For Quick Alerts
ALLOW NOTIFICATIONS  
For Daily Alerts

ಆಷಾಢ ಗುಪ್ತ ನವರಾತ್ರಿ 2022: ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯ ಸ್ತೋತ್ರ, ಮಂತ್ರ ಹಾಗೂ ಚಾಲೀಸ

|

ಹಿಂದೂ ಧರ್ಮದ ಪ್ರಕಾರ ವರ್ಷದಲ್ಲಿ ಬರುವ ನಾಲ್ಕು ಬಾರಿ ನವರಾತ್ರಿಗಳಲ್ಲಿ ಪರಬ್ರಹ್ಮ ರೂಪಿಣಿ ಆದಿಪರಾಶಕ್ತಿ ದುರ್ಗಾ ಮಾತೆಯನ್ನು ಶ್ರದ್ಧಾಪೂರ್ವಕವಾಗಿ ಪೂಜಿಸಲಾಗುತ್ತದೆ. ಮಹಾಲಕ್ಷ್ಮಿ ಸ್ವರೂಪ ದುರ್ಗಾ ದೇವಿ ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳು. ಸೃಷ್ಟಿಯ ಆದಿಯಲ್ಲಿ ಉದಯಿಸಿದ ದುರ್ಗೆ ಸೃಷ್ಟಿಯ ಅಂತ್ಯವೂ ಇವಳಿಂದಲೇ. ತಾಮಸ-ರಾಜಸ-ಸಾತ್ವಿಕ ಮೂರು ರೂಪಗಳಲ್ಲೂ ಭಕ್ತರನ್ನು ಪೋಷಿಸುವ ಹಾಗೂ ದುಷ್ಟರನ್ನು ಶಿಕ್ಷಿಸುವ ದುರ್ಗೆಗೆ ಶ್ರದ್ಧೆ ಹಾಗೂ ಭಕ್ತಿ ಇಲ್ಲದೆ ಮಾಡಿದ ಪೂಜೆ ಸಲ್ಲದು.

ಇದೀಗ ಆಷಾಢ ಮಾಸದ ನವರಾತ್ರಿ ಆರಂಭವಾಗಿದೆ. ದುರ್ಗಾ ಮಾತೆಯನ್ನು ಪೂಜಿಸಿ ಒಲಿಸಿಕೊಳ್ಳಲು ದುರ್ಗಾ ಚಾಲೀಸಾ, ದುರ್ಗಾ ಸಪ್ತಶತಿ, ದುರ್ಗಾ ಸ್ತ್ರೋತ್ರ, ಪಾರಾಯಣ, ದೇವಿ ಕವಚಂ, ಅಭಿಷೇಕ ಮಂತ್ರಗಳನ್ನು ನೀಡಿದ್ದೇವೆ, ದೇವಿ ಪೂಜೆ ವೇಳೆ ಇದನ್ನು ಪಠಿಸಿ ದೇವಿಯ ಕೃಪೆಗೆ ಪಾತ್ರರಾಗೋಣ:

1.

1. "ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||''

'ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ| ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ||''

2. ''ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |

2. ''ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ತುಷ್ಠಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಬುದ್ಧಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||''

''ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೈ''

