For Quick Alerts
ALLOW NOTIFICATIONS  
For Daily Alerts

ಮನುಷ್ಯ ತಿನ್ನುವ ಯಾವ ಆಹಾರ ನಾಯಿಗಳಿಗೆ ಒಳ್ಳೆಯದು, ಯಾವುದು ಒಳ್ಳೆಯದಲ್ಲ

|

ಸಾಮಾನ್ಯವಾಗಿ ಮನೆಯಲ್ಲಿ ನಾಯಿ ಸಾಕುವಾಗ ಅದಕ್ಕೆ ಕೊಡುವ ಆಹಾರಗಳು ಅದು ಯಾವ ತಳಿಗೆ ಸೇರಿದ್ದು ಅದಕ್ಕೆ ತಕ್ಕಂತೆ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ನಾಯಿಗಳಿಗೆ ತಾವು ತಿನ್ನುವ ಆಹಾರವನ್ನೇ ಕೊಡುತ್ತಾರೆ. ನಾಯಿಗಳಲ್ಲೂ ಲಕ್ಷದಿಂದ ಹಿಡಿದು ಕೋಟಿ ಬೆಲೆ ಬಾಳುವ ನಾಯಿಗಳಿವೆ. ಅಂಥ ನಾಯಿಗಳನ್ನು ಸಾಕಿದವರು ಮಾತ್ರ ಅವುಗಳಿಗೆ ಮನೆ ಅಹಾರಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಅವುಗಳಿಗಾಗಿಯೇ ಆಹಾರ ತಂದು ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅವುಗಳ ಆರೋಗ್ಯ ತಪ್ಪುವುದು. ಆದರೆ ಸಾಮಾನ್ಯವಾದ ನಾಯಿಗಳಿಗೆ ಅಂಥ ಸಮಸ್ಯೆ ಬರುವುದಿಲ್ಲ. ನಾವು ತಿನ್ನುವ ಆಹಾರಗಳಲ್ಲಿ ಅವುಗಳಿಗೂ ನೀಡಿದರೆ ಸಾಕು.

Foods That Are Good and Bad For Dogs

ಇನ್ನು ನಮ್ಮ ಮುದ್ದಿನ ನಾಯಿಗೆ ನಾವು ತಿನ್ನುವ ಎಲ್ಲಾ ಆಹಾರಗಳನ್ನು ನೀಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಆದರೆ ಅದು ಅವುಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ ನಾಯಿಗಳಿಗೆ ಯಾವ ಆಹಾರ ನೀಡಬಹುದು, ಯಾವುದು ನೀಡಬಾರದು ಎಂದು ಹೇಳಿದ್ದೇವೆ ನೋಡಿ.

 ನಾಯಿ ತಿನ್ನುವಂತಹ ಹಣ್ಣುಗಳು

ನಾಯಿ ತಿನ್ನುವಂತಹ ಹಣ್ಣುಗಳು

ಮನುಷ್ಯರು ತಿನ್ನುವಂತಹ ಹಣ್ಣುಗಳಲ್ಲಿ ಹಲವನ್ನು ನಾಯಿಗಳು ಕೂಡ ತಿನ್ನಬಹುದು. ದ್ರಾಕ್ಷಿ ಹಾಗೂ ಒಣ ದ್ರಾಕ್ಷಿಯು ನಾಯಿಗಳಿಗೆ ಅನಾರೋಗ್ಯ ಉಂಟು ಮಾಡುವುದು ಎಂದು ಹೆಚ್ಚಿನ ಜನರು ಭಾವಿಸಿರುವರು. ಆದರೆ ಯಾವ ಹಣ್ಣುಗಳು ನಾಯಿಗಳಿಗೆ ತುಂಬಾ ಲಾಭಕಾರಿ ಎಂದು ಅವರಿಗೆ ತಿಳಿದಿಲ್ಲ. ನಾಯಿಗೆ ಒಂದು ಹಣ್ಣು ವಿಷಕಾರಿ ಆದರೆ ಎಲ್ಲಾ ಹಣ್ಣುಗಳು ವಿಷವೆಂದೇ ನಾವು ಭಾವಿಸುತ್ತೇವೆ. ಆದರೆ ಹಾಗೆ ಇಲ್ಲ. ಹಣ್ಣುಗಳು ಕೂಡ ನಾಯಿಗಳಿಗೆ ತುಂಬಾ ಪೋಷಣೆ ಮತ್ತು ರುಚಿಕರವಾಗಿ ಇರುವುದು. ಯಾವ ಹಣ್ಣುಗಳನ್ನು ನಾಯಿಗಳು ತಿನ್ನಬಹುದು ಎಂದು ತಿಳಿಯಿರಿ.

