For Quick Alerts
ALLOW NOTIFICATIONS  
For Daily Alerts

2019 ನಾಗರ ಪಂಚಮಿ: ದಿನಾಂಕ ಹಾಗೂ ಆಚರಣೆಯ ಮಹತ್ವ

|
Naga Panchami 2019 : ನಾಗರಪಂಚಮಿ ಹಬ್ಬದ ಆಚರಣೆಯ ಹಿಂದಿರುವ ಮಹತ್ವ

ಶ್ರಾವಣ ತಿಂಗಳು ಬಂತೆಂದರೆ ಆಗ ಹಿಂದೂ ಧರ್ಮಿಯರಿಗೆ ಇನ್ನಿಲ್ಲದ ಸಂಭ್ರಮ. ಪ್ರತಿಯೊಂದು ಮನೆಯಲ್ಲೂ ಹಬ್ಬದ ವಾತಾವರಣ ಮನೆ ಮಾಡಿರುವುದು. ಯಾಕೆಂದರೆ ಆಷಾಢ ಮಾಸ ಕಳೆದ ಬಳಿಕ ಬರುವಂತಹ ಶ್ರಾವಣ ಮಾಸದಲ್ಲಿ ಹಲವಾರು ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಇದರಿಂದ ಶ್ರಾವಣ ತಿಂಗಳು ಎಂದರೆ ಹಿಂದೂಗಳಿಗೆ ಅಚ್ಚುಮೆಚ್ಚು ಮಾತ್ರವಲ್ಲದೆ ಇದು ಪವಿತ್ರ ತಿಂಗಳು ಕೂಡ.

ಶ್ರಾವಣ ಮಾಸದಲ್ಲಿ ಬರುವಂತಹ ಮೊದಲ ಹಬ್ಬವೇ ನಾಗರ ಪಂಚಮಿ. ಶುಕ್ಲ ಪಕ್ಷದದ ಶ್ರಾವಣ ತಿಂಗಳಲ್ಲಿ ಬರುವಂತಹ ನಾಗರ ಪಂಚಮಿಯು ಹರಿಯಾಲಿ ತೀಜ್ ನ ಎರಡು ದಿನಗಳ ಬಳಿಕ ಬರುವುದು. ಜಾರ್ಜಿಯನ್ ಕ್ಯಾಲೆಂಡರ್ ಪ್ರಕಾರ ನಾಗರ ಪಂಚಮಿಯು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುವುದು. ಮಹಿಳೆಯರು ನಾಗ ದೇವರನ್ನು ಪೂಜಿಸುವರು ಮತ್ತು ನಾಗನ ಕಲ್ಲಿಗೆ ಹಾಲೆರೆಯುವರು. ಮಹಿಳೆಯರು ತಮ್ಮ ಕುಟುಂಬದವರು ಹಾಗೂ ಸೋದರರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವರು.

Most Read: ನಾಗರ ಪಂಚಮಿ ಹಬ್ಬದ ಮಹತ್ವವೇನು?

Nag Panchami

ನಾಗ ದೇವರು ಎಂದು ನಂಬಿರುವಂತಹ ನಾಗರಾಜನನ್ನು ನಾಗರ ಪಂಚಮಿ ದಿನದಂದು ಭಾರತದೆಲ್ಲೆಡೆ ಹಿಂದೂಗಳು ಪೂಜೆ ಮಾಡುವರು. ಹಿಂದೂ ಧರ್ಮದಲ್ಲಿ ಕೆಲವೊಂದು ದೇವರುಗಳನ್ನು ಆರಾಧನೆ ಮಾಡಲು ವಿಶೇಷವಾದ ದಿನಗಳು ಹಾಗೂ ತಿಥಿಗಳು ಇವೆ. ಇದರಲ್ಲಿ ಮುಖ್ಯವಾಗಿ ಶಱರಾವಣ ತಿಂಗಳಲ್ಲಿ ಬರುವಂತಹ ಪಂಚಮಿ ತಿಥಿಯು ನಾಗ ದೇವರ ಆರಾಧನೆ ಅತೀ ಶುಭವೆಂದು ಪರಿಗಣಿಸಲಾಗಿದೆ. ಶ್ರಾವಣ ತಿಂಗಳಲ್ಲಿ ಬರುವಂತಹ ಶುಕ್ಲ ಪಂಚಮಿಯಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಸರ್ಪದ ಆರಾಧನೆ ಮಾಡಿದರೂ ಅದು ನಾಗದೇವರಿಗೆ ಸಲ್ಲುವುದು ಎಂದು ನಂಬಲಾಗಿದೆ. ಇದರಿಂದಾಗಿ ಈ ದಿನದಂದು ಸರ್ಪಗಳನ್ನು ಹೆಚ್ಚಾಗಿ ಪೂಜಿಸುವರು. ನಾಗರ ಪಂಚಮಿಯ ಸಮಯ

