For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಗೆ ತಕ್ಕಂತೆ ಮನೆಯಲ್ಲಿ ಯಾವ ಗಿಡ ನೆಟ್ಟರೆ ಒಳಿತು?

|

ರಾಶಿಚಕ್ರಗಳು ಮತ್ತು ಸಸ್ಯಗಳ ನಡುವೆ ಸಂಪರ್ಕವಿದೆ ಎಂಬುದು ವೈದಿಕ ವ್ಯವಸ್ಥೆಯ ಬಲವಾಸ ನಂಬಿಕೆ. ಪ್ರತಿಯೊಂದು ರಾಶಿಯು ನಿರ್ದಿಷ್ಟ ಸಸ್ಯಗಳಿಂದ ಪ್ರಯೋಜನ ಪಡೆಯುವುದು, ಅದು ಸಮಸ್ಯೆ ಗುಣಪಡಿಸುವ ವಿಷಯದಲ್ಲಾಗಲೀ, ಜೀವನವನ್ನು ಸಮತೋಲನದಲ್ಲಿಡಲು ವಿಚಾರದಲ್ಲಾಗಲೀ.. ಇವುಗಳನ್ನು ರಾಶಿಚಕ್ರ ಸಸ್ಯಗಳು ಎಂದು ಕರೆಯಲಾಗುತ್ತದೆ.

ಇವು ಒಂದು ರೀತಿಯ ಅದೃಷ್ಟದ ಹರಳುಗಳಂತೆ, ಆ ರಾಶಿ ಚಕ್ರದಲ್ಲಿ ಜನಿಸಿದವರಿಗೆ ಅದೃಷ್ಟ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಬನ್ನಿ, ನಿಮ್ಮ ರಾಶಿಗೆ ತಕ್ಕಂತೆ ಯಾವ ಗಿಡಗಳನ್ನು ಮನೆಯಲ್ಲಿ ಇಡಬೇಕು, ನೆಡಬೇಕು ಎಂಬುದನ್ನು ನೋಡಿಕೊಂಡು ಬರೋಣ.

ನಿಮ್ಮ ರಾಶಿಚಕ್ರ ಚಿಹ್ನೆಗೆ ಸೂಕ್ತವಾದ ಮನೆಯಲ್ಲಿ ಇಡಬೇಕಾದ ಗಿಡಗಳ ಪಟ್ಟಿ ಇಲ್ಲಿದೆ:

ಮೇಷ ರಾಶಿ:

ಮೇಷ ರಾಶಿ:

ವ್ಯಕ್ತಿತ್ವ ಗುಣಲಕ್ಷಣ: ಇವರು ನೇರ, ಪ್ರೇರಣಾತ್ಮಕ ಮತ್ತು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳು.

ಸಸ್ಯ ಸಲಹೆ: ಪಾಪಾಸುಕಳ್ಳಿ ಮತ್ತು ಹಾವಿನ ಸಸ್ಯಗಳು ಈ ರಾಶಿಚಕ್ರದ ಜನರಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತವೆ. ಪಾಪಾಸುಕಳ್ಳಿಯು ಗಟ್ಟಿಯಾದ ಹೊರಭಾಗವನ್ನು ಹೊಂದಿದ್ದು, ದೈರ್ಯಶಾಲಿ ಹಾಗೂ ಸದೃಢ ಮೇಷ ರಾಶಿಯ ವ್ಯಕ್ತಿತ್ವದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅದೇ ರೀತಿ, ಹಾವಿನ ಸಸ್ಯದ ತೀಕ್ಷ್ಣವಾದ ಲಕ್ಷಣಗಳು ಮೇಷ ರಾಶಿಯ ಸ್ಪಷ್ಟ ಮನೋಭಾವವನ್ನು ಹೋಲುತ್ತವೆ.

