For Quick Alerts
ALLOW NOTIFICATIONS  
For Daily Alerts

Aati Amavasya 2021: ಆ.8ಕ್ಕೆ ಆಟಿ ಅಮವಾಸ್ಯೆ: ಇದರ ಮಹತ್ವ ಹಾಗೂ ಸಂಪ್ರದಾಯ

|

ಕನ್ನಡ ಹಿಂದೂ ಕ್ಯಾಲೆಂಡರ್‌ ಪ್ರಕಾರ ಆಗಸ್ಟ್‌ 8ಕ್ಕೆ ಆಷಾಢ ಮುಕ್ತಾಯ. ಆಗಸ್ಟ್‌ 9ರಿಂದ ಕನ್ನಡ ಮಾಸದ 5ನೇ ತಿಂಗಳು ಶ್ರಾವಣ ಮಾಸ ಪ್ರಾರಂಭವಾಗುವುದು.

ಆಗಸ್ಟ್‌ 8ಕ್ಕೆ ಅಮವಾಸ್ಯೆ ಇದೆ. ಇದನ್ನು ಕೆಲವು ಕಡೆ ಆಷಾಢ ಅಮವಾಸ್ಯೆಯೆಂದು ಆಚರಿಸಲಾಗುವುದು. ಇನ್ನು ಕೆಲವು ಕಡೆ ಜುಲೈ 9ಕ್ಕೆ ಆಷಾಢ ಅಮವಾಸ್ಯೆ ಆಚರಿಸಲಾಗಿದೆ. ಮಂಗಳೂರಿನ ಕಡೆ ಆಷಾಢ ಅಮವಾಸ್ಯೆಗೆ ಪಾಲೆ ಕಷಾಯ ಮಾಡಿ ಕುಡಿಯುವುದು ತುಂಬಾನೇ ವಿಶೇಷವಾಗಿದೆ. ಈ ದಿನ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಪಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಲಾಗುವುದು (ಹೀಗೆ ತೊಗಟೆ ತರಲು ಹಿಂದಿನ ಕಾಲದಲ್ಲಿ ಬೆತ್ತಲೆ ಹೋಗುತ್ತಿದ್ದರು ಎಂದು ಹೇಳುತ್ತಾರೆ, ಈಗ ಬೆತ್ತಲೆ ಹೋಗಲ್ಲ ಒಂದು ಟವಲ್‌ ಸುತ್ತಿ ಹೋಗಿ ತರುತ್ತಾರೆ). ಈ ಕಷಾಯ ಕುಡಿಯುವುದರಿಂದ ಅದರಲ್ಲಿರುವ ಔಷಧೀಯ ಗುಣಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಇನ್ನು ಈ ದಿನ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಇನ್ನೂ ಕೆಲವು ಜಿಲ್ಲೆಗಳಲ್ಲಿ ಪಿತೃಗಳಿಗೆ ತರ್ಪಣ ನೀಡುತ್ತಾರೆ. ಇಲ್ಲಿ ಆಷಾಡ ಅಮವಾಸ್ಯೆಯ ಸಮಯ ಹಾಗೂ ಮಹತ್ವದ ಬಗ್ಗೆ ಹೇಳಲಾಗಿದೆ ನೋಡಿ:

ಆಷಾಢ ಅಮವಾಸ್ಯೆ

ಆಷಾಢ ಅಮವಾಸ್ಯೆ

ಅಮವಾಸ್ಯೆ ಪ್ರಾರಂಭ ಸಂಜೆ 7:11, ಆಗಸ್ಟ್‌ 7

ಅಮವಾಸ್ಯೆ ಮುಕ್ತಾಯ ಸಂಜೆ 7:19, ಆಗಸ್ಟ್ 2021

ತುಳು ನಾಡಿನಲ್ಲಿ ಆಷಾಢ ಅಮವಾಸ್ಯೆಯಿಂದ ಹಬ್ಬಗಳು ಶುರು

ತುಳು ನಾಡಿನಲ್ಲಿ ಆಷಾಢ ಅಮವಾಸ್ಯೆಯಿಂದ ಹಬ್ಬಗಳು ಶುರು

ಆಟಿ ಅಮವಾಸ್ಯೆ ಆಚರಣೆಯಿಂದ ಕರಾವಳಿ ಕಡೆ ಮೊದಲ ಹಬ್ಬ ಶುರುವಾಗುವುದು. ಹಾಲೆ ಅಥವಾ ಪಾಲೆ ಮರದ ಕಷಾಯ ಕುಡಿದು ನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ಇಲ್ಲಿನ ವಿಶೇಷ. ಪಾಲೆ ಮರದ ತೊಗಡೆ ತರುವಾಗ ತುಂಬಾನೇ ಜಾಗ್ರತೆ ವಹಸಿಬೇಕು, ಏಕೆಂದರೆ ಪಾಲೆ ಮರದ ರೀತಿಯಲ್ಲೇ ಬೇರೆ ಮರ ಇರುತ್ತದೆ. ಈ ಮರವೆಂದು ಆ ಮರದ ತೊಗಟೆ ತಂದು ಕುಡಿದು ಜೀವ ಹೋಗಿರುವ ಪ್ರಕರಣಗಳಿವೆ. ಆದರೆ ಪಾಲೆ ಮರವನ್ನು ಸ್ಪಷ್ಟವಾಗಿ ಗುರುತಿಸಿ ತಂದು ಮಾಡಬೇಕು.

ಪಿತೃಗಳಿಗೆ ತರ್ಪಣ

ಪಿತೃಗಳಿಗೆ ತರ್ಪಣ

ಈ ದಿನ ಪಿತೃಗಳಿ ತರ್ಪಣ ನೀಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ನಮ್ಮ ಹಿರಿಯರು ಸಂತುಷ್ಟರಾಗುತ್ತಾರೆ, ಅವರ ಆಶೀರ್ವಾದ ನಮ್ಮ ಮೇಲಿರುವುದು ಎಂಬ ನಂಬಿಕೆ ಇದೆ.

ಯಾವ ವ್ಯಕ್ತಿ ಪುತ್‌ ಎಂಬ ನರಕದಿಂದ ಪಿತೃಗಳನ್ನು ಪಾರು ಮಾಡುತ್ತಾನೋ ಅವನೇ ಪುತ್ರ ಎಂದು ಗರುಣ ಪುರಾಣದಲ್ಲಿ ಹೇಳಲಾಗಿದೆ. ಆದ ಕಾರಣ ಯಾವುದೇ ಜಾತಿಬೇಧವಿಲ್ಲದೆ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ನಮ್ಮ ಋಣ ತೀರಿಸಬೇಕೆಂದು ಹೇಳಲಾಗುವುದು.

ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರ ಆಶೀರ್ವಾದದಿಂದ ಮನೆಯಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿ ತುಂಬಿರುತ್ತದೆ, ಸಂತಾನ ಭಾಗ್ಯ ಲಭಿಸುವುದು, ಎಲ್ಲವೂ ಒಳಿತಾಗುವುದು ಎಂಬ ನಂಬಿಕೆ ಇದೆ. ಆ ಕಾರಣಕ್ಕೆ ಪಿತೃ ತರ್ಪಣ ನೀಡಲಾಗುವುದು.

English summary

Aati Amavasya 2021 Date, Muhurat Timing, Rituals And Significance

Aati Amavasya 2021 Date, Muhurat Timing, Rituals And Significance, Read on...
X
Desktop Bottom Promotion