For Quick Alerts
ALLOW NOTIFICATIONS  
For Daily Alerts

ಹೌದು ಸ್ವಾಮಿ, ಇನ್ನೊಮ್ಮೆ ಬರಲಿದ್ದಾರೆ ನಾಗಾ ಸಾಧುಗಳು!

By manu
|

ಕುಂಭ ಮೇಳವೆಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ಚಲನಚಿತ್ರಗಳಲ್ಲಿ ನೋಡಿದ್ದ ಕಾಣೆಯಾಗಿದ್ದ ಪ್ರಸಂಗ, ಲಕ್ಷಾಂತರ ಜನರ ಜಾತ್ರೆ, ನದಿಯಲ್ಲಿ ಮುಳುಗು ಹಾಕುವುದು ಮೊದಲಾದವು. ಹಿಂದೂ ಸಂಪ್ರದಾಯದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿರುವ ಕುಂಭಮೇಳವನ್ನು ವೀಕ್ಷಿಸಲು ಆಗಮಿಸುವ ಲಕ್ಷಾಂತರ ಜನರಲ್ಲಿ ಸಾವಿರಾರು ವಿದೇಶೀಯರೂ ಇದ್ದು ಕುಂಭಮೇಳದ ವಿಧಿಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತಾರೆ.

ಹೌದು, ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ಕುಂಭಮೇಳ ಮಹಾರಾಷ್ಟ್ರದ ನಾಸಿಕದಲ್ಲಿ ಆ 29ರಿಂದ ಸೆ 18ರವರೆಗೆ ನಡೆಯಲಿದೆ. ಈ ಮೇಳದಲಿ ಸುಮಾರು ಹತ್ತು ಕೋಟಿ ಜನರು ಆಗಮಿಸುವ ನಿರೀಕ್ಷೆಯಿದ್ದು ಅವರಲ್ಲಿ ಕೆಲವು ಸಾವಿರವಾದರೂ ನಾಗಾಸಾಧುಗಳು ಆಗಮಿಸುವ ನಿರೀಕ್ಷೆಯಿದೆ. ಇವರ ಚಿತ್ರವಿಚಿತ್ರ ವೇಷಭೂಷಣ ಮತ್ತು ವಿಧಿವಿಧಾನಗಳು ಚಕಿತತೆ ಹುಟ್ಟಿಸುತ್ತವೆ.

ಶಿವನ ಆರಾಧಕರಿಗೆ ಪವಿತ್ರವಾದ ಈ ಮೇಳದಲ್ಲಿ ನದಿಯಲ್ಲಿ ಮುಳುಗು ಹಾಕುವುದು ಒಂದು ಮುಖ್ಯ ವಿಧಿಯಾಗಿದೆ. ಈ ಸಮಯದಲ್ಲಿ ಯಾವುದೇ ಅಳುಕಿಲ್ಲದೇ ನಗ್ನರೂಪದಲ್ಲಿ ಹಾಜರಾಗುವ ನಾಗಾಸಾಧುಗಳ ಸಂಪ್ರದಾಯಗಳು ಚಕಿತತೆ ಮೂಡಿಸುತ್ತವೆ. ಕುಂಭ ಮೇಳದ ನಾಗಾ ಸಾಧುಗಳ ಕುರಿತ ಇಂಟರೆಸ್ಟಿಂಗ್ ಕಹಾನಿ

ನಾಗಾಸಾಧುಗಳ ವೇಷಭೂಷಣ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಇದು ಕೊಂಚವಾಗಿ ಬದಲಾಗುತ್ತಾ ಇರುತ್ತದೆ. ಇವರೊಂದಿಗೆ ಫೋಟೋ ತೆಗೆಸಿಕೊಳ್ಳುವುದೂ ಯುವಜನತೆಗೆ ಒಂದು ಗೀಳು ಆಗಿದೆ. ಅದರಲ್ಲೂ ಕುಂಭಮೇಳವನ್ನು ನೋಡಲೆಂದೇ ಬಂದ ಪ್ರವಾಸಿಗರಂತೂ ನಾಗಾಸಾಧುಗಳ ಫೋಟೋಗಳನ್ನು ಖಂಡಿತಾ ತೆಗೆದುಕೊಳ್ಳುತ್ತಾರೆ. ಇದರಲ್ಲಿ ನಾಗಾಸಾಧುಗಳ ಬಗ್ಗೆ ಗಮನಿಸಲಾದ ವಿಚಿತ್ರ ಸನ್ನಿವೇಶ ಅಥವಾ ವೇಷಗಳ ಬಗ್ಗೆ ಅರಿಯಲು ಕೆಳಗಿನ ಸ್ಲೈಡ್ ಶೊ ಮೂಲಕ ನೋಡುತ್ತಾ ಸಾಗಿ..