Most Read: ನಾಗರಪಂಚಮಿ : ಅಚ್ಚ ಕನ್ನಡ ಅಣ್ಣ-ತಂಗಿಯರ ಹಬ್ಬ

ನಾಗರ ಪಂಚಮಿ: ಆಗಸ್ಟ್ 5, 2019, ಸೋಮವಾರ
ನಾರಗ ಪಂಚಮಿ ಪೂಜಾ ಮುಹೂರ್ತ: ಬೆಳಗ್ಗೆ 6.09 ರಿಂದ 8.40ರ ತನಕ
ಎಷ್ಟು ಸಮಯ: 2 ಗಂಟೆ 30 ನಿಮಿಷ
ಸುಮಾರು 12 ನಾಗ ದೇವತೆಗಳು ಇದ್ದಾರೆ ಮತ್ತು ಇವರನ್ನು ನಾಗರ ಪಂಚಮಿ ದಿನದಂದು ಪೂಜಿಸಲಾಗುತ್ತದೆ.
*ಅನಂತ
*ವಾಸುಕಿ
*ಶೇಷ
*ಪದ್ಮ
*ಕಂಬಬಾಲ
*ಕಾರ್ಕೋಟಕ
*ಅಶ್ವತಾರ
*ದೃತರಾಷ್ಟ್ರ
*ಶಂಕಪಾಲ
*ಕಾಲಿಯಾ
*ತಕ್ಷಕ
*ಪಿಂಗಾಲ

Most Read: ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ನಾಗರಪಂಚಮಿ

ನಾಗರ ಪಂಚಮಿಯ ವಿಶಿಷ್ಟತೆ

ನಾಗರ ಪಂಚಮಿಯ ದಿನ ನಾಗರ ಕಲ್ಲು ಅಥವಾ ನಾಗರ ಹಾವನ್ನು ಆರಾಧಿಸುವುದರಿಂದ ಬಡತನವು ದೂರವಾಗುವುದು ಎಂದು ಹೇಳಲಾಗುವುದು. ಅವಿವಾಹಿತ ಮಹಿಳೆಯರು ನಾಗರ ಕಲ್ಲಿಗೆ ಹಾಲೆರೆಯುವುದು ಅಥವಾ ಪೂಜೆ ಗೈಯುವುದರಿಂದ ಮನದಿಂಗಿತದಂತಹ ಹುಡುಗನನ್ನು ಪಡೆದುಕೊಳ್ಳುವರು. ದೇವರ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಈ ಹಬ್ಬದ ದಿನ ಭಕ್ತರು ನಾಗರ ಪೂಜೆ ಹಾಗೂ ನಾಗದೇವರ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಪೂರೈಸುತ್ತವೆ ಎಂದು ಹೇಳಲಾಗುವುದು. ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುವುದು.

