For Quick Alerts
ALLOW NOTIFICATIONS  
For Daily Alerts

ಅನಂತ ಚತುರ್ದಶಿ 2021: ವಿಷ್ಣುವಿನ ಆರಾಧನೆಗೆ ಶುಭ ಸಮಯ ಹಾಗೂ ಮಹತ್ವ

|

ಅನಂತ ಚತುರ್ದಶಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಅನಂತ ಚತುರ್ದಶಿಯು ಗಣೇಶ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವಾಗಿದೆ. ಅಲ್ಲದೆ ಈ ದಿನ ಅನಂತನ ಅಂದರೆ ಶ್ರೀ ವಿಷ್ಣುವಿನ ಪೂಜೆಗೆ ಶ್ರೇಷ್ಠವಾದ ದಿನವಾಗಿದೆ. ಈ ವರ್ಷ ಅನಂತ ಚತುರ್ದಶಿ ಸೆಪ್ಟೆಂಬರ್ 19ರಂದು ಆಚರಿಸಲಾಗುವುದು.

ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನದಂದು ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನದಂದು ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ರೇಷ್ಮೆ ನೂಲಿನಲ್ಲಿ ತಯಾರಿಸಿದ ದಾರಕ್ಕೆ 14 ಗಂಟುಗಳನ್ನು ಹಾಕಿ, ವಿಷ್ಣುವಿನ ಬಳಿ ಪೂಜಿಸಿ ಕೈಗೆ ಕಟ್ಟಬೇಕು.

ಅನಂತ ಚತುರ್ದಶಿಯ ವಿಶೇಷ

ಅನಂತ ಚತುರ್ದಶಿಯ ವಿಶೇಷ

* ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಉಪವಾಸವಿದ್ದು ಅನಂತ ಚತುರ್ದಶಿ ಆಚರಿಸಲಾಗುವುದು.

* ಭಗವಾನ್ ವಿಷ್ಣುವಿನ ಅನಂತ ರೂಪವನ್ನು ಈ ದಿನ ಪೂಜಿಸಲಾಗುತ್ತದೆ.

* ಭಗವಾನ್ ವಿಷ್ಣುವು ಭು, ಭುವಸ್, ಸ್ವರ್, ಮಹಾಸ್, ಜನಸ್, ತಪಸ್, ಮತ್ತು ಸತ್ಯ ಮತ್ತು ಮೇಲಿನ ಮತ್ತು ಅಟಲ, ವಿಟಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಳ ಈ ಎಲ್ಲಾ ಲೋಕವನ್ನು ವಿವಿಧ ಅವತಾರಗಳನ್ನು ಎತ್ತಿ ರಕ್ಷಣೆ ಮಾಡಿದನು ಎಂದು ಹೇಳಲಾಗುವುದು. ವಿಷ್ಣುವಿನ ಈ ಅವತಾರವನ್ನು ಅನಂತನ ಅವತಾರವೆಂದು ಹೇಳಲಾಗುವುದು. ಅನಂತ ಚತುರ್ದಶಿಯಂದು ಉಪವಾಸವಿದ್ದು ಪೂಜೆ ಮಾಡಿ ಆಚರಿಸಲಾಗುವುದು.

* ಯಾರು ಈ ಅನಂತ ಚತುರ್ದಶಿಯನ್ನು ಆಚರಿಸುತ್ತಾರೆ ಅವರ ಸಂಕಷ್ಟಗಳು ದೂರವಾಗುವುದು.

ಅನಂತ ಚತುರ್ದಶಿ ಹೇಗೆ ಆಚರಿಸಬೇಕು?

ಅನಂತ ಚತುರ್ದಶಿ ಹೇಗೆ ಆಚರಿಸಬೇಕು?

* ಬೆಳಗ್ಗೆ ಎದ್ದು ಸ್ನಾನ ಮಾಡಿ ಕಲಶ ತಯಾರಿಸಬೇಕು. ಕಲಶವನ್ನು ಕಮಲದ ಹೂವಿನಿಂದ ಅಲಂಕರಿಸಬೇಕು. ವಿಷ್ಣುವಿನ ಮೂರ್ತಿಯನ್ನು ಅಲಂಕರಿಸಿಬೇಕು.

* ಈಗ ಕುಂಕುಮ, ಕೇಸರಿ,ಅರಿಶಿಣ ಹಾಕಿದ ತಟ್ಟೆಯಲ್ಲಿ ರೇಷ್ಮೆ ನೂಲು ಮಿಶ್ರ ಮಾಡಿ 14 ಗಂಟುಗಳನ್ನು ಹಾಕಿ ಮಹಾವಿಷ್ಣುವಿನ ಬಳಿ ಇಡಬೇಕು. ನಂತರ ಮಹಾ ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.

