For Quick Alerts
ALLOW NOTIFICATIONS  
For Daily Alerts

Ashwin Month 2022: ಅಶ್ವಿನಿ ಮಾಸದ ದಿನಾಂಕ, ಮಹತ್ವ ಮತ್ತು ಈ ತಿಂಗಳಲ್ಲಿ ಬರುವ ಹಬ್ಬಗಳು, ವ್ರತಗಳ ಪಟ್ಟಿ

|

ಭಾದ್ರಪದ ಮಾಸದ ಮುಕ್ತಾಯಕ್ಕೆ ಇನ್ನೇನು ದಿನಗಣನೆ ಇದೆ, ಇದೇ 2022ರ ಸೆಪ್ಟೆಂಬರ್‌ 26ರಿಂದ ಅಶ್ವಿನಿ ಅಥವಾ ಆಶ್ವೀಜ ಮಾಸ ಆರಂಭವಾಗಲಿದೆ. ಭಾದ್ರಪದ ಮಾಸವನ್ನು ಕೃಷ್ಣನ ಮಾಸವೆಂದು ಪರಿಗಣಿಸಿದರೆ, ಅಶ್ವಿನಿ ಮಾಸವನ್ನು ದುರ್ಗಾ ದೇವಿಗೆ ಸಮರ್ಪಿಸಲಾಗಿದೆ.

123

ಹಿಂದೂ ಪದ್ಧತಿಯಲ್ಲಿ ಅಶ್ವಿನಿ ಮಾಸಕ್ಕೆ ವಿಶೇಷ ಮಹತ್ವವಿದೆ, ಇದಕ್ಕೆ ಕಾರಣ ಇದು ಪ್ರಮುಖ ಹಬ್ಬಗಳ ಮಾಸ ಎಂಬುದೂ ಸಹ ಒಂದಾಗಿದೆ. ಏಕೆಂದರೆ ಆಶ್ವಿನಿ ಮಾಸದಲ್ಲಿ ಶರದ್ ನವರಾತ್ರಿಯ ಮಂಗಳಕರ ಹಬ್ಬವು ಬರುತ್ತದೆ. ಆಶ್ವಿನಿ ಮಾಸದ ಆರಂಭದ ಮೊದಲ ದಿನದಿಂದ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ನವರಾತ್ರಿ ಹಬ್ಬ ಇರಲಿದೆ. ಇಷ್ಟೇ ಅಲ್ಲ, ಈ ತಿಂಗಳಲ್ಲಿ ಹಲವು ಪ್ರಮುಖ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಸಹ ಆಚರಿಸಲಾಗುತ್ತದೆ.

ಜ್ಯೋತಿಶಾಸ್ತ್ರದ ಪ್ರಕಾರ ಅಶ್ವಿನಿ ಮಾಸ ಎಂದರೇನು?, 2022ನೇ ಸಾಲಿನಲ್ಲಿ ಆಶ್ವಿನಿ ಮಾಸ ಯಾವಾಗ ಆರಂಭವಾಗುತ್ತದೆ ಎಂದು ಅಂತ್ಯವಾಗುತ್ತದೆ, ಈ ಮಾಸದಲ್ಲಿ ಬರುವ ಹಬ್ಬಗಳು ಯಾವುವು ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ:

ಅಶ್ವಿನಿ ತಿಂಗಳು ಎಂದರೇನು?

ಅಶ್ವಿನಿ ತಿಂಗಳು ಎಂದರೇನು?

ಹಿಂದೂ ಕ್ಯಾಲೆಂಡರ್‌ನಲ್ಲಿ, ಅಶ್ವಿನಿ 7ನೇ ತಿಂಗಳು, ಆದರೆ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಇದು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ತಿಂಗಳು. 2022ನೇ ವರ್ಷವು ವಿಕ್ರಮ ಸಂವತ್ಸರದ 2079ನೇ ವರ್ಷದ ಆರಂಭವನ್ನು ಗುರುತಿಸಲಾಗಿದೆ ಮತ್ತು ವಿಕ್ರಮ ಸಂವತ್ಸರದ ಕ್ಯಾಲೆಂಡರ್ ಪ್ರಕಾರ, ಭಾದ್ರಪದ ಮಾಸದ ಪೂರ್ಣಿಮೆಯ ನಂತರ ಬರುವ ಪ್ರತಿಪದ ತಿಥಿಯನ್ನು ಅಶ್ವಿನಿ ಮಾಸದ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ.