ಚಿನ್ನದ ಬಾಬಾ

ಚಿನ್ನದ ಬಾಬಾ

ಸುಮಾರು ಹನ್ನೊಂದು ಕೇಜಿ ಚಿನ್ನವನ್ನು ತನ್ನ ಮೈಮೇಲೆ ಧರಿಸಿಕೊಂಡಿರುವ ಈ ನಾಗಾಸಾಧುವನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ನಾಗಾಸಾಧುಗಳು ನಗ್ನರಾಗಿದ್ದರೆ ಈ ಸಾಧು ಅಪ್ಪಟ ಕೇಸರಿ ಧರಿಸಿ ಮೈಮೇಲೆ ಭಾರೀ ಸರಗಳನ್ನು ಧರಿಸಿರುವ ಮೂಲಕ ಸುತ್ತಲಿನವರ ಗಮನವನ್ನಷ್ಟು ಪಡೆಯುವುದು ಮಾತ್ರವಲ್ಲ ಇತರರು ಈತನ ಕಾಲಿಗೆ ಬಿದ್ದು ಆಶೀರ್ವಾದವನ್ನೂ ಪಡೆದುಕೊಳ್ಳುತ್ತಾರೆ. ಅಲ್ಲದೇ ಆ29ರಂದು ಪ್ರಾರಂಭವಾದ ಕುಂಭಮೇಳದಲ್ಲಿ ಪ್ರಪ್ರಥಮವಾಗಿ ನದಿಯಲ್ಲಿ ಮುಳುಗು ಹಾಕಲು ಅವಕಾಶ ಪಡೆದ ಸಾಧು ಸಹಾ ಆಗಿದ್ದಾರೆ.

courtesy

ರುದ್ರಾಕ್ಷ ಬಾಬಾ

ರುದ್ರಾಕ್ಷ ಬಾಬಾ

ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಮಾನವನ ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗಿದೆ. ಇದಕ್ಕೆ ಮನಸ್ಸನ್ನು ಸಮ್ಮೋಹನಗೊಳಿಸುವ ಶಕ್ತಿಯೂ ಇದೆ ಎಂದು ನಂಬಲಾಗಿದೆ. ಈ ರುದ್ರಾಕ್ಷ ಬಾಬಾ ತನ್ನ ಮೈಮೇಲೆ 501 ರುದ್ರಾಕ್ಷಿಗಳ ಸರವನ್ನು ಧರಿಸಿ ಕಾಣಬರುತ್ತಾನೆ. ಈತನನ್ನು ಕಂಡ ಯಾವುದೇ ಭಕ್ತರು ತಮ್ಮಲ್ಲಿ ಕ್ಯಾಮೆರಾ ಅಥವಾ ಮೊಬೈಲ್ ಇದ್ದರೆ ಚಿತ್ರ ತೆಗೆದುಕೊಳ್ಳದೇ ಇರುವುದಿಲ್ಲ. ಇಲ್ಲದಿದ್ದವರು ಪೇಚಾಡದೇ ಇರುವುದಿಲ್ಲ.

courtesy

ಚರ್ಸಿ ಬಾಬಾ

ಚರ್ಸಿ ಬಾಬಾ

ನಾಗಾ ಸಾಧುಗಳಲ್ಲಿ ಹಲವರು ಧೂಮಪಾನದ ಅತಿರೇಕಕ್ಕೆ ಹೋಗುವುದನ್ನು ನೋಡಬಹುದು. ಹಲವರು ಚರಸ್, ಗಾಂಜಾ ಅಫೀಮು ಮೊದಲಾದ ಅತ್ಯಂತ ಮಾದಕ ವಸ್ತುಗಳನ್ನು ಹೊಗೆಯ ಮೂಲಕ ಸೇವಿಸುತ್ತಾರೆ ಹಾಗೂ ಇದಕ್ಕೆ ಭಕ್ತಿಯ ರೂಪವನ್ನೂ ನೀಡುತ್ತಾರೆ. ಒಂದು ಬಗೆಯ ಮಂಪರಿನಲ್ಲಿದ್ದು ಆಗುಹೋಗುಗಳ ಮೇಲೆ ಯಾವುದೇ ಗಮನವೇ ಇಲ್ಲದ ಈ ಚರ್ಸಿ ಬಾಬಾ ಸಹಾ ಆಗಮಿಸಿದವರ ಗಮನ ಸೆಳೆಯುತ್ತಾರೆ.