3. ಶ್ರೀ ದುರ್ಗಾ ಸ್ತೋತ್ರಂ

3. ಶ್ರೀ ದುರ್ಗಾ ಸ್ತೋತ್ರಂ

ವೈಶಂಪಾಯನ ಉವಾಚ |

ವಿರಾಟನಗರಂ ರಮ್ಯಂ ಗಚ್ಛಮಾನೋ ಯುಧಿಷ್ಠಿರಃ |

ಅಸ್ತುವನ್ಮನಸಾ ದೇವೀಂ ದುರ್ಗಾಂ ತ್ರಿಭುವನೇಶ್ವರೀಮ್ || ೧ ||

ಯಶೋದಾಗರ್ಭಸಂಭೂತಾಂ ನಾರಾಯಣವರಪ್ರಿಯಾಮ್ |

ನಂದಗೋಪಕುಲೇ ಜಾತಾಂ ಮಂಗಳ್ಯಾಂ ಕುಲವರ್ಧನೀಮ್ || ೨ ||

ಕಂಸವಿದ್ರಾವಣಕರೀಮಸುರಾಣಾಂ ಕ್ಷಯಂಕರೀಮ್ |

ಶಿಲಾತಟವಿನಿಕ್ಷಿಪ್ತಾಮಾಕಾಶಂ ಪ್ರತಿ ಗಾಮಿನೀಮ್ || ೩ ||

ವಾಸುದೇವಸ್ಯ ಭಗಿನೀಂ ದಿವ್ಯಮಾಲ್ಯವಿಭೂಷಿತಾಮ್ |

ದಿವ್ಯಾಂಬರಧರಾಂ ದೇವಿಂ ಖಡ್ಗಖೇಟಕಧಾರಿಣೀಮ್ || ೪ ||

ಭಾರಾವತರಣೇ ಪುಣ್ಯೇ ಯೇ ಸ್ಮರನ್ತಿ ಸದಾ ಶಿವಾಮ್ |

ತಾನ್ವೈ ತಾರಯಸೇ ಪಾಪಾತ್ಪಂಕೇ ಗಾಮಿವ ದುರ್ಬಲಾಮ್ || ೫ ||

ಸ್ತೋತುಂ ಪ್ರಚಕ್ರಮೇ ಭೂಯೋ ವಿವಿಧೈಃ ಸ್ತೋತ್ರಸಂಭವೈಃ |

ಆಮಂತ್ರ್ಯ ದರ್ಶನಾಕಾಂಕ್ಷೀ ರಾಜಾ ದೇವೀಂ ಸಹಾನುಜಃ || ೬ ||

ನಮೋಸ್ತು ವರದೇ ಕೃಷ್ಣೇ ಕುಮಾರಿ ಬ್ರಹ್ಮಚಾರಿಣಿ |

ಬಾಲಾರ್ಕಸದೃಶಾಕಾರೇ ಪೂರ್ಣಚಂದ್ರನಿಭಾನನೇ || ೭ ||

ಚತುರ್ಭುಜೇ ಚತುರ್ವಕ್ತ್ರೇ ಪೀನಶ್ರೋಣಿಪಯೋಧರೇ |

ಮಯೂರಪಿಚ್ಛವಲಯೇ ಕೇಯೂರಾಂಗದಧಾರಿಣಿ || ೮ ||

ಭಾಸಿ ದೇವಿ ಯಥಾ ಪದ್ಮಾ ನಾರಾಯಣಪರಿಗ್ರಹಃ |

ಸ್ವರೂಪಂ ಬ್ರಹ್ಮಚರ್ಯಂ ಚ ವಿಶದಂ ತವ ಖೇಚರಿ || ೯ ||

ಕೃಷ್ಣಚ್ಛವಿಸಮಾ ಕೃಷ್ಣಾ ಸಂಕರ್ಷಣಸಮಾನನಾ |

ಬಿಭ್ರತೀ ವಿಪುಲೌ ಬಾಹೂ ಶಕ್ರಧ್ವಜಸಮುಚ್ಛ್ರಯೌ || ೧೦ ||

ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀ ವಿಶುದ್ಧಾ ಚ ಯಾ ಭುವಿ |

ಪಾಶಂ ಧನುರ್ಮಹಾಚಕ್ರಂ ವಿವಿಧಾನ್ಯಾಯುಧಾನಿ ಚ || ೧೧ ||

ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ ಕರ್ಣಾಭ್ಯಾಂ ಚ ವಿಭೂಷಿತಾ |

ಚಂದ್ರವಿಸ್ಪರ್ಧಿನಾ ದೇವಿ ಮುಖೇನ ತ್ವಂ ವಿರಾಜಸೇ || ೧೨ ||

ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ |

ಭುಜಂಗಾಭೋಗವಾಸೇನ ಶ್ರೋಣಿಸೂತ್ರೇಣ ರಾಜತಾ || ೧೩ ||

ವಿಭ್ರಾಜಸೇ ಚಾಬದ್ಧೇನ ಭೋಗೇನೇವೇಹ ಮಂದರಃ |

ಧ್ವಜೇನ ಶಿಖಿಪಿಚ್ಛಾನಾಮುಚ್ಛ್ರಿತೇನ ವಿರಾಜಸೇ || ೧೪ ||

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ಪಾವಿತಂ ತ್ವಯಾ |