20220ನೇ ಸಾಲಿನಲ್ಲಿ ಅಶ್ವಿನಿ ಮಾಸ ಯಾವಾಗ ಪ್ರಾರಂಭವಾಗಲಿದೆ ಮತ್ತು ಕೊನೆಗೊಳ್ಳುತ್ತದೆ?

20220ನೇ ಸಾಲಿನಲ್ಲಿ ಅಶ್ವಿನಿ ಮಾಸ ಯಾವಾಗ ಪ್ರಾರಂಭವಾಗಲಿದೆ ಮತ್ತು ಕೊನೆಗೊಳ್ಳುತ್ತದೆ?

ಹಿಂದೂ ಪಂಚಾಂಗದ ಲೆಕ್ಕಾಚಾರಗಳ ಆಧಾರದ ಮೇಲೆ, ಅಶ್ವಿನಿ ತಿಂಗಳು 2022 ಸೆಪ್ಟೆಂಬರ್ 26ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 25ರಂದು ಕೊನೆಗೊಳ್ಳುತ್ತದೆ.

ಆಶ್ವಿನಿ ಮಾಸದ ಶುಕ್ಲ ಪಕ್ಷ ದಿನಾಂಕ: ಸೆಪ್ಟೆಂಬರ್ 26ರಿಂದ ಅಕ್ಟೋಬರ್‌ 9 ರವರೆಗೆ

ಆಶ್ವಿನಿ ಮಾಸದ ಕೃಷ್ಣ ಪಕ್ಷ ದಿನಾಂಕ: ಅಕ್ಟೋಬರ್‌ 10ರಿಂದ 25 ರವರೆಗೆ

ಅಶ್ವಿನಿ ತಿಂಗಳ ಮಹತ್ವ

ಅಶ್ವಿನಿ ತಿಂಗಳ ಮಹತ್ವ

ಅಶ್ವಿನಿ ಮಾಸವನ್ನು ಮಂಗಳಕರ ಅವಧಿ ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸವು ಭಗವಾನ್ ಶಿವನಿಗೆ ಮತ್ತು ಭಾದ್ರಪದ ಮಾಸವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸುವಂತೆ, ಅಶ್ವಿನಿ ಮಾಸವು ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಹಿಂದೂ ಧರ್ಮಕ್ಕೆ ಸೇರಿದ ಜನರಿಗೆ ನವರಾತ್ರಿ ಎಷ್ಟು ಮಹತ್ವದ್ದಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಮತ್ತು ಒಂದು ವರ್ಷದಲ್ಲಿ ಬರುವ 4 ನವರಾತ್ರಿಗಳಲ್ಲಿ ಚೈತ್ರ ನವರಾತ್ರಿ ಮತ್ತು ಶರದ್ ನವರಾತ್ರಿಗಳು ಹೆಚ್ಚು ಮಹತ್ವವನ್ನು ಹೊಂದಿವೆ. ಆದ್ದರಿಂದ, ಶರದ್ ನವರಾತ್ರಿಯ ಈ ಮಹತ್ವದ ಮತ್ತು ಧಾರ್ಮಿಕ ಉತ್ಸವವು ಅಶ್ವಿನಿ ಮಾಸದ ಶುಕ್ಲ ಪಕ್ಷದಂದು ಪ್ರಾರಂಭವಾಗುತ್ತದೆ ಮತ್ತು ವಿಜಯ ದಶಮಿಯಂದು ಕೊನೆಗೊಳ್ಳುತ್ತದೆ, ಇದು ಈ ತಿಂಗಳನ್ನು ಹೆಚ್ಚು ವಿಶೇಷವಾಗಿಸುತ್ತದೆ.