courtesy

ಕ್ಯಾಮೆರಾ ಪ್ರಿಯ ಬಾಬಾ

ಕ್ಯಾಮೆರಾ ಪ್ರಿಯ ಬಾಬಾ

ನಾಗಾಸಾಧುಗಳನ್ನು ಚಿತ್ರ ತೆಗೆಯಲು ಗೋಗರೆಯಬೇಕಾದ ಅವಶ್ಯಕತೆಯೇ ಇಲ್ಲ. ಭಕ್ತರು ಅಥವಾ ಪ್ರವಾಸಿಗರು ಯಾರೇ ಆಗಿರಲಿ, ಭಾಷೆ ಬರಲಿ ಬರದಿರಲಿ, ಕ್ಯಾಮೆರಾ ತೋರಿಸಿ ಒಂದು ಫೋಟೋ ತೆಗೆದುಕೊಳ್ಳಬಹುದೇ ಎಂದು ಕೇವಲ ಸಂಜ್ಞೆ ಮಾಡಿದರೂ ಸಾಕು, ನಾಗಾಸಾಧುಗಳು ಇದು ತಮ್ಮ ಆದ್ಯ ಕರ್ತವ್ಯವೆಂಬಂತೆ ಚಿತ್ರಕ್ಕೆ ಭಂಗಿ ನೀಡುತ್ತಾರೆ. ಆದರೆ ಈ ವರ್ಷ ಹಲವಾರು ಸಾಧುಗಳು ತಮ್ಮದೇ ಕ್ಯಾಮೆರಾ ಮತ್ತು ಮೊಬೈಲುಗಳನ್ನು ಕೊಂಡು ತಂದಿದ್ದು ಸೆಲ್ಫೀ ತೆಗೆಯುವ ಮೂಲಕ ಪ್ರವಾಸಿಗರಿಗೆ ತಮ್ಮ ಇನ್ನೊಂದು ರೂಪವನ್ನು ತೋರಿಸಿಕೊಟ್ಟರು.

courtesy

ಹೈ ಟೆಕ್ ಬಾಬಾ

ಹೈ ಟೆಕ್ ಬಾಬಾ

ಆಧುನಿಕ ವಸ್ತುಗಳಿಗೆ ಯಾವಾಗಲೂ ಇಲ್ಲ ಎನ್ನುತ್ತಲೇ ಬಂದಿರುವ ನಾಗಾಸಾಧುಗಳ ಕೈಯಲ್ಲಿ ದುಬಾರಿ ಮೊಬೈಲ್ ಫೋನುಗಳು ಅಚ್ಚರಿ ಮೂಡಿಸಿದವು. ಹಲವರು ದುಬಾರಿ ವೆಬ್ ಕ್ಯಾಮ್, ಕ್ಯಾಮೆರಾಗಳನ್ನು ಉಪಯೋಗಿಸಿ ಚಿತ್ರೀಕರಿಸುತ್ತಿದ್ದುದೂ ಕಂಡುಬಂದಿತು.

courtesy

ಕೌಪೀನರೂಪದ ಬಾಬಾ

ಕೌಪೀನರೂಪದ ಬಾಬಾ

ಕೇವಲ ಕೌಪೀನ (ಗಮ್ಚಾ), ಹನುಮಾನ್ ಗದೆಯ ಹೊರತಾಗಿ ಮೈಮೇಲೆ ಇನ್ನಾವುದೇ ವಸ್ತ್ರವಿಲ್ಲದ ಈ ಬಾಬಾ ನೆರೆದವರ ಗಮನ ಸೆಳೆಯುತ್ತಿದ್ದ. ಈತನ ಚಿತ್ರವನ್ನೂ ಸಾವಿರಾರು ಕ್ಯಾಮೆರಾಗಳು ಸೆರೆಹಿಡಿಯುತ್ತಿದ್ದವು.

courtesy

ನೀಳಜಡೆಯ ಬಾಬಾ

ನೀಳಜಡೆಯ ಬಾಬಾ

ಎಷ್ಟೋ ವರ್ಷಗಳಿಂದ (ಭಹುಷಃ ಹುಟ್ಟಿದಾಗಿನಿಂದ) ತಲೆಗೂದಲನ್ನು ಕತ್ತರಿಸಿಕೊಳ್ಳದೇ ಇರುವ ಬಾಬಾಗಳೂ ಗಮನಸೆಳೆದರು. ನೀಳವಾದ ಜಡೆಯನ್ನು ಸುರುಳಿ ಸುತ್ತಿ ತಲೆಯ ಮೇಲಿರಿಸಿಕೊಂಡು ನದಿಯಲ್ಲಿ ಮುಳುಗು ಹಾಕುವ ಹಲವು ನಾಗಾಸಾಧುಗಳು ಗಮನ ಸೆಳೆದರು.

