For Quick Alerts
ALLOW NOTIFICATIONS  
For Daily Alerts

ತಾನು ಸತ್ತರೆ ಪರ್ವಾಗಿಲ್ಲ, ಆ ರೋಗಿ ಬದುಕಲಿ ಎಂದು ತನ್ನ ಬೆಡ್ ಬಿಟ್ಟು ಕೊಟ್ಟ ನಾರಾಯಣಾ ದಭಾಡ್ಕರ್

|

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ, ಬೆಡ್‌ ಸಿಕ್ಕರೂ ತಕ್ಕ ಸಮಯಕ್ಕೆ ಆಕ್ಸಿಜನ್ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ತುಂಬಾ ಚಿಕ್ಕ ಪ್ರಾಯದವರು ಸಾವನ್ನಪ್ಪಿದಾಗ ಆ ಮನೆಯ ಆಧಾರ ಸ್ತಂಭವೇ ಕುಸಿದಂತಾಗಿದೆ ಆ ಕುಟುಂಬ ನೋಡುವಾಗ ಕರುಳು ಹಿಂಡಿದಂತಾಗುವುದು.

 Coronavirus

ಅವನ್ನೆಲ್ಲಾ ನೋಡುವಾಗ ಅಯ್ಯೋ ಈ ಕೊರೊನಾ ಮಹಾಮಾರಿ ಆದಷ್ಟೂ ಬೇಗ ದೂರವಾಗಲಿ ಎಂದು ಪ್ರತಿಯೊಬ್ಬರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

ಕೊರೊನಾ ಸೋಂಕಿನ ಲಕ್ಷಣಗಳು ಗಂಭೀರವಾದಾಗ ಪ್ರಾಣ ಉಳಿದರೆ ಸಾಕು ಎಂದು ಆಸ್ಪತ್ರೆಗೆ ಬರುತ್ತಾರೆ, ಹಾಗೇ ಬಂದಾಗ ಬೆಡ್‌ ಇಲ್ಲ, ಆಕ್ಸಿಜನ್ ಇಲ್ಲ ಎಂದಾಗ ಆ ವ್ಯಕ್ತಿ ಹಾಗೂ ಕುಟುಂಬದ ಪರಿಸ್ಥಿತಿ ಹೇಗಾಗಬೇಡ. ಅಂತಹ ಒಂದು ಕುಟುಂಬಕ್ಕೆ ತಾನು ಸತ್ತರೂ ಪರ್ವಾಗಿಲ್ಲ ನೀನು ಬದುಕಬೇಕು ಎಂದು ತನ್ನ ಬೆಡ್‌ ಹಾಗೂ ಆಕ್ಸಿಜನ್ ಬಿಟ್ಟು ಕೊಟ್ಟ ಕೊರೊನಾ ಸೋಂಕಿತರ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಇಂಥವರು ಇರುವುದರಿಂದಲೇ ಮಾನವೀಯತೆ ಇನ್ನೂ ಇದೆ ಎಂದು ಹೇಳಬಹುದು.

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ಬಂದಿದ್ದ ನಾರಾಯಣಾ ದಭಾಡ್ಕರ್

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ಬಂದಿದ್ದ ನಾರಾಯಣಾ ದಭಾಡ್ಕರ್

ಆ ಹಿರಿ ಜೀವದ ಹೆಸರು ನಾರಾಯಣಾ ದಭಾಡ್ಕರ್, ವಯಸ್ಸು 95, ನಾಗಪುರದ ನಿವಾಸಿ. ಇವರಿಗೆ ಕೊರೊನಾ ಸೋಂಕು ತಗುಲಿದಾಗ ಅವರ ಮನೆಯವರು ಈ ಹಿರಿ ಜೀವ ಉಳಿಯಲಿ ಎಂದು ಆ ಆಸ್ಪತ್ರೆಯಿಂದ ಈ ಆಸ್ಪತ್ರೆಗೆ ಅಂತ ಅಲೆದಾಡಿ ಕೊನೆಗೆ ಇಂದಿರಾಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಅವರಿಗೆ ಆಸ್ಪತ್ರೆಯಲ್ಲಿ ಸಿಗುವಾಗ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿತ್ತು, ತಮ್ಮ ಮೊಮ್ಮಗಳ ಗಂಡನ ಜೊತೆ ಬಂದು ಆಸ್ಪತ್ರೆಗೆ ದಾಖಲಾದರು.