ತೇನ ತ್ವಂ ಸ್ತೂಯಸೇ ದೇವಿ ತ್ರಿದಶೈಃ ಪೂಜ್ಯಸೇಪಿ ಚ || ೧೫ ||

ತ್ರೈಲೋಕ್ಯರಕ್ಷಣಾರ್ಥಾಯ ಮಹಿಷಾಸುರನಾಶಿನಿ |

ಪ್ರಸನ್ನಾ ಮೇ ಸುರಶ್ರೇಷ್ಠೇ ದಯಾಂ ಕುರು ಶಿವಾ ಭವ || ೧೬ ||

ಜಯಾ ತ್ವಂ ವಿಜಯಾ ಚೈವ ಸಂಗ್ರಾಮೇ ಚ ಜಯಪ್ರದಾ |

ಮಮಾಪಿ ವಿಜಯಂ ದೇಹಿ ವರದಾ ತ್ವಂ ಚ ಸಾಂಪ್ರತಮ್ || ೧೭ ||

ವಿಂಧ್ಯೇ ಚೈವ ನಗಶ್ರೇಷ್ಠೇ ತವ ಸ್ಥಾನಂ ಹಿ ಶಾಶ್ವತಮ್ |

ಕಾಳಿ ಕಾಳಿ ಮಹಾಕಾಳಿ ಖಡ್ಗಖಟ್ವಾಂಗಧಾರಿಣಿ|| ೧೮ ||

ಕೃತಾನುಯಾತ್ರಾ ಭೂತೈಸ್ತ್ವಂ ವರದಾ ಕಾಮಚಾರಿಣೀ |

ಭಾರಾವತಾರೇ ಯೇ ಚ ತ್ವಾಂ ಸಂಸ್ಮರಿಷ್ಯಂತಿ ಮಾನವಾಃ || ೧೯ ||

ಪ್ರಣಮಂತಿ ಚ ಯೇ ತ್ವಾಂ ಹಿ ಪ್ರಭಾತೇ ತು ನರಾ ಭುವಿ |

ನ ತೇಷಾಂ ದುರ್ಲಭಂ ಕಿಂಚಿತ್ಪುತ್ರತೋ ಧನತೋಪಿ ವಾ || ೨೦ ||

ದುರ್ಗಾತ್ತಾರಯಸೇ ದುರ್ಗೇ ತತ್ತ್ವಂ ದುರ್ಗಾ ಸ್ಮೃತಾ ಜನೈಃ |

ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ |

ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ || ೨೧ ||

ಜಲಪ್ರತರಣೇ ಚೈವ ಕಾಂತಾರೇಷ್ವಟವೀಷು ಚ |

ಯೇ ಸ್ಮರಂತಿ ಮಹಾದೇವಿ ನ ಚ ಸೀದಂತಿ ತೇ ನರಾಃ || ೨೨ ||

ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿರ್ಹ್ರೀರ್ವಿದ್ಯಾ ಸಂತತಿರ್ಮತಿಃ |

ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ ಜ್ಯೋತ್ಸ್ನಾ ಕಾಂತಿಃ ಕ್ಷಮಾ ದಯಾ || ೨೩ ||

ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್ |

ವ್ಯಾಧಿಂ ಮೃತ್ಯುಂ ಭಯಂ ಚೈವ ಪೂಜಿತಾ ನಾಶಯಿಷ್ಯಸಿ || ೨೪ ||

ಸೋಹಂ ರಾಜ್ಯಾತ್ಪರಿಭ್ರಷ್ಟಃ ಶರಣಂ ತ್ವಾಂ ಪ್ರಪನ್ನವಾನ್ |

ಪ್ರಣತಶ್ಚ ಯಥಾ ಮೂರ್ಧ್ನಾ ತವ ದೇವಿ ಸುರೇಶ್ವರಿ || ೨೫ ||

ತ್ರಾಹಿ ಮಾಂ ಪದ್ಮಪತ್ರಾಕ್ಷಿ ಸತ್ಯೇ ಸತ್ಯಾ ಭವಸ್ಯ ನಃ |

ಶರಣಂ ಭವ ಮೇ ದುರ್ಗೇ ಶರಣ್ಯೇ ಭಕ್ತವತ್ಸಲೇ || ೨೬ ||

ಏವಂ ಸ್ತುತಾ ಹಿ ಸಾ ದೇವೀ ದರ್ಶಯಾಮಾಸ ಪಾಂಡವಮ್ |

ಉಪಗಮ್ಯ ತು ರಾಜಾನಾಮಿದಂ ವಚನಮಬ್ರವೀತ್ || ೨೭ ||

4. ದೇವ್ಯುವಾಚ

4. ದೇವ್ಯುವಾಚ

ಶೃಣು ರಾಜನ್ಮಹಾಬಾಹೋ ಮದೀಯಂ ವಚನಂ ಪ್ರಭೋ |.