ಕಲ್ಲಂಗಡಿ

ಕಲ್ಲಂಗಡಿ

ಇದು ಆರೋಗ್ಯಕಾರಿ ಹಣ್ಣಾಗಿದೆ. ಇದರಲ್ಲಿ ತುಂಬಾ ಕಡಿಮೆ ಕ್ಯಾಲರಿ ಮತ್ತು ಪೋಷಕಾಂಶಗಳಾಗಿರುವಂತಹ ವಿಟಮಿನ್ ಎ, ಬಿ6 ಮತ್ತು ಸಿ ಹಾಗೂ ಪೊಟಾಶಿಯಂ ಇದೆ. ಬೇಸಿಗೆ ಸಂದರ್ಭದಲ್ಲಿ ನೀವು ನಾಯಿಗೆ ಕಲ್ಲಂಗಡಿ ಹಣ್ಣಿನ ತುಂಡನ್ನು ನೀಡಬಹುದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ನಿಮ್ಮ ನಾಯಿಗೆ ಕೊಟ್ಟರೆ ಆಗ ಅದು ಹೆಚ್ಚು ಉಷ್ಣತೆಯ ವಾತಾವರಣದಲ್ಲಿ ಮತ್ತಷ್ಟು ತಂಪಾಗುವುದು.

ಬ್ಲೂಬೆರ್ರಿ

ಬ್ಲೂಬೆರ್ರಿ

ಬ್ಲೂಬೆರ್ರಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ಮನುಷ್ಯರ ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣಾಗಿದೆ. ಇದು ನಾಯಿ ತಿನ್ನಬಹುದಾದ ಮನುಷ್ಯರ ಆಹಾರವಾಗಿದೆ. ನಾಯಿಯು ಸಣ್ಣದಾಗಿದ್ದರೆ ಆಗ ನೀವು ಬ್ಲೂಬೆರ್ರಿ ಹಣ್ಣನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದಕ್ಕೆ ನೀಡಿ.

ಸೇಬು

ಸೇಬು

ಸೇಬು ಮನುಷ್ಯರಿಗೆ ಹಾಗೂ ನಾಯಿಗೆ ತುಂಬಾ ರುಚಿಕರ ಹಾಗೂ ಆರೋಗ್ಯ ನೀಡುವ ಹಣ್ಣು. ಸೇಬಿನಲ್ಲಿ ನಾರಿನಾಂಶ, ವಿಟಮಿನ್ ಎ ಮತ್ತು ಸಿ, ಒಮೆಗಾ-3, ಒಮೆಗಾ-6, ಆ್ಯಂಟಿಆಕ್ಸಿಡೆಂಟ್, ಫ್ಲಾವನಾಯ್ಡ್, ಪಾಲಿಫೆನಾಲ್ ಗಳು ಇವೆ. ಆದರೆ ನಾಯಿಯು ಸೇಬಿನ ಬೀಜಗಳನ್ನು ತಿನ್ನದಂತೆ ಎಚ್ಚರಿಕೆ ವಹಿಸಿ. ಇದು ವಿಷಕಾರಿ ಆಗಬಹುದು. ಸೇಬಿನ ಬೀಜದಲ್ಲಿ ತುಂಬಾ ಸಣ್ಣ ಪ್ರಮಾಣದಲ್ಲಿ ಸೈನೇಡ್ ಇದೆ. ಇದನ್ನು ಮನುಷ್ಯರ ಜೀರ್ಣಕ್ರಿಯೆ ವ್ಯವಸ್ಥೆಯು ಹೊರಹಾಕುವುದು. ಆದರೆ ನಾಯಿಗಳ ಬಗ್ಗೆ ಇದನ್ನೇ ಹೇಳುವಂತಿಲ್ಲ. ಆರೋಗ್ಯಕಾರಿ ನಾಯಿ ಅನಾರೋಗ್ಯಕ್ಕೆ ಒಳಗಾದರೆ ಆಗ ಈ ವಿಚಾರಗಳನ್ನು ಗಮನಿಸಿ.