ತನ್ನ ಪ್ರಾಣ ಹೋದರು ಪರ್ವಾಗಿಲ್ಲ ಎಂದು ಮತ್ತೊಬ್ಬರ ಪಾಲಿಗೆ ದೇವರಾದರು

ತನ್ನ ಪ್ರಾಣ ಹೋದರು ಪರ್ವಾಗಿಲ್ಲ ಎಂದು ಮತ್ತೊಬ್ಬರ ಪಾಲಿಗೆ ದೇವರಾದರು

ಇವರು ಆಸ್ಪತ್ರೆಗೆ ದಾಖಲಾದಾಗ ಅಲ್ಲಿಗೆ 40 ವರ್ಷದ ಸೋಂಕಿತ ವ್ಯಕ್ತಿಯನ್ನು ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಬೆಡ್‌ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಯವರು ಅಡ್ಮಿಟ್ ಮಾಡಲಿಲ್ಲ. ಬೆಡ್‌ ಸಿಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಆ ಕುಟುಂಬಕ್ಕೆ ದಿಕ್ಕೇ ತೋಚದಂತಾಯ್ತು, ಒಂದು ಕಡೆ ಉಸಿರಾಡಲು ಕಷ್ಟವಾಗಿ ಒದ್ದಾಡುತ್ತಿರುವ ಮನೆಯ ಆಧಾರ ಸ್ತಂಭ, ಇತ್ತ ನೋಡಿದರೆ ಆಸ್ಪತ್ರೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆ ವ್ಯಕ್ತಿಯ ಪತ್ನಿ ಅಯ್ಯೋ ನನ್ನ ಮಕ್ಕಳಿಗೆ ಯಾರು ಗತಿ, ನಮ್ಮನ್ನು ಅನಾಥರನ್ನಾಗಿ ಬಿಟ್ಟು ಹೋಗುತ್ತಿದ್ದೀರಾ ಎಂದು ಬಾಯಿ ಬಿಟ್ಟು ಅಳಲಾರಂಭಿಸಿದರು.

ಆದರೆ ಅವರ ಆರ್ತನಾದ ಕೇಳಲು ಅಲ್ಲಿ ಯಾರೂ ಇರಲಿಲ್ಲ, ಆದರೆ ಈ ವ್ಯಕ್ತಿ ಕಿವಿಗೆ ಅವರ ಅಳು ಬಿತ್ತು. ಆಗ ಅವರು ತೆಗೆದುಕೊಂಡ ನಿರ್ಧಾರವಿದೆಯಲ್ಲಾ ಒಂದು ಕ್ಷಣ ನಮ್ಮ ಮೈನವಿರೇಳುವಂತೆ ಮಾಡುತ್ತದೆ.

 ಆಗ ಅವರು ಹೇಳಿದ ಮಾತಿ ಇದೆಯಲ್ಲಾ...

ಆಗ ಅವರು ಹೇಳಿದ ಮಾತಿ ಇದೆಯಲ್ಲಾ...

ಬೆಡ್‌ ಸಿಕ್ಕರೆ ತಾನು ಸಾಯುತ್ತೇನೆ ಎಂದು ಗೊತ್ತಿದರೂ ತಮಗೆ ಸಿಕ್ಕ ಬೆಡ್‌ ಅನ್ನು ಆ ವ್ಯಕ್ತಿಗೆ ಕೊಟ್ಟು ಬಿಟ್ಟರು.

ಆಗ ಅವರು ಹೇಳಿದ ಮಾತಿ ಇದೆಯಲ್ಲಾ...

ಅವರು ತಮ್ಮ ಬೆಡ್‌ ಅನ್ನು ಬಿಟ್ಟು ಕೊಡುವಾಗ 'ನನಗೆ 85 ವರ್ಷ, ಬದುಕು ಕಂಡಿದ್ದೇನೆ, ಆದರೆ ಆ ಮಹಿಳೆಯ ಗಂಡನಿಗೆ ನಲ್ವತ್ತು ವರ್ಷ, ಅವರು ಸತ್ತರೆ ಮಕ್ಕಳು ಹಾಗೂ ಪತ್ನಿ ಅನಾಥರಾಗುತ್ತಾರೆ. ಆತನ ಬದುಕಿಸುವುದು ನನ್ನ ಕರ್ತವ್ಯ' ಎಂಬ ಮಾತು ಹೇಳುತ್ತಾರೆ.

ಆಸ್ಪತ್ರೆಯವರಿಗೆ 'ನಾನು ಸ್ವಇಚ್ಛೆಯಿಂದ ನನ್ನ ಬೆಡ್‌ ಅನ್ನು ಮತ್ತೊಬ್ಬ ರೋಗಿಗೆ ನೀಡುತ್ತಿದ್ದೇನೆ' ಎಂದು ಬರೆದ ಲೆಟರ್‌ನಲ್ಲಿ ಸಹಿ ಹಾಕಿ ಮನೆಗೆ ಮರಳುತ್ತಾರೆ.

ತ್ಯಾಗದ ಮೂಲಕ ಮಾದರಿಯಾದ ತಾತ

ತ್ಯಾಗದ ಮೂಲಕ ಮಾದರಿಯಾದ ತಾತ

ಅವರು ಮನೆಗೆ ಮರಳಿದ ಮೂರು ದಿನಗಳಲ್ಲಿ ಇಹಲೋಕ ತ್ಯಜಿಸುತ್ತಾರೆ. ಆದರೆ ನನ್ನಿಂದ ಇನ್ನೊಬ್ಬ ವ್ಯಕ್ತಿಯನ್ನು ಬದುಕಿಸಲು ಸಾಧ್ಯವಾಯಿತು ಎಂಬ ತೃಪ್ತಿಯಲ್ಲೇ ಕಣ್ಣು ಮುಚ್ಚಿದ್ದಾರೆ.

ಇವರಂಥವರಿಂದ ಅಲ್ಲವೇ ಮಾನವೀಯತೆ ಎಂಬುವುದರ ಮೌಲ್ಯ ಹೆಚ್ಚುವುದು.

English summary

85-year-old Nagpur Resident Narayan Rao Dabhadkar Gives Up Hospital Bed For Younger COVID-19 Patient

85-year-old Nagpur resident Narayan Rao Dabhadkar gives up hospital bed for younger COVID-19 patient, read on...
Story first published: Wednesday, April 28, 2021, 21:11 [IST]
X
Desktop Bottom Promotion