ಅಶ್ವಿನಿ ಮಾಸದಲ್ಲಿ ಪಿತೃ ಪಕ್ಷ

ಅಶ್ವಿನಿ ಮಾಸದಲ್ಲಿ ಪಿತೃ ಪಕ್ಷ

ಹಿಂದೂ ಧರ್ಮದಲ್ಲಿ ಅಶ್ವಿನಿ ಮಾಸವು ಮಹತ್ವದ್ದಾಗಿರುವುದಕ್ಕೆ ಇನ್ನೊಂದು ಕಾರಣವೆಂದರೆ ಪಿತೃ ಪಕ್ಷವು ಅಶ್ವಿನಿ ಮಾಸದ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಈ ಮಾಸದಲ್ಲಿ ನಾವು ನಮ್ಮ ಪೂರ್ವಜರಿಗೆ ಮತ್ತು ಮೃತರಿಗೆ ನಮನ ಸಲ್ಲಿಸುತ್ತೇವೆ. ಪಿತೃ ಪಕ್ಷವು ನಮ್ಮ ಪೂರ್ವಜರು ನಮ್ಮ ಮನೆಗೆ ಭೇಟಿ ನೀಡುವ ಅವಧಿಯಾಗಿದೆ ಎಂದು ನಂಬಲಾಗಿದೆ, ಆದ್ದರಿಂದ ವಿಶೇಷವಾಗಿ ಈ ಅವಧಿಯಲ್ಲಿ ನಾವು ಯಾರನ್ನೂ ಅಗೌರವಗೊಳಿಸಬಾರದು. ಯಾರಾದರೂ ನಿಮ್ಮ ಮನೆಗೆ ಭೇಟಿ ನೀಡಿದರೆ, ನೀವು ಅವರನ್ನು ಖಾಲಿ ಹೊಟ್ಟೆಯಲ್ಲಿ ಹೋಗಲು ಬಿಡಬಾರದು. ಅಲ್ಲದೆ, ನೀವು ಪಿತೃ ದೋಷದಿಂದ ಬಳಲುತ್ತಿದ್ದರೆ ಅದನ್ನು ನಿವಾರಿಸಲು ಈ ಅವಧಿಯಲ್ಲಿ ನೀವು ಪರಿಹಾರಗಳನ್ನು ಸಹ ಮಾಡಬಹುದು.

ಅಶ್ವಿನಿ ಮಾಸದಲ್ಲಿ ಶರದ್ ನವರಾತ್ರಿ

ಅಶ್ವಿನಿ ಮಾಸದಲ್ಲಿ ಶರದ್ ನವರಾತ್ರಿ

ಮೇಲೆ ಹೇಳಿದಂತೆ, ಶರದ್ ನವರಾತ್ರಿಯು ಅಶ್ವಿನಿ ಮಾಸದಲ್ಲಿ ಬರುವ ಮಹತ್ವದ ಹಿಂದೂ ಹಬ್ಬವಾಗಿದೆ. ಶಕ್ತಿ ಪೂಜೆಯ ಈ 9 ದಿನಗಳ ಉತ್ಸವವು ಈ ವರ್ಷ ಸೆಪ್ಟೆಂಬರ್ 26ರಂದು ಪ್ರಾರಂಭವಾಗಿ ಅಕ್ಟೋಬರ್ 5ರಂದು ಕೊನೆಗೊಳ್ಳುತ್ತದೆ. ಚಾತುರ್ಮಾಸದಲ್ಲಿ ನಿಷಿದ್ಧವಾಗಿರುವ ಅನೇಕ ಶುಭ ಕಾರ್ಯಗಳನ್ನು ಶರದ್ ನವರಾತ್ರಿಯ ಪುಣ್ಯಕಾಲದಲ್ಲಿ ನಡೆಸಬಹುದು.

