For Quick Alerts
ALLOW NOTIFICATIONS  
For Daily Alerts

ಗೃಹ ಪ್ರವೇಶ ಪೂಜೆಗೆ ಮುನ್ನ ಮನೆಯೊಳಗೆ ವಸ್ತುಗಳನ್ನು ತರಲೇಬಾರದು, ಏಕೆ?

|

ಒಂದು ಸ್ವಂತ ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಒಂದು ಹೊಸ ಮನೆ ಕಟ್ಟಿ ಅಥವಾ ಖರೀದಿಸಿ ಆ ಮನೆಯಲ್ಲಿ ವಾಸ ಮಾಡುವ ಮುನ್ನ ಮನೆ ಗೃಹ ಪ್ರವೇಶ ಮಾಡುವುದು ಒಂದು ಸಂಪ್ರದಾಯ. ಎಲ್ಲಾ ಧರ್ಮದವರು ಗೃಹ ಪ್ರವೇಶ ಮಾಡಿಯೇ ಹೊಸ ಮನೆಯಲ್ಲಿ ಜೀವನ ಪ್ರಾರಂಭಿಸುತ್ತಾರೆ.

ಪೂಜೆಗಳನ್ನು ಮಾಡಿಸಿ ಅಥವಾ ಧಾರ್ಮಿಕ ಗುರುಗಳಿಂದ ಪ್ರಾರ್ಥನೆ ಮಾಡಿಸಿ, ಮನೆಯಲ್ಲಿ ಹಾಲು ಉಕ್ಕಿಸಿ ಗೃಹ ಪ್ರವೇಶ ಮಾಡಲಾಗುವುದು. ನಾವು ಮುಂದೆ ಬಾಳುವ ಮನೆಯಲ್ಲಿ ಸಂಪತ್ತಿಗೆ ಯಾವ ಕೊರತೆ ಉಂಟಾಗಬಾರದು, ಆ ಮನೆಯಲ್ಲಿ ನೆಮ್ಮದಿ ಇರಬೇಕು, ಮನೆ ಸದಸ್ಯರು ಆರೋಗ್ಯದಿಂದ ಇರಬೇಕು, ಆ ಮನೆ ನಮ್ಮ ಪಾಲಿಗೆ ಅದೃಷ್ಟದ ಮನೆಯಾಗಿರಬೇಕು ಎಂದು ಬಯಸುತ್ತೇವೆ.

ಅದೆಲ್ಲಾ ಸಿಗಬೇಕೆಂದರೆ ಗೃಹ ಪ್ರವೇಶಕ್ಕೆ ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಬೇಕು, ಇಲ್ಲದಿದ್ದರೆ ಮನೆಗೆ ದೋಷ ಉಂಟಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಲು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲಾಗಿದೆ ನೋಡಿ:

ಗೃಹ ಪ್ರವೇಶ ಮಾಡುವಾಗ ಪಾಲಿಸಬೆಕಾದ ನಿಯಮಗಳು:

ಗೃಹ ಪ್ರವೇಶ ಮಾಡುವಾಗ ಪಾಲಿಸಬೆಕಾದ ನಿಯಮಗಳು:

*ಮನೆಯ ಬಾಗಿ, ಮೇಲ್ಛಾವಣೆ, ಕಿಟಕಿಗಳ ಕೆಲಸ ಮುಗಿದಿರಬೇಕು.

* ಮನೆಗೆ ಪ್ರವೇಶಿಸುವ ಮುನ್ನ ತೆಂಗಿನಕಾಯಿ ಒಡೆಯುವುದು ಶುಭವೆಂದು ಪರಿಗಣಿಸಲಾಗಿದೆ.

* ಮನೆಯೊಳಗಡೆ ಬಲಗಾಲನ್ನು ಇಟ್ಟು ಪ್ರವೇಶ ಮಾಡಿ.

* ಮನೆಯ ಎಲ್ಲಾ ದಿಕ್ಕುಗಳಿಗೆ, ಕೋಣೆಗಳಿಗೆ ಉಪ್ಪು ನೀರನ್ನು ಸಿಂಪಡಿಸಿ, ಇದು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತೆ ಎಂದು ಹೇಳಲಾಗುವುದು.

* ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಡಿ.

* ಗೃಹ ಪ್ರವೇಶದಂದೂ ದೇವರ ಎಲ್ಲಾ ಫೋಟೋಗಳು ಪೂರ್ವಕ್ಕೆ ಮುಖ ಮಾಡಿರುವಂತೆ ಇಡಬೇಕು.

* ಮನೆಯ ಮುಖ್ಯದ್ವಾರವನ್ನು ಮಾವಿನ ಎಲೆಯ ತೋರಣ ಹಾಗೂ ಹೂಗಳಿಂದ ಅಲಂಕರಿಸಬೇಕು.

