For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದರೆ ದೊರೆಯುವ ಪ್ರಯೋಜನಗಳು

|

ಹಿಂದೂ ಧರ್ಮದಲ್ಲಿ ಸತ್ಯಾನಾರಾಯಣ ಪೂಜೆಗೆ ತುಂಬಾನೇ ಮಹತ್ವವಿದೆ. ಮನೆ ಗೃಹ ಪ್ರವೇಶವಿರಲಿ, ಯಾವುದೇ ಶುಭ ಕಾರ್ಯವಿರಲಿ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಪ್ರತಿ ತಿಂಗಳು ಸತ್ಯಾನಾರಾಯಣ ಪೂಜೆ ಬರುತ್ತದೆ, ಅದನ್ನು ಆಚರಣೆ ಮಾಡುವುದರಿಂದ ಮನೆಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಪ್ರತಿ ತಿಂಗಳು ಹುಣ್ಣಿಮೆಗೆ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಹಾಗಂತ ಅದೇ ದಿನ ಮಾಡಬೇಕೆಂದೇನಿಲ್ಲ.

ಯಾವುದೇ ದಿನದಲ್ಲೂ ಸತ್ಯನಾರಾಯಣ ಪೂಜೆ ಮಾಡಬಹುದು. ಸತ್ಯನಾರಾಯಣ ಪೂಜೆ ಮಾಡುವವರು ಉಪವಾಸವಿದ್ದು ವ್ರತ ನಿಯಮಗಳನ್ನು ಪಾಲಿಸಿ ಸತ್ಯನಾರಾಯಣನಿಗೆ ಪೂಜೆ ಸಲ್ಲಿಸಬೇಕು. ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ಪುರೋಹಿತರನ್ನು ಕರೆಸಿ ಸತ್ಯನಾರಾಯಣ ಪೂಜೆ ಮಾಡಿಸುವುದು ಒಳ್ಳೆಯದು ಎಂದು ಹೇಳಲಾಗುವುದು.

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ:

 ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳು

ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳು

* ಯಾವುದೇ ಶುಭ ಕಾರ್ಯಕ್ಕೆ ಮುನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ.

* ಮನೆಗೆ ಬಂದ ಅತಿಥಿಗಳಿಗೆ ಸತ್ಯನಾರಾಯಣ ಪೂಜೆ ಪ್ರಸಾದ ಹಂಚುವುದರಿಂದ ಅವರೂ ಕೂಡ ಒಳ್ಳೆಯ ಮನಸ್ಸಿನಿಂದ ನಮ್ಮನ್ನು ಹರಿಸುತ್ತಾರೆ.

* ಮದುವೆ, ನಿಧ್ಚಿತಾರ್ಥ ಈ ರೀತಿಯ ಕಾರ್ಯಕ್ರಮದ ಮುಂಚೆ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಹೊಸ ಜೋಡಿಯ ಬದುಕಿಗೆ ಒಳಿತಾಗುತ್ತದೆ.

* ಗೃಹ ಪ್ರವೇಶ ಮಾಡುವಾಗ ಈ ಪೂಜೆ ಮಾಡುವುದರಿಂದ ಮನೆಗೆ ಒಳಿತಾಗುತ್ತದೆ.

* ಯಾವುದಾದರೂ ವ್ಯವಹಾರ ಮಾಡುವ ಮುನ್ನ ಸತ್ಯ ನಾರಾಯಣ ಪೂಜೆ ಮಾಡಿಸಿದರೆ ಅದರಲ್ಲಿ ಯಶಸ್ಸು ಲಭಿಸುವುದು.

* ಗಣಪತಿ ಪೂಜೆ ಮಾಡಿದ ಬಳಿಕವಷ್ಟೇ ಸತ್ಯನಾರಾಯಣ ಪೂಜೆ ಮಾಡಿಸಬೇಕು.

ಸತ್ಯನಾರಾಯಣ ವ್ರತ ಮಾಡುವುದರಿಂದ ಧಾರ್ಮಿಕ ಹಾಗೂ ಆರೋಗ್ಯಕರ ಪ್ರಯೋಜನಗಳಿವೆ.

