For Quick Alerts
ALLOW NOTIFICATIONS  
For Daily Alerts

ಹಳೆಯ ಸೀರೆಗಳಿಂದ ಮನೆಗೆ ನೀಡಬಹುದು ಹೊಸ ಲುಕ್ ! ಹೇಗೆ ಇಲ್ಲಿದೆ ನೋಡಿ

|

ನಾವು ಇಷ್ಟಪಟ್ಟು ಕೊಂಡ, ಬೆಲೆ ಬಾಳುವ ಸೀರೆಗಳು ಸಣ್ಣ ಅಚಾತುರ್ಯದಿಂದ ಹಾಳಾದರೆ, ಅದರಿಂದ ಆಗುವ ನೋವು ಅಷ್ಟಷ್ಟಲ್ಲ. ಅದನ್ನು ಉಟ್ಟುಕೊಳ್ಳಲು ಆಗದೇ, ಎಸೆಯಲು ಮನಸಾಗದೇ, ಹಾಗೆಯೇ ವಾರ್ಡೋಬ್ನಲ್ಲಿ ಇಟ್ಟಿರುತ್ತೇವೆ, ಕೊಂಡು ಹಳೆಯದಾದ ಸೀರೆಗಳ ಕಥೆಯೂ ಇದೇ.. ಆದರೆ, ನೀವು ಮನಸ್ಸು ಮಾಡಿದರೆ, ಆ ಹಳೆಯ ಸೀರೆಗಳಿಂದ ನಿಮ್ಮ ಮನೆಯ ನೋಟಕ್ಕೆ ಹೊಸ ಸ್ಪರ್ಶ ನೀಡಬಹುದು.

ಹೌದು, ಹಳೆಯ ಸೀರೆಗಳನ್ನು ಬಳಸಿ, ಮನೆಯ ಅಲಂಕಾರವನ್ನು ಹೆಚ್ಚಿಸಬಹುದು. ಅಂತಹ ಐಡಿಯಾಗಳನ್ನು ನಾವಿಂದು ನೀಡಲಿದ್ದೇವೆ.

ಹಳೆಯ ಸೀರೆಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ಮನೆಯ ನೋಟವನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕುಶನ್ ಕವರ್ಗಳು:

ಕುಶನ್ ಕವರ್ಗಳು:

ನಿಮ್ಮ ಬೆಲೆಬಾಳುವ ರೇಷ್ಮೆ ಅಥವಾ ಕೈಮಗ್ಗದ ಸೀರೆ ಎಲ್ಲಿಂದಲೋ ಹರಿದು ಹೋದರೆ, ಅದನ್ನು ಯಾವುದೇ ಟೈಲರ್ ನಿಂದ ಸರಿಪಡಿಸಲಾಗದಿದ್ದರೆ, ನೀವು ಅದನ್ನು ಮನೆಯ ಸೋಫಾ, ಕುರ್ಚಿಗೆ ಕುಶನ್ ಮಾಡಲು ಬಳಸಬಹುದು. ವರ್ಣರಂಜಿತ ಸೀರೆಗಳಿಂದ ಮಾಡಿದ ಕುಶನ್ಗಳು ನಿಮ್ಮ ರೂಮಿನ ನೋಟವನ್ನು ಬದಲಾಯಿಸುತ್ತವೆ. ರೇಷ್ಮೆ ಸೀರೆಯ ಕುಶನ್ಗಳ ಕೆಳಗೆ ಹತ್ತಿ ಬಟ್ಟೆಯನ್ನು ಇಡಬೇಕು, ಇಲ್ಲದಿದ್ದರೆ ಅದು ಬೇಗನೆ ಹಾಳಾಗುತ್ತದೆ.

ಪರದೆಗಳು:

ಪರದೆಗಳು:

ಪರದೆಗಳಿಂದ ಬಾಲ್ಕನಿಯನ್ನು ಅಲಂಕರಿಸುವುದಲ್ಲದೆ, ಡ್ರಾಯಿಂಗ್ ರೂಮ್ನಂತೆ ಅಡುಗೆಮನೆಗೆ ಕರ್ಟನ್ಗಳನ್ನು ಹಾಕಲು ನೀವು ಯೋಚಿಸುತ್ತಿದ್ದರೆ, ಹಳೆಯ ಸೀರೆಗಳು ನಿಮ್ಮ ನೆರವಿಗೆ ಬರುವುದು. ಪರದೆಗಳಿಗಾಗಿ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಶಾಪಿಂಗ್ ಮಾಡುವ ಬದಲು ಹಳೆಯ ಸೀರೆಯನ್ನು ಬಳಸಬಹುದು. ಶಿಫಾನ್, ಜಾರ್ಜೆಟ್ ಮತ್ತು ರೇಷ್ಮೆ ಸೀರೆಗಳ ಪರದೆಗಳು ತುಂಬಾ ಸುಂದರವಾಗಿ ಕಾಣುತ್ತವೆ.

