For Quick Alerts
ALLOW NOTIFICATIONS  
For Daily Alerts

ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ

|

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನಡೆಯುವ ಹಲವಾರು ಆಚರಣೆಗಳು ಮತ್ತು ಪದ್ಧತಿಗಳು ತಮ್ಮದೇ ಆದ ಐತಿಹಾಸಿಕ ಪ್ರಾಮುಖ್ಯತೆಯನ್ನು ಒಳಗೊಂಡಿದ್ದು ಇದರ ಆಚರಣೆಯನ್ನು ನಾವು ಚಾಚೂ ತಪ್ಪದೆ ಮಾಡಬೇಕಾಗುತ್ತದೆ. ಹಬ್ಬವಿರಲಿ ಇಲ್ಲವೇ ಮನೆಯಲ್ಲಿ ನಡೆಯುವ ಪದ್ಧತಿಗಳಿರಲಿ ಇದರ ಆಚರಣೆಯನ್ನು ಮನೆಯವರು ನಡೆಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಈ ಆಚರಣೆಗಳ ಬಗ್ಗೆಯೇ ಮಾಹಿತಿಯನ್ನು ನೀಡಲಾಗಿದೆ. ಸಂಸ್ಕೃತಿಯಲ್ಲಿ ಸಾಕಷ್ಟು ಸಂಖ್ಯೆಯ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಈ ಪದ್ಧತಿಗಳನ್ನು ನಿರ್ದಿಷ್ಟ ದಿನದಲ್ಲಿ ಅನುಸರಿಸಲಾಗುತ್ತದೆ ಇಲ್ಲದಿದ್ದರೆ ಹಬ್ಬಗಳು ಇಲ್ಲವೇ ತಿಂಗಳ ನಿರ್ದಿಷ್ಟ ಮಾಸಿಕ ತಿಥಿಗಳಂದು ಆಚರಿಸಲಾಗುತ್ತದೆ. ತಿಥಿ ಎಂಬುದು ತಿಂಗಳ ದಿನಗಳಿಗೆ ಇರುವ ಭಾರತೀಯ ಹೆಸರಾಗಿದೆ. ಆಚರಣೆಗಳ ಮುಖ್ಯ ಉದ್ದೇಶ ಸಮಾಧಾನಕರ ಮತ್ತು ಸುಖಮಯ ಜೀವನವನ್ನು ನಡೆಸುವುದಾಗಿದೆ. ಮಗುವಿನ ಜನನದಿಂದ ಹಿಡಿದು ಕೊನೆಯವರೆಗೂ ಒಂದಿಲ್ಲೊಂದು ಆಚರಣೆಗಳು ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಕೆಲವೊಂದು ಮರಣ ಸಮಯದಲ್ಲಿ ಇನ್ನು ಕೆಲವೊಂದು ಮರಣ ನಂತರದ ಕೂಡ ನಡೆಯುತ್ತಿರುತ್ತದೆ.

ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದರ ಅರ್ಥ

ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದರ ಅರ್ಥ

ಕೆಲವು ಆಚರಣೆಗಳು ಒಟ್ಟಾಗಿ ವಾಸಿಸುವ ಸಮುದಾಯಗಳ ನಡುವೆ ಪ್ರೀತಿಯನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹಾಗೂ ಇತರರು ಭಕ್ತರ ಆಶೀರ್ವಾದ ಪಡೆಯಲು ಮತ್ತು ಇತರರಿಂದ ಜೀವನದಿಂದ ಕೆಲವು ಸಮಸ್ಯೆಗಳನ್ನು ತೆಗೆದುಹಾಕಲು ಅನುಸರಿಸುವ ಉದ್ದೇಶವನ್ನು ಹೊಂದಿದ್ದಾರೆ. ಶ್ರಾದ್ಧ ಅಥವಾ ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದು ನಮ್ಮ ಪೂರ್ವಿಕರಿಗೆ ಸಮಧಾನವನ್ನುಂಟು ಮಾಡುವ ಪ್ರಕ್ರಿಯೆಯಾಗಿದೆ. ಅವರು ಅತೃಪ್ತಿಯಿಂದ ಮರಣ ಹೊಂದಿದ್ದಲ್ಲಿ ಅವರ ಹೆಸರಿನಲ್ಲಿ ತಿಥಿಯನ್ನು ಮಾಡಿ ಇಷ್ಟದ ಖಾದ್ಯವನ್ನು ತಯಾರಿಸಿ ಅದನ್ನು ಬಾಳೆ ಎಲೆಯಲ್ಲಿಟ್ಟು ಕಾಗೆಗೆ ಉಣಬಡಿಸಲಾಗುತ್ತದೆ.

ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದರ ಅರ್ಥ

ಪಿತೃ ಪಕ್ಷದಲ್ಲಿ ತಿಥಿಯನ್ನು ಮಾಡುವುದರ ಅರ್ಥ

ಕಾಗೆ ಬಂದು ಆಹಾರ ತಿಂದಲ್ಲಿ ಅವರಿಗೆ ನಾವು ಮಾಡಿರುವುದು ತೃಪ್ತಿಯಾಗಿದೆ ಎಂದಾಗಿದೆ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಹಿಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು ಮನೆಯಲ್ಲಿ ಇಲ್ಲವೇ ಕೆಲವೊಂದು ಧಾರ್ಮಿಕ ಸ್ಥಾನಗಳಲ್ಲಿ ಇದನ್ನು ನೆರವೇರಿಸಲಾಗುತ್ತದೆ. ನಮ್ಮ ಇಂದಿನ ಲೇಖನದಲ್ಲಿ ಪಿತೃ ಪಕ್ಷ ಮತ್ತು ತಿಥಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಾಗೆ ಬಂದು ಆಹಾರ ತಿನ್ನಬೇಕು

ಕಾಗೆ ಬಂದು ಆಹಾರ ತಿನ್ನಬೇಕು

ಕಾಗೆ ಬಂದು ಆಹಾರ ತಿಂದಲ್ಲಿ ಅವರಿಗೆ ನಾವು ಮಾಡಿರುವುದು ತೃಪ್ತಿಯಾಗಿದೆ ಎಂದಾಗಿದೆ. ಈ ಸಂದರ್ಭದಲ್ಲಿ ಪೂಜೆಯನ್ನು ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. ಹಿಂದೂಗಳು ಪಿತೃ ಪಕ್ಷದಂದು ತಿಥಿ ಮಾಡುವುದು ಸರ್ವೇ ಸಾಮಾನ್ಯವಾಗಿದ್ದು ಮನೆಯಲ್ಲಿ ಇಲ್ಲವೇ ಕೆಲವೊಂದು ಧಾರ್ಮಿಕ ಸ್ಥಾನಗಳಲ್ಲಿ ಇದನ್ನು ನೆರವೇರಿಸಲಾಗುತ್ತದೆ. ನಮ್ಮ ಇಂದಿನ ಲೇಖನದಲ್ಲಿ ಪಿತೃ ಪಕ್ಷ ಮತ್ತು ತಿಥಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

Most Read:ಅಂಗೈಯಲ್ಲಿ ತ್ರಿಕೋನವಿದ್ದರೆ ಅವರ ಅದೃಷ್ಟವೇ ಬದಲಾಗಲಿದೆ!

ಶ್ರಾದ್ಧ ಅಥವಾ ಪಿತೃ ಪಕ್ಷ ಮಹತ್ವವೇನು?

ಶ್ರಾದ್ಧ ಅಥವಾ ಪಿತೃ ಪಕ್ಷ ಮಹತ್ವವೇನು?

