For Quick Alerts
ALLOW NOTIFICATIONS  
For Daily Alerts

ಬುದ್ಧ ಪೂರ್ಣಿಮಾ: ಬುದ್ಧನ ಈ ಉಪದೇಶಗಳಲ್ಲಿ ನಮ್ಮೆಲ್ಲಾ ಸಮಸ್ಯೆಗೆ ಪರಿಹಾರವಿದೆ

|

ಡಿಸೆಂಬರ್ 30ಕ್ಕೆ, 2022ರಂದು ಬೋಧಿ ದಿನವನ್ನು ಆಚರಿಸಲಾಗುವುದು. ಮಾರ್ಗಶಿರ ಮಾಸದ ಪೂರ್ಣಿಮೆಯಂದು ಬೋಧಿ ವೃಕ್ಷದ ಕೆಳಗಡೆ ಬುದ್ಧನಿಗೆ ಜ್ಙಾನೋದಯವಾಯಿತು. ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಕೂಡ ಕರೆಯಲಾಗುವುದು.


ಗೌತಮ ಬುದ್ಧನ ಮೂಲ ಹೆಸರು ಸಿದ್ಧಾರ್ಥ. ಬಾಲ್ಯದಲ್ಲಿ ತಾಯಿಯನ್ನು ಕಳೆದಿಕೊಳ್ಳುವ ಸಿದ್ಧಾರ್ಥನನ್ನು ಗೌತಮಿ ಎಂಬ ಮಹಿಳೆ ಸಾಕುತ್ತಾಳೆ, ಹಾಗಾಗಿ ಗೌತಮ ಎಂದು ಎಂದು ಕರೆಯಲ್ಪಡುತ್ತಾನೆ. ರಾಜ ಮನೆತನದಲ್ಲಿ ಸುಖ-ಸಂಪತ್ತು, ವೈಭೋಗದಲ್ಲಿ ಸಿದ್ಧಾರ್ಥ ಬೆಳೆಯುತ್ತಾನೆ. ಆದರೆ ತನ್ನ 29ನೇ ವಯಸ್ಸಿನಲ್ಲಿ ತಾನು ಅನುಭವಿಸುತ್ತಿರುವುದು ನಿಜವಾದ ಸುಖವಲ್ಲ, ನಿಜವಾದ ಸಿರಿವಂತಿಕೆಯಲ್ಲ ಎಂದು ಅನಿಸಲಾರಂಭಿಸುತ್ತದೆ. ಲೌಕಿಕ ಆಸಕ್ತಿ ಕಡಿಮೆಯಾಗುತ್ತದೆ, ಅಲೌಕಿಕ ಆಸಕ್ತಿ ಹೆಚ್ಚಾಗುತ್ತದೆ.

ಗೌತಮನು ಮನೆ ಬಿಟ್ಟು ಯಾತ್ರೆ ಪ್ರಾರಂಭಿಸುತ್ತಾನೆ. ಹೀಗೆ ಯಾತ್ರೆ ಮಾಡುತ್ತಾ ಬಿಹಾರ ರಾಜ್ಯದಲ್ಲಿರುವ ಬೋಧ್‌ ಗಯಾ ಎಂಬಲ್ಲಿಗೆ ಬರುತ್ತಾನೆ. ಅಲ್ಲಿರುವ ಬೋಧಿ ವೃಕ್ಷದ ಕೆಳಗಡೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ಗೌತಮ ಬುದ್ಧನಿಗೆ ಜ್ಞಾನೋದಯವಾಗುತ್ತೆ. ಬುದ್ಧನಿಗೆ ಹೀಗೆ ಜ್ಞಾನೋದಯವಾದ ದಿನವನ್ನು ಬೌದ್ಧ ಪೂರ್ಣಿಮೆಯೆಂದು ಆಚರಿಸಲಾಗುವುದು.

ಅಲ್ಲಿಂದ ಬುದ್ಧ ಮನುಕುಲಕ್ಕೆ ಉಪಯುಕ್ತವಾಗುವ ಅನೇಕ ಸಿದ್ಧಾಂತಗಳನ್ನು ನೀಡುತ್ತಾನೆ, ಬುದ್ಧ ಅನೇಕ ಕಡೆ ಸಂಚರಿಸಿ ಬೌದ್ಧ ಧರ್ಮದ ಪ್ರಚಾರ ಮಾಡುತ್ತಾನೆ. ಸತ್ಯ, ಅಹಿಂಸೆಯನ್ನು ಪ್ರತಿಪಾದನೆ ಮಾಡುತ್ತಾನೆ.