ನಾಯಿ ತಿನ್ನಬಹುದಾದ ತರಕಾರಿಗಳು

ನಾಯಿ ತಿನ್ನಬಹುದಾದ ತರಕಾರಿಗಳು

ನಿಮಗೆ ತರಕಾರಿಗಳು ಇಷ್ಟವಿಲ್ಲದೆ ಇದ್ದರೂ ಇದು ನಿಮ್ಮ ನಾಯಿಗೆ ತುಂಬಾ ಸಹಕಾರಿ ಆಗಿರಲಿದೆ. ಆರೋಗ್ಯಕಾರಿ ಮನುಷ್ಯರ ಆಹಾರವು ನಾಯಿಗಳಿಗೆ ಹೆಚ್ಚಿನ ಪೋಷಕಾಂಶಗಳು ಮತ್ತು ಕಡಿಮೆ ಕ್ಯಾಲರಿ ಒದಗಿಸಿಕೊಡಲಿದೆ. ಅದಾಗ್ಯೂ, ಮನುಷ್ಯರೊಂದಿಗೆ ಇರುವಂತಹ ನಾಯಿಗಳಿಗೆ ಕೆಲವೊಂದು ಆಹಾರಗಳು ಒಳ್ಳೆಯದಾದರೂ ಅದರಿಂದ ಅವುಗಳಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಮನುಷ್ಯರಂತೆ ನಾಯಿಗಳಿಗೆ ಕೂಡ ಕೆಲವು ಆಹಾರ ಅಸಹಿಷ್ಣುತೆ ಉಂಟಾಗಬಹುದು. ಇದರಿಂದ ಹೊಟ್ಟೆಯಲ್ಲಿ ಸಮಸ್ಯೆ ಮತ್ತು ಅಲರ್ಜಿ ಕೂಡ ಉಂಟಾಗಬಹುದು. ನೀವು ನಾಯಿಯನ್ನು ಅದು ತಿಂದ ಆಹಾರದಿಂದ ಗಮನಿಸಿ ಮತ್ತು ಅದಕ್ಕೆ ಸರಿಯಾದ ಆಹಾರವನ್ನು ನೀಡಿ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ನಾಯಿಗಳಿಗೆ ಒಂದು ಅದ್ಭುತವಾದ ಆಹಾರವಾಗಿದೆ. ನಾಯಿಗಳು ಕ್ಯಾರೆಟ್ ನ್ನು ಹಸಿ, ಬೇಯಿಸಿ ಅಥವಾ ಅದರ ಎಲೆಗಳು ಹಾಗೆ ಇರುವಾಗಲೇ ತಿನ್ನಬಹುದು. ಆದರೆ ಇದು ನಿಮ್ಮ ನಾಯಿಯ ಆಹಾರದ ಒಂದು ಸಣ್ಣ ಭಾಗವಾಗಿದೆ.

ಬೀನ್ಸ್

ಬೀನ್ಸ್

ಬೀನ್ಸ್ ನಲ್ಲಿ ಹಲವಾರು ಪೋಷಕಾಂಶಗಳು ಇವೆ. ಇದರಲ್ಲಿ ನಾರಿನಾಂಶ, ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಎ, ಸಿ ಮತ್ತು ಕೆ, ಫಾಲಿಕ್ ಆಮ್ಲ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಪೊಟಾಶಿಯಂ ಇದೆ. ಹಸಿರು ಬೀನ್ಸ್ ನಾಯಿಗಳಿಗೆ ತುಂಬಾ ಆರೋಗ್ಯಕಾರಿ. ಇದನ್ನು ನಾಯಿಗಳ ಆಹಾರದಲ್ಲಿ ಬಳಸಿಕೊಳ್ಳುವ ಜನರು ಮಾತ್ರ ಕಡಿಮೆ. ಇದಕ್ಕೆ ಉಪ್ಪು ಅಥವಾ ಮಸಾಲೆ ಸೇರಿಸಬೇಡಿ.

ಶತಾವರಿ

ಶತಾವರಿ

ಈ ತರಕಾರಿಯಲ್ಲಿ ಅತ್ಯಧಿಕ ಮಟ್ಟದಲ್ಲಿ ನಾರಿನಾಂಶವಿದೆ. ಇದು ನಾಯಿಯ ಜೀರ್ಣಕ್ರಿಯೆ ಆರೋಗ್ಯಕ್ಕೆ ಒಳ್ಳೆಯದು. ಶತಾವರಿ ಹಾಕಿಕೊಂಡು ಮಾಡಿರುವಂತಹ ತಿಂಡಿಗಳು ನಾಯಿಗಳಿಗೆ ತುಂಬಾ ಒಳ್ಳೆಯದು. ಆದರೆ ಹಸಿಯಾಗಿ ಇದನ್ನು ನೀಡಬೇಡಿ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ತುಂಬಾ ಕಷ್ಟವಾಗಬಹುದು.