ಶ್ರಾದ್ಧವನ್ನು ಪಿತೃ ಪಕ್ಷ ಎಂದೂ ಕರೆಯುತ್ತಾರೆ ಈ ಸಮಯದಲ್ಲಿ ತಮ್ಮ ಹಿರಿಯರಿಗೆ ಪ್ರಾರ್ಥನೆಗಳ ಮೂಲಕ ಗೌರವವನ್ನು ಮತ್ತು ಅರ್ಪಣೆಗಳನ್ನು ನೀಡಬೇಕು. ಹಿರಿಯರು ಮರಣ ಹೊಂದಿದ ನಂತರ ಪಿತೃ ಲೋಕವನ್ನು ಸೇರುತ್ತಾರೆ ಎಂದು ಹೇಳಲಾಗುತ್ತದೆ; ಪಿತೃಗಳು ತಮಗೆ ತಾವೇ ಆಹಾರ ಸೇವಿಸಲಾರರು. ಆದ್ದರಿಂದ ಅವರ ಮಕ್ಕಳು ಭೂಮಿಯಲ್ಲಿದ್ದುಕೊಂಡು ಅವರ ಕಾರ್ಯಗಳನ್ನು ಮಾಡಬೇಕು. ಪಿತೃ ಪಕ್ಷ ಎಂಬುದು ಮಂಗಳಕರವಾಗಿದ್ದು ಈ ಆಚರಣೆಗಳನ್ನು ಪದ್ಧತಿಗಳನ್ನು ನಡೆಸಲಾಗುತ್ತದೆ.

ಶ್ರಾದ್ಧವನ್ನು ಯಾವಾಗ ಮಾಡಲಾಗುತ್ತದೆ?

ಶ್ರಾದ್ಧವನ್ನು ಯಾವಾಗ ಮಾಡಲಾಗುತ್ತದೆ?

ಭಾದ್ರಪದ ತಿಂಗಳಿನ ಪ್ರತೀ ವರ್ಷ ಪಿತೃ ಪಕ್ಷವನ್ನು ಆಚರಿಸಲಾಗುತ್ತದೆ ಎಂಬುದಾಗಿ ದಕ್ಷಿಣ ಭಾರತದ ಅಮವಾಸ್ಯಂತ ಕ್ಯಾಲೆಂಡರ್‌ನಲ್ಲಿ ತಿಳಿಸಲಾಗಿದೆ. ಪೂರ್ಣ ಚಂದ್ರೋದಯದಂದು ಇದು ಆರಂಭವಾಗುತ್ತದೆ. ಉತ್ತರ ಭಾರತದಲ್ಲಿ ಕೂಡ ಪೂರ್ಣಿಮಂತ ಕ್ಯಾಲೆಂಡರ್ ಅನ್ನು ಅನುಸರಿಸುತ್ತಿದ್ದು ಇದು ಅಶ್ವಿನ ಮಾಸದಲ್ಲಿ ಬರುತ್ತದೆ ಮತ್ತು ಆರಂಭಗೊಳ್ಳುವುದು ಪುರ್ಣ ಚಂದ್ರ ಅಥವಾ ನಂತರ ದಿನಗಳಲ್ಲಾಗಿರುತ್ತದೆ. ತಿಂಗಳ ಹೆಸರಿನಲ್ಲಿ ಮಾತ್ರ ಬದಲಾವಣೆಯಾಗುತ್ತಿರುತ್ತದೆ; ದಿನಾಂಕಗಳು ಸಾಮಾನ್ಯವಾಗಿ ಅದೇ ದಿನಗಳಲ್ಲಿ ಬರುತ್ತದೆ.

