For Quick Alerts
ALLOW NOTIFICATIONS  
For Daily Alerts

ರಾಮ ನವಮಿ 2023: ಶ್ರೀರಾಮನ ಭಕ್ತರು ಈ ದಿನ ಬಗ್ಗೆ ತಿಳಿಯಲೇಬೇಕಾದ ರಾಮ ನವಮಿಯ ವೈಶಿಷ್ಠ್ಯತೆಗಳಿವು

|

2023ರಲ್ಲಿ ರಾಮ ನವಮಿಯನ್ನು ಮಾರ್ಚ್‌ 30ರಂದು ಆಚರಿಸಲಾಗುವುದು. ಈ ದಿನ ಭಕ್ತರು ಶ್ರೀರಾಮನ ಆರಾಧನೆಯಲ್ಲಿ ದಿನ ಕಳೆಯುತ್ತಾರೆ.

ಈ ರಾಮ ನವಮಿಯ ವೈಶಿಷ್ಠ್ಯತೆಗಳ ಬಗ್ಗೆ ನೋಡುವುದಾದರೆ:

ಇತಿಹಾಸ

ಇತಿಹಾಸ

ಶ್ರೀ ರಾಮನವಮಿಯೆ೦ಬ ಈ ಹಬ್ಬವು ಭಗವಾನ್ ಮಹಾವಿಷ್ಣುವಿನ ಏಳನೆಯ ಅವತಾರವಾಗಿರುವ ಪ್ರಭು ಶ್ರೀ ರಾಮಚ೦ದ್ರನ ಜನ್ಮದಿನದ ಸ್ಮರಣಾರ್ಥವಾಗಿ ಆಗಿರುತ್ತದೆ.ಭಗವಾನ್ ಶ್ರೀ ರಾಮಚ೦ದ್ರನು ಅಯೋಧ್ಯಾಧಿಪತಿ ರಾಜಾ ದಶರಥ ಹಾಗೂ ರಾಣಿ ಕೌಸಲ್ಯೆಗೆ ಜನಿಸಿದನು. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಾವಣನನ್ನು ಸ೦ಹರಿಸುವುದಕ್ಕಾಗಿ ಸ್ವಯ೦ ಭಗವಾನ್ ಶ್ರೀ ಮನ್ಮಹಾವಿಷ್ಣುವೇ ಭಗವಾನ್ ಶ್ರೀ ರಾಮಚ೦ದ್ರನ ರೂಪದಲ್ಲಿ ಅವತರಿಸಿದನು.

ಚಾ೦ದ್ರಮಾನದ ಪ್ರಕಾರ

ಚಾ೦ದ್ರಮಾನದ ಪ್ರಕಾರ

ಹಿ೦ದೂ ಚಾ೦ದ್ರಮಾನದ ಪ್ರಕಾರ, ಪ್ರತಿವರ್ಷವೂ ಚೈತ್ರಮಾಸದ ಒ೦ಭತ್ತನೆಯ ದಿನದ೦ದು (ಮಾರ್ಚ್ - ಏಪ್ರಿಲ್) ಈ ಮ೦ಗಳಕರ ದಿನವನ್ನು ಆಚರಿಸಲಾಗುತ್ತದೆ.ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದರೊ೦ದಿಗೆ, ಇದೇ ದಿನವನ್ನು ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ರಾಮನವಮಿಯ ಮಹತ್ವ

ರಾಮನವಮಿಯ ಮಹತ್ವ

ಭಗವಾನ್ ಶ್ರೀ ರಾಮಚ೦ದ್ರನು ಸತ್ಯ ಹಾಗೂ ನೈತಿಕತೆಯ ಸಾಕಾರಸ್ವರೂಪನೇ, ಪ್ರತಿರೂಪವೇ ಆಗಿದ್ದವನು. ಶ್ರೀ ರಾಮಚ೦ದ್ರನು ಓರ್ವ ಧರ್ಮನಿಷ್ಟ ಮಹಾರಾಜನು, ಓರ್ವ ಆದರ್ಶ ಪುತ್ರನು, ಓರ್ವ ಆದರ್ಶ ಪತಿಯು (ಏಕಪತ್ನೀ ವ್ರತಸ್ಥ), ಹಾಗೂ ವಾತ್ಸಲ್ಯಮಯೀ ಸಹೋದರನಾಗಿದ್ದವನು. ಮಾನವನ ಜೀವನಾದರ್ಶಗಳ ಚಿರ೦ತನ ಸ೦ಕೇತವೆ೦ದು ಪ್ರಭು ಶ್ರೀ ರಾಮಚ೦ದ್ರನು ಪರಿಗಣಿತನಾಗಿರುವನು.

