For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ 2023: ಈ ದಿನ ಸಂಪತ್ತು ವೃದ್ಧಿಯಾಗಲು ಯಾವ ರೀತಿ ಪೂಜೆ ಸಲ್ಲಿಸಬೇಕು?

|

ಅಕ್ಷಯ ತೃತೀಯ ಹಿಂದೂಗಳ ಮಹತ್ವದ ಹಬ್ಬಗಳಲ್ಲಿ ಒಂದು. ಈ ದಿನ ಚಿನ್ನ ಹಾಗೂ ಇತರ ಕೆಲ ವಸ್ತುಗಳನ್ನು ಖರೀದಿಸೋದ್ರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ವೃದ್ಧಿಯಾಗುತ್ತೆ ಎಂಬ ನಂಬಿಕೆ ಇದೆ.

Akshaya Tritiya 2022 Puja Vidhi, Shubh Muhurat Timings, Mantra, Samagri Aarti Time and Vrat Vidhi In kannada

ಅನೇಕ ಜನರಿಗೆ ಅಕ್ಷಯ ತೃತೀಯಾದ ದಿನ ಯಾವ ರೀತಿ ಪೂಜೆ ಸಲ್ಲಿಸಬೇಕು ಅನ್ನೋದು ಗೊತ್ತಿರೋದಿಲ್ಲ. ಹಾಗಾದ್ರೆ ಅಕ್ಷಯ ತೃತೀಯಾದ ದಿನ ಯಾವ ರೀತಿ ಪೂಜೆ ಸಲ್ಲಿಸಬೇಕು ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

ಅಕ್ಷಯ ತೃತೀಯದ ಶುಭ ದಿನ

ಅಕ್ಷಯ ತೃತೀಯದ ಶುಭ ದಿನ

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ತುಂಬಾ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಪ್ರತೀವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಈ ದಿನಾಂಕದಂದು ಪಂಚಾಂಗವನ್ನು ನೋಡದೆ ಎಲ್ಲಾ ಮಂಗಳಕರ ಮತ್ತು ಶುಭ ಕಾರ್ಯಗಳನ್ನು ಮಾಡಬಹುದು ಎಂದು ಹೇಳಲಾಗಿದೆ. ಈ ದಿನದಂದು ಚಿನ್ನ ಖರೀದಿಗೆ ತುಂಬಾ ಶ್ರೇಷ್ಠ, ಅಕ್ಷಯಪಾತ್ರೆಯಂತೆ ತುಂಬಿರುತ್ತದೆ, ಅಕ್ಷಯ ತೃತೀಯ ದಿನದಂದು ಶಾಪಿಂಗ್ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಅಕ್ಷಯ ತೃತೀಯ ಪೂಜಾ ವಿಧಿ

ಅಕ್ಷಯ ತೃತೀಯ ಪೂಜಾ ವಿಧಿ

ಅಕ್ಷಯ ತೃತೀಯ ದಿನದಂದು ಉಪವಾಸ ಮಾಡುವ ಸಂಪ್ರದಾಯವಿದೆ. ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ಮಡಿಯುಟ್ಟು ಉಪವಾಸ ನಿಯಮಗಳನ್ನು ಪಾಲಿಸಬೇಕು. ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ. ದೇವರ ಕೋಣೆಯನ್ನು ಸ್ವಚ್ಛಗೊಳಿಸಿ. ವಿಷ್ಣುವಿನ ಮೂರ್ತಿಯನ್ನು ಗಂಗಾಜಲದಿಂದ ಶುದ್ಧ ಮಾಡಿ. ಅದರ ನಂತರ, ಹಳದಿ ಹೂವುಗಳು, ತುಳಸಿ ಮತ್ತು ಹಳದಿ ಹೂವಿನ ಮಾಲೆಗಳನ್ನು ಶ್ರೀ ವಿಷ್ಣುವಿಗೆ ಅರ್ಪಿಸಿ. ದೀಪ ಬೆಳಗಿ, ಧೂಪ ಹಚ್ಚಿ. ನಂತರ ಹಳದಿ ಬಟ್ಟೆ ಹಾಸಿ ಅದರ ಮೇಲೆ ಕುಳಿತು ವಿಷ್ಣು ಸಹಸ್ತ್ರನಾಮ ಅಥವಾ ವಿಷ್ಣು ಚಾಲೀಸಾವನ್ನು ಪಠಿಸಿ. ನಂತರ ವಿಷ್ಣುವಿಗೆ ಆರತಿ ಮಾಡಿ.

