For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ 2023 : ಈ ವಸ್ತುಗಳನ್ನು ದಾನ ಮಾಡಿದ್ರೆ ಅಕ್ಷಯ ಪುಣ್ಯ ಲಭಿಸುತ್ತೆ !

|

ದಾನದ ಮಹತ್ವ ನಮಗೆಲ್ಲಾ ಗೊತ್ತೇ ಇದೆ. ದಾನ ಮಾಡೋದಕ್ಕೆ ಇಂತಹದ್ದೇ ವಸ್ತು ಆಗಬೇಕೆಂದೇನಿಲ್ಲ. ನಮಗೆ ದಾನ ಮಾಡುವ ಮನಸಿದ್ದರೆ ಅಷ್ಟೇ ಸಾಕು. ಅದ್ರಲ್ಲೂ ಅಕ್ಷಯ ತೃತೀಯದ ದಿನ ದಾನ ಮಾಡಲು ತುಂಬಾನೇ ಉತ್ತಮ ದಿನ. ಆ ಕೆಲ ದಿನ ಕೆಲ ವಸ್ತುಗಳನ್ನು ದಾನ ಮಾಡೋದ್ರಿಂದ ಪುಣ್ಯ ಲಭಿಸುತ್ತೆ ಎನ್ನುವ ನಂಬಿಕೆ ಇದೆ. ಹಾಗಾದ್ರೆ ಅಕ್ಷಯ ತೃತೀಯಾದ ದಿನ ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ.

https://kannada.boldsky.com/inspiration/short-story/akshaya-tritiya-daan-donating-these-items-can-bring-good-luch-and-prosperity-026963.html

ಹಿಂದೂ ಧರ್ಮದಲ್ಲಿ ಈ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ವಸ್ತುಗಳ ಖರೀದಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಈ ದಿನ ಮಾಡುವ ದಾನಕ್ಕೆ ಇದೆ. ಈ ದಿನ ಮಾಡುವ ದಾನಕ್ಕೆ ಅಕ್ಷಯ ಪುಣ್ಯ ಲಭಿಸುವುದು ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ಜನರು ಖರೀದಿಗೆ ಮಾತ್ರವಲ್ಲ ದಾನಕ್ಕೂ ಒತ್ತು ನೀಡುತ್ತಾರೆ. ಈ ದಿನ ಮನೆಗೆ ಚಿನ್ನ-ಬೆಳ್ಳಿ ಖರೀದಿಸುವುದು ಒಳ್ಳೆಯದು, ಆದರೆ ಸ್ಟೀಲ್‌ ಪಾತ್ರೆ, ಕಬ್ಬಿಣ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ.

ಇನ್ನು ಈ ದಿನ ಶುಭಕಾರ್ಯಕ್ಕೆ ಒಳ್ಳೆಯ ಮುಹೂರ್ತವಾಗಿದೆ. ನೀವು ಏನಾದರೂ ಹೊಸ ಉದ್ಯೋಗ ಅಥವಾ ಹೊಸ ಕಾರ್ಯಕ್ಕೆ ಕೈ ಹಾಕಲು, ಹೊಸ ಗಾಡಿ ಖರೀದಿಸಲು ಒಳ್ಳೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ, ಬೆಳ್ಳಿ, ಆಸ್ತಿ, ವಾಹನಗಳನ್ನು ಖರೀದಿಸಿದರೆ ಐಶ್ವರ್ಯ ಹೆಚ್ಚುವುದು ಎಂಬ ನಂಬಿಕೆ, ಆದರೆ ಇತರ ವಸ್ತುಗಳಿಗಿಂತ ಈ ದಿನ ಚಿನ್ನ ಖರೀದಿಗೆ ಜನ ಹೆಚ್ಚು ಒಲವು ತೋರುತ್ತಾರೆ.

ಇನ್ನು ಈ ದಾನ ಮಾಡುವ ದಾನ ನಿಮ್ಮ ಪುಣ್ಯದ ಫಲ ಹೆಚ್ಚಿಸುವುದು ಹಾಗೂ ಸಂಪತ್ತು ವೃದ್ಧಿಸುವುದು. ಅಕ್ಷಯ ಪುಣ್ಯ ಲಭಿಸಲು ಈ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ನೋಡಿ.