courtesy

ಮಣಿಗಳಿಂದ ಆವೃತವಾದ ಬಾಬಾ

ಮಣಿಗಳಿಂದ ಆವೃತವಾದ ಬಾಬಾ

ಈ ಬಾಬಾ ತಮ್ಮ ಮೈಮೇಲೆ ಧರಿಸಿರುವ ಸಾವಿರಾರು ಸರಗಳಲ್ಲಿ ಎಷ್ಟು ಮಣಿಗಳಿವೆ ಎಂದು ಲೆಕ್ಕ ಮಾಡಲೂ ಸಾಧ್ಯವಿಲ್ಲ. ಮಣಿಗಳ ಸರದ ಅಂಗಡಿಯನ್ನೇ ಹೊತ್ತು ತಂದಂತೆ ಕಾಣುತ್ತಿದ್ದ ಈ ಬಾಬಾ ಸಹಾ ಗಮನಕ್ಕೆ ಪಾತ್ರನಾಗಿದ್ದ.

courtesy

ಪೂರ್ಣನಗ್ನ ಬಾಬಾ

ಪೂರ್ಣನಗ್ನ ಬಾಬಾ

ಹೆಚ್ಚಿನ ನಾಗಾಸಾಧುಗಳು ಕೇಸರಿ ವಸ್ತ್ರವನ್ನುಟ್ಟುಕೊಂಡಿದ್ದರೆ ಕೆಲವರು ಮಾತ್ರ ಏನನ್ನೂ ಧರಿಸಲು ಒಪ್ಪುವುದಿಲ್ಲ. ಶಿವನ ಅಪ್ಪಟ ಆರಾಧಕರೆಂದು ತಮ್ಮನ್ನು ಗುರುತಿಸಿಕೊಳ್ಳುವ ಇವರು ತಮ್ಮ ಶರೀರವನ್ನು ಸಂಪೂರ್ಣವಾಗಿ ನಗ್ನರೂಪದಲ್ಲಿಟ್ಟುಕೊಳ್ಳುತ್ತಾರೆ. ಕೇವಲ ಬೂದಿಯ ಹೊರತಾಗಿ ಇವರ ಮೈಮೇಲೆ ಏನೂ ಇಲ್ಲದಿರುವುದು ಪ್ರವಾಸಿಗರಿಗೆ, ಅದರಲ್ಲೂ ವಿದೇಶೀಯರಿಗೆ ವಿಶೇಷ ಆಕರ್ಷಣೆ ನೀಡುತ್ತದೆ.

courtesy

ವರ್ಣಖಚಿತ ಬಾಬಾ

ವರ್ಣಖಚಿತ ಬಾಬಾ

ನಾಗಾಸಾಧುಗಳ ನಡುವೆ ತಮ್ಮ ದೇಹದ ಮೇಲೆ ವಿವಿಧ ವರ್ಣಗಳಿಂದ ಕಲಾಕೃತಿಯನ್ನು ಮೂಡಿಸಿಕೊಂಡಿರುವ ಕೆಲವು ಸಾಧುಗಳು ಗಮನ ಸೆಳೆಯುತ್ತಾರೆ. ಕೆಲವರಂತೂ ತಮ್ಮ ಇಷ್ಟದೇವರ ಚಿತ್ರಗಳನ್ನೇ ತಮ್ಮ ಮೈ ಮೇಲೆ ಮೂಡಿಸಿಕೊಂಡಿರುತ್ತಾರೆ. ಉಳಿದವರು ಮುಖ, ಎದೆಗಳ ಮೇಲೆ ಕೆಲವು ಬಣ್ಣಗಳನ್ನು ಢಾಳಾಗಿ ಹಚ್ಚಿಕೊಂಡಿರುತ್ತಾರೆ. ಕೆಲವರು ಹಚ್ಚೆಯನ್ನೂ ಹಚ್ಚಿಸಿಕೊಂಡಿರುವುದು ಕಂಡುಬಂದಿತು. ಈ ವರ್ಣಚಿತ್ರಗಳನ್ನು ಹೊಂದಿರುವವರ ಮುಖಭಾವವನ್ನು ಗಮನಿಸಿದರೆ ಇದರ ಬಗ್ಗೆ ಅವರಿಗೆ ಅಭಿಮಾನವೂ ಇದ್ದಂತೆ ತೋರಿತು.

courtesy

English summary

Bizarre styles of Sadhus participating in Kumbh Mela this year will shock you!

It seems like some of the Sadhus who are participating in Nasik’s Kumbh Mela this year want to set new fashion trends. The Kumbh Mela, which sees millions of devotees, gathered to take a holy dip in River Ganges to purify their souls is incomplete without the present of number of Sadhus who proudly flock there in their own fashion.
X
Desktop Bottom Promotion