ವೃಷಭ ರಾಶಿ:

ವೃಷಭ ರಾಶಿ:

ವ್ಯಕ್ತಿತ್ವ ಗುಣಲಕ್ಷಣ:, ಇವರು ಪ್ರಾಯೋಗಿಕ, ಕಠಿಣ ಪರಿಶ್ರಮ ಮತ್ತು ಹಠಮಾರಿಗಳಾಗಿದ್ದು, ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಶತಪ್ರಯತ್ನ ಮಾಡುತ್ತಾರೆ , ಜೊತೆಗೆ ತಾಳ್ಮೆ, ಕರುಣೆ ಕೂಡ ಹೆಚ್ಚು.

ಸಸ್ಯ ಸಲಹೆ: ಅಂಜೂರವು ಈ ರಾಶಿಚಕ್ರದವರಿಗೆ ಸೂಕ್ತ. ಈ ಸಸ್ಯಗಳು ಒಳಾಂಗಣ ವಿನ್ಯಾಸಕಾರರಲ್ಲಿ ಜನಪ್ರಿಯವಾಗಿವೆ.

ಮಿಥುನ ರಾಶಿ:

ಮಿಥುನ ರಾಶಿ:

ವ್ಯಕ್ತಿತ್ವ ಲಕ್ಷಣ: ಮಿಥುನ ರಾಶಿಯವರು ಹೆಚ್ಚು ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೊತೆಗೆ ಧನಾತ್ಮಕ ಮತ್ತು ಉತ್ಸಾಹದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದು, ಬದಲಾವಣೆಯ ಮೇಲೆ ಅಭಿವೃದ್ಧಿ ಹೊಂದುತ್ತಾರೆ.

ಸಸ್ಯ ಸಲಹೆ: ಪಾಪಾಸು ಕಳ್ಳಿ, ಫಿಲೋಡೆಂಡ್ರಾನ್ ಮತ್ತು ಆಂಥೂರಿಯಂ ಸಸ್ಯಗಳು ಈ ಚಿಹ್ನೆಗೆ ಸರಿಹೊಂದುತ್ತವೆ. ಈ ಸಸ್ಯಗಳು ಸಾಕಷ್ಟು ಸ್ಥಿತಿಸ್ಥಾಪಕತ್ವವನ್ನು ಹೊಂದಿದ್ದು, ವಿವಿಧ ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ.

ಕರ್ಕ ರಾಶಿ:

ಕರ್ಕ ರಾಶಿ:

ವ್ಯಕ್ತಿತ್ವ ಲಕ್ಷಣ: ಕರ್ಕಾಟಕ ರಾಶಿಯವರು ಪ್ರೀತಿಯ, ಮೃದುವಾದ, ಭಾವನಾತ್ಮಕ ಮತ್ತು ಸ್ವಭಾವತಃ ಕುಟುಂಬ-ಆಧಾರಿತರು.

ಸಸ್ಯ ಸಲಹೆ: ಮನಿ ಪ್ಲಾಂಟ್ ಇವರಿಗೆ ಸೂಕ್ತ ಆಯ್ಕೆಯಾಗಿದ್ದು, ಅದರ ಆಳವಾದ ಬೇರುಗಳು ಮತ್ತು ಹೇರಳವಾದ ಧನಾತ್ಮಕ ಶಕ್ತಿಯ ಕಾರಣದಿಂದ ಈ ರಾಶಿಗೆ ಹೊಂದಿಕೆಯಾಗುತ್ತದೆ.

ಸಿಂಹ ರಾಶಿ:

ಸಿಂಹ ರಾಶಿ:

ವ್ಯಕ್ತಿತ್ವ ಲಕ್ಷಣ: ಈ ಸಿಂಹ ರಾಶಿಯವರು ನಾಟಕೀಯ, ಸೃಜನಶೀಲರು ಮತ್ತು ಎಲ್ಲರ ಗಮನ ಸೆಳೆಯಲು ಏನು ಬೇಕಾದರೂ ಮಾಡುತ್ತಾರೆ.