ಅಕ್ಷಯ ತೃತೀಯದಂದು ಪಠಿಸಬೇಕಾ ಮಂತ್ರ

ಅಕ್ಷಯ ತೃತೀಯದಂದು ಪಠಿಸಬೇಕಾ ಮಂತ್ರ

"ಓಂ ನಮೋ ಭಾಗ್ಯ ಲಕ್ಷ್ಮೀಯ ಚ ವಿದ್ಮಹೇ ಅಷ್ಟ ಲಕ್ಷ್ಮ್ಯೈ ಚ ಧೀಮಃ ತನ್ನೋ ಲಕ್ಷ್ಮೀ ಪ್ರಚೋದಯಾತ್..'

ಅಕ್ಷಯ ತೃತೀಯ ಮಹತ್ವ

ಅಕ್ಷಯ ತೃತೀಯ ಮಹತ್ವ

ಅಕ್ಷಯ ತೃತೀಯವನ್ನು ಪ್ರಮುಖ ಮುಹೂರ್ತವೆಂದು ಪರಿಗಣಿಸಲಾಗಿದೆ. ಈ ದಿನ ಪಂಚಾಂಗವನ್ನು ನೋಡದೆ ಯಾವುದೇ ಶುಭ ಕಾರ್ಯವನ್ನು ಮಾಡಬಹುದು. ಈ ದಿನ ಮದುವೆ, ಗೃಹಪ್ರವೇಶ, ಬಟ್ಟೆ-ಆಭರಣ ಖರೀದಿ ಅಥವಾ ಮನೆ, ನಿವೇಶನ, ವಾಹನ ಖರೀದಿ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. ಈ ದಿನ ಪೂರ್ವಜರಿಗೆ ಸಲ್ಲಿಸುವ ನೈವೇದ್ಯಗಳು ಮತ್ತು ಪಿಂಡ ದಾನವು ಬಹಳ ಫಲ ನೀಡುತ್ತದೆ.. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿ ದೇವರನ್ನು ಪೂಜಿಸುವುದರಿಂದ ಪಾಪಗಳು ನಾಶವಾಗುತ್ತವೆ.

ಅಕ್ಷಯ ತೃತೀಯ ದಿನ ಮಾಡಬೇಕಾದ ಕಾರ್ಯಗಳು

ಅಕ್ಷಯ ತೃತೀಯ ದಿನ ಮಾಡಬೇಕಾದ ಕಾರ್ಯಗಳು

* ಅಕ್ಷಯ ತೃತೀಯದಂದು ದಾನ ಮತ್ತು ಪೂಜಿಸುವುದರಿಂದ ಅದರ ಫಲ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ.

* ಅಕ್ಷಯ ತೃತೀಯದಂದು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

* ಅಕ್ಷಯ ತೃತೀಯದಂದು ಭಗವಾನ್ ವಿಷ್ಣು ಹಾಗೂ ಲಕ್ಷ್ಮಿಗೆ ವಿಶೇಷ ಪೂಜೆ ಮಾಡಿದೆ. ಅಕ್ಷಯ ತೃತೀಯ ದಿನದಂದು ದಾನ ಮಾಡುವುದು ಶ್ರೇಷ್ಠವೆಂದು ಭಾವಿಸಲಾಗಿದೆ. ಅಕ್ಷಯ ತೃತೀಯದಂದು 14 ವಿಧದ ದಾನಗಳನ್ನು ದಾನ ಮಾಡುವುದರಿಂದ ಎಲ್ಲಾ ರೀತಿಯ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.

English summary

Akshaya Tritiya 2023 Puja Vidhi, Shubh Muhurat Timings, Mantra, Samagri Aarti Time and Vrat Vidhi In kannada

Akshaya Tritiya 2022 Puja Vidhi, Shubh Muhurat Timings, Mantra, Samagri Aarti Time and Vrat Vidhi In kannada, read on....
X
Desktop Bottom Promotion