For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ವ್ರತ 2022: ವರಲಕ್ಷ್ಮಿ ವ್ರತದಂದು ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ!

|

ಈ ವರ್ಷ (2022) ವರಮಹಾಲಕ್ಷ್ಮಿ ಆಗಸ್ಟ್‌ 5ರಂದು ಎಲ್ಲರ ಮನೆಗೂ ಬರಲಿದ್ದಾಳೆ. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಲಕ್ಷ್ಮಿ ದೇವಿಯ ಪ್ರತಿಷ್ಠಾಪನೆಯನ್ನು ಮಾಡಿ ಲಕ್ಷ್ಮಿ ದೇವಿಗೆ ವಿಶೇಷವಾದ ಪೂಜಾ ಪುನಸ್ಕಾರಗಳನ್ನು ಮಾಡಿ, ಮತ್ತೈದೆಯರಿಗೆ ಬಾಗಿನ ಅರ್ಪಿಸುತ್ತಾರೆ.

ಹಾಗೆಯೇ, ಮನೆಯಲ್ಲಿ ಮಹಾಲಕ್ಷ್ಮೀ ಭದ್ರವಾಗಿ ನೆಲೆಯೂರಬೇಕು ಎಂದು ಯಾರು ತಾನೇ ಬಯಸುವುದಿಲ್ಲ?, ಇದಕ್ಕಾಗಿ ಶುದ್ಧ ಭಕ್ತಿ, ಮಡಿಯಿಂದ ಲಕ್ಷ್ಮಿವ್ರತ, ಲಕ್ಷ್ಮೀ ಪೂಜೆ, ನಿತ್ಯ ಲಕ್ಷ್ಮೀ ನಾಮಾವಳಿಗಳ ಸ್ಮರಣೆ ಮಾಡುವ ಪರಿಪಾಠ ಇದೆ.

Buy These Items On Varamahalakshmi Vrat

ಆದರೆ ಕೆಲವು ವಸ್ತುಗಳು ಸಹ ಮನೆಯಲ್ಲಿ ಲಕ್ಷ್ಮೀ ನೆಲೆಯೂರಲು, ಅವಳನ್ನು ಒಲಿಸಿಕೊಳ್ಳಲು ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೆ?. ಹೌದು, ವರಮಹಾಲಕ್ಷ್ಮೀ ಹಬ್ಬದಂದು ಮನೆಗೆ ಈ ವಸ್ತುಗಳನ್ನು ತಂದರೆ ಲಕ್ಷ್ಮೀಯ ಕೃಪೆಗೆ ಪಾತ್ರರಾಗಬಹುದು, ಅಲ್ಲದೇ, ಮನೆಯ ಎಲ್ಲಾ ಕಷ್ಟಗಳು ದೂರವಾಗಿ ಮನೆಯಲ್ಲಿ ಸಂಪತ್ತು ತುಂಬಿ ಹರಿಯುತ್ತದೆ ಎಂದು ಹೇಳಲಾಗುತ್ತದೆ.

ಯಾವೆಲ್ಲಾ ವಸ್ತುಗಳು ಮುಂದೆ ನೋಡೋಣ:

ಬೆಳ್ಳಿಯ ಗಣೇಶ ಹಾಗೂ ಲಕ್ಷ್ಮಿ ದೇವಿಯ ವಿಗ್ರಹ

ಬೆಳ್ಳಿಯ ಗಣೇಶ ಹಾಗೂ ಲಕ್ಷ್ಮಿ ದೇವಿಯ ವಿಗ್ರಹ

ಬೆಳ್ಳಿ ಇಂದ ಮಾಡಿದ ಗಣೇಶ ಅಥವಾ ಲಕ್ಷ್ಮಿ ದೇವಿಯ ವಿಗ್ರಹವನ್ನು ವರಮಹಾಲಕ್ಷ್ಮಿ ವ್ರತದ ದಿನದಂದು ಮನೆಗೆ ತಂದು ಪೂಜಾ ಮಂದಿರದಲ್ಲಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಸಕಲ ಸಮಸ್ಯೆಗಳು ದೂರವಾಗಲಿದೆ, ಆರ್ಥಿಕ ಸಮಸ್ಯೆಗಳಿಂದಲೂ ಮುಕ್ತಿ ಪಡೆಯುವಿರಿ. ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