ಸಸ್ಯ ಸಲಹೆ: ಇವರಿಗೆ ಬ್ರೊಮೆಲಿಯಾಡ್ ಗಿಡ ಸೂಕ್ತವಾಗಿದ್ದು, ಸಿಂಹ ರಾಶಿಯವರ ವ್ಯಕ್ತಿತ್ವಕ್ಕೆ ಸರಿಹೊಂದುತ್ತದೆ. ಈ ಉಷ್ಣವಲಯದ ಸಸ್ಯಗಳು ಬೆಚ್ಚನೆಯ ವಾತಾವರಣದಲ್ಲಿ ಬೆಳೆಯುತ್ತವೆ.

ಕನ್ಯಾರಾಶಿ:

ಕನ್ಯಾರಾಶಿ:

ವ್ಯಕ್ತಿತ್ವ ಲಕ್ಷಣ: ಪ್ರಾಯೋಗಿಕತೆ ಮತ್ತು ಯಾವುದಾದರೂ ವಿಚಾರಕ್ಕೆ ನೀಡುವ ತೀಕ್ಷ್ಣವಾದ ಗಮನವು ಕನ್ಯಾರಾಶಿಯ ಉತ್ತಮ ಲಕ್ಷಣ.

ಸಸ್ಯ ಸಲಹೆ: ಕನ್ಯಾ ರಾಶಿಯವರಿಗೆ ಅಲೋವೆರಾ ಗಿಡವು ಪರಿಪೂರ್ಣ ಆಯ್ಕೆಯಾಗಿದ್ದು, ಇದರ ಆರೈಕೆ ಮಾಡುವುದು ಸುಲಭವಾಗಿರುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆ.

ತುಲಾ ರಾಶಿ:

ತುಲಾ ರಾಶಿ:

ವ್ಯಕ್ತಿತ್ವ ಲಕ್ಷಣ: ಕಲೆ ಮತ್ತು ಸುಂದರವಾದ ವಸ್ತುಗಳಿಗೆ ಆಕರ್ಷಿತರಾಗುತ್ತಾರೆ. ಜೊತೆಗೆ ಅತ್ಯಾಧುನಿಕ ಚಟುವಟಿಕೆಗಳನ್ನು ಆನಂದಿಸುತ್ತಾರೆ.

ಸಸ್ಯ ಸಲಹೆ: ಈ ರಾಶಿಯವರಿಗೆ ಲಿಲಿ ಗಿಡ ಸೂಕ್ತ. ಇದು ಅವರ ಕಲಾತ್ಮಕ ಸ್ವಭಾವದೊಂದಿಗೆ ಅಸಾಧಾರಣವಾಗಿ ಹೊಂದಿಕೆಯಾಗುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ವ್ಯಕ್ತಿತ್ವದ ಗುಣಲಕ್ಷಣ: ಈ ರಾಶಿಯವರು ಸುಲಭವಾಗಿ ಹೊಂದಿಕೊಳ್ಳಬಲ್ಲರು, ಜತೆಗೆ ಬಹುಮುಖ ಮತ್ತು ಸ್ಥಿತಿಸ್ಥಾಪಕರಾಗಿರುತ್ತಾರೆ.

ಸಸ್ಯ ಸಲಹೆ: ಹಾವಿನ ಸಸ್ಯಗಳು ಈ ರಾಶಿಚಕ್ರ ಚಿಹ್ನೆಗೆ ಪರಿಪೂರ್ಣವಾಗಿದೆ. ಇವುಗಳು ಗಟ್ಟಿಯಾದ ಮತ್ತು ಹೆಚ್ಚು ಸ್ಥಿತಿಸ್ಥಾಪಕ ರಾಶಿಚಕ್ರ ಸಸ್ಯಗಳಲ್ಲಿ ಸೇರಿದ್ದು ಎಂತಹ ಹವಾಮಾನದಲ್ಲಾದರೂ ಬೆಳೆಯುತ್ತವೆ.

