For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ಲಕ್ಷ್ಮಿಯನ್ನು ಸ್ವಾಗತಿಸಲು ಮನೆ ಅಲಂಕಾರ

By Staff
|

ದೀಪಾವಳಿ ಬೆಳಕಿನ ಹಬ್ಬ. ಸಡಗರದಿಂದ ಎಲ್ಲರೂ ಒಟ್ಟಾಗಿ ಪಾಲ್ಗೊಂಡು, ದೇವರನ್ನು ಪೂಜಿಸಿ, ಸಿಹಿಯನ್ನು ಮಾಡಿ ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮ ಪಡುವ ಈ ಹಬ್ಬದ ದಿನಕ್ಕಾಗಿ ಭಾರತೀಯರು ಸಜ್ಜಾಗುತ್ತಿದ್ದಾರೆ! ಸಂಪತ್ತಿನ ಅಧಿದೇವತೆ, ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಳ್ಳಲು ಸಕಲ ಸಿದ್ಧತೆಗಳೂ ಬರದಿಂದ ಸಾಗಿವೆ. ನೀವು ಕೂಡ ಲಕ್ಷ್ಮೀಯನ್ನು ಬರವಾಡಿಕೊಳ್ಳಲು ನಿಮ್ಮ ಮನೆಯನ್ನು ಸಿಂಗರಿಸಲು ಇಷ್ಟಪಡುತ್ತೀರಾ? ಹಾಗಾದರೆ ಇದಕ್ಕೊಂದಿಷ್ಟು ಹೊಸ ಮಾರ್ಗಗಳನ್ನು ನಾವಿಲ್ಲಿ ಹೇಳುತ್ತೇವೆ!

ನಿಮ್ಮ ಮನೆಗಳಲ್ಲಿ ಸಕಲ ಸಮೃದ್ಧಿಯನ್ನೂ ತುಂಬಲು ಬರುತ್ತಿರುವ ಮಹಾತಾಯಿ ಲಕ್ಷ್ಮೀಗೆ ಆದರದ ಸ್ವಾಗತ ಕೋರೊಣ. ಬನ್ನಿ, ನಮ್ಮ ಮನೆಗಳನ್ನು ಇನ್ನಷ್ಟು ಸ್ವಚ್ಚಗೊಳಿಸೋಣ. ಆಕೆ ನಡೆದು ಬರುವ ದಾರಿಯಲ್ಲಿ ಒಂದಿಷ್ಟೂ ಕಸ ಸಿಗದಂತೆ ಮನೆಯನ್ನು ಶುದ್ಧಗೊಳಿಸೋಣ. ಇದಕ್ಕೆಂದೆ ಕೆಲವು ಸಲಹೆಗಳು ಈ ಮುಂದಿದೆ.

Tips to revamp your house this Diwali

ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ

ನಿಮ್ಮ ಮನೆಯಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಹಳೆಯ ಪತ್ರಿಕೆಗಳು, ಬಟ್ಟೆಗಳು, ಹಳೆಯ ಧೂಳು ಹಿಡಿದ ಕರ್ಟನ್ ಗಳು ಹಾಗೂ ಇನ್ನಿತರ ಇಂತಹ ಯಾವುದೇ ಬೇಡದ ವಸ್ತುಗಳಿದ್ದರೂ ಅವುಗಳನ್ನು ತೆರವುಗೊಳಿಸಿ/ ಎಸೆಯಿರಿ. ಮನೆಯ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಸಹ ಕಟ್ಟಿರುವ ಜೇಡರ ಬಲೆಯನ್ನು ಸ್ವಚ್ಛಗೊಳಿಸಿ. ಖಾಲಿ ಇರುವ ಜಾಗದಲ್ಲಿ ಪೀಠೋಪಕರಣಗಳು ಅಥವಾ ಹೂದಾನಿಗಳಿಂದ ಅಲಂಕರಿಸಿ.