ಭವಿಷ್ಯತ್ಯಚಿರಾದೇವ ಸಂಗ್ರಾಮೇ ವಿಜಯಸ್ತವ || ೨೮ ||

ಮಮ ಪ್ರಸಾದಾನ್ನಿರ್ಜಿತ್ಯ ಹತ್ವಾ ಕೌರವವಾಹಿನೀಮ್ |

ರಾಜ್ಯಂ ನಿಷ್ಕಂಟಕಂ ಕೃತ್ವಾ ಭೋಕ್ಷ್ಯಸೇ ಮೇದಿನೀಂ ಪುನಃ || ೨೯ ||

ಭಾತ್ರೃಭಿಃ ಸಹಿತೋ ರಾಜನ್ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ |

ಮತ್ಪ್ರಸಾದಾಚ್ಚ ತೇ ಸೌಖ್ಯಮಾರೋಗ್ಯಂ ಚ ಭವಿಷ್ಯತಿ || ೩೦ ||

ಯೇ ಚ ಸಂಕೀರ್ತಯಿಷ್ಯಂತಿ ಲೋಕೇ ವಿಗತಕಲ್ಮಷಾಃ |

ತೇಷಾಂ ತುಷ್ಟಾ ಪ್ರದಾಸ್ಯಾಮಿ ರಾಜ್ಯಮಾಯುರ್ವಪುಃ ಸುತಮ್ || ೩೧ ||

ಪ್ರವಾಸೇ ನಗರೇ ಚಾಪಿ ಸಂಗ್ರಾಮೇ ಶತ್ರುಸಂಕಟೇ |

ಅಟವ್ಯಾಂ ದುರ್ಗಕಾಂತಾರೇ ಸಾಗರೇ ಗಹನೇ ಗಿರೌ || ೩೨ ||

ಯೇ ಸ್ಮರಿಷ್ಯಂತಿ ಮಾಂ ರಾಜನ್ ಯಥಾಹಂ ಭವತಾ ಸ್ಮೃತಾ |

ನ ತೇಷಾಂ ದುರ್ಲಭಂ ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ || ೩೩ ||

ಇದಂ ಸ್ತೋತ್ರವರಂ ಭಕ್ತ್ಯಾ ಶೃಣುಯಾದ್ವಾ ಪಠೇತ ವಾ |

ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧಿಂ ಯಾಸ್ಯಂತಿ ಪಾಂಡವಾಃ || ೩೪ ||

ಮತ್ಪ್ರಸಾದಾಚ್ಚ ವಃ ಸರ್ವಾನ್ವಿರಾಟನಗರೇ ಸ್ಥಿತಾನ್ |

ನ ಪ್ರಜ್ಞಾಸ್ಯನ್ತಿ ಕುರವೋ ನರಾ ವಾ ತನ್ನಿವಾಸಿನಃ || ೩೫ ||

ಇತ್ಯುಕ್ತ್ವಾ ವರದಾ ದೇವೀ ಯುಧಿಷ್ಠಿರಮರಿಂದಮಮ್ |

ರಕ್ಷಾಂ ಕೃತ್ವಾ ಚ ಪಾಂಡೂನಾಂ ತತ್ರೈವಾನ್ತರಧೀಯತ || ೩೬ ||

ಇತಿ ಶ್ರೀಮನ್ಮಹಾಭಾರತೇ ವಿರಾಟಪರ್ವಣಿ ದೇವೀ ಸ್ತೋತ್ರಮ್ |

5. ನವ ದುರ್ಗಾ ಸ್ತೋತ್ರಂ

5. ನವ ದುರ್ಗಾ ಸ್ತೋತ್ರಂ

ಶೈಲಪುತ್ರೀ

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ |

ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಬ್ರಹ್ಮಚಾರಿಣೀ

ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ |

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಚಂದ್ರಘಂಟಾ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ಕೂಷ್ಮಾಂಡಾ