* ದ್ವಾರದ ಮುಂದುಗಡೆ ಸ್ವಸ್ತಿಕ್‌ ಚಿಹ್ನೆಯನ್ನು ಬಿಡಿಸಿ.

ಗೃಹ ಪ್ರವೇಶಕ್ಕೆ ಮುನ್ನ ಸಾಮಾನುಗಳನ್ನು ಸಾಗಿಸಬೇಡಿ

ಗೃಹ ಪ್ರವೇಶಕ್ಕೆ ಮುನ್ನ ಸಾಮಾನುಗಳನ್ನು ಸಾಗಿಸಬೇಡಿ

ವಾಸ್ತು ಪೂಜೆ ಮಾಡುವ ಮುನ್ನ ಮನೆಯೊಳಗಡೆ ಯಾವ ವಸ್ತುಗಳನ್ನು ಸಾಗಿಸಬಾರದು, ಹಾಲು ಉಕ್ಕಿಸಲು ಸ್ಟೌವ್‌ ಕೊಂಡೊಯ್ಯಬಹುದು, ಇನ್ಯಾವ ವಸ್ತುಗಳನ್ನು ಸಾಗಿಸಬೇಡಿ. ಪೂಜೆ ಮಾಡುವಾಗ ಮನೆ ಖಾಲಿಯಿರಬೇಕು, ನಂತತರವಷ್ಟೇ ವಸ್ತುಗಳನ್ನು ಜೋಡಿಸಿ.

ಪೂಜೆ ಬಳಿಕ ಬರಿಗೈಯಲ್ಲಿ ಯಾರನ್ನು ಬಿಡಬೇಡಿ?

ಪೂಜೆ ಬಳಿಕ ಬರಿಗೈಯಲ್ಲಿ ಯಾರನ್ನು ಬಿಡಬೇಡಿ?

ಗೃಹ ಪ್ರವೇಶವಾದ ಬಳಿಕ ಮನೆಯೊಳಗಡೆ ಮೊದಲಿಗೆ ಚಿನ್ನ,ಬೆಳ್ಳಿ ಹಾಕಿದ ಡಬ್ಬ, ದೇವರ ವಿಗ್ರಹ, ಸಿಹಿತಿಂಡಿ, ತೊಟ್ಟಿಲಿನಲ್ಲಿರುವ ಮಗು, ಹಣ್ಣುಗಳು, ಧಾನ್ಯಗಳು ಇಂಥ ವಸ್ತುಗಳನ್ನು ಮೊದಲು ಸಾಗಿಸಬೇಕು. ಯಾವುದೇ ಕಾರಣಕ್ಕೆ ಬರಿಗೈಯಲ್ಲಿ ಮೊದಲು ಹೆಜ್ಜೆ ಹಾಕಬಾರದು.

ಗೃಹ ಪ್ರವೇಶ ಮಾಡಿದ ಬಳಿಕ ಮನೆಯನ್ನು ಖಾಲಿ ಬಿಡಬೇಡಿ

ಗೃಹ ಪ್ರವೇಶ ಮಾಡಿದ ಬಳಿಕ ಮನೆಯನ್ನು ಖಾಲಿ ಬಿಡಬೇಡಿ

ಗೃಹ ಪ್ರವೇಶ ಮಾಡಿದ ಬಳಿಕ 3 ದಿನಗಳವರೆಗೆ ಮನೆಯನ್ನು ಖಾಲಿ ಬಿಡಬಾರದು, ಯಾರಾದರೂ ಒಬ್ಬರಾದರೂ ಆ ಮನೆಯಲ್ಲಿ ಉಳಿದುಕೊಳ್ಳಬೇಕು. ಖಾಲಿ ಬಿಟ್ಟರೆ ಮನೆಗೆ ದೋಷ ಉಂಟಾಗುವುದು.

* ಇನ್ನು ಗೃಹ ಪೂಜೆ ಮಾಡಿದ ಬ್ರಾಹ್ಮಣರಿಗೆ ಅಥವಾ ಧಾರ್ಮಿಕ ಗುರುವಿಗೆ ಹಣ, ಫಲಾಹಾರ, ಉಡುಗೆಗಳನ್ನು ನೀಡಿ ಗೌರವಿಸಬೇಕು.

ಮನೆಯಲ್ಲಿ ಯಾರಾದರೂ ಗರ್ಭಿಣಿಯಿದ್ದರೆ ಅಥವಾ ಸಮೀಪದಲ್ಲಿ ಮನೆ ಸದಸ್ಯರು ಮರಣವೊಂದಿದ್ದರೆ ಗೃಹ ಪ್ರವೇಶ ಮಾಡುವಂತಿಲ್ಲ.

English summary

Can We Shift Household Items Before Griha Pravesh Puja in Kannada

Can We Shift Household Items Before Griha Pravesh Puja in Kannada, read on...
Story first published: Saturday, April 23, 2022, 17:33 [IST]
X
Desktop Bottom Promotion