ಹೊಸ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಿ:

ನಿಮ್ಮ ಮನೆಗೆ ಸರಿಹೊಂದುವಂತಹ ಹೊಸ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಿ. ನಿಮ್ಮ ಮನೆ, ನೆರಳೆ, ಹಸಿರಿನಂತಹ ಕಡು ಬಣ್ಣವನ್ನು ಹೊಂದಿದ್ದರೆ, ತೆಳು ಬಣ್ಣದ ವಿನ್ಯಾಸವುಳ್ಳ ಕರ್ಟನ್ ಗಳನ್ನು ಆಯ್ದು ತನ್ನಿ. ಮನೆಯ ಸೋಪಾ/ ಪೀಠೋಪಕರಣಗಳಿಗೆ ಮೇಲ್ಭಾಗದಲ್ಲಿ ಕವರ್/ ಮುಚ್ಚಣಿಕೆಯಿದ್ದರೆ ಅದನ್ನು ಸುಲಭವಾಗಿ ಬದಲಾಯಿಸಿ ನಿಮಗೆ ಬೇಕಾದ ಬಣ್ಣದ ಮುಚ್ಚಣಿಕೆಯನ್ನು ಬಳಸಬಹುದು. ಇಂತಹ ವಸ್ತುಗಳು ದೊರಕುವ ಅಂಗಡಿಗಳಲ್ಲಿ ಸಮಯಕ್ಕೆ ತಕ್ಕ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ. ಆದರೆ ಈ ಅಲಂಕಾರಿಕ ವಸ್ತುಗಳು ಬೇರೆಯವರಿಗೂ ಖುಷಿಕೊಡುವ ರೀತಿಯಲ್ಲಿ ಔಚಿತ್ಯಪೂರ್ಣವಾಗಿ ಇರಲಿ.

ಮಲಗುವ ಕೋಣೆಯನ್ನು ಅಲಂಕರಿಸಿ:

ಹೊಸ ಬೆಡ್/ ಮಲಗುವ ಮಂಚವನ್ನು ಕೊಂಡುಕೊಳ್ಳಿ. ಈ ಹಿಂದೆ ಇರುವುದಕ್ಕಿಂತ ಸುಂದರವಾಗಿ ನಿಮ್ಮ ಮಲಗುವ ಕೋಣೆಯನ್ನು ಅಲಂಕರಿಸಿ. ನೀವು ಬಿಳಿ ಬಣ್ಣದ ಬೆಡ್ ಶಿಟ್ ಬಳಸುತ್ತಿದ್ದರೆ ಈ ಹಬ್ಬದ ಸಮಯದಲ್ಲಿ ಬೇರೆ ಬಣ್ಣದ ಬೆಡ್ ಶಿಟ್ ಗಳನ್ನು ಕೊಂಡುತನ್ನಿ. ನಿಮ್ಮ ಮಲಗುವ ಕೋಣೆಯಲ್ಲಿ ಚಿಕ್ಕದಾದ ಸೋಫಾ/ ಕುರ್ಚಿಗಳಿದ್ದರೆ ಅವುಗಳಿಗೆ ಹೊಸದಾದ ಕುಶನ್ ತಂದು ಅಲಂಕರಿಸಿ. ಈ ಕುಶನ್ ನ ಬಣ್ಣ ನಿಮ್ಮ ಬೆಡ್ ಶಿಟ್ ಬಣ್ಣಕ್ಕೆ ಹೊಂದುಕೊಳ್ಳುವಂತಿರಲಿ.

ಹಳೆಯ ರಗ್ಗುಗಳನ್ನು ಬದಲಾಯಿಸಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ರಗ್ಗುಗಳು ಇದ್ದೇ ಇರುತ್ತವೆ. ನಿಮ್ಮ ಮನೆಯಲ್ಲೂ ಇಂತಹ ರಗ್ಗುಗಳಿದ್ದು, ಅವು ಬಣ್ಣ ಮಾಸಿದ್ದರೆ ಅಥವಾ ಹಳೆಯದಾಗಿದ್ದರೆ ಇಂದೇ ಅವುಗಳನ್ನು ಬದಲಾಯಿಸಿ ಅತ್ಯುತ್ತಮ ಬಣ್ಣದ ರಗ್ಗುಗಳನ್ನು ಖರೀದಿಸಿ. ತಿಳಿಯ ನೀಲಿ, ಹಳದಿ, ಕಿತ್ತಳೆ ಬಣ್ಣಗಳಂತಹ ವಿನೂತನ ಬಣ್ಣದ ರಗ್ಗುಗಳು ನಿಮ್ಮ ನಿಮ್ಮ ಮನೆಯನ್ನಲಂಕರಿಸಲಿ.