ಹಬ್ಬದ ಆಚರಣೆಯ ವಿಧಾನ

ಹಬ್ಬದ ದಿನದಂದು ಜನರು ಉಳುಮೆ ಸಹಿತ ಯಾವುದೇ ನೆಲವನ್ನು ಅಗಿಯುವ ಕೆಲಸವನ್ನು ಮಾಡುವುದಿಲ್ಲ. ನಾಗರ ಕಲ್ಲಿಗೆ ಹಸುವಿನ ಹಾಲು, ಹುರಿದ ಭತ್ತ (ಅರಳು), ಭತ್ತದ ತೆನೆ ಮತ್ತು ದೂರ್ವ ಅಥವಾ ಗರಿಕೆ (ಎಳೆಹುಲ್ಲಿನ ತುರಿಭಾಗ) ಯನ್ನು ಅರ್ಪಿಸಿ ನಾಗನನ್ನು ಪೂಜಿಸಲಾಗುತ್ತದೆ. ಭಾರತದಾದ್ಯಂತ ಎಲ್ಲೆಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಕಲ್ಲಿನ ಬದಲು ಮಣ್ಣಿನಿಂದ ಮಾಡಿದ ಹಾವಿನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಜೀವಂತ ಹಾವಿಗೂ ಹಾಲು ಮತ್ತು ಹಾವು ಸ್ವೀಕರಿಸುವ ಇತರ ಪದಾರ್ಥಗಳನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ.

ನಾಗ ಚತುರ್ಥಿ

ನಾಗರ ಪಂಚಮಿ ಮೊದಲಿನ ದಿನ ಕೆಲವು ಜನರು ಉಪವಾಸ ಮಾಡುವರು ಮತ್ತು ನಾಗರ ಪಂಚಮಿ ಮೊದಲ ದಿನ ಮಾಡುವಂತಹ ಉಪವಾಸವನ್ನು ನಾಗ ಚತುರ್ಥಿ ಅಥವಾ ನಾಗುಲ ಚೌತಿ ಎಂದು ಕರೆಯಲಾಗುತ್ತದೆ. ಆಂಧ್ರ ಪ್ರದೇಶದಲ್ಲಿ ನಾಗ ಚತುರ್ಥಿ ಅಥವಾ ನಾಗುಲ ಚೌತಿಯನ್ನು ದೀಪಾವಳಿ ಬಳಿಕ ಆಚರಿಸಲಾಗುತ್ತದೆ ಮತ್ತು ಇದೇ ವೇಳೆ ತಮಿಳುನಾಡಿನಲ್ಲಿ ಸೂರ ಸಮಹಾರಮ್ ಹಬ್ಬವು ನಡೆಯುವುದು.

ನಾಗರ ಪಂಚಮಿಯಲ್ಲಿ ವಿಷ್ಣುವನ್ನು ಏಕೆ ಪೂಜಿಸುತ್ತಾರೆ?

ನಾಗರ ಪಂಚಮಿಯ ದಿನ ವಿಷ್ಣು ದೇವರನ್ನು ಸಹ ಆರಾಧಿಸಲಾಗುತ್ತದೆ. ಈ ಪೂಜೆಯ ಹಿಂದೆ ಒಂದು ಪವಿತ್ರವಾದ ಪುರಾಣದ ಹಿನ್ನೆಲೆಯಿದೆ ಎಂದು ಹೇಳಲಾಗುವುದು. "ಕಲಿಯಾ ನಾಗ ಒಮ್ಮೆ ಯಮುನಾ ನದಿಯ ನೀರಿನಲ್ಲಿ ಪ್ರವೇಶಿಸಿತು. ಇದರ ಪರಿಣಾಮವಾಗಿ ನದಿಯ ನೀರೆಲ್ಲಾ ಕಪ್ಪು ಬಣ್ಣಕ್ಕೆ ತಿರುಗಿತು. ಜೊತೆಗೆ ನದಿಯ ನೀರೆಲ್ಲಾ ವಿಷವಾಗಿ ಪರಿವರ್ತನೆಯಾಯಿತು.

English summary

2019 Nag Panchami-Date and Significance

Nag Panchami is a traditional worship of serpent Gods observed by Hindus throughout India. In Hindu calendar, some days are considered significant to worship serpent Gods and Panchami Tithi especially during Shravan month is considered highly auspicious to worship serpent Gods. Nag Panchami is one of those significant days and it observed on Shukla Paksha Panchami during Shravana month.
X
Desktop Bottom Promotion