ಕಮಲ/ತಾವರೆ

ಕಮಲ/ತಾವರೆ

ಕಮಲ ಅಥವಾ ತಾವರೆ ಹೂವು ಶಾಶ್ವತತೆ, ಜ್ಞಾನ, ಶುದ್ಧತೆ, ಸೌಂದರ್ಯದ ಪ್ರತೀಕವಾಗಿದೆ. ಈ ಹೂವು ಲಕ್ಷ್ಮೀ ದೇವಿಯೆ ಅಚ್ಚುಮೆಚ್ಚಿನ ಹೂವಾಗಿದೆ. ಇನ್ನು ವರಮಹಾಲಕ್ಷ್ಮಿ ಹಬ್ಬದಂದು ಕಮಲದ ಹೂವನ್ನ ತಂದು ಮನೆಯಲ್ಲಿ ಇಟ್ಟುಕೊಂಡರೆ ಅವರ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಈ ಹೂವು ಮಾತ್ರವಲ್ಲದೆ ಕೆಂಪುಗುಲಾಬಿ, ಚೆಂಡು ಹೂವು, ದಾಸವಾಳ, ದರ್ಬೆ ಸಹ ಲಕ್ಷ್ಮೀ ಅರ್ಪಿಸಿ ಅವಳ ಕೃಪೆಗೆ ಪಾತ್ರರಾಗಬಹುದು.

ಹಾಲಿನಿಂದ ಮಾಡಿದ ನೈವೇದ್ಯ

ಹಾಲಿನಿಂದ ಮಾಡಿದ ನೈವೇದ್ಯ

ಲಕ್ಷ್ಮೀ ಶುದ್ಧತೆಯ ಸಂಕೇತ. ವ್ರತದ ದಿನ ವರಮಹಾಲಕ್ಷ್ಮೀಗೆ ಬಳಸಿದ ನೀರು, ತುಪ್ಪ ಅಥವಾ ಎಣ್ಣೆಯಿಂದ ಪೂಜಾ ನೈವೇದ್ಯವನ್ನು ತಯಾರಿಸಬೇಡಿ. ನೈವೇದ್ಯಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ಹೊಸದಾಗಿ ತಂದು ಬಹಳ ಮಡಿಯಿಂದ ನೈವೇದ್ಯ ತಯಾರಿಸಿ. ಇದು ಸಹ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಬಗೆಯಾಗಿದೆ.

ಶಂಖ

ಶಂಖ

ಬಹುತೇಕ ಎಲ್ಲರ ಮನೆಯಲ್ಲೂ ಪೂಜಾ ಮನೆಗಳಲ್ಲಿ ಶಂಖವನ್ನು ಇಡಲಾಗುತ್ತದೆ. ಇದು ಸಕಾರಾತ್ಮಕತೆಯ ಸಂಕೇತ ಎನ್ನಲಾಗುತ್ತದೆ, ಶಂಖವನ್ನು ಊದುವುದರಿಂದ ಮನೆಯಲ್ಲಿನ ಎಲ್ಲಾ ನಕಾರಾತ್ಮಕತೆ ದೂರಾಗುತ್ತದೆ ಎನ್ನುತ್ತಾರೆ. ಆದರೆ ಈ ಶಂಖ ಲಕ್ಷ್ಮಿಯ ಪ್ರಿಯವಾದ ವಸ್ತುವೂ ಹೌದು. ನೀವು ಸೂಕ್ಷ್ಮವಾಗಿ ಗಮನಿಸಿದರೆ ಲಕ್ಷ್ಮೀಯ ಕರದಲ್ಲಿ ಶಂಖ ಹಿಡಿದಿರುವುದನ್ನು ನೋಡಬಹುದು. ಲಕ್ಷ್ಮಿಗೆ ಪ್ರಿಯವಾದ ಶಂಖವನ್ನು ಪೂಜೆಯ ಮನೆಯಲ್ಲಿ ಇಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಮತ್ತು ನೋವುಗಳು ನಿವಾರಣೆ ಆಗಲಿದೆ.