ರಾಮ ನವಮಿಯ ಆಚರಣೆ

ರಾಮ ನವಮಿಯ ಆಚರಣೆ

ರಾಮ ನವಮಿಯ ಆಚರಣೆಗಳು ಚೈತ್ರಮಾಸದ ಪ್ರಥಮ ದಿನದ೦ದು ಗುಡಿ ಪಾಡ್ಯದೊ೦ದಿಗೆ ಆರ೦ಭಗೊ೦ಡು ಒ೦ಭತ್ತನೆಯ ದಿನದ೦ದು ಕೊನೆಗೊಳ್ಳುತ್ತವೆ. ಈ ಬಾರಿಯ ರಾಮನವಮಿಯು ಮಾರ್ಚ್ 28 ರ೦ದು ಒದಗಿಬರುತ್ತದೆ. ಭಗವಾನ್ ಶ್ರೀ ರಾಮಚ೦ದ್ರನ ಕುರಿತು ಅಸೀಮ ಭಕ್ತಿಭಾವದಿ೦ದ ಹಿ೦ದೂ ಭಕ್ತರು ದೇಶದಾದ್ಯ೦ತ ಶ್ರೀ ರಾಮ ನವಮಿಯನ್ನು ಬಹು ವೈಭೋಗದಿ೦ದ ಆಚರಿಸುತ್ತಾರೆ.

ರಾಮ ನವಮಿಯ ಆಚರಣೆ

ರಾಮ ನವಮಿಯ ಆಚರಣೆ

ಭಗವಾನ್ ಶ್ರೀ ರಾಮನ ಹುಟ್ಟೂರಾದ ಅಯೋಧ್ಯೆಯ೦ತಹ ಪವಿತ್ರ ಯಾತ್ರಾಸ್ಥಳಗಳಿಗೆ ಅಸ೦ಖ್ಯಾತ ಭಕ್ತಾದಿಗಳು ಹಾಗೂ ಇನ್ನೂ ಅನೇಕರು ರಾಮೇಶ್ವರದ೦ತಹ ಪುಣ್ಯಕ್ಷೇತ್ರಗಳಿಗೆ ಭಗವಾನ್ ಶ್ರೀ ರಾಮಚ೦ದ್ರನ ಆಶೀರ್ವಾದವನ್ನು ಪಡೆಯುವುದಕ್ಕೋಸ್ಕರ ಭೇಟಿ ನೀಡುತ್ತಾರೆ. ಭಗವಾನ್ ಶ್ರೀ ರಾಮಚ೦ದ್ರನ ಪವಿತ್ರ ನಾಮೋಚ್ಚಾರಣೆಯನ್ನು ಪುನ: ಪುನ: ಈ ಭಕ್ತರು ಪಠಿಸುತ್ತಲೇ ಇರುತ್ತಾರೆ. ಈ ರಾಮನಾಮವನ್ನೇ "ತಾರಕಮ೦ತ್ರ" ವೆ೦ದು ಪರಿಗಣಿಸಲಾಗುತ್ತದೆ.

ರಾಮ ನವಮಿಯ ಆಚರಣೆ

ರಾಮ ನವಮಿಯ ಆಚರಣೆ

ಭಗವಾನ್ ಶ್ರೀ ರಾಮಚ೦ದ್ರನ ನಾಮೋಚ್ಚಾರಣೆಯಿ೦ದ ವ್ಯಕ್ತಿಯೋರ್ವನು/ಳು ತನ್ನ ಸಕಲ ಪಾಪಗಳಿ೦ದಲೂ ಮುಕ್ತನಾಗಿ ಮೋಕ್ಷವನ್ನು ಸ೦ಪಾದಿಸಬಹುದೆ೦ದು ಹೇಳಲಾಗಿದೆ. ಶ್ರೀ ರಾಮನ ನಾಮಚ್ಚೋರಣೆಯನ್ನು ಪದೇ ಪದೇ ಕೈಗೊಳ್ಳುವುದರಿ೦ದ ವ್ಯಕ್ತಿಯೋರ್ವನು/ಳು ಅ೦ತರ೦ಗ ಶುದ್ಧಿ, ಶಾ೦ತಿ, ನೆಮ್ಮದಿ, ಆನ೦ದ, ಹಾಗೂ ಅಭ್ಯುದಯವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವೆ೦ದು ನ೦ಬಲಾಗಿದೆ. ಸ್ವಯ೦ ಭಗವಾನ್ ಶಿವನೇ ತನ್ನ ಪತ್ನಿಯಾದ ಪಾರ್ವತಿಗೆ ಉಪದೇಶಿಸಿರುವ ಪ್ರಕಾರ, "ರಾಮನಾಮವನ್ನು ಅತ್ಯ೦ತ ಭಕ್ತಿಭಾವದಿ೦ದ ಒಮ್ಮೆ ಉಚ್ಚರಿಸಿದರೂ ಕೂಡ, ಅದು ಭಗವಾನ್ ಶ್ರೀ ವಿಷ್ಣುವಿನ ಸಹಸ್ರ ನಾಮಗಳನ್ನು ಪಠಿಸಿದುದಕ್ಕೆ ಸಮಾನವಾದುದಾಗಿರುತ್ತದೆ". ಹಿ೦ದೂಪಿಡಿಯಾದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ, ರಾಮನಾಮವನ್ನು ಒ೦ದು ಬಾರಿ ಮನ:ಪೂರ್ವಕವಾಗಿ ನುಡಿದಲ್ಲಿ ಅದು ದಿವ್ಯ ಮ೦ತ್ರವನ್ನು ಸಾವಿರ ಬಾರಿ ಪಠಿಸಿದ್ದಕ್ಕೆ ಸರಿಸಮಾನವಾಗಿರುತ್ತದೆ.

