ ಪಕ್ಷವೆಂಬುವುದು ಪಿತೃಗಳನ್ನು ಸ್ಮರಿಸುವ ದಿನಗಳಾಗಿವೆ. ಈ 16 ದಿನಗಳಲ್ಲಿ ಪಿತೃಗಳಿಗೆ ಮೋಕ್ಷ ಸಿಗಲು ಪ್ರಾರ್ಥನೆ ಮಾಡಿ ತರ್ಪಣ ನೀಡಲಾಗುವುದು ಹಾಗೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಪಿತೃಪಕ್ಷ ಶುಭ ಸಮಯವಾಗಿದೆ.

 ಕೊನೆಯದಾಗಿ:

ಕೊನೆಯದಾಗಿ:

ಪಿತೃಪಕ್ಷದ ಸಮಯದಲ್ಲಿ ರಿಷಿಕೇಶ-ಹರಿದ್ವಾರ, ವಾರಣಸಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಮಾಡುತ್ತಾರೆ. ಈ ರೀತಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಮಾಡುವುದರಿಂದ ಹಿರಿಯರಿಗೆ ಮೋಕ್ಷ ಸಿಗುವುದು , ನಮಗೆ ಪುಣ್ಯ ಸಿಗುವುದು ಎಂದು ನಂಬಲಾಗಿದೆ. ಆದ್ದರಿಂದ ಪಿತೃಪಕ್ಷದಲ್ಲಿಇಂಥ ಸ್ಥಳಗಳಿಗೆ ತುಂಬಾ ಯಾತ್ರಾರ್ಥಿಗಳು ಬರುತ್ತಾರೆ.

ಪಿತೃದೋಷ ಗುರಿಯಾದರೆ ಕಷ್ಟ

ಪಿತೃದೋಷಕ್ಕೆ ಗುರಿಯಾದರೆ ಜೀವನದಲ್ಲಿ ತುಂಬಾ ಕಷ್ಟ ಸಹಿಸಬೇಕಾಗುತ್ತದೆ. ಈ ಪಿತೃದೋಷ ನಿವಾರಣೆಗೆ ಪಿತೃಪಕ್ಷ ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ದಾನ ಮಾಡುವುದು, ಪಿತೃಗಳನ್ನು ತೃಪ್ತಿ ಪಡಿಸಲು ಅವರಿಗೆ ತರ್ಪಣ ನೀಡಬೇಕು, ಆಗ ಪಿತೃದೋಷ ನಿವಾರಣೆಯಾಗುವುದು.

English summary

Pitru Paksha 2021 Shradh rules: Can We Travel in Pitru Paksha?

pitru paksha strat from September 20 ends at October 6th. Can we travel in pitru paksha? Read on...
X
Desktop Bottom Promotion