For Quick Alerts
ALLOW NOTIFICATIONS  
For Daily Alerts

Basava Jayanti 2021: ಭಕ್ತಿ ಭಂಡಾರಿಯ ಸ್ಪೂರ್ತಿದಾಯಕ ನುಡಿಮುತ್ತುಗಳು ಇಲ್ಲಿವೆ

|

ಏಪ್ರಿಲ್ 14ರಂದು ಭಕ್ತ ಭಂಡಾರಿ ಬಸವಣ್ಣನ ಜನ್ಮ ದಿನ ಅಂದರೆ ಬಸವ ಜಯಂತಿ. ಕಾಯಕವೇ ಕೈಲಾಸ ಎಂದು ಇಡೀ ಲೋಕಕ್ಕೆ ಸಾರಿದ ಮಹಾನ್ ಸಮಾಜಸುಧಾರಕ ನಮ್ಮ ಬಸವಣ್ಣ. ತಮ್ಮ ವಚನಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸಿ, ಲೋಕಕಲ್ಯಾಣಾರ್ಥವಾಗಿ ಅನುಭವ ಮಂಟಪವನ್ನ ನಿರ್ಮಿಸಿ ಎಲ್ಲರಿಗೂ ಮಾದರಿಯಾದ 12ನೇ ಶತಮಾನದ ಕವಿ ಇವರು. ಇಂತಹ ಮಹಾನ್ ವ್ಯಕ್ತಿಯ ಜಯಂತಿಯ ಸಲುವಾಗಿ ಅವರ ಕೆಲವೊಂದು ನುಡಿಮುತ್ತುಗಳನ್ನು ನಿಮಗಾಗಿ ನೀಡಿದ್ದೇವೆ.

ಬಸವಣ್ಣನವರ ಆಯ್ದ ಅತ್ಯುತ್ತಮ ನುಡಿಮುತ್ತು ಹಾಗೂ ವಚನಗಳು ಇಲ್ಲಿವೆ:

Inspirational Quotes by Basava (Indian Hindu Philosopher)

1. ಕಾಯಕವೇ ಕೈಲಾಸ, ಕರ್ತವ್ಯವೇ ಪರಮೋದ್ದೇಶ

2. ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು

ಹಣ ದೊಡ್ಡದಲ್ಲ, ಗುಣ ದೊಡ್ಡದು

3. ಲೋಕದ ಡೊಂಕ ನೀವೇಕೆ ತಿದ್ದುವಿರಿ

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ

ನಮ್ಮ ಕೂಡಲಸಂಗಮದೇವಾ

4. ಕಳಬೇಡ ಕೊಲಬೇಡ

ಹುಸಿಯನುಡಿಯಲು ಬೇಡ

ಮುನಿಯಬೇಡ

ಅನ್ಯರಿಗೆ ಅಸಹ್ಯ ಪಡಬೇಡ

ತನ್ನ ಬಣ್ಣಿಸಬೇಡ

ಇದಿರ ಹಳಿಯಲುಬೇಡ

ಇದೇ ಅಂತರಂಗ ಶುದ್ಧಿ

ಇದೇ ಬಹಿರಂಗ ಶುದ್ಧಿ

ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ

5. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ

ಕೂಡಲಸಂಗಮದೇವನ ಶರಣರ ಅನುಭಾವದಿಂದ

ಎನ್ನ ಭವದ ಕೇಡು ನೋಡಯ್ಯಾ

6. ಇವನಾರವ, ಇವನಾರವ

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಯ್ಯ ನಿಮ್ಮ

ಮನೆಯ ಮಗನೆಂದೆನಿಸಯ್ಯ

7. ವೇದವನ್ನು ಓದಿದವರು ದೊಡ್ಡವರಾಗುವುದಿಲ್ಲ,

ಜನರ ವೇದನೆಯನ್ನು ಅರತವರು ದೊಡ್ಡವರಾಗುತ್ತಾರೆ

8. ದಯವಿಲ್ಲದ ಧರ್ಮವಾವುದಯ್ಯಾ?

ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ

ದಯವೇ ಧರ್ಮದ ಮೂಲವಯ್ಯಾ

ಕೂಡಲಸಂಗಯ್ಯನಂತಲ್ಲದೊಲ್ಲಯ್ಯಾ

English summary

Basava Jayanti 2021: Inspirational Quotes by Basava (Indian Hindu Philosopher)

Here we talking about Inspirational Quotes by Basava (Indian Hindu Philosopher), read on
X
Desktop Bottom Promotion