ಧನು ರಾಶಿ:

ಧನು ರಾಶಿ:

ವ್ಯಕ್ತಿತ್ವ ಲಕ್ಷಣ: ಇವರು ಧನಾತ್ಮಕ ಮತ್ತು ಆಶಾವಾದಿ ಜನರು, ಸ್ವಭಾವತಃ ಸಾಹಸಿಗರು ಮತ್ತು ಸ್ವತಂತ್ರರಾಗಿದ್ದಾರೆ.

ಸಸ್ಯ ಸಲಹೆ: ವಿಲಕ್ಷಣ ಮತ್ತು ವಿಶಿಷ್ಟವಾದ ಅಲೋಕಾಸಿಯಾ ಸಸ್ಯವು ಧನು ರಾಶಿಯವರಿಗೆ ಸೂಕ್ತವಾಗಿದೆ.

ಮಕರ ರಾಶಿ:

ಮಕರ ರಾಶಿ:

ವ್ಯಕ್ತಿತ್ವ ಗುಣಲಕ್ಷಣ: ಇವರು ಶಿಸ್ತು ಮತ್ತು ಜವಾಬ್ದಾರಿಗೆ ಹೆಸರು, ಬಹಳ ಬುದ್ಧಿವಂತರು ಮತ್ತು ತಮ್ಮ ಜೀವನದ ವಿವಿಧ ಅಂಶಗಳ ಮೇಲೆ ನಿಯಂತ್ರಣವನ್ನು ಹೊಂದಲು ಇಷ್ಟಪಡುತ್ತಾರೆ.

ಸಸ್ಯ ಸಲಹೆ: ಈ ಎಲ್ಲಾ ಗುಣಲಕ್ಷಣಗಳು ಬೋನ್ಸೈಸ್ಗೆ ಗಿಡಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ.

ಕುಂಭ ರಾಶಿ:

ಕುಂಭ ರಾಶಿ:

ವ್ಯಕ್ತಿತ್ವದ ಗುಣಲಕ್ಷಣ: ಕುಂಭ ರಾಶಿಯವರು ತಮ್ಮ ಜೀವನದಲ್ಲಿ ನಿರ್ಬಂಧಗಳನ್ನು ಇಷ್ಟಪಡುವುದಿಲ್ಲ. ಅವರು ಸ್ವತಂತ್ರರಾಗಿರಲು ಇಷ್ಟಪಡುತ್ತಾರೆ.

ಸಸ್ಯ ಸಲಹೆ: ಪೊಥೋಸ್ ಮತ್ತು ಇಂಗ್ಲಿಷ್ ಐವಿ ಈ ರಾಶಿಯವರಿಗೆ ಸೂಕ್ತವಾದ ಸಸ್ಯ ಆಯ್ಕೆಯಾಗಿದೆ.

ಮೀನ ರಾಶಿ:

ಮೀನ ರಾಶಿ:

ವ್ಯಕ್ತಿತ್ವದ ಗುಣಲಕ್ಷಣ: ಇವರು ಇತರರ ಕಡೆಗೆ ಸಹಾನುಭೂತಿ ಹೊಂದಿರುತ್ತಾರೆ.

ಸಸ್ಯ ಸಲಹೆ: ಅಲೋವೆರಾ ಮತ್ತು ಜಾಂಜಿಬಾರ್ ಸಸ್ಯವು ಈ ರಾಶಿಗೆ ಸೂಕ್ತವಾದ ಸಸ್ಯವಾಗಿದೆ.‌

Read more about: home garden ಮನೆ
English summary

The Perfect House Plant According to Your Zodiac Sign in Kannada

Here we talking about The Perfect House Plant According to Your Zodiac Sign in Kannada, read on
X
Desktop Bottom Promotion