ಜೀವನದ ಬಗ್ಗೆ ಗೌತಮ ಬುದ್ಧ ಹೇಳಿದ 5 ಸತ್ಯಗಳು

ಜೀವನದ ಬಗ್ಗೆ ಗೌತಮ ಬುದ್ಧ ಹೇಳಿದ 5 ಸತ್ಯಗಳು

* ಪ್ರಾಪಂಚಿಕ (ಲೌಕಿಕ) ಜೀವನವು ದುಃಖಮಯವಾಗಿದೆ

* ಆಸೆಯೇ ದುಃಖಕ್ಕೆ ಮೂಲ ಕಾರಣ

* ಆಸೆಯನ್ನು ಇಗ್ರಹಿಸಿದರೆ ಪುನರ್ಜನ್ಮ ಕೊನೆಗಾಣಿಸಬಹುದು

* ಆಸೆಯನ್ನು ಕೊನೆಗಾಣಿಸಲು ಅಷ್ಟಾಂಗ ಮಾರ್ಗ ಅನುಸರಿಸಬೇಕು.

 ಗೌತಮ ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳು

ಗೌತಮ ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳು

* ನಂಬಿಕೆ

* ಒಳ್ಳೆಯ ಆಲೋಚನೆ

* ಉತ್ತಮ ನಡತೆ

* ಒಳ್ಳೆಯ ಮಾತು

* ಧ್ಯಾನ

* ಉತ್ತಮ ಪ್ರಯತ್ನ

* ಒಳ್ಳೆಯ ವಿಚಾರ

* ಒಳ್ಳೆಯ ಜೀವನೋಪಾಯ

ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುವ ಬೌದ್ಧ ಧರ್ಮದ ಪಂಚಶೀಲ ತತ್ವಗಳು

ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುವ ಬೌದ್ಧ ಧರ್ಮದ ಪಂಚಶೀಲ ತತ್ವಗಳು

* ಅಹಿಂಸೆ (ಪ್ರಾಣಿ ಹಿಂಸೆ ಮಾಡದಿರುವುದು)

* ನಮ್ಮದಲ್ಲದ ವಸ್ತುಗಳನ್ನು ಮುಟ್ಟದಿರುವುದು

* ಶೀಲಾಹರಣ ಮಾಡದಿರುವುದು

* ಸುಳ್ಳನ್ನು ಹೇಳದಿರುವುದು

* ಮಾದಕ ವ್ಯಸನಗಳಿಂದ ದೂರವಿರುವುದು

ಗೌತಮ ಬುದ್ಧ ನೀಡಿರುವ ಉಪದೇಶಗಳು

ಗೌತಮ ಬುದ್ಧ ನೀಡಿರುವ ಉಪದೇಶಗಳು

* ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿನ್ನನ್ನು ನೀನು ಗೆಲ್ಲು

* ಸಾಗರದ ಅಲೆಗಳು ಜೋರಾಗಿ ಸದ್ದು ಮಾಡಿದರೂ ಸಾಗರದ ತಳ ಯಾವಾಗಲೂ ಪ್ರಶಾಂತವಾಗಿರುತ್ತದೆ.

* ನಾಲಿಗೆ ಹರಿತವಾದ ಚಾಕುವಿದ್ದಂತೆ, ಅದು ರಕ್ತ ಚೆಲ್ಲದೆ ಕೊಲೆ ಮಾಡುತ್ತೆ

* ನೀವು ಯೋಚಿಸಿದಂತೆ ನೀವಾಗುತ್ತೀರಿ, ನೀವು ಅಂದುಕೊಂಡದ್ದನ್ನು ಆಕರ್ಷಿಸುತ್ತೀರಿ, ನೀವು ಕಲ್ಪನೆ ಮಾಡಿದ್ದನ್ನು ಮಾಡುತ್ತೀರಿ

* ಭೂತ ಕಾಲದಲ್ಲಿ ವಾಸಬೇಡ, ಭವಿಷ್ಯದ ಚಿಂತೆ ಬೇಡ, ವರ್ತಮಾನದಲ್ಲಿ ಮನಸ್ಸು ಕೇಂದ್ರೀಕರಿಸಿ

* ಮತ್ತೆ ದಿನ ಬೆಳಗ್ಗೆ ನಾವು ಮರು ಹುಟ್ಟುತ್ತೇನೆ, ಈ ದಿನ ಏನು ಮಾಡುತ್ತೇವೆ ಎಂಬುವುದು ಮುಖ್ಯವಾಗುತ್ತೆ