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||

ಸ್ಕಂದಮಾತಾ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||

ಕಾತ್ಯಾಯನೀ

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |

ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||

ಕಾಳರಾತ್ರೀ

ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |

ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ||

ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ |

ವರ್ಧನಮೂರ್ಧ್ವಜಾ ಕೃಷ್ಣಾ ಕಾಳರಾತ್ರಿರ್ಭಯಂಕರೀ ||

ಮಹಾಗೌರಿ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |

ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||

ಸಿದ್ಧಿದಾತ್ರೀ

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |

ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ ||

ಇತಿ ಶ್ರೀ ನವ ದುರ್ಗಾ ಸ್ತೋತ್ರಂ ಪರಿಪೂರ್ಣ ||

6. ಧ್ಯಾನ ಮಂತ್ರ

6. ಧ್ಯಾನ ಮಂತ್ರ

ಓಂ ಜಾತಾ ಜತ್‌ ಸಮ್ಯುಕ್ತಮರ್ಧೇಂದು ಕೃತಿ ಲಕ್ಷ್ಮಣಂ

ಲೋಚನಾಯಾತ್ರಾ ಸ್ನುಕ್ತಂ ಪದಮೇಂದು ಸಾದ್ಯ ಶನಯಂ

ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ ಗ್ರಹ ಪೀಡಸು ಛೋಗ್ರಾಸು ಮಾಹಾತ್ಮಯಾನ್‌ ಶ್ರೀನು ಯಾನ್‌ಮಮ್‌

ದುರ್ಗಾ ಶತ್ರು ಶಾಂತಿ ಮಂತ್ರ

ರಿಪವಾಹ ಸಂಕ್ಷ್ಯಾಮ್‌ ಯಂತಿ ಕಲ್ಯಾಣಂ ಚಾಪ್‌ ಪಾದಾಯತೇ ನಂದತೇ ಚ ಕುಲಂ ಪುನಾಸಮ್‌ ಮಹಾತ್ಮಮಮ್‌ ಮಾ ಶ್ರೀನು ಯಾನ್‌ಮನ್‌

7. ಶರಣಾಗತ ದೀನಾರ್ತ ಪರಿತ್ರಾಣ ಪಾರಾಯಣ

7. ಶರಣಾಗತ ದೀನಾರ್ತ ಪರಿತ್ರಾಣ ಪಾರಾಯಣ

ಸರ್ವಸ್ಯಾರ್ಥಿ ಹರೇ ದೇವಿ ನಾರಾಯಣೀ ನಮೋಸ್ತುತೇ

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತುತೇ ರೋಗಾನ ಶೇಷ ನಪಹಂಸಿ ತುಷ್ಟಾ

ರುಷ್ಟಾ ತು ಕಾಮಾನ್‌ ಸಕಲಾನ ಭೀಷ್ಟಾನ್‌

ತ್ವಾಮಾಶ್ರಿತಾನಾಂ ನ ವಿಪನ್‌ ನರಾಣಾಂ

ತ್ವಾಮಾಶ್ರಿತಾ ಹ್ಯಾ ಶ್ರಯತಾಂ ಪ್ರಯಾಂತಿ

ಸರ್ವ ಬಾಧಾ ವಿನಿರ್ಮುಕ್ತೋ ಧನ ಧಾನ್ಯ ಸುತಾನ್‌ ವಿತಃ ಮನುಷ್ಯೋ ಮತ ಪ್ರಸಾದೇನ್ ಭವಿಷ್ಯತಿ ನ ಸನ್‌ಶಯಃ