1. ಕಲಶ ಪಾತ್ರೆ

1. ಕಲಶ ಪಾತ್ರೆ

ಈ ವಿಶೇಷ ದಿನದಂದು ನೀವು ಕಲಶದಲ್ಲಿ ನೀರು ತುಂಬಿ ಬ್ರಾಹ್ಮಣನಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ಗುಣದಲ್ಲಿ ಒಳ್ಳೆಯತನ ಹೆಚ್ಚುವುದು, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

2. ಬಾರ್ಲಿ

2. ಬಾರ್ಲಿ

ಅಕ್ಷಯ ತೃತೀಯಂದು ಬಾರ್ಲಿ ದಾನ ಮಾಡುವ ಸಂಪ್ರದಾಯವಿದೆ. ಬಾರ್ಲಿಯನ್ನು ದಾನ ಮಾಡಿರೆ ಚಿನ್ನವನ್ನೇ ದಾನ ಮಾಡಿದಷ್ಟು ಫಲ ಸಿಗುವುದು ಎಂದು ನಂಬಲಾಗಿದೆ. ಈ ದಿನ ಬಾರ್ಲಿಯನ್ನು ದಾನ ಮಾಡುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗತ್ತದೆ ಎಂಬ ನಂಬಿಕೆ ಜನರಲ್ಲಿದೆ.

 3. ಅನ್ನದಾನ

3. ಅನ್ನದಾನ

ಎಲ್ಲಾ ದಾನಕ್ಕಿಂತ ಶ್ರೇಷ್ಠ ದಾನ ಅನ್ನ ದಾನ ಎಂಬ ಮಾತಿದೆ. ಅಕ್ಷಯ ತೃತೀಯದಂದು ಅನ್ನದಾನ ಮಾಡಿದರೆ ನಿಮಗೆ ಅಕ್ಷಯ ಪುಣ್ಯದ ಫಲ ಸಿಗುವುದು. ಈ ದಿನದಂದು ಬಡವರಿಗೆ, ನಿರ್ಗತಿಕರಿಗೆ ಅನ್ನ ದಾನ ಮಾಡಿದರೆ ಕುಟುಂಬದಲ್ಲಿ ಆಹಾರಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ, ತಾಯಿ ಅನ್ನಪೂರ್ಣೆಯ ಆಶೀರ್ವಾದ ನಿಮ್ಮ ಕುಟುಂಬದ ಮೇಲಿರುತ್ತದೆ ಎಂದು ಹೇಳಲಾಗುವುದು.

4. ಚಿನ್ನ ಮತ್ತು ಬೆಳ್ಳಿ

4. ಚಿನ್ನ ಮತ್ತು ಬೆಳ್ಳಿ

ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಹೇಗೆ ಮಂಗಳಕರವೋ ಹಾಗೇ ಅವುಗಳನ್ನು ದಾನ ಮಾಡುವುದರಿಂದ ನೀವು ಅಕ್ಷಯ ಪುಣ್ಯವನ್ನು ಪಡೆಯಬಹುದು. ಈ ದಿನ ಬೆಳ್ಳಿ ಅಥಾ ಚಿನ್ನದ ನಾಣ್ಯ ಅಥವಾ ಆಭರಣಗಳನ್ನು ಬಡವರಿಗೆ ದಾನ ಮಾಡಿದರೆ ಮನೆಯಲ್ಲಿ ಚಿನ್ನ, ಬೆಳ್ಳಿಗೆ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ.

5. ಗೋ ದಾನ

5. ಗೋ ದಾನ

ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ. ಅಕ್ಷಯ ತೃತೀಯದಂದು ಬಡವರಿಗೆ ಹಸುವನ್ನು ದಾನ ಮಾಡಿದರೆ ಅವರಿಗೆ ಜೀವನ ನಡೆಸಲು ಅನುಕೂಲಕರವಾಗಿದೆ. ಅದರ ಪುಣ್ಯ ಲಭಿಸುವುದು.

6. ಬೆಲ್ಲ, ತುಪ್ಪ ಮತ್ತು ಉಪ್ಪು

6. ಬೆಲ್ಲ, ತುಪ್ಪ ಮತ್ತು ಉಪ್ಪು

ಅಕ್ಷಯ ತೃತೀಯ ದಿನದಂದು ಬೆಲ್ಲ, ತುಪ್ಪ, ಉಪ್ಪು ಈ ಮೂರು ಯಾವುದಾದರೂ ಒಂದನ್ನು ದಾನ ಮಾಡುವುದರಿಂದ ಅಕ್ಷಯ ಪುಣ್ಯ ಪಡೆಯುವಿರಿ.

7. ಎಳ್ಳು, ಬಟ್ಟೆ

7. ಎಳ್ಳು, ಬಟ್ಟೆ

ನೀವು ಅಕ್ಷಯ ತೃತೀಯ ದಿನದಂದು ಬ್ರಾಹ್ಮಣನಿಗೆ ಎಳ್ಳು ಮತ್ತು ಬಟ್ಟೆಗಳನ್ನು ದಾನ ಮಾಡಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಇರುತ್ತದೆ, ಅಕ್ಷಯ ಪುಣ್ಯ ಲಭಿಸುವುದು.

English summary

Akshaya Tritiya Daan: Donating These Items Can Bring Good Luch And Prosperity

Akshaya Tritiya 2023 Daan: Donating These Items Can Bring Good Luch And Prosperity,read on....
X
Desktop Bottom Promotion