ಚಿತ್ರಕಲೆ ಪ್ರಿಯರಿಗೆ ಇದು ಸದಾವಕಾಶ:

ಕಲೆಯ ಪ್ರಿಯರು ಹಲವಾರು ಚಿತ್ರಕಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅದನ್ನು ಎಲ್ಲಾ ಸಮಯದಲ್ಲೂ ಪ್ರದರ್ಶನಕ್ಕಿಡಲಾಗುವುದಿಲ್ಲ. ಆದರೆ ಈ ದೀಪಾವಳಿಯ ಸಮಯದಲ್ಲಿ ನಿಮ್ಮ ಎಲ್ಲಾ ಚಿತ್ರಗಳನ್ನು ಮನೆಯ ಖಾಲಿ ಇರುವ ಪ್ರದೇಶಗಳಲ್ಲಿ ತೂಗುಹಾಕಬಹುದು.

ವೈವಿದ್ಯಮಯ ಬಣ್ಣಗಳನ್ನು ಬಳಸಿ:

ಬೇರೆ ಬೇರೆ ವಿನೂತನ ಬಣ್ಣಗಳನ್ನು ಬಳಸಿ. ಕರ್ಟನ್, ಹೂದಾನಿಗಳು, ವರ್ಣಚಿತ್ರಗಳು ಹೀಗೆ ಪ್ರತಿಯೊಂದು ಅಲಂಕಾರಿಕ ವಸ್ತುಗಳನ್ನು ಬಳಸಿ ಮನೆಯನ್ನು ಸುಂದರವಾಗಿ ಅಲಂಕರಿಸಿ. ಹಸಿರು, ನೇರಳೆ, ಕಂದು ಮೊದಲಾದ ಅನನ್ಯ ಬಣ್ಣಗಳನ್ನು ಹೆಚ್ಚಾಗಿ ಬಳಸಿ. ಆದರೆ ನಿಮ್ಮ ಮನೆಯ ಒಳಗೆ ನೈಸರ್ಗಿಕ ಬೆಳಕು ಪ್ರವೇಶಿಸುವಂತೆ ತೆಳು ಬಣ್ಣದ ಕರ್ಟನ್ ಗಳನ್ನು ಬಳಸಿದರೆ ಉತ್ತಮ. ಸಿಲ್ಕ್ ಅಥವಾ ಬೇರೆ ಯಾವುದೇ ಹೊಸ ಬಗೆಯ ವಿನ್ಯಾಸದ ಬಟ್ಟೆಗಳನ್ನು ಅಲಂಕಾರಕ್ಕಾಗಿ ಬಳಸಿ. ಜೊತೆಗೆ ಪೇಂಟ್ ವಿನ್ಯಾಸದ ವಸ್ತುಗಳನ್ನು ಕೂಡ ಬಳಸಬಹುದು.

ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ:

ಹಳೆಯ ಕಾಲದ ಸಾಂಪ್ರದಾಯಿಕ ವಸ್ತುಗಳು ನಿಮ್ಮ ಮನೆಗೆ ಹೊಸ ಮೆರುಗನ್ನು ತರಬಲ್ಲದು. ಹಳೆಯ ರೇಷ್ಮೇ ಬಟ್ಟೆಗಳನ್ನು ಬಳಸಿ ನಿಮ್ಮ ಮನೆಯ ಗೋಡೆಗಳನ್ನೂ ಅಲಂಕರಿಸಬಹುದು.

ನಿಮ್ಮ ಮನೆಗೆ ದೀಪಾವಳಿ ಸಂದರ್ಭದಲ್ಲಿ ಮಹಾಲಕ್ಷ್ಮೀ ಬರಮಾಡಿಕೊಳ್ಳಲು ಕೊನೆಗೂ ಸುಸಜ್ಜಿತ ಮನೆ ಸಿದ್ಧವಾಗಿದೆ!

English summary

Tips to revamp your house this Diwali

They say that on the night of Deepavali, goddess Lakshmi makes her way to all the clean houses to shower wealth and prosperity. So home should be clean. So, pick up the broom and get started to clear the way for her.
X
Desktop Bottom Promotion