ದೇಹೀ ಸೌಭಾಗ್ಯಂ ಆರೋಗ್ಯಂ ದೇಹೀ ದೇವೀ ಪರಂ ಸುಖಂ

ರೂಪಂ ದೇಹೀ ಜಯಂ ದೇಹೀ ಯಶೋ ದೇಹೀ ದ್ವಿಶೋ ಜಹೀ

ಜ್ಯಾಂತಿ ಮಂಗಳಾ ಕಾಳಿ ಭದ್ರ ಕಾಳಿ ಕಪಾಲಿನೀ ದುರ್ಗಾ ಕ್ಷಮಾ ಶಿವಾ

ಧಾತ್ರೀ ಸ್ವಾಹ ಸ್ವಧಾಃ ನಮೋ ಸ್ತುತೆ

8. ಸರ್ವ ಬಾಧಾ ಮುಕ್ತಿ ಮಂತ್ರ

8. ಸರ್ವ ಬಾಧಾ ಮುಕ್ತಿ ಮಂತ್ರ

ಸರ್ವ ಬಾಧಾ ವಿನಿರ್‌ಮುಕ್ತೊ ಧನ ಧ್ಯಾನ ಸುತನ್‌ವಿತಃ

ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್‌ಶಯಃ

ದುರ್ಗಾ ದುಸ್ವಪ್ನ ನಿವಾರಣೆ ಮಂತ್ರ

ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ

ಗೃಹ ಪೀಡಸು ಚೊಗ್ರಾಸು ಮಹಾತ್ಮಯಾನ್ ಶ್ರೀನು ಯಾನ್‌ಮಮ್

"ಕಲಸಾಸ್ಯ ಮುಖೇ ವಿಷ್ಣು ಕಾಂತೆರುಧ್ರ ಸಮಶ್ರಿತಃ

ಮುಲಾ ತತ್ರಾ ಸ್ತಿತೋ ಬ್ರಹ್ಮ ಮಧ್ಯೇ ಮಾತೃ ಗುಣ ಸಮಶ್ರಿತಃ

ಕುಕ್ಷೌತು ಸಾಗರ ಸರ್ವೇ ಸಪ್ತ ದ್ವೀಪ ವಸುಂದರಹ

ಋಗ್ವೇದೋತ ಯಜುರ್ವೇದ ಸಾಮವೇದೋಭಿ ಅಥರ್ವಣಃ

ಅಗ್ನಿಶ್ಚಃ ಸಾಹಿತಾಸ್ ಸರ್ವೇ ಕಾಲಾಶಂಭು ಸಮಶ್ರಿತಃ

ಗಂಗೇಶ್ಚ ಯಮುನಾ ಚೈವ ಗೋಧಾವರಿ ಸರಸ್ವತಿ

ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಂ ಕುರು

ಸ್ವಯಂ ಶುದ್ಧತೆಗೆ ದುರ್ಗಾ ಪೂಜೆ

" ಓಂ ಅಪವಿತ್ರಃ ಪವಿತ್ರೋ ವಾ ಸರ್ವವಸ್ತುಂ ಗತೌಪಿ ವ

ಯಃ ಸ್ಮøತ್ ಪುಂಡರಿಕ ಅಕ್ಷಂ ಸ ವಹಿ ಅಭ್ಯಂತರ ಸುಚಿಹಿಃ"

9. ದುರ್ಗಾ ದೇವಿಯನ್ನು ಆಹ್ವಾನಿಸುವ ಬಗೆ

9. ದುರ್ಗಾ ದೇವಿಯನ್ನು ಆಹ್ವಾನಿಸುವ ಬಗೆ

"ಆಗಚ್ಚಾ ತ್ವಂ ಮಹಾದೇವಿ! ಸ್ಥಾನೇ ಚಾತ್ರ ಸ್ಥಿರ ಭಾವಃ

ಯವತ ಪೂಜಾಮ್ ಕ್ರಿಶ್ಯಾಮಿ ತ್ವತಾ ತ್ವಾಮ್ ಸಿಂಧೂ ಭವಃ"

"ಶ್ರೀ ಜಗದಾಂಬೆ ದುರ್ಗಾ ದೇವೈ ನಮಃ

ದುರ್ಗಾದೇವಿಮ್ ಆವಾಯಾಮಿ

ಆವಾಹನರ್ಥಯೇ ಪುಷ್ಪಾಂನಜಲಿ ಸಮರ್ಪಯಾಮಿ"

10. ಪೂಜೆಯ ಸಂದರ್ಭದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳಿದ್ದರೆ ಕ್ಷಮಿಸು ಎನ್ನುವ ಮಂತ್ರ

10. ಪೂಜೆಯ ಸಂದರ್ಭದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ತಪ್ಪುಗಳಿದ್ದರೆ ಕ್ಷಮಿಸು ಎನ್ನುವ ಮಂತ್ರ

"ಆಹ್ವಾನಮ್ ನಾ ಜಾನಮಿ ನಾ ಜಾನಮಿ ನಾ ತವ ಅರ್ಚನಮ್

ಪೂಜಾಮ್ ಚ ನಾ ಜಾನಮಿ ಕ್ಷಮತ್ತಮ್ ಪರಮೇಶ್ವರಿ

ಮತ್ರಾಹಿನಮ್ ಕ್ರಿಯಾಹಿನಮ್ ಭಕ್ತಿಹಿನಮ್ ಸುರೇಶ್ವರಿ

ಯತ್ಪೂಜಿತಮ್ ಮಾಯಾ ದೇವಿ ಪರಿಪೂರ್ಣಮ್ ತದಾಸ್ತು ಮಿ."