ಫ್ರೇಮ್ ವರ್ಕ್:

ಫ್ರೇಮ್ ವರ್ಕ್:

ಮನೆಯ ಗೋಡೆಗಳನ್ನು ಅಲಂಕರಿಸಲು ಹಳೆಯ ಸೀರೆಯನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಬನಾರಸಿ ಅಥವಾ ರೇಷ್ಮೆ ಸೀರೆಯ ಪಲ್ಲು ವನ್ನು ಫ್ರೇಮ್ ಮಾಡಿ ನೇತು ಹಾಕಬಹುದು ಅಥವಾ ಫೋಟೋ ಇದ್ದರೆ ಅದರ ಅಂಚುಗಳನ್ನು ಸೀರೆಯ ಬಾರ್ಡರ್ನಿಂದ ಅಲಂಕರಿಸಬಹುದು.

ಡೋರ್ ಮ್ಯಾಟ್:

ಡೋರ್ ಮ್ಯಾಟ್:

ಹಳೆಯ ಅಥವಾ ಹರಿದ ಸೀರೆಗಳನ್ನು ಬಳಸಿ, ನೀವು ಮನೆಯ ವಿವಿಧ ಸ್ಥಳಗಳ ಬಾಗಿಲುಗಳಿಗೆ ಡೋರ್ ಮ್ಯಾಟ್ ನ್ನು ಸಹ ಮಾಡಬಹುದು. ಕಾಟನ್ ಸೀರೆಗಳ ಮ್ಯಾಟ್ಗಳನ್ನು ಸ್ವಚ್ಛಗೊಳಿಸಲು ಸುಲಭ ಮತ್ತು ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತವೆ, ಇದರಿಂದ ಮನೆ ಕೊಳಕು ಆಗುವುದಿಲ್ಲ.

ಝರಿಯ ಬಳಕೆ:

ಝರಿಯ ಬಳಕೆ:

ನಿಮ್ಮ ಝರಿ ಸೀರೆ ಹಾಳಾಗಿದ್ದರೆ ಅದನ್ನು ಕುಶನ್ ಕವರ್ಗಳು ಮತ್ತು ಟೇಬಲ್ ಕವರ್ಗಳ ನೋಟವನ್ನು ಬದಲಾಯಿಸಲು ಬಳಸಬಹುದು. ಇದಕ್ಕಾಗಿ ಸೀರೆಯ ಝರಿಯನ್ನು ಕತ್ತರಿಸಿ ಸಾದಾ ಕುಶನ್ ಕವರ್ ಅಥವಾ ಟೇಬಲ್ ಕವರ್ ಜೊತೆ ಜೋಡಿಸಿ ಹೊಲಿಯಿರಿ. ಅಂದಹಾಗೆ, ಈ ಝರಿಯನ್ನು ನಿಮ್ಮ ಯಾವುದೇ ಬಟ್ಟೆಗಳಿಂದ ಸಹ ಪಡೆಯಬಹುದು. ಇದರಿಂದ ನಿಮ್ಮ ದಿಂಬು ಹಾಗೂ ಟೇಬಲ್ ಕವರ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

ಬೆಡ್ ಕವರ್:

ಬೆಡ್ ಕವರ್:

ಬೆಡ್ ಕವರ್ಗಳನ್ನು ಮಾಡಲು ನೀವು ಹಳೆಯ ಸೀರೆಗಳನ್ನು ಸಹ ಬಳಸಬಹುದು. ಇದರಿಂದ ಬೆಡ್ ಕೊಳೆಯಾಗದಂತೆ ನೋಡಿಕೊಳ್ಳುವುದಲ್ಲದೇ, ಸುಂದರವಾಗಿಯೂ ಕಾಣುತ್ತದೆ. ಇದಕ್ಕಾಗಿ ಸೀರೆಯನ್ನು ಮಡಚಿ ಕವರ್ ನಂತೆ ಹೊಲಿಯಬೇಕು. ಕಾಟನ್ ಸೀರೆಯಾದರೆ ಉತ್ತಮ.

Read more about: home ಮನೆ ಅಲಂಕಾರ
English summary

Ways to Use Old Sarees to Change the Look of the House in Kannada

Here we talking about Ways to Use Old Sarees to Change the Look of the House in Kannada, read on
Story first published: Saturday, November 27, 2021, 17:51 [IST]
X
Desktop Bottom Promotion