2022 ರ ಅಶ್ವಿನಿ ತಿಂಗಳಿನಲ್ಲಿ ಬರುವ ಉಪವಾಸದ ದಿನಗಳು ಮತ್ತು ಹಬ್ಬಗಳ ಪಟ್ಟಿ

2022 ರ ಅಶ್ವಿನಿ ತಿಂಗಳಿನಲ್ಲಿ ಬರುವ ಉಪವಾಸದ ದಿನಗಳು ಮತ್ತು ಹಬ್ಬಗಳ ಪಟ್ಟಿ

  • 26 ಸೆಪ್ಟೆಂಬರ್ - ಸೋಮವಾರ ಶರದ್ ನವರಾತ್ರಿ, ಘಟಸ್ಥಾಪನಾ ದಿನ/ದೇವಿ ಶರಣ ನವರಾತ್ರಿ
  • 27 ಸೆಪ್ಟೆಂಬರ್ - ಮಂಗಳವಾರ ಚಂದ್ರೋದಯಂ
  • 28 ಸೆಪ್ಟೆಂಬರ್ - ಬುಧವಾರ ಹಸ್ತ ಕರ್ತೆ
  • 29 ಸೆಪ್ಟೆಂಬರ್ - ಗುರುವಾರ ಚತುರ್ಥಿ ವೃತಂ
  • 30 ಸೆಪ್ಟೆಂಬರ್ - ಶುಕ್ರವಾರ ಲಲಿತಾ ಪಂಚಮಿ
  • 1 ಅಕ್ಟೋಬರ್ - ಶನಿವಾರ ಕಲ್ಪರಂಬ/ಸ್ಕಂದ ಷಷ್ಠಿ
  • 2 ಅಕ್ಟೋಬರ್ - ಭಾನುವಾರ ನವಪತ್ರಿಕಾ ಪೂಜೆ/ದುರ್ಗಾ ಪೂಜೆ / ಸರಸ್ವತಿ ಪೂಜಾ ಪ್ರಾರಂಭ
  • 3 ಅಕ್ಟೋಬರ್ - ಸೋಮವಾರ ದುರ್ಗಾ ಅಷ್ಟಮಿ ವ್ರತ , ಸರಸ್ವತಿ ಪೂಜೆ , ದುರ್ಗಾಷ್ಟಮಿ
  • 4 ಅಕ್ಟೋಬರ್ - ಮಂಗಳವಾರ ದುರ್ಗಾ ಮಹಾ ನವಮಿ ಪೂಜೆ, ಶರದ್ ನವರಾತ್ರಿ ಪಾರಣ/ಸರಸ್ವತಿ ಪೂಜೆ
  • 5 ಅಕ್ಟೋಬರ್ - ಬುಧವಾರ ದುರ್ಗಾ ವಿಸರ್ಜನೆ, ದಸರಾ/ ವಿಜಯ ದಶಮಿ
  • 6 ಅಕ್ಟೋಬರ್ - ಗುರುವಾರ ಪಾಪಾಂಕುಶ ಏಕಾದಶಿ
  • 7 ಅಕ್ಟೋಬರ್ - ಶುಕ್ರವಾರ ಪ್ರದೋಷ ವ್ರತ
  • 9 ಅಕ್ಟೋಬರ್ - ಭಾನುವಾರ ಅಶ್ವಿನಿ ಪೂರ್ಣಿಮಾ ವ್ರತ/ ಶ್ರೀ ಸತ್ಯನಾರಾಯಣ ಪೂಜೆ
  • 10 ಅಕ್ಟೋಬರ್ - ಸೋಮವಾರ ಚಿತ್ತ ಕರ್ತೆ
  • 12 ಅಕ್ಟೋಬರ್ -ಬುಧವಾರ ಅತ್ಲಾ ತದ್ದೆ
  • 13 ಅಕ್ಟೋಬರ್ -ಗುರುವಾರ ಕರ್ವಾ ಚೌತ್, ಸಂಕಷ್ಟಹರ ಚತುರ್ಥಿ
  • 17 ಅಕ್ಟೋಬರ್ -ಸೋಮವಾರ ತುಲಾ ಸಂಕ್ರಮಣ
  • 18 ಅಕ್ಟೋಬರ್ -ಮಂಗಳವಾರ ತುಲಾ ಕಾವೇರಿ ಸ್ನಾನ
  • 21 ಅಕ್ಟೋಬರ್ -ಶುಕ್ರವಾರ ರಾಮ ಏಕಾದಶಿ
  • 23 ಅಕ್ಟೋಬರ್ -ಭಾನುವಾರ ಧನತ್ರಯೋದಶಿ , ಮಾಸ ಶಿವರಾತ್ರಿ , ಪ್ರದೋಷ ವ್ರತ , ಧನ್ವಂತರಿ ಜಯಂತಿ , ಧನ್ತೇರಸ್
  • 24 ಅಕ್ಟೋಬರ್ -ಸೋಮವಾರ ನರಕ ಚತುರ್ದಶಿ , ಸ್ವಾತಿ ಕರ್ತೆ , ಕೇದಾರ ಗೌರಿ ವ್ರತ
  • 25 ಅಕ್ಟೋಬರ್ -ಮಂಗಳವಾರ ದೀಪಾವಳಿ, ಅಮವಾಸ್ಯೆ
English summary

Ashwin Month 2022 Dates, Vrats, Festivals and Significance in kannada

Here we are discussing about Ashwin Month 2022 Dates, Vrats, Festivals and Significance in kannada. Read more.
X
Desktop Bottom Promotion