For Quick Alerts
ALLOW NOTIFICATIONS  
For Daily Alerts

ಆಷಾಡ ಮಾಸದ ಮಹತ್ವ ಏನು?, ಈ ಮಾಸದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ

|

ಆಷಾಡ ಮಾಸ ಅಥವಾ ಶೂನ್ಯ ಮಾಸ ಎಂದರೆ ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ಶುಭ ಕಾರ್ಯಗಳಿಗೂ ಅಶುಭ ಎಂಬ ನಂಬಿಕೆ ಇದೆ. ಹಿಂದೂ ಪಂಚಾಂಗದ ಪ್ರಕಾರ ಆಷಾಡ ಮಾಸ ವರ್ಷದ ನಾಲ್ಕನೇ ತಿಂಗಳು, ಇದು ಗ್ರೆಗೋರಿಯನ್ ಕ್ಯಾಲೆಂಡರ್‌ ಪ್ರಕಾರ ಜೂನ್ ಅಥವಾ ಜುಲೈ ತಿಂಗಳುಗಳಲ್ಲಿ ಬರಲಿದೆ.

Ashada Masa Date, Significance And Vrata Dates

2022 ಸಾಲಿನ ಆಷಾಡ ಮಾಸ ಜೂನ್‌ 30ರಂದು ಆರಂಭವಾಗಿ ಜುಲೈ 28ರಂದು ಅಂತ್ಯವಾಗಲಿದೆ. ಹಿಂದೂ ಕ್ಯಾಲೆಂಡರ್‌ ಆರಂಭವಾದ ನಾಲ್ಕು ತಿಂಗಳ ನಂತರ ಪವಿತ್ರ ಅವಧಿ ಆಷಾಡ ಮಾಸ ಶಾಯನ ಏಕಾದಶಿಯಂದು ಪ್ರಾರಂಭವಾಗುತ್ತದೆ.

ಆಷಾಡ ಮಾಸದ ಮಹತ್ವ

ಆಷಾಡ ಮಾಸದ ಮಹತ್ವ

ಆಷಾಡ ಮಾಸ ದಕ್ಷಿಣದ ಪ್ರಾರಂಭವನ್ನು ಸೂಚಿಸುತ್ತದೆ. ಸೂರ್ಯನು ದಕ್ಷಿಣದ ಕಡೆಗೆ ಸಾಗುತ್ತಾ ಕರ್ಕ ರಾಶಿಗೆ ಪ್ರವೇಶಿಸುತ್ತಾನೆ, ಇದನ್ನು ಕಾರ್ಕಟಕ ಸಂಕ್ರಮಣ ಎಂದು ಕರೆಯಲಾಗುತ್ತದೆ. ಉತ್ತರಾಯಣದ ನಂತರ ನಿಖರವಾಗಿ ಆರು ತಿಂಗಳ ನಂತರ ಇದು ಸಂಭವಿಸುತ್ತದೆ.

  • ಆಷಾಡ ಮಾಸ ಮಾನ್ಸೂನ್ ಋತುವಿನ ಆರಂಭವಾಗಿದ್ದು, ಭತ್ತ ಮತ್ತು ಧಾನ್ಯಗಳನ್ನು ಬೆಳೆಸಲು ಪ್ರಕೃತಿ ಮತ್ತು ರೈತರಿಗೆ ಹೊಸ ಜೀವನವನ್ನು ತರುತ್ತದೆ. ಇದು ಆಷಾಡ ತಿಂಗಳ ಬಹು ಮುಖ್ಯ ಮಹತ್ವ ಎನ್ನಬಹುದು.
  • ಈ ಮಾಸದಲ್ಲಿ ಹೆಣ್ಣುಮಕ್ಕಳು ಮೆಹೆಂದಿಯನ್ನು ತಮ್ಮ ಅಂಗೈ ಮತ್ತು ಕಾಲುಗಳಿಗೆ ಹಾಕಿಕೊಳ್ಳುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಸಿದ್ಧಾಂತವೆಂದರೆ ಹವಾಮಾನ ಬದಲಾವಣೆಯು ಚರ್ಮದ ಮೇಲೆ ಪರಿಣಾಮ ಬೀರಬಹುದು ಮತ್ತು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಮೆಹೆಂದಿ ಎಲೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ ಎನ್ನಲಾಗುತ್ತದೆ.
  • ಪೂರ್ವಜರಿಗೆ ಅರ್ಪಣೆ

    ಪೂರ್ವಜರಿಗೆ ಅರ್ಪಣೆ

    • ಆಷಾಡ ಅಮಾವಾಸ್ಯೆಯಂದು ಪೂರ್ವಜರಿಗೆ ಅರ್ಪಣೆಗಳನ್ನು ನೀಡಲಾಗುತ್ತದೆ ಮತ್ತು ರಾತ್ರಿ ವೇಳೆ ಅದ್ಭುತ ದೀಪಗಳಿಂದ ಅಲಂಕರಿಸುತ್ತಾರೆ. ಸತ್ತ ಆತ್ಮಗಳ ಶಾಂತಿಗಾಗಿ ಅವರು ಆಷಾಡ ಅಮಾವಾಸ್ಯೆ ವ್ರತ ಆಚರಿಸುತ್ತಾರೆ.
    • ಆಷಾಡ ಅಮಾವಾಸ್ಯೆಯಲ್ಲಿ ಪಿತೃ ತರ್ಪಣೆ ಬಹಳ ಶ್ರೇಷ್ಠವೆಂದು ನಂಬಲಾಗಿದೆ.
    • ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು 'ಅಮೃತ ಲಕ್ಷ್ಮೀ ವ್ರತ'ವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ.
    • ಚಾಮುಂಡೇಶ್ವರಿ ದೇವಿಯ ಜನ್ಮ ದಿನ

