For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?

|
ಪಿತೃ ಪಕ್ಷದಲ್ಲಿ ಕಾಗೆಗಳಿಗೆ ಯಾಕಿಷ್ಟು ಮಹತ್ವ? | Oneindia Kannada

ಇಹಲೋಕ ತ್ಯಜಿಸಿರುವಂತಹ ಹಿರಿಯರ ಆತ್ಮಗಳಿಗೆ ಶಾಂತಿ ಸಿಗಲೆಂದು ಪಿತೃ ಪಕ್ಷದಲ್ಲಿ ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಮಾಡಲಾಗುತ್ತದೆ. ಪಿತೃ ಪಕ್ಷವು 15 ದಿನಗಳ ಕಾಲ ಇದ್ದು, ಭಾದ್ರಪದ ತಿಂಗಳ ಪೂರ್ಣಿಮೆಯಿಂದ ಅಶ್ವಿನಿ ತಿಂಗಳ ಅಮವಾಸ್ಯೆ ತನಕ ಪಿತೃ ಪಕ್ಷವಿರುವುದು. ಪಿತೃ ಪಕ್ಷವು 2018ರ ಸೆ.24ರಂದು ಆರಂಭವಾಗಿ ಅಕ್ಟೋಬರ್ 8ರ ಅಮವಾಸ್ಯೆಯಂದು ಕೊನೆಗೊಳ್ಳಲಿದೆ.

ಶ್ರಾದ್ಧವನ್ನು ಹಿರಿಯರು ನಿಧನರಾದ ತಿಥಿಗೆ ಅನುಗುಣವಾಗಿ ಮಾಡಲಾಗುವುದು. ಅದೇ ರೀತಿ ಅಮವಾಸ್ಯೆಯಂದು ಕೂಡ ಇದನ್ನು ಮಾಡಲಾಗುವುದು. ಅಮವಾಸ್ಯೆಯಂದು ಮೃತಪಟ್ಟ ಹಿರಿಯರನ್ನು ಪೂಜಿಸಲಾಗುವುದು. ತಿಂಗಳಲ್ಲಿ ಬರುವಂತಹ ಪ್ರತೀ ಅಮವಾಸ್ಯೆಯ ವೇಳೆಯು ಇದನ್ನು ಮಾಡಬಹುದು. ಈ ವೇಳೆ ಕಾಗೆಗಳಿಗೆ ಆಹಾರ ನೀಡುವಂತಹ ಪದ್ಧತಿಯು ಇದೆ. ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದು. ಇದರ ಬಗ್ಗೆ ಕೆಲವೊಂದು ನಂಬಿಕೆಗಳು ಕೂಡ ಇವೆ. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಿಕೊಡಲಾಗಿದೆ...

ಹೂ ಅಥವಾ ಎಲೆಗಳನ್ನು ಹಿಡಿದಿರುವ ಕಾಗೆ

ಹೂ ಅಥವಾ ಎಲೆಗಳನ್ನು ಹಿಡಿದಿರುವ ಕಾಗೆ

ಪಕ್ಷಿಗಳು ಹೂ ಅಥವಾ ಹೂವಿನ ದಳಗಳು ಅಥವಾ ಎಲೆಗಳನ್ನು ಹಿಡಿದುಕೊಂಡು ಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ ಕಾಗೆಯು ಇದನ್ನು ಹಿಡಿದಿದ್ದರೆ ಆಗ ಅದು ಶುಭವೆಂದು ಪರಿಗಣಿಸಲಾಗಿದೆ. ತುಂಬಾ ಪವಿತ್ರವಾಗಿರುವುದು ಏನೋ ಸಂಭವಿಸಲಿದೆ ಎಂದು ನಂಬಲಾಗಿದೆ. ನಿಮ್ಮ ಬಯಕೆಯು ಈಡೇರಲಿದೆ ಎನ್ನುವುದರ ಸೂಚನೆ ಇದಾಗಿದೆ.

Most Read:ಬ್ಯೂಟಿ ಟಿಪ್ಸ್: ತಾಜಾ ಹಾಲಿನ ಫೇಶಿಯಲ್-ಮನೆಯಲ್ಲೇ ಮಾಡಿ ನೋಡಿ

ದನ ಮೇಲೆ ಕಾಗೆ ಕುಳಿತಿರುವುದು

ದನ ಮೇಲೆ ಕಾಗೆ ಕುಳಿತಿರುವುದು

ಇದು ಮತ್ತೊಂದು ಅಪರೂಪದ ಘಟನೆ. ಕಾಗೆಯು ದನದ ಬೆನ್ನಿನ ಮೇಲೆ ಕುಳಿತುಕೊಂಡು ತನ್ನ ಕೊಕ್ಕನ್ನು ಉಜ್ಜಿಕೊಳ್ಳುತ್ತಿದ್ದರೆ ಆಗ ಇದನ್ನು ನೋಡಿದ ವ್ಯಕ್ತಿಗೆ ಒಳ್ಳೆಯ ಆಹಾರದ ತೃಪ್ತಿ ಸಿಗುತ್ತದೆ ಎನ್ನುವ ಸೂಚನೆಯಾಗಿದೆ ಎಂದು ನಂಬಲಾಗಿದೆ. ನೀವು ಹೀಗೆ ನೋಡಿದರೆ ಒಳ್ಳೆಯ ಆಹಾರ ಸಿಗುವುದು ಖಚಿತ.

