For Quick Alerts
ALLOW NOTIFICATIONS  
For Daily Alerts

ಅಮಲಕಿ ಏಕಾದಶಿಯ ಮಹತ್ವವೇನು? ಪೂಜೆಗೆ ಶುಭ ಮುಹೂರ್ತ ಹಾಗೂ ಪೂಜಾವಿಧಿ

|

ಏಕಾದಶಿ ಶ್ರೀವಿಷ್ಣುವಿನ ಆರಾಧನೆಗೆ ಮೀಲಾಗಿರುವ ದಿನ. ವರ್ಷದಲ್ಲಿ 12 ಏಕಾದಶಿ ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಯೂ ಒಂದೊಂದು ರೀತಿಯಲ್ಲಿ ಮಹತ್ವವನ್ನು ಹೊಂದಿದೆ. ಮಾರ್ಚ್ 14ಕ್ಕೆ ಅಮಲಕಿ ಏಕಾದಶಿಯನ್ನು ಆಚರಿಸಲಾಗುವುದು.

ಈ ಅಮಲಕಿ ಏಕಾದಶಿಯ ಮಹತ್ವವೇನು? ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ಅಮಲಕಿ ಏಕಾದಶಿಯ ವಿಶೇಷ

ಅಮಲಕಿ ಏಕಾದಶಿಯ ವಿಶೇಷ

ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಮರ ಅಥವಾ ಚಿಕ್ಕ ಗಿಡಕ್ಕೆ ಪೂಜೆಯನ್ನು ಮಾಡಲಾಗುವುದು. ಆಮ್ಲ ಅಂದರೆ ನೆಲ್ಲಿಕಾಯಿ, ಈ ದಿನ ನೆಲ್ಲಿಕಾಯಿ ಮರಕ್ಕೆ ಪೂಜೆ ಸಲ್ಲಿಸುವುದರಿಂದ ಆಮಲಕಿ ಏಕಾದಶಿಯಂದು ಕರೆಯಲಾಗುವುದು. ನೆಲ್ಲಿಕಾಯಿ ಮರವು ವಿಷ್ಣುವಿಗೆ ಪ್ರಿಯವಾದ ಮರ, ಅದು ಮಹಾಲಕ್ಷ್ಮಿ ಹಾಗೂ ಶ್ರೀ ವಿಷ್ಣುವಿನ ವಾಸ ಸ್ಥಾನವಾಗಿದೆ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಶ್ರೀವಿಷ್ಣುವಿನ ಪೂಜೆಯಲ್ಲಿ ನೆಲ್ಲಿಕಾಯಿ ಮರಕ್ಕೆ ಪ್ರಮುಖ ಸ್ಥಾನವಿದೆ.

ಅಮಲಕಿ ಏಕಾದಶಿಯ ಮಹತ್ವ

ಅಮಲಕಿ ಏಕಾದಶಿಯ ಮಹತ್ವ

ಈ ಏಕಾದಶಿಯಂದು ಉಪವಾಸವಿದ್ದು ಯಾರು ಶ್ರೀವಿಷ್ಣುವಿನ ಆರಾನೆ ಮಾಡುತ್ತಾರೋ ಅವರಿಗೆ ಪುಣ್ಯ ಕ್ಷೇತ್ರಗಳಿಗೆ ತೀರ್ಥಾಟನೆ ಹಾಗೂ ಯಜ್ಞ -ಯಾಗ ಮಾಡಿದಷ್ಟು ಪುಣ್ಯ ಫಲ ಸಿಗುವುದು ಎಂದು ಹೇಳಲಾಗುವುದು. ಸಂತಾನ ಅಪೇಕ್ಷಿತ ದಂಪತಿ ಈ ಏಕಾದಶಿಯಂದು ನೆಲ್ಲಿಕಾಯಿ ಗಿಡವನ್ನು ಅಲಂಕರಿಸಿ ಪೂಜೆಯನ್ನು ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು.

 ಅಮಲಕಿ ಏಕಾದಶಿ 2022 ಪೂಜಾ ಮುಹೂರ್ತ

ಅಮಲಕಿ ಏಕಾದಶಿ 2022 ಪೂಜಾ ಮುಹೂರ್ತ

ಏಕಾದಶಿ ತಿಥಿ ಪ್ರಾರಂಭ ಮಾರ್ಚ್ 13 ಬೆಳಗ್ಗೆ 10:21ರಿಂದ

ಏಕಾದಶಿ ತಿಥಿ ಮುಕ್ತಾಯ: ಮಾರ್ಚ್‌ 14 ಮಧ್ಯಾಹ್ನ 12:05ಕ್ಕೆ

ಪಾರಣ ಸಮಯ: ಮಾರ್ಚ್‌ 15 ಬೆಲಗ್ಗೆ 06:31ರಿಂದ 8:55ರವರೆಗೆ

ಪೂಜಾವಿಧಿ

ಪೂಜಾವಿಧಿ

* ಮಾರ್ಚ್ 13ರಂದೇ ಬೇಗ ಎದ್ದು ಸ್ನಾನ ಮಾಡಿ, ಪೂಜೆಗೆ ಸಿದ್ಧತೆಗಳನ್ನು ಮಾಡಿ ಉಪವಾಸಕ್ಕೆ ಸಂಕಲ್ಪ ಮಾಡಬೇಕು.

* ನಂತರ ಶ್ರೀ ವಿಷ್ಣುವನ್ನು ಆರಾಧಿಸಿ, ಈ ದಿನ ತುಪ್ಪದ ದೀಪ ಹಚ್ಚಿ.

* ನೆಲ್ಲಿಕಾಯಿ ಗಿಡವನ್ನು ತುಳಸಿ ಹಾಗೂ ಹೂಗಳಿಂದ ಅಲಂಕರಿಸಿ.

* ನಂತರ ನೆಲ್ಲಿಕಾಯಿ ಗಿಡದ ಕೆಳಗಡೆ ಕಲಶ ಸ್ಥಾಪಿಸಿ.

* ಶ್ರೀವಿಷ್ಣುವಿನ ನೈವೇದ್ಯಕ್ಕೆ ನೆಲ್ಲಿಕಾಯಿ ಇಡಿ.

* ನಂತರ ಶ್ರೀಷ್ಣು ಹಾಗೂ ಲಕ್ಷ್ಮಿ ದೇವಿಯನ್ನು ಪೂಜಿಸಿ.

* ಮರುದಿನ ಕೂಡ ಮಡಿಯಿಂದಲೇ ವಿಷ್ಣು-ಲಕ್ಷ್ಮಿಯನ್ನು ಪೂಜಿಸಿ, ದೇವರಿಗೆ ಇಟ್ಟ ನೈವೇದ್ಯವನ್ನು ಬಡವರಿಗೆ ದಾನ ಮಾಡಿ.

* ನಂತರ ಪಾರಣ ಸಮಯದಲ್ಲಿ ಉಪವಾಸವನ್ನು ಮುರಿಯಬೇಕು.

English summary

Amalaki Ekadashi 2022 Date, Shubh Muhurat, History and Significance in Kannada

Amalaki Ekadashi 2022 date, shubh muhurat, history and significance in Kannada, read on..
X
Desktop Bottom Promotion