11. ದುರ್ಗಾ ದೇವಿಗೆ ಅಭಿಷೇಕದ ಮಂತ್ರ

11. ದುರ್ಗಾ ದೇವಿಗೆ ಅಭಿಷೇಕದ ಮಂತ್ರ

"ಶ್ರೀ ದುರ್ಗಾ ದೇವೈ ನಮಃ; ಆಸನಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಪಾದ್ಯಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಅಘ್ರ್ಯಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಆಚಮ್ಯ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ದಹಿ ಸ್ನಾನಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಗ್ರಿತ್ ಸ್ನಾನಮ್ ಸಮರ್ಪಯಾಮಿ

ದುರ್ಗಾ ದೇವಿಗೆ ಅಭಿಷೇಕದ ಮಂತ್ರದ ಮುಂದಿನ ಭಾಗ ಶ್ರೀ ದುರ್ಗಾ ದೇವೈ ನಮಃ; ಮಧು ಸ್ನಾನಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಪಂಚಾಮೃತ ಸ್ನಾನಮ್ ಸಮರ್ಪಪಾಮಿ

ಶ್ರೀ ದುರ್ಗಾ ದೇವೈ ನಮಃ; ಗಂಧೋದಕ ಸ್ನಾನಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಶುದ್ಧೋದಕ ಸ್ನಾನಮ್ ಸಮರ್ಪಯಾಮಿ

ದೇವಿಗೆ ಅರ್ಪಿಸುವುದರ ಮಂತ್ರ ಶ್ರೀ ದುರ್ಗಾ ದೇವೈ ನಮಃ; ಗಂಧಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಹರಿದ್ರಾ ಚೂರ್ಣಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಸಿಂಧೂರಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ವಸ್ತ್ರಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಆಭರಣಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಪುಷ್ಪಮಾಲಿಕಾಮ್ ಸಮರ್ಪಯಾಮಿ

ದೇವಿಗೆ ಅರ್ಪಿಸುವುದರ ಮುಂದಿನ ಮಂತ್ರ ಶ್ರೀ ದುರ್ಗಾ ದೇವೈ ನಮಃ; ಪುಷ್ಪಣಿಮ್ ಪೂಜಾಯಾಮಿ

ಶ್ರೀ ದುರ್ಗಾ ದೇವೈ ನಮಃ; ನೈವೇದ್ಯಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ತಾಂಬೂಲಮ್ ಸಮರ್ಪಯಾಮಿ

ಶ್ರೀ ದುರ್ಗಾ ದೇವೈ ನಮಃ; ಧೂಪಮ್ ಅಘ್ರ್ಯಾಮಿ

ಶ್ರೀ ದುರ್ಗಾ ದೇವೈ ನಮಃ; ಕರ್ಪೂರ ನಿರಂಜನಮ್ ಧರಿಶ್ಯಾಮಿ

12. ಶ್ರೀ ದುರ್ಗಾ ದೇವಿ ಕವಚಂ

12. ಶ್ರೀ ದುರ್ಗಾ ದೇವಿ ಕವಚಂ

ಈಶ್ವರ ಉವಾಚ

ಶೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್ |

ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ || ೧ ||

ಅಜ್ಞಾತ್ವಾ ಕವಚಂ ದೇವಿ ದುರ್ಗಾಮನ್ತ್ರಂ ಚ ಯೋ ಜಪೇತ್ |

ನ ಚಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ || ೨ ||

ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ |

ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ || ೩ ||

ಸುಗನ್ಧಾ ನಾಸಿಕಂ ಪಾತು ವದನಂ ಸರ್ವಧಾರಿಣೀ |

ಜಿಹ್ವಾಂ ಚ ಚಣ್ಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ || ೪ ||

ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ || ೫ ||

ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ |

ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ || ೬ ||

ಏವಂ ಸ್ಥಿತಾಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ |

ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಽಸ್ತು ತೇ || ೭ ||

ಇತಿ ಶ್ರೀ ದುರ್ಗಾ ದೇವಿ ಕವಚಂ ||

English summary

Ashadha Gupt Navratri: Chant These Mantras to Please Goddess Durga

Here we are discussing about Ashadha Gupt Navratri 2022 : Chant These Mantras to Please Goddess Durga. Read more.
Story first published: Friday, July 1, 2022, 20:30 [IST]
X
Desktop Bottom Promotion