ದಪ್ಪಗಿನ ಹಸಿರಾಗಿರುವ ಮರದ ಮೇಲೆ ಕಾಗೆ ಕುಳಿತಿರುವುದು

ದಪ್ಪಗಿನ ಹಸಿರಾಗಿರುವ ಮರದ ಮೇಲೆ ಕಾಗೆ ಕುಳಿತಿರುವುದು

ಇದು ಅಪರೂಪವೆಂದು ಹೇಳಲಾಗದು. ಯಾಕೆಂದರೆ ಮರದ ಮೇಲೆ ಯಾವಾಗಲೂ ಕಾಗೆಗಳು ಕುಳಿತಿರುತ್ತದೆ. ಆದರೆ ಮರವು ಹಸಿರಾಗಿ, ದಪ್ಪಗಿರಬೇಕು. ಇಂತಹದ್ದನ್ನು ನೋಡಿದರೆ ಇದು ಹಣಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದನ್ನು ನೋಡಿದವರಿಗೆ ಧನಲಾಭವಾಗಲಿದೆ ಎಂದು ನಂಬಲಾಗಿದೆ.

ಕೊಕ್ಕಿನಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿರುವುದು

ಕೊಕ್ಕಿನಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿರುವುದು

ಕಾಗೆ ಕೊಕ್ಕಿನಲ್ಲಿ ಒಣ ಹುಲ್ಲನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ, ಆಗ ಇದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದರ ಅರ್ಥವೆಂದರೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಬೇಗನೆ ಪರಿಹಾರವಾಗಲಿದೆ. ನಿಂತುಹೋಗಿರುವಂತಹ ಯೋಜನೆಗಳೆಲ್ಲವೂ ಮುಂದುವರಿಯಲಿದೆ ಎಂದು ನಂಬಲಾಗಿದೆ.

Most Read:ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ

ನಿಮ್ಮ ಎಡ ಬದಿಯಿಂದ ಬಂದು ಏನಾದರೂ ತಿಂದರೆ

ನಿಮ್ಮ ಎಡ ಬದಿಯಿಂದ ಬಂದು ಏನಾದರೂ ತಿಂದರೆ

ನಿಮ್ಮ ಎಡದ ಬದಿಯಿಂದ ಕಾಗೆಯು ಬಂದು ಏನಾದರೂ ತಿನ್ನುತ್ತಲಿದ್ದರೆ, ಆಗ ಇದು ಶುಭಸೂಚಕವಾಗಿದೆ. ವಿಳಂಬವಾಗಿರುವ ಪ್ರವಾಸವು ಬೇಗನೆ ಆಗಲಿದೆ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಯೋಜನೆಗಳು ಪೂರ್ಣವಾಗಲಿದೆ ಎಂದು ನಂಬಲಾಗಿದೆ.

ಹಂದಿ ಮೇಲೆ ಕಾಗೆಯು ಕುಳಿತಿರುವುದು

ಹಂದಿ ಮೇಲೆ ಕಾಗೆಯು ಕುಳಿತಿರುವುದು

ಹಂದಿಯ ಬೆನ್ನ ಮೇಲೆ ಕಾಗೆ ಕುಳಿತಿರುವುದನ್ನು ನೀವು ನೋಡಿದರೆ ಆಗ ಬೇಗನೆ ಶ್ರೀಮಂತರಾಗಲಿದ್ದೀರಿ ಎಂದು ಅರ್ಥೈಸಿಕೊಳ್ಳಿ. ಲಕ್ಷ್ಮೀ ದೇವಿಯು ನಿಮಗೆ ಒಲಿದಿದ್ದಾಳೆ ಮತ್ತು ಆಕೆಯು ಈ ಮೂಲಕ ಸೂಚನೆ ನೀಡಿದ್ದಾಳೆ ಎಂದು ತಿಳಿಯಿರಿ. ಧಾನ್ಯಗಳ ರಾಶಿ ಮೇಲೆ ಕಾಗೆ ಕುಳಿತಿದ್ದರೂ ಇದೇ ರೀತಿಯ ಆರ್ಥಿಕ ಲಾಭವಾಗುವುದು.

English summary

Auspicious Omens Related To Crows During Shradh

Pitra Paksha, a period of fifteen days during which Shradh ceremony of the long-departed souls is performed, is observed from the Purnima of the Bhadrapad month to the Amavasya of the Ashvin month. Pitra Paksha 2018 will begin from September 24 and will end with Amavasya on October 8.
X
Desktop Bottom Promotion