* ನಂತರ ಆ ಪವಿತ್ರ ನೂಲನ್ನು ತೆಗೆದುಕೊಂಡು ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು.

* ಪುರುಷರು ಈ ನೂಲನ್ನು ಎಡಗೈಗೆ ಕಟ್ಟಿದರೆ, ಮಹಿಳೆಯರು ಈ ನೂಲನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ನಂತರ ಪ್ರಸಾದವನ್ನು ಸ್ವೀಕರಿಸಬೇಕು.

ಅನಂತ ಚತುರ್ದಶಿ ಪೂಜೆಗೆ ಶುಭ ಮುಹೂರ್ತ

ಅನಂತ ಚತುರ್ದಶಿ ಪೂಜೆಗೆ ಶುಭ ಮುಹೂರ್ತ

ಅನಂತ ಚತುರ್ದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 19, ಬೆಳಗ್ಗೆ 6:07ಕ್ಕೆ

ಅನಂತ ಚತುರ್ದಶಿ ತಿಥಿ ಅಂತ್ಯ: ಸೆಪ್ಟೆಂಬರ್‌ 20 ಬೆಳಗ್ಗೆ 5:30ಕ್ಕೆ

ಅನಂತ ಚತುರ್ದಶಿ ಆಚರಣೆಯ ಪ್ರಯೋಜನವೇನು?

ಅನಂತ ಚತುರ್ದಶಿ ಆಚರಣೆಯ ಪ್ರಯೋಜನವೇನು?

ಪುರಾಣದ ಪ್ರಕಾರ, ಅನಂತ ಚತುರ್ದಶಿ ಉಪವಾಸವನ್ನು ಸತತ 14 ವರ್ಷಗಳ ಕಾಲ ಆಚರಿಸಿದರೆ ಆ ವ್ಯಕ್ತಿ ವಿಷ್ಣುವಿನ ಲೋಕದಲ್ಲಿ ಸ್ಥಾನ ಪಡೆಯುತ್ತಾನೆ. ವಿಷ್ಣುವಿನ ಕೃಪೆ ಅವನ ಮೇಲಿರುತ್ತದೆ. ಈ ದಿನ ಉಪವಾಸವಿದ್ದು ವಿಷ್ಣುವಿನ ಸಹಸ್ರನಾಮ ಪಠಿಸಿದರೆ ಮನೋಕಾಮನೆಗಳು ಈಡೇರುವುದು. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. ಅನಂತ ಚತುರ್ದಶಿ ಉಪವಾಸವನ್ನು ಮೊದಲು ಆರಂಭಿಸಿದ್ದು ಮಹಾಭಾರತದ ಕಾಲದಿಂದ ಎಂದು ಹೇಳಲಾಗುವುದು.

ಪಾಂಡವರು ಕೌರವರ ಜೊತೆ ಸೋತು ಅಜ್ಞಾತವಾಸದಲ್ಲಿರುತ್ತಾರೆ. ಆಗ ಅಲ್ಲಿಗೆ ಬಂದ ಶ್ರೀಕೃಷ್ಣನನ್ನು ಪಾಂಡವರು ಸ್ವಾಗತಿಸುತ್ತಾರೆ. ಶ್ರೀಕೃಷ್ಣನ ಬಳಿಕ ತಾವು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಏನು ಮಾಡಬೇಕು ಎಂದು ಕೇಳುತ್ತಾರೆ, ಆಗ ಶ್ರೀ ಕೃಷ್ಣ ಅನಂತ ಚತುರ್ದಶಿ ಕುರಿತು ವಿವರಿಸುತ್ತಾನೆ. ಅದರಂತೆ ಯುಧಿಷ್ಠರ ತನ್ನ ಪರಿವಾರದ ಜೊತೆ ಅನಂತ ಚತುರ್ದಶಿ ವ್ರತವನ್ನು ಆಚರಿಸುತ್ತಾನೆ. ನಂತರ ಕಳೆದು ಸಾಮ್ರಾಜ್ಯ ಮರಳಿ ಸಿಗುವಂತಾಗುವುದು ಎಂಬ ಪೌರಾಣಿಕ ಕತೆ ಇದೆ.

English summary

Anant Chaturdashi 2021 date, shubh muhurat, rituals and significance

Anant Chaturdashi 2021 date, shubh muhurat, rituals and significance, read on...
Story first published: Friday, September 17, 2021, 16:50 [IST]
X
Desktop Bottom Promotion