ಬಸಳೆ

ಬಸಳೆ

ಬಸಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆ್ಯಂಟಿಆಕ್ಸಿಡೆಂಟ್, ಕಬ್ಬಿನಾಂಶ ಮತ್ತು ವಿಟಮಿನ್ ಕೆ ಇದೆ. ಹೀಗಾಗಿ ಇದು ಮನುಷ್ಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ನಾಯಿಗಳ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಅದರ ಆರೋಗ್ಯಕ್ಕೂ ಒಳ್ಳೆಯದು. ಬಸಲೆಯು ನಾಯಿಯ ಪ್ರತಿರೋಧಕ ವ್ಯವಸ್ಥೆ ವೃದ್ಧಿಸುವುದು ಮತ್ತು ಶಕ್ತಿಯ ಮಟ್ಟ ಹೆಚ್ಚಿಸುವುದು. ಇದರಿಂದಾಗಿ ನಾಯಿಯು ತುಂಬಾ ಆರೋಗ್ಯಕಾರಿ ಆಗಿರುವುದು.

ಕುಂಬಳಕಾಯಿ

ಕುಂಬಳಕಾಯಿ

ನಾಯಿಗೆ ಮಲಬದ್ಧತೆ ಅಥವಾ ಜೀರ್ಣಕ್ರಿಯೆಯ ಬೇರೆ ಸಮಸ್ಯೆಗಳು ಇದ್ದ ವೇಳೆ ಅದಕ್ಕೆ ಕುಂಬಳಕಾಯಿ ನೀಡಲು ಸೂಚಿಸಲಾಗುತ್ತದೆ. ನೀವು ಕುಂಬಳಕಾಯಿಯನ್ನು ಬೇಯಿಸಿ ನಾಯಿಗೆ ನೀಡಿದರೆ ಅದರಿಂದ ನಾಯಿಯ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು. ಸಾವಯವ ಕುಂಬಳಕಾಯಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ. ಎಷ್ಟು ಪ್ರಮಾಣದಲ್ಲಿ ನಾಯಿಗೆ ಕುಂಬಳಕಾಯಿ ನೀಡಬಹುದು ಎಂದು ನೀವು ಪಶುವೈದ್ಯರ ಬಳಿ ಕೇಳಿನೋಡಿ. ಅತಿಯಾದರೆ ಆಗ ಬೇಧಿ ಸಂಭವಿಸಬಹುದು.

ನಾಯಿಗಳು ತಿನ್ನಬಹುದಾದ ಮಾಂಸ

ನಾಯಿಗಳು ತಿನ್ನಬಹುದಾದ ಮಾಂಸ

ಮನುಷ್ಯರು ತಿನ್ನುವಂತಹ ಆಹಾರವು ನಾಯಿಗೆ ಯಾವುದು ಒಳ್ಳೆಯದು ಎಂದರೆ ಅದು ಮಾಂಸ. ನಾಯಿ ಕೂಡ ಕೆಲವೊಂದು ರೀತಿಯ ಮಾಂಸವನ್ನು ಇಷ್ಟಪಡಬಹುದು. ಆದರೆ ನಾಯಿಗೆ ನೀಡುವಂತಹ ಮಾಂಸದಲ್ಲಿ ಹೆಚ್ಚಿನ ಕೊಬ್ಬು ಇರಬಾರದು ಎನ್ನುವುದನ್ನು ನೀವು ಗಮನಿಸಿ. ಅಧಿಕ ಕೊಬ್ಬು ಇರುವಂತಹ ಆಹಾರ ಸೇವಿಸಿದರೆ ಆಗ ನಾಯಿ ತೂಕ ಹೆಚ್ಚಿಸಿಕೊಳ್ಳಬಹುದು. ಇಲ್ಲಿ ಮುಖ್ಯವಾಗಿ ಕೋಳಿ ಮಾಂಸವು ನಾಯಿಗಳಿಗೆ ತುಂಬಾ ಒಳ್ಳೆಯ ಮಾಂಸವಾಗಿದೆ. ಕೋಳಿ ಮಾಂಸ ಮತ್ತು ಬಿಳಿ ಅನ್ನವನ್ನು ನೀಡಿ. ಹಸಿ ಪ್ರೋಟೀನ್ ಬದಲು ಬೇಯಿಸಿದ ಪ್ರೋಟೀನ್ ನೀಡಲು ಪಶು ವೈದ್ಯರು ಕೂಡ ಸಲಹೆ ಮಾಡುವರು. ಮಾಂಸ ಮತ್ತು ಮೊಟ್ಟೆಯಲ್ಲಿ ಹೆಚ್ಚಿನ ಸೂಕ್ಷ್ಮಾಣುಗಳು ಇರುವ ಕಾರಣದಿಂದಾಗಿ ಇದನ್ನು ಸರಿಯಾಗಿ ಬೇಯಿಸಬೇಕು.

ಕೋಳಿ ಸಾರು

ಕೋಳಿ ಸಾರು

ಕೇವಲ ಕೋಳಿ ಮಾಂಸ