For Quick Alerts
ALLOW NOTIFICATIONS  
For Daily Alerts

ಅಮಾವಾಸ್ಯೆಯಲ್ಲೇ ದೀಪಾವಳಿ ಆಚರಣೆ ಏಕೆ ಗೊತ್ತಾ?

By Divya Pandith
|
Deepavali 2018 : ಅಮಾವಾಸ್ಯೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಯಾಕೆ ಗೊತ್ತಾ? | Oneindia Kannada

ಹಿಂದೂ ಪಂಚಾಗದ ಪ್ರಕಾರ ಅಮವಾಸ್ಯೆ ಹಾಗೂ ಹುಣ್ಣಿಮೆ ಹದಿನೈದು ದಿನಕ್ಕೊಮ್ಮೆ ಬರುತ್ತದೆ. ಅಂತೆಯೇ ಹಬ್ಬ-ಹರಿದಿನಗಳನ್ನು ಹುಣ್ಣಿಮೆಯ ಸಮಯದಲ್ಲಿ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮವಾಸ್ಯೆಯ ಸಮಯದಲ್ಲಿ ಎಲ್ಲೆಡೆಯೂ ಕತ್ತಲೆ ಕವಿದಿರುತ್ತದೆ, ಸೂರ್ಯನು ಕಾಣಿಸುವುದಿಲ್ಲ. ಚಂದ್ರನೂ ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಹಾಗಾಗಿ ಹಿಂದೂಗಳಿಗೆ ಅಮವಾಸ್ಯೆ ಎಂದರೆ ಅಶುಭ ಸಂಗತಿ ಎಂದು ಪರಿಗಣಿಸಲಾಗುತ್ತದೆ.

ಅಮವಾಸ್ಯೆಯ ಸಮಯದಲ್ಲಿ ಹೊಸ ಕೆಲಸ, ಮಂಗಳ ಕಾರ್ಯ ಹಾಗೂ ಹೊಸ ವಸ್ತುಗಳ ಖರೀದಿಗೆ ಮುಂದಾಗುವುದಿಲ್ಲ. ಬದಲಿಗೆ ಋಣಾತ್ಮ ಶಕ್ತಿಯನ್ನು ತೊಡೆದುಹಾಕಲು ವಿವಿಧ ಪೂಜೆ ಹಾಗೂ ಹೋಮಗಳನ್ನು ಕೈಗೊಳ್ಳುತ್ತಾರೆ ಅಷ್ಟೆ. ಆದರೆ ದೀಪಗಳ ಹಬ್ಬ ಹಾಗೂ ಬಹು ದೊಡ್ಡ ಹಬ್ಬ ಎಂದು ಕರೆಯುವ ದೀಪಾವಳಿಯನ್ನು ಮಾತ್ರ ಅಮವಾಸ್ಯೆಯ ದಿನವೇ ಆಚರಿಸುತ್ತಾರೆ. ಇದು ಹಿಂದೂಗಳ ಪದ್ಧತಿಯ ಪ್ರಕಾರ ಸಲ್ಲದ ವಿಚಾರವೆ.

ಈ ವಿಶೇಷ ಹಬ್ಬವು ಈ ಬಾರಿ 25ರಿಂದ ಆರಂಭವಾಗಿ 29ರವರೆಗೆ ಐದು ದಿನಗಳ ಕಾಲ ನಡೆಯುತ್ತಿದೆ. ಅಕ್ಟೋಬರ್ 27ರಂದು ನರಕ ಚತುರ್ದಶಿ ಹಾಗೂ 28ರಂದು ಲಕ್ಷ್ಮೀಪೂಜೆಯನ್ನು ಕರ್ನಾಟಕದಲ್ಲಿ ಪ್ರಮುಖವಾಗಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ದೀಪಾವಳಿ ಅಮವಾಸ್ಯೆ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅಶುಭ ದಿನದಲ್ಲಿ ಯಾಕೆ ದೀಪಾವಳಿ ಆಚರಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಒಮ್ಮೆಯಾದರೂ ಕಾಡಿರುತ್ತದೆ. ಇಂತಹ ಗೊಂದಲ ನಿಮಗೂ ಆಗಾಗ ಕಾಡಿದೆ, ಆದರೆ ಅದಕ್ಕೆ ಸೂಕ್ತ ಕಾರಣ ತಿಳಿಯಲು ವಿಫಲರಾಗಿದ್ದೀರಿ ಎಂದಾದರೆ, ದೀಪಾವಳಿಯ ಹಬ್ಬದ ಶುಭ ಸಮಯದಲ್ಲಿಯೇ ಕಾರಣವನ್ನು ತಿಳಿದುಕೊಳ್ಳಿ...