* ಮೌನವಾಗಿದ್ದರೆ ಹೆಚ್ಚು ಕೇಳಿಸಿಕೊಳ್ಳಬಹುದು

ಬುದ್ಧ ಉಪದೇಶ

ಬುದ್ಧ ಉಪದೇಶ

* ನಿಮ್ಮ ದೊಡ್ಡ ಶತ್ರು ಕೂಡ ನಿಮ್ಮ ಕೆಟ್ಟ ಆಲೋಚನೆಗಳಷ್ಟು ನಿಮಗೆ ಮೋಸ ಮಾಡಲಾರ.

* ನಮ್ಮ ಆಲೋಚನೆಗಳಂತೆ ಜಗತ್ತನ್ನು ರೂಪಿಸಿಬಹುದು

* ನೀವು ನಿಮ್ಮ ಮನಸ್ಸನ್ನು ಆಳಿ, ಇಲ್ಲದಿದ್ದರೆ ಅದು ನಿಮ್ಮನ್ನು ಆಳುತ್ತದೆ

* ತುಂಬಾ ಹಚ್ಚಿಕೊಳ್ಳುವವರು ತುಂಬಾನೇ ನೋವು ಅನುಭವಿಸುತ್ತಾರೆ

* ನಿಮ್ಮೊಳಗೆ ಇರುವ ಕೋಪವೇ ದೊಡ್ಡ ಶತ್ರು, ಅದನ್ನು ಬೆಳೆಯಲು ಬಿಡದಿದ್ದರೆ ಹೊರಗಡೆ ಶತ್ರು ಇರಲ್ಲ

* ಜೀವನದಲ್ಲಿ ನೀವು ಕಲಿಯಬೇಕಾಗಿರುವ ಅತೀ ದೊಡ್ಡ ಪಾಠವೆಂದರೆ ಮೌನವಾಗಿರುವುದು

* ಯಾವಾಗಲೂ ವ್ಯಕ್ತಿಯ ಆತ್ಮವನ್ನು ಪ್ರೀತಿಸಿ, ಮುಖವನ್ನಲ್ಲ

ಬುದ್ಧ ಉಪದೇಶ

ಬುದ್ಧ ಉಪದೇಶ

* ಸೂರ್ಯನ ಬಿಸಿಲು, ಶುದ್ಧ ನೀರು, ಗಾಳಿ, ವಿಶ್ರಾಂತಿ, ವ್ಯಾಯಾಮ , ಮಿತ ಆಹಾರ ಆರೋಗ್ಯದ ಗುಟ್ಟಾಗಿದೆ.

* ಯಾವುದೇ ಕಾರಣಕ್ಕೆ ಭರವಸೆ ಕಳೆಯಬೇಡಿ, ನಾಳೆ ಏನು ಎಂಬುವುದು ಯಾರಿಗೂ ಗೊತ್ತಿಲ್ಲ

* ನೀವು ಕಲಿಯುವುದನ್ನು ನಿಲ್ಲಿಸದಿರಿ, ಏಕೆಂದರೆ ನಿಮ್ಮ ಬದುಕು ಕಲಿಸುವುದನ್ನು ನಿಲ್ಲಿಸುವುದಿಲ್ಲ

* ನಿಮ್ಮನ್ನು ನೋಯಿಸಿದವರಿಗೆಧನ್ಯವಾದ ಹೇಳಿ, ಏಕೆಂದರೆ ಆ ನೋವು ನಿಮ್ಮನ್ನು ಮತ್ತಷ್ಟು ಬಲಿಷ್ಠ ವ್ಯಕ್ತಿಯನ್ನಾಗಿ ಮಾಡುತ್ತದೆ.

* ಸಮಸ್ಯೆಯೆಂಬುವುದು ಸಮಸ್ಯೆಯೇ ಅಲ್ಲ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುವುದೇ ಸಮಸ್ಯೆಗೆ ಕಾರಣ.

English summary

Bodhi Day 2022: Date History and Significance In Kannada

Buddha Purnima 2022: Know History and All About the Day When Gautama Buddha Attained Enlightenment, read on.
X
Desktop Bottom Promotion