For Quick Alerts
ALLOW NOTIFICATIONS  
For Daily Alerts

Ash Wednesday 2020: ಬೂದಿ ಬುಧವಾರ ಬಂತು: ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ

|

ಫೆ. 26ರಿಂದ ಕ್ರೈಸ್ತರಿಗೆ ತಪಸ್ಸು ಕಾಲ ಆರಂಭ. ಬುಧವಾರದಂದು ಪ್ರಾರಂಭವಾಗುವ ಆಚರಣೆ 40 ದಿನಗಳವರೆಗೆ ಇರುತ್ತದೆ. ಇದನ್ನು ಬೂದಿ ಬುಧವಾರ ಅಥವಾ ಆ್ಯಷ್‌ ವೆನ್ಸ್‌ಡೇ ಎಂದು ಕರೆಯುತ್ತಾರೆ. ಅಂದರೆ ಈ ದಿನದಿಂದ ಗುಡ್‌ಫ್ರೈಡೇಯವರಿಗೆ ಕ್ರೈಸ್ತರು ತ್ಯಾಗ ಜೀವನ ನಡೆಸುತ್ತಾರೆ. ಮಾಂಸಾಹಾರದಿಂದ ದೂರವಿರುತ್ತಾರೆ. ಮಾದಕ ವಸ್ತುಗಳಿಂದ ದೂರವಿರುತ್ತಾರೆ. ಪಾರ್ಟಿಗಳು, ಔತಣ ಕೂಡಗಳನ್ನು ಏರ್ಪಡಿಸುವುದಿಲ್ಲ.

Ash Wednesday

ಇದೊಂದು ಯಹೂದಿಗಳು ಆಚರಿಸುತ್ತಿದ್ದ ಸಂಸ್ಕೃತ್ತಿಯಾಗಿತ್ತು. ದೇವರಿಗೆ ವಿಮುಖವಾಗಿದ್ದರಿಂದ ಕಷ್ಟ ಅನುಭವಿಸಬೇಕಾಗಿ ಬಂತು ಎಂಬ ಪ್ರಾಯಶ್ಚಿತ್ತ ರೂಪವಾಗಿ ಮೈಗೆಲ್ಲಾ ಬೂದಿ ಬಳಿದುಕೊಂಡು, ನಾರುಮುಡಿಯುಟ್ಟು ತಪ್ಪಸ್ಸು ಮಾಡುತ್ತಿದ್ದರು. ಇಂದು ಕ್ರೈಸ್ತರು ಅದನ್ನೇ ಸಾಂಕೇತವಾಗಿ ಆಚರಿಸುತ್ತಾರೆ.

ಬೂದಿ ಬುಧವಾರದಂದು ಚರ್ಚ್‌ಗೆ ತೆರಳಿ ಯೇಸುವನ್ನು ಆರಾಧಿಸಿ ಪಾದ್ರಿ ಮುಂದೆ ಸಾಲಾಗಿ ನಿಲ್ಲುತ್ತಾರೆ. ಪಾದ್ರಿ ಬೂದಿ ಬಟ್ಟಲನ್ನು ಕೈಯಲ್ಲಿ ಹಿಡಿದು, ಅದರಿಂದ ಸ್ವಲ್ಪ ಬೂದಿ ತೆಗೆದು ಎಲ್ಲರ ಹಣೆಗೆ ಶಿಲುಬೆ ಆಕಾರದಲ್ಲಿ ಬರೆಯುತ್ತಾರೆ. ಮರಳಿನಿಂದ ಬಂದ ದೇಹವಿದು, ಮರಳಿಗೆ ಮಣ್ಣಿಗೆ ಸೇರುತ್ತದೆ ಎಂಬ ಅರ್ಥದ ಹಾಡುಗಳನ್ನು ಹೇಳುತ್ತಾರೆ. ಇದು ತ್ಯಾಗದ ಸಂಕೇತವಾಗಿದ್ದು, ಮೋಜು ಮಸ್ತಿಗೆ ಖರ್ಚು ಮಾಡುವ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡಬೇಕು ಎಂಬ ಆಶಯ ಈ ಆಚರಣೆ ಹಿಂದಿದೆ.

ದರ್ಪ, ದಬ್ಬಾಳಿಕೆ ಮರೆತು ಮನುಷ್ಯತ್ವವನ್ನು ಎತ್ತಿ ಹಿಡಿಯಲು ಬೂದಿ ಬುಧವಾರ ಆಚರಿಸುತ್ತಾರೆ.

English summary

Ash Wednesday 2020 Date, History and Significance

Ash Wednesday started on February 26, 2020. On this day, the faithful visit churches and have their foreheads marked with ashes in the shape of a cross.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X