ಸತ್ಯನಾರಾಯಣ ಪೂಜೆ ಮಾಡುವುದರಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳು:

ಸತ್ಯನಾರಾಯಣ ಪೂಜೆ ಮಾಡುವುದರಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳು:

*ಸತ್ಯವಂತರಾಗಿ ಬಾಳುವಂತೆ ಪ್ರೇರೇಪಿಸುತ್ತದೆ.

* ಒಳ್ಳೆಯದು-ಕೆಟ್ಟದು ನಡುವಿನ ವ್ಯತ್ಯಾಸ ತಿಳಿಯುವಷ್ಟು ಪಕ್ವತೆ ಬೆಳೆಯುತ್ತದೆ. ನಮ್ಮಲ್ಲಿ ಒಳ್ಳೆಯತನ ಹೆಚ್ಚಾಗುವುದು

* ನಾವು ಪೂಜೆ ಮಾಡುವಾಗ ಸಂಪೂರ್ಣವಾಗಿ ದೇವರಿಗೆ ಶರಣಾಗುತ್ತೇವೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

* ತಪ್ಪು-ಸರಿಗಳ ಬಗ್ಗೆ ನಮ್ಮಲ್ಲಿರುವ ಗೊಂದಲ ಕಡಿಮೆ ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು.

* ಬದುಕಿನಲ್ಲಿ ಸತ್ಯಕ್ಕೆ ಹೆಚ್ಚು ಬೆಲೆ ಕೊಡುತ್ತೇವೆ, ಸತ್ಯವಂತರಾಗಿ ಬಾಳಲು ಬಯಸುತ್ತೇವೆ.

* ಸತ್ಯವಂತರಾದರೆ ಮಾತ್ರ ಆ ನಾರಾಯಣ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಬಲವಾಗುವುದು.

ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ:

ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ:

ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವಾ ಮನೆಯವರೆಲ್ಲಾ ವ್ರತ ನಿಯಮಗಳನ್ನು ಪಾಲಿಸುತ್ತಾರೆ, ಆದ್ದರಿಂದ ಈ ಮನೆ ಸದಸ್ಯರೆಲ್ಲರಿಗೂ ಈ ಪ್ರಮುಖ ಪ್ರಯೋಜನಗಳು ದೊರೆಯುತ್ತೆ

* ಸತ್ಯನಾರಾಯಣ ವ್ರತ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗುವುದು. ದೇಹ ಶುದ್ಧವಾದರೆ ಆರೋಗ್ಯ ವೃದ್ಧಿಸುವುದು.

* ಮಾನಸಿಕ ಆರೋಗ್ಯ ಹೆಚ್ಚುವುದು

* ನಮ್ಮ ಗುರಿ ಕಡೆ ನಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದು. ಮನಸ್ಸಿನಲ್ಲಿರುವ ಗೊಂದಲಗಳು ದೂರಾಗುವುದು.

* ಮನೆಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ

* ನಿಮ್ಮ ಬಯಕೆಗಳು ಈಡೇರುವುದು.

 ಸತ್ಯನಾರಾಯಣ ಪೂಜೆ

ಸತ್ಯನಾರಾಯಣ ಪೂಜೆ

ಮೇ ತಿಂಗಳಿನಲ್ಲಿ ಸತ್ಯ ನಾರಾಯಣ ಪೂಜೆ ಯಾವಾಗ?

ಮೇ 15, 2022 ಭಾನುವಾರ , ಶುಕ್ಲ ಪೂರ್ಣಿಮಾ

ವೈಶಾಖ ಶುಕ್ಲ ಪೂರ್ಣಿಮಾ ತಿಥಿ ಪ್ರಾರಂಭ: ಮೇ 15 ಮಧ್ಯಾಹ್ನ 12:45ಕ್ಕೆ ಪೂರ್ಣಿಮಾ ತಿಥಿ ಮುಕ್ತಾಯ: ಮೇ 16 ಬೆಳಗ್ಗೆ 09:43ಕ್ಕೆ

English summary

Benefits and Significance of Performing Satyanarayan Pooja at Home in Kannada

Benefits and significance of Satyanarayan Pooja at Home in Kannada, read on....
X
Desktop Bottom Promotion