ಶ್ರಾದ್ಧ ದಿನಾಂಕ 2018

ಶ್ರಾದ್ಧ ದಿನಾಂಕ 2018

2018 ರಲ್ಲಿ ಶ್ರಾದ್ಧ ಅಥವಾ ಪಿತೃ ಪಕ್ಷವನ್ನು ಸಪ್ಟೆಂಬರ್ 24 ರಿಂದ ಆರಂಭಗೊಂಡು ಅಕ್ಟೋಬರ್ 8 ರವರೆಗೆ ನಡೆಸಲಾಗುತ್ತದೆ. ಕುಟುಂಬದ ಪದ್ಧತಿಗೆ ಅನುಸಾರವಾಗಿ ಜನರು ಬೇರೆ ಬೇರೆ ಆಹಾರ ವಸ್ತುಗಳನ್ನು ಸಮರ್ಪಿಸುತ್ತಾರೆ. ಇದಲ್ಲದೆ, ಪಿತೃ ದೋಷ ನಿವಾರಣೆಗೆ ತೆಗೆದುಹಾಕಲು ವಿವಿಧ ಜ್ಯೋತಿಷ್ಯ ಪರಿಹಾರಗಳಿಗಾಗಿ ಮಂಗಳಕರವಾಗಿದೆ. ಅಂತೆಯೇ ಪಿತೃ ದೋಷ ನಿವಾರಣೆಗೆ ಶ್ರಾದ್ಧವನ್ನು ಮಾಡಬೇಕು. ವ್ಯಕ್ತಿಯು ಮೃತಪಟ್ಟಾಗ ಹಿರಿಯರಿಗೆ ಅರ್ಪಣೆಗಳನ್ನು ನೀಡಬೇಕು. ತಿಥಿ ದಿನ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದಾದಲ್ಲಿ ಹದಿನೈದು ದಿನಗಳ ಒಳಗೆ ಅಮವಾಸ್ಯೆಯಂದು ಇದನ್ನು ಮಾಡಬೇಕು.

Most Read:ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು!

 ಶ್ರಾದ್ಧವನ್ನು ಏಕೆ ಮಾಡಬೇಕು?

ಶ್ರಾದ್ಧವನ್ನು ಏಕೆ ಮಾಡಬೇಕು?

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಕೆಲವೊಮ್ಮೆ ಮಕ್ಕಳು ಆಗಾಗ್ಗೆ ಕಾಯಿಲೆಗೆ ತುತ್ತಾಗುತ್ತಾರೆ, ಅಂತೆಯೇ ಮಗುವಿನ ಹುಟ್ಟಿಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಗೊಳ್ಳಬಹುದು ಮತ್ತು ಆಗಾಗ್ಗೆ ಗರ್ಭಪಾತವಾಗುವ ಸಂಭವ ಕೂಡ ಇದೆ. ಇದರ ಹಿಂದೆ ಹಿರಿಯರ ಅತೃಪ್ತಿ ಇರುತ್ತದೆ ಅವರನ್ನು ನೀವು ಶ್ರಾದ್ಧ ಮಾಡಿ ತೃಪ್ತಿ ಪಡಿಸಬೇಕು. ಕೆಲವೊಮ್ಮೆ ಹಿರಿಯರು ಬಡತನ ಇಲ್ಲದಿದ್ದರೆ ಅಸಾಮಾನ್ಯ ಕಾರಣಗಳಿಂದ ಮೃತಪಟ್ಟಿರಬಹುದು. ಈ ಸಮಯದಲ್ಲಿ ಅವರ ಆತ್ಮ ಅತೃಪ್ತಿಯಿಂದ ಅಲೆಯುತ್ತಿರುತ್ತದೆ. ಶ್ರಾದ್ಧ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರಕಿ ಸದ್ಗತಿ ದೊರೆಯುತ್ತದೆ ಎಂದಾಗಿದೆ.

English summary

All You Need To Know About Shraadh Or Pitra Paksha 2018

A number of rituals are followed in Hinduism. These rituals are supposed to be observed either on specific days such as on festivals or on specific Tithis of the month. Tithi is the Indian name for the days of a month. While some of the rituals are meant just to harness the love among the communities living together, others are meant to earn the blessings of the devotees and yet others to remove certain problems from life.
X
Desktop Bottom Promotion