moon

ಅಮವಾಸ್ಯೆಯಲ್ಲಿ ದೀಪಾವಳಿ ಆಚರಣೆ

ದೀಪಾವಳಿ ಕಾರ್ತಿಕ ತಿಂಗಳಲ್ಲಿ ಬರುತ್ತದೆ. ಐದು ದಿನಗಳ ಕಾಲ ಆಚರಿಸುವ ದೊಡ್ಡ ಹಬ್ಬ. ಪ್ರತಿ ದಿನವೂ ವಿಶೇಷವಾದ ಪದ್ಧತಿ ಹಾಗೂ ಆಚರಣೆಯಿಂದ ಕೂಡಿರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ಅಮವಾಸ್ಯೆಯಿಂದ ಹೊಸ ಚಂದ್ರನ ವರ್ಷವಾಗಿ ಪ್ರಾರಂಭವಾಗುತ್ತದೆ. ಅಲ್ಲದೆ ಈ ದಿನದಲ್ಲಿ ಸೂರ್ಯ ಮತ್ತು ಚಂದ್ರನ ಪೂರ್ಣ ಜೋಡಣೆಯಂತೆ ಗ್ರಹಗಳ ಸ್ಥಾನಗಳು ಹಾಗೂ ಸಂಚಾರ ಬಹಳ ಅನುಕೂಲಕರವೆಂದು ಹೇಳಲಾಗುತ್ತದೆ.

ಈ ಸಮಯವು ಹೊಸ ಉದ್ಯೋಗದ ಆರಂಭಕ್ಕೆ, ಮಂಗಳಕರ ಕಾರ್ಯದ ಕೆಲಸ ಆರಂಭಕ್ಕೆ ಹಾಗೂ ಚಿನ್ನಗಳಂತಹ ಅಮೂಲ್ಯ ವಸ್ತಯಗಳ ಖರೀದಿಗೆ ಸೂಕ್ತವಾದದ್ದು ಎಂದು ಹೇಳಲಾಗುತ್ತದೆ. ದೀಪಾವಳಿಯ ಸಮಯದಲ್ಲಿ ಸೂರ್ಯ ಮತ್ತು ಚಂದ್ರನು ತುಲಾರಾಶಿಗೆ ಪ್ರವೇಶಿಸುತ್ತಾರೆ ಎನ್ನುತ್ತಾರೆ. ತುಲಾ ಎನ್ನುವುದು ವ್ಯಾಪಾರ ಮತ್ತು ವೃತ್ತಿಪರ ಜೀವನವನ್ನು ನಿಯಂತ್ರಿಸುವ ಸಂಕೇತವಾಗಿದೆ. ಇದು ದೀಪಾವಳಿ ವ್ಯವಹಾರಗಳಿಗೆ ಬಹಳ ಮಂಗಳಕರವಾದದ್ದು. ಹಾಗಾಗಿಯೇ ಕಾರ್ತಿಕ ಮಾಸದಲ್ಲಿ ಬರುವ ಅಮವಾಸ್ಯೆಯು ಉಳಿದ ದಿನಗಳಲ್ಲಿ ಬರುವ ಅಮವಾಸ್ಯೆಗಿಂತ ಭಿನ್ನವಾಗಿದೆ ಎನ್ನಲಾಗುತ್ತದೆ.

ಇನ್ನೊಂದು ಕಾರಣ

ಅಮಾವಾಸ್ಯೆಯ ದಿನ ದೀಪಾವಳಿಯನ್ನು ಆಚರಿಸಲು ಇನ್ನೊಂದು ಕಾರಣವೆಂದರೆ ಸೂರ್ಯ ತನ್ನ ದುರ್ಬಲವಾದ ಹಂತದ ಸಮಯದಲ್ಲಿ ಚಂದ್ರನು ಶಕ್ತಿಶಾಲಿಯಾಗಿ ಪ್ರಕಾಶವನ್ನು ಬೀರದ ದಿನ. ಕಡು ಕತ್ತಲು ಆವೃತ್ತಗೊಳ್ಳುವ ದಿನವಾಗಿದೆ. ಇಂದು ಹಣತೆಗಳ ದೀಪ ಬೆಳಗಿ ಬೆಳಕನ್ನು ಚಲ್ಲಲಾಗುತ್ತದೆ.