ಕುಬೇರನ ಮೂರ್ತಿ

ಕುಬೇರನ ಮೂರ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಕುಬೇರನ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ನಿಮಗೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ, ಇನ್ನು ಕುಬೇರ ಇರುವ ಸ್ಥಳವನ್ನು ಯಾವಾಗಲು ಬಹಳ ಸ್ವಚ್ಚವಾಗಿ ಇಡಬೇಕು.

ದೇವಿಯ ಪಾದ

ದೇವಿಯ ಪಾದ

ಹಿಂದೂ ಸಂಪ್ರದಾಯದಲ್ಲಿ ಮನೆಯ ಬಾಗಿಲು ಹೊಸಿಲಿಗೂ ಲಕ್ಷ್ಮೀಯ ಪಾದಗಳನ್ನು ರಂಗೋಲೆ ಹಾಕುತ್ತಾರೆ. ಅದರರ್ಥ ಲಕ್ಷ್ಮೀ ಮನೆಯಿಂದ ಹೊರಗೆ ಹೋಗದೆ ಇರಲಿ ಎಂದು. ಹಾಗೆಯೇ, ಮಹಾಲಕ್ಷ್ಮಿ ದೇವಿಯ ಪಾದವನ್ನು ಮನೆಗೆ ತಂದು ಹಣ ಇಡುವ ಸ್ಥಳದಲ್ಲಿ ಇಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿದೇವಿ ನೆಲೆಸುತ್ತಾಳೆ.

ಈ ಕೆಲಸಗಳನ್ನು ಮಾಡಲೇಬೇಡಿ

ಈ ಕೆಲಸಗಳನ್ನು ಮಾಡಲೇಬೇಡಿ

ವರಮಹಾಲಕ್ಷ್ಮೀ ವ್ರತದಂದು ಕಡ್ಡಾಯವಾಗಿ ಮಾಂಸಾಹಾರ ಸೇವನೆ ಮಾಡಲೇಬೇಡಿ, ಅಲ್ಲದೇ ಮನೆಯಲ್ಲೇ ಇಡಲೂ ಬಾರದು.

ಲಕ್ಷ್ಮೀ ಮನೆಯಲ್ಲಿ ನೆಲೆಸಿರುವ ಈ ಶುಭ ಸಮಯದಲ್ಲಿ ಧೂಮಪಾನ, ಮದ್ಯಪಾನ ಸಲ್ಲದು.

ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ಆಗದಂತೆ ನೋಡಿಕೊಳ್ಳಿ. ಸದಾ ಲಕ್ಷ್ಮೀ ಸ್ತ್ರೋತ್ರ ಪಠಣ, ಅಷ್ಟಲಕ್ಷ್ಮೀ ನಾಮಾವಳಿಗಳ ಸ್ಮರಣೆ ಮಾಡಿ.

ಹೆಣ್ಣು ಮಕ್ಕಳು ಪಾಶ್ಚಾತ್ಯ ವಸ್ತ್ರಗಳನ್ನು ಧರಿಸಿ ಲಕ್ಷ್ಮೀಗೆ ಪೂಜೆ ಮಾಡಬೇಡಿ.

English summary

Varalakshmi Vratha 2022: Buy These Things on Varamahalakshmi Vrata To Get Prosperity

Here we are going to tell you Buy These Items On The Day Of Varamahalakshmi Vrat To Get Prosperity. Read more.
X
Desktop Bottom Promotion