For Quick Alerts
ALLOW NOTIFICATIONS  
For Daily Alerts

ಗಾಂಧಿ ಜಯಂತಿ 2021: ದೇಶಕ್ಕಾಗಿ ಬಾಪೂಜಿ ಮಾಡಿದ ಹೋರಾಟ ಎಂದಿಗೂ ಮರೆಯುವ ಹಾಗಿಲ್ಲ..

|

ಅಕ್ಟೋಬರ್ 2ರಂದು ಭಾರತದ ರಾಷ್ಟ್ರಪಿತ ಬಾಪೂಜಿ ಮಹಾತ್ಮ ಗಾಂಧಿ ಅವರ ಜನ್ಮದಿನ. ಇದನ್ನ ನಾವೆಲ್ಲಾ ಗಾಂಧಿ ಜಯಂತಿ ಎಂದು ಆಚರಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಭಾರತದ ಸ್ವಾತಂತ್ರ್ಯಕ್ಕೆ ಬಹುಮುಖ್ಯ ಕಾರಣವಾಗಿರುವ ಗಾಂಧೀಜಿಯವರ ಹುಟ್ಟುಹಬ್ಬವನ್ನ ಭಾರತ ರಾಷ್ಟ್ರಿಯ ಹಬ್ಬವಾಗಿವಾಗಿ ಆಚರಿಸಲಾಗುವುದು. ಇವರ ಕೊಡುಗೆ ನಮ್ಮ ದೇಶಕ್ಕೆ ಅಗಾಧವಾದುದು. ಆದ್ದರಿಂದ ಇಲ್ಲಿ ನಾವಿಂದು ಗಾಂಧಿಜಿಯವರ ಸಂಪೂರ್ಣ ಜೀವನ, ಅವರ ಆದರ್ಶಗಳು ಸೇರಿದಂತೆ ಇತರ ಅಂಶಗಳ ಕುರಿತು ಮಾಹಿತಿ ನೀಡಿದ್ದೇವೆ.

ಮೋಹನದಾಸ್ ಕರಮ ಚಂದ್ ಗಾಂಧಿಯಾಗಿ ಜನನ:

ಮೋಹನದಾಸ್ ಕರಮ ಚಂದ್ ಗಾಂಧಿಯಾಗಿ ಜನನ:

ಮಹಾತ್ಮ ಗಾಂಧೀಜಿಯವರು ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಕರಮಚಂದ್ ಗಾಂಧಿ ಹಾಗೂ ಪುತಲೀಬಾಯಿಯ ದಂಪತಿಗಳ ಪುತ್ರನಾಗಿ ಜನಿಸಿದರು. ಇವರ ಪೂರ್ಣ ಹೆಸರು ಮೋಹನದಾಸ್ ಕರಮ ಚಂದ್ ಗಾಂಧಿ. ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯ್ತು. ಇವರಿಬ್ಬರಿಗೆ ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ ಎಂಬ ನಾಲ್ಕು ಮಕ್ಕಳ ಜನಿಸಿದರು. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.

ಅವಮಾನದಿಂದ ಹುಟ್ಟಿಕೊಂಡ ಮೊದಲ ಚಳುವಳಿ:

ಅವಮಾನದಿಂದ ಹುಟ್ಟಿಕೊಂಡ ಮೊದಲ ಚಳುವಳಿ:

ಮುಂಬಯಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ವಿಫಲರಾದ ಮಹಾತ್ಮಗಾಂಧಿ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. 1893ರಲ್ಲಿ ಪ್ರಿಟೋರಿಯಾಕ್ಕೆ ಗಾಂಧೀಜಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕರಿಯನೆಂಬ ಕಾರಣಕ್ಕೆ ಗಾಂಧೀಜಿಯನ್ನು ಹೊರಹಾಕಲಾಯ್ತು. ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿಯ ಚಳುವಳಿ ಅಲ್ಲಿಂದ ಆರಂಭವಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ವಿರುದ್ಧ ಬಿಳಿಯರು ಮಾಡುತ್ತಿರುವ ವರ್ಣಭೇದ ನೀತಿ ವಿರುದ್ಧ ಹೋರಾಡಿ ಜಯಗಳಿಸಿದರು.

ಭಾರತಕ್ಕೆ ಆಗಮನ:

ಭಾರತಕ್ಕೆ ಆಗಮನ:

ಸುದೀರ್ಘ ವರ್ಷಗಳ ನಂತರ ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳಿದರು. ಅದೇ ವರ್ಷ ಅಹಮದಾಬಾದಿನಲ್ಲಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸಿದ ಗಾಂಧಿ, ಬ್ರಿಟೀಷರ ಹಿಡಿತದಲ್ಲಿ ಭಾರತವನ್ನು ನೋಡಿ ಮರುಗಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗದೆ ಬೇರೆ ದಾರಿ ಇಲ್ಲ ಎಂದು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸಂಪೂರ್ಣ ಹೋರಾಟಕ್ಕೆ ಇಳಿದರು.

ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ:

ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ:

1920-22ರಲ್ಲಿ ಅಸಹಕಾರ ಚಳುವಳಿಯ ಮೂಲಕ ಆರಂಭವಾದ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ, ಮುಂದೆ ಸ್ವಾತಂತ್ರ್ಯ ಸಿಗುವವರೆಗೂ, ಅಂದರೆ 1947ರಂದು ಬ್ರಿಟಿಷರು ಭಾರತ ಬಿಟ್ಟು ಹೋಗುವವರೆಗೂ ಮುಂದುವರೆದಿತ್ತು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ವೇಗ ಪಡೆಯಿತು. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಬಂದು ಉಪ್ಪನ್ನು ಉತ್ಪಾದಿಸಿದರು.ಇದೇ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ರಾಗಿದ್ದರು. 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ನಡೆಸಿದರು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಸೆರೆಮನೆಯಲ್ಲಿಟ್ಟರು.

ಕೊನೆಗೂ 1947 ಅಗಸ್ಟ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು. 1948 ಜನೆವರಿ 30 ರಂದು ಶುಕ್ರವಾರ ಪ್ರಾಥನಾ ಸಭೆಗೆ ಹೋಗುತ್ತಿದ್ದ ವೇಳೆ ನಾಥೂ ರಾಂ ವಿನಾಯಕ ಗೋಡ್ಸೆ ಎಂಬಾತ ಗಾಂಧೀಜಿ ಎದೆಗೆ ಗುಂಡು ಹಾರಿಸಿದ. ಹೇರಾಮ್ ಎನ್ನುತ್ತಾ ಗಾಂಧೀಜಿ ಪ್ರಾಣಬಿಟ್ಟರು.

ಗಾಂಧೀಜಿ ತತ್ವ- ಸಿದ್ದಾಂತಗಳು:

ಮಹಾತ್ಮಗಾಂಧಿ ಅವರ ಪ್ರಮುಖ ತತ್ವ ಸಿದ್ದಾಂತವೆಂದರೆ ಅದು ಸತ್ಯ ಮತ್ತು ಅಹಿಂಸೆ. ಗಾಂಧಿ ತಮ್ಮ ಆತ್ಮಚರಿತ್ರೆ "ನನ್ನ ಸತ್ಯಾನ್ವೇಷಣೆ" ("ಮೈ ಎಕ್ಸ್ಪೆರಿಮೆಂಟ್ಸ್ ವಿಥ್ ಟ್ರುಥ್") ನಲ್ಲೂ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಗಾಂಧೀಜಿಯ ಉಲ್ಲೇಖ ಹಾಗೂ ನುಡಿಮುತ್ತುಗಳು:

 Mahatma Gandhi Biography in Kannada: Know Gandhiji Life History, Quotes, Slogans, Family Tree Details in Kannada

''ನನ್ನ ಅನುಮತಿಯಿಲ್ಲದೇ ಯಾರೂ ನನ್ನನ್ನು ನೋಯಿಸಲಾರರು''- ಮಹಾತ್ಮಗಾಂಧಿ

''ನೀವು ಏನು ಯೋಚಿಸುತ್ತಿರಿ, ಏನು ಮಾಡುತ್ತೀರಿ, ಏನು ಮಾತಾಡುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧರಿತವಾಗುತ್ತದೆ''- ಮಹಾತ್ಮಗಾಂಧಿ

''ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ, ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ''- ಮಹಾತ್ಮಗಾಂಧಿ

''ಸಾವಿರ ಮಾತುಗಳಿಗಿಂತ ಒಂದು ಎಳ್ಳಷ್ಟು ಕೆಲಸಕ್ಕೆ ಬೆಲೆ ಜಾಸ್ತಿಯಿದೆ''- ಮಹಾತ್ಮಗಾಂಧಿ

''ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು''- ಮಹಾತ್ಮಗಾಂಧಿ

''ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ''- ಮಹಾತ್ಮಗಾಂಧಿ
''ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು''- ಮಹಾತ್ಮಗಾಂಧಿ
''ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಮತ್ತೊಂದಿಲ್ಲ''- ಮಹಾತ್ಮಗಾಂಧಿ
''ಪ್ರೀತಿ ಜಗತ್ತಿನ ಪ್ರಬಲವಾದ ಶಕ್ತಿ''- ಮಹಾತ್ಮಗಾಂಧಿ
''ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ''- ಮಹಾತ್ಮಗಾಂಧಿ

English summary

Mahatma Gandhi Biography in Kannada: Know Gandhiji Life History, Quotes, Slogans, Family Tree Details in Kannada

Here we talking about Mahatma Gandhi Biography in Kannada: Know Gandhiji Life History, Quotes, Slogans, Family Tree Details in Kannada, read on
Story first published: Friday, October 1, 2021, 11:33 [IST]
X
Desktop Bottom Promotion