ನಮ್ಮ ಪೂರ್ವಜರ ನಂಬಿಕೆಯ ಪ್ರಕಾರ ಈ ಸಮಯದಲ್ಲಿ ದೇವರ ಕುರಿತು ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಬೇಕು. ದೇವರಿಗೆ ಪ್ರಾರ್ಥನೆ ಮಾಡುವುದರಿಂದ ದೇವರ ಕೃಪೆಗೆ ಒಳಗಾಗಿ ಕಟ್ಟಶಕ್ತಿಯನ್ನು ತಡೆದು, ಉತ್ತಮ ಶಕ್ತಿಯನ್ನು ಉತ್ತೇಜಿಸುವ ಶಕ್ತಿಯು ಲಭಿಸುತ್ತದೆ. ಹಾಗಾಗಿಯೇ ಈ ದೀಪಾವಳಿಯ ಹಬ್ಬವು ಬಹಳ ಪವಿತ್ರ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಐದು ದಿನದಲ್ಲಿ ವಿವಿಧ ಪೂಜೆಗಳು

ದೀಪಾವಳಿಯ ಮೊದಲ ದಿನವನ್ನು ಧನ್‍ಥೆರಾಸ್ ಎಂದು ಆಚರಿಸಲಾಗುತ್ತದೆ. ಸಂಪತ್ತು ಮತ್ತು ಸಮೃದ್ಧಿಯನ್ನು ವೃದ್ಧಿಸುವುದಕ್ಕಾಗಿ ಲಕ್ಷ್ಮಿ ಹಾಗೂ ಕುಬೇರ ದೇವತೆಯನ್ನು ಪೂಜಿಸಲಾಗುತ್ತದೆ.

ಎರಡನೇ ದಿನ ನರಕ ಚತುರ್ದಶಿ ಎಂದು ಆಚರಿಸುತ್ತಾರೆ. ಅಂದು ಎಣ್ಣೆ ಸ್ನಾನದ ಮೂಲಕ ಹಬ್ಬದ ಆಚರಣೆ ಆರಂಭವಾಗುತ್ತದೆ. ಇದು ಕೊಳೆಯ ರೂಪದಲ್ಲಿ ಅಂಟಿರುವ ಎಲ್ಲಾ ದುಷ್ಟಶಕ್ತಿ ಹಾಗೂ ದುಷ್ಪರಿಣಾಮಗಳನ್ನು ತೊಳೆದು ಹಾಕುವ ಪದ್ಧತಿಯನ್ನು ಸೂಚಿಸುತ್ತದೆ.

ಮೂರನೇ ದಿನವು ಬಹಳ ಪ್ರಮುಖವಾದ್ದು. ಅಂದು ಲಕ್ಷ್ಮಿ ಪೂಜೆಗೆ ಬಹಳ ಮಂಗಳಕರ ಸಮಯ ಎಂದು ಪರಿಗಣಿಸಲಾಗುತ್ತದೆ. ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಭವ್ಯವಾಗಿ ಆರಾಧಿಸಲಾಗುತ್ತದೆ. ಇಡೀ ಮನೆಯನ್ನು ದೀಪಗಳೊಂದಿಗೆ ಬೆಳಗಿಸುತ್ತಾರೆ. ಈ ದಿನವು ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗೆ ಬರುತ್ತಾಳೆ ಎನ್ನಲಾಗುತ್ತದೆ.

ನಾಲ್ಕನೆ ದಿನವನ್ನು ಗೋವರ್ಧನ್ ಪೂಜೆ ಅಥವಾ ಗೋ ಪೂಜೆಗೆ ಮೀಸಲಾದ ದಿನ. ಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನ ಎಂದು ಹೇಳಲಾಗುತ್ತದೆ. ಈ ದಿನ ಪತ್ನಿಯು ತನ್ನ ಪತಿಗೆ ಕೆಂಪು ಕುಂಕುಮವನ್ನು ಹಚ್ಚಿ ಸುದೀರ್ಘ ಜೀವನಕ್ಕೆ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ.

ಐದನೇ ದಿನವನ್ನು ಬಾಯಿ ದೋಜ್ ಎಂದು ಆಚರಿಸಲಾಗುತ್ತದೆ. ಇದು ಸೋದರ ಹಾಗೂ ಸೋದರಿಯರ ಸಂಬಂಧಕ್ಕೆ ಸಮರ್ಪಣೆ ಮಾಡಲಾದ ದಿನ ಎಂದು ಹೇಳಲಾಗುತ್ತದೆ.

English summary

Significance of Amavasya on Diwali

Amavasya is the phase of dark moon or also called the New Moon day in English. The Hindus celebrate their festivals according to the Lunar calendar. Every lunar month starts on a full moon day. Amavasya falls on the 15th of each month. Astrologically, during Amavasya, there is darkness everywhere. The sun is said to be debilitated and the moon does not have any powers. This is considered as a very inauspicious time for the Hindus.
X
Desktop Bottom Promotion