      ಚಾಮುಂಡೇಶ್ವರಿ ದೇವಿಯ ಜನ್ಮ ದಿನ

      • ಮೈಸೂರು ಚಾಮುಂಡೇಶ್ವರಿ ದೇವಿಯ ಜನ್ಮ ದಿನವು ಆಷಾಡ ಮಾಸದಲ್ಲೇ ಬರುತ್ತದೆ.
      • ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೇ ದೇವಿಯ ಪೂಜೆ ಮಾಡುವುದು ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎಂದು ನಂಬಲಾಗಿದೆ.
      • ಈ ಮಾಸದಲ್ಲಿ ಶ್ರೀಹರಿ ವಿಷ್ಣುವಿನ ನಾಮಸ್ಮರಣೆ ಹಾಗೂ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಜಲದೇವನ ಆರಾಧನೆ ಮಾಡಿದರೆ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ.
      • ಆಷಾಡದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ

        ಆಷಾಡದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ

        • ಯಾವುದೇ ಶುಭ ಕಾರ್ಯಗಳಿಗೂ ಈ ಮಾಸ ಶುಭವಲ್ಲ ಎಂದು ನಂಬಿರುವಂತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಖರೀದಿ, ಆಸ್ತಿ ಖರೀದಿ, ಹೊಸ ವ್ಯಾಪಾರ ಆರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಈ ಮಾಸದಲ್ಲಿ ನಡೆಸಲಾಗುವುದಿಲ್ಲ.
        • ಅಲ್ಲದೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಒಟ್ಟಿಗೆ ಇರಲು ಅವಕಾಶವಿಲ್ಲ. ಪತ್ನಿ ಒಂದು ಮಾಸ ಪತ್ನಿಯನ್ನು ಬಿಟ್ಟು ತನ್ನ ತವರು ಮನೆಯಲ್ಲಿ ನೆಲೆಸುತ್ತಾಳೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ, ಆಷಾಡ ಸಮಯದಲ್ಲಿ ಹುಡುಗಿ ಗರ್ಭಧರಿಸಿದರೆ ಬೇಸಿಗೆ ತಿಂಗಳಿನಲ್ಲಿ ಅವಳಿಗೆ ಹೆರಿಗೆ ಆಗುತ್ತದೆ. ಆದ್ದರಿಂದ ಮಗು ಮತ್ತು ತಾಯಿಗೆ ಬಿಸಿಲಿನ ಶಾಖ ಹೆಚ್ಚುತ್ತದೆ, ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು.
        • ಮಳೆಯ ಆರ್ಭಟ

          ಮಳೆಯ ಆರ್ಭಟ

          • ಆಷಾಢ ಮಾಸದಲ್ಲಿ ಶುಭ ಕಾರ್ಯಗಳಿಗೆ ಅಡ್ಡಿಮಾಡುವ ಮತ್ತೊಂದು ವೈಜ್ಞಾನಿಕ ಕಾರಣ ಈ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತದೆ. ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿಲ್ಲ ಎಂದು ನಿಷೇಧಿಸಿದ್ದರು.
          • ಸತತ ಮಳೆಯ ಜತೆಗೆ ಈ ಮಾಸದಲ್ಲಿ ರೈತಾಪಿ ವರ್ಗಕ್ಕೆ ಹೊಲ- ಗದ್ದೆಗಳಲ್ಲಿ ಆಪಾರ ಕೆಲಸವಿರುತ್ತದೆ. ಬಿತ್ತನೆ ಮಾಡುವುದು, ಕಳೆ ಕೀಳುವುದು ಬೇಸಾಉ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಸಂದರ್ಭದಲ್ಲಿ ಇತರ ಕೆಲಸ, ಶುಭ ಕಾರ್ಯಗಳುಗೆ ಹೆಚ್ಚಿನ ಸಮಯ ಸಿಗದ ಕಾರಣವೂ ಸಹ ಆಷಾಡದಲ್ಲಿ ಕಾರ್ಯಕ್ರಮಗಳು ಮಾಡುವ ರೂಢಿ ಇಲ್ಲ.
          • ಮತ್ತೊಂದು ನಂಬಿಕೆಯ ಪ್ರಕಾರ ಈ ಮಾಸದಲ್ಲಿ ಶ್ರೀಹರಿ ವಿಷ್ಣು ನಿದ್ರೆಗೆ ಜಾರುತ್ತಾನೆ, ಹಾಗಾದಿ ಈ ತಿಂಗಳು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.
English summary

Ashada Masa 2022: Date, Significance And Vrata Dates

Here we are discussing about Ashada Masa Date, Significance And Vrata Dates. Ashada Masam is the fourth month in a traditional Hindu Kannada calendar followed in Karnataka. Kannada Ashada Masa 2020 is from June 22 to July 20. Read more.
X
Desktop Bottom Promotion