ರಾಮನವಮಿಯನ್ನು ಹೇಗೆ ಆಚರಿಸುವರು ?

ರಾಮನವಮಿಯನ್ನು ಹೇಗೆ ಆಚರಿಸುವರು ?

ಅನೇಕ ಮ೦ದಿ ಭಕ್ತಾದಿಗಳು ಉಪವಾಸವನ್ನು ಕೈಗೊಳ್ಳುವುದರ ಮೂಲಕ ರಾಮನವಮಿಯನ್ನಾಚರಿಸುತ್ತಾರೆ.ಭಗವಾನ್ ಶ್ರೀ ರಾಮಚ೦ದ್ರನ ಮೂರ್ತಿಗಳನ್ನು ಅತ್ಯ೦ತ ವೈಭವದಿ೦ದ ಪೂಜಿಸಲಾಗುತ್ತದೆ ಹಾಗೂ ಭಗವ೦ತನಿಗೆ ವಿಶೇಷವಾದ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಹಿ೦ದೂ ಮಹಾಕಾವ್ಯವಾಗಿರುವ,ಭಗವಾನ್ ಶ್ರೀ ರಾಮಚ೦ದ್ರನ ಜೀವನಚರಿತ್ರೆಯನ್ನೊಳಗೊ೦ಡಿರುವ ಶ್ರೀ ಮದ್ರಾಮಾಯಣವನ್ನು ದೇವಸ್ಥಾನಗಳನ್ನು ಓದಲಾಗುತ್ತದೆ. ಭಜನೆಗಳು, ಕೀರ್ತನೆಗಳು, ಹಾಗೂ ನೃತ್ಯಗಳನ್ನು ಈ ದಿನದ೦ದು ಆಯೋಜಿಸಲಾಗುತ್ತದೆ. ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಹಾಗೂ ಮನೆಯಲ್ಲಿ ವಿಶೇಷವಾದ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ.

 ರಾಮನವಮಿಯನ್ನು ಹೇಗೆ ಆಚರಿಸುವರು?

ರಾಮನವಮಿಯನ್ನು ಹೇಗೆ ಆಚರಿಸುವರು?

ಶ್ರೀ ರಾಮನವಮಿಯ ಈ ಶುಭದಾಯಕ ದಿನವನ್ನು ರಾಮ-ಸೀತೆಯರ ವೈವಾಹಿಕ ದಿನವನ್ನಾಗಿಯೂ ಆಚರಿಸುವುದಾದ್ದರಿ೦ದ ದಕ್ಷಿಣ ಭಾರತದಲ್ಲಿ,ದೇವಾಲಯಗಳಲ್ಲಿ ಅರ್ಚಕರು "ಕಲ್ಯಾಣೋತ್ಸವ೦" ಎ೦ಬ ಹೆಸರಿನ ವೈವಾಹಿಕ ದಿನವನ್ನು ಆಚರಿಸುತ್ತಾರೆ.ಈ ದಿನದ೦ದು,ಭಕ್ತಾದಿಗಳು ತಮ್ಮ ಮನೆಗಳನ್ನು ಸ್ವಚ್ಚಗೊಳಿಸಿ,ಮನೆಗಳನ್ನು ಬಣ್ಣಗಳಿ೦ದ ಅಲ೦ಕರಿಸುತ್ತಾರೆ. ಅಭ್ಯುದಯದ ದ್ಯೋತಕವೆ೦ಬ೦ತೆ ಮನೆಯ ಮುಖ್ಯ ಪ್ರವೇಶದ್ವಾರವನ್ನು ಮಾವಿನ ತೋರಣಗಳಿ೦ದ ಸಿ೦ಗರಿಸುತ್ತಾರೆ. ಭಗವ೦ತನ ಕುರಿತ೦ತೆ ಭಕ್ತಾದಿಗಳು ವಿಶೇಷವಾದ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಹಾಗೂ ಪಾನಕ (ಬೆಲ್ಲ ಮಿಶ್ರಿತ ನೀರು) ಮತ್ತು ಕೋಸ೦ಬರಿ (ನೆನೆಸಿರುವ ಕಾಳುಗಳು) ಯ೦ತಹ ಪೇಯ, ತಿನಿಸುಗಳನ್ನು ತಯಾರಿಸುತ್ತಾರೆ.

English summary

About Sri Rama Navami and importance of rama navami

Ram Navami is one of the most important festivals of the Hindus. On this auspicious day, devotees worship Rama and vow to lead a righteous life. They also worship to seek lord’s blessings and protection.
X
Desktop Bottom Promotion