For Quick Alerts
ALLOW NOTIFICATIONS  
For Daily Alerts

ದಾಂಪತ್ಯ ಜೀವನ ಸುದೀರ್ಘ ಕಾಲ ಸುಖವಾಗಿರಲು ಈ ವಾಸ್ತು ಸಲಹೆ ಪಾಲಿಸಿ

|

ಸುಖೀ ದಾಂಪತ್ಯ ಜೀವನಕ್ಕೆ ನೂರಾರು ಸೂತ್ರಗಳಿವೆ. ಜ್ಯೋತಿಶಾಸ್ತ್ರ ಕೆಲವು ಸಲಹೆಗಳನ್ನು ನೀಡಿದರೆ, ಮನಃಶಾಸ್ತ್ರ, ಹಿರಿಯರು ವಿಭಿನ್ನ ಸಲಹೆಗಳನ್ನು ನೀಡುತ್ತಾರೆ. ಅವರವರ ನಂಬಿಕೆ, ಅನುಕೂಲಗಳಿಗೆ ತಕ್ಕಂತೆ ಸೂತ್ರಗಳನ್ನು ಪಾಲಿಸುತ್ತಾರೆ. ಎಲ್ಲರೂ ಎಲ್ಲವನ್ನೂ ಪಾಲಿಸುವುದು ಕಷ್ಟಸಾಧ್ಯವೇ. ಒಟ್ಟಾರೆ ಯಾರೇ ಆಗಲಿ ಯಾವುದೇ ಕಲಹ, ಭಿನ್ನಾಭಿಪ್ರಾಯ ಇಲ್ಲದೆ ಉತ್ತಮ ಹೊಂದಾಣಿಕೆಯಲ್ಲಿ ದಾಂಪತ್ಯ ಜೀವನ ನಡೆಸಬೇಕು ಎಂಬುದೇ ಆಗಿರುತ್ತದೆ.

ಹಾಗೆಯೇ ವಾಸ್ತುತಜ್ಞರು ಸಹ ಉತ್ತಮ ದಾಂಪತ್ಯ ಜೀವನಕ್ಕೆ ಕೆಲವು ವಾಸ್ತು ಸಲಹೆಗಳನ್ನು ನೀಡಿದ್ದಾರೆ. ನಾವು ನಿಮಗೆ ಹೇಳಲಿರುವ ಕೆಲವು ವಾಸ್ತು ಸೂತ್ರಗಳನ್ನು ಪಾಲಿಸಿದರೆ ನಿಮ್ಮ ದಾಂಪತ್ಯ ಜೀವನ ಸಂತೋಷದಿಂದ ಇರುತ್ತದೆ ಎಂದು ಹೇಳುತ್ತಾರೆ.

ಸುಖವಾಗಿ, ನೆಮ್ಮದಿಯ ದಾಂಪತ್ಯ ಜೀವನಕ್ಕೆ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಿದರೆ ನೀವು ಸುದೀರ್ಘ ಕಾಲ ಸುಖೀ ಸಂಸಾರ ನಡೆಸಬಹುದು. ಈ ಸಿಂಪಲ್‌ ವಾಸ್ತು ಟಿಪ್ಸ್‌ ಪಾಲಿಸಿ ಸಂತೋಷದ ದಾಂಪತ್ಯ ನಿಮ್ಮದಾಗಿಸಿಕೊಳ್ಳಿ:

ಈಶಾನ್ಯದಲ್ಲಿ ಮಲಗಬೇಡಿ

ಈಶಾನ್ಯದಲ್ಲಿ ಮಲಗಬೇಡಿ

ದಂಪತಿಗಳು ಈಶಾನ್ಯ ದಿಕ್ಕಿನಲ್ಲಿ ಆದಷ್ಟು ಈ ದಿಕ್ಕಿನಲ್ಲಿ ಮಲಗುವುದನ್ನು ತಪ್ಪಿಸಿ, ಸಾಧ್ಯವಾದರೆ ಈ ದಿಕ್ಕಿನಲ್ಲಿ ಮಲಗದೇ ಇರುವುದೇ ಒಳ್ಳೆಯದು. ಈ ದಿಕ್ಕಿನಲ್ಲಿ ಮಲಗಿದರೆ ದಂಪತಿಗಳಲ್ಲಿ ಕಲಹ ಮತ್ತು ಜಗಳ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಉತ್ತರ ದಿಕ್ಕು ಬೇಡ

ಉತ್ತರ ದಿಕ್ಕು ಬೇಡ

ಮನೆಯಲ್ಲಿ ಅಡುಗೆ ಮನೆಯೂ ಬಹಳ ಮುಖ್ಯ, ಇದನ್ನು ದೇವರ ಕೋಣೆಯಂತೆ ಪೂಜ್ಯನೀಯವಾಗಿ ನೋಡಬೇಕು. ಎಂದಿಗೂ ಉತ್ತರ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ. ಏಕೆಂದರೆ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡುವುದರಿಂದ ಭಯಂಕರವಾದ ಕಂಪನದಂಥ ಭಾವನೆಗಳು ಉಂಟಾಗುತ್ತದೆ.

ಹೂಗಳ ಗಿಡ ಇಡಿ

ಹೂಗಳ ಗಿಡ ಇಡಿ

ಹೂಗಳ ಸಣ್ಣ ಸಣ್ಣ ಪಾಟ್‌ಗಳನ್ನು ಮನೆಯಲ್ಲಿ ಮತ್ತು ನಿಮ್ಮ ಗಾರ್ಡನ್‌ನಲ್ಲಿ ಇಡಿ. ಮುಳ್ಳಿನ ಗಿಡಗಳು ಬೋನ್ಸಾಯ್‌ ಗಿಡಗಳನ್ನು ಆದಷ್ಟು ತಪ್ಪಿಸಿ. ಇವು ಕೆಲವು ಸಂದರ್ಭಗಳಲ್ಲಿ ನಕಾರಾತ್ಮಕ ಮನಸ್ಥಿತಿಗೆ ದಾರಿಮಾಡಿಕೊಡಬಹುದು.

ಗಾಢ ಬಣ್ಣ ಬೇಡ

ಗಾಢ ಬಣ್ಣ ಬೇಡ

ಮನೆಯ ಯಾವುದೇ ಗೋಡೆಗಳ ಮೇಲೂ ಗಾಢಬಣ್ಣದ ಪೇಯಿಂಟ್‌ಗಳನ್ನು ಹಚ್ಚಬೇಡಿ. ಅದರಲ್ಲೂ ಬೆಡ್‌ರೂಮಿನಲ್ಲಿ ಗಾಢಬಣ್ಣ ಸಲ್ಲದು. ತಿಳಿಹಳದಿ, ಲೈಟ್‌ಪಿಂಕ್‌, ಬಿಳಿ ಬಣ್ಣ ಸೂಕ್ತ.

ಕನ್ನಡಿ ಬೇಡ

ಕನ್ನಡಿ ಬೇಡ

ಮಲಗುವ ಕೋಣೆಯಲ್ಲಿ ಕನ್ನಡಿಗಳನ್ನು ಇಡಬೇಡಿ. ಇದು ವಿರುದ್ಧ ಶಕ್ತಿಗಳನ್ನು ಪ್ರತಿಬಿಂಬಿಸುತ್ತದೆ.

ವಿಭಿನ್ನ ಆಕಾರದ ಮಂಚ ಬೇಡ

ವಿಭಿನ್ನ ಆಕಾರದ ಮಂಚ ಬೇಡ

ಮಲಗುವ ಮಂಚ ಹಾಗೂ ಬೆಡ್‌ಗಳು ವೃತ್ತಾಕಾರ ಹಾಗೂ ಇತರೆ ಯಾವುದೇ ವಿನ್ಯಾಸ ಅಥವಾ ಆಕಾರದ ಮಂಚಗಳು ಬೇಡ. ಅದು ನಿಮ್ಮ ಕಣ್ಣಿಗೆ ಎಷ್ಟೇ ಆಕರ್ಷಕವಾಗಿರಲಿ ಆದರೆ ಇವುಗಳನ್ನು ಆಯ್ಕೆ ಮಾಡಬೇಡಿ.

ಗೊಂದಲಮಯ ವಸ್ತು ಬೇಡ

ಗೊಂದಲಮಯ ವಸ್ತು ಬೇಡ

ಮನೆಯಲ್ಲಿ ವಸ್ತುಗಳು ಯಾವಾಗಲೂ ಗೊಂದಲ ಮುಕ್ತವಾಗಿರಲಿ. ಧೂಳು, ಕಸ ಇಲ್ಲದಂತೆ ನೋಡಿಕೊಳ್ಳಿ. ಗಾಳಿಯಲ್ಲಿರುವ ಧೂಳನ್ನು ಕಡಿಮೆ ಮಾಡಲು ಧೂಳನ್ನು ಕಡಿಮೆ ಮಾಡುವ, ಸಕಾರಾತ್ಮಕ ಶಕ್ತಿ ತುಂಬುವ ಗಿಡಗಳನ್ನು ಮನೆಯಲ್ಲಿಡಿ.

ಮನಸ್ಸಿಗೆ ಮುದ ನೀಡುವ ಫೋಟೊ

ಮನಸ್ಸಿಗೆ ಮುದ ನೀಡುವ ಫೋಟೊ

ಕಪ್ಪು ಮತ್ತು ಬಿಳುಪಿನ ಫೋಟೋ ಫ್ರೇಮ್‌ ಅಥವಾ ಫೋಟೊಗಳನ್ನು ಇಡಬೇಡಿ. ಬದಲಾಗಿ ಬಣ್ಣ-ಬಣ್ಣದ ಮನಸ್ಸಿಗೆ ಮುದ ಎನಿಸುವ, ಸಂತೋಷದ ನೆನಪುಗಳುಳ್ಳ ಫೋಟೋಗಳನ್ನು ಇಡಿ.

ಲಿವಿಂಗ್‌ ರೂಮ್‌ ಹೀಗಿರಲಿ

ಲಿವಿಂಗ್‌ ರೂಮ್‌ ಹೀಗಿರಲಿ

ನಿಮ್ಮ ಲಿವಿಂಗ್‌ ರೂಮನ್ನು ಆದಷ್ಟು ಲೈವ್ಲಿ ಆಗಿ ಇಡಿ. ಮನೆಯ ಸ್ಕ್ರೀನ್‌, ಪಾಟ್‌ಗಳು, ಇತರೆ ಸ್ಥಳಗಳಲ್ಲಿ ಲೈಟಿಂಗ್ಸ್‌ನ ಅಲಂಕಾರ ಮಾಡಿ. ನಿಜವಾದ ಹೂಗಳ ಬುಟ್ಟಿಯನ್ನು ಇಡಿ. ವಾರಕ್ಕೊಮ್ಮೆ ಹೂಗಳನ್ನು ಬದಲಾಯಿಸಿ.

English summary

Vastu tips for a successful long term marriage in Kannada

Here we are discussing about Vastu tips for a successful long term marriage in Kannada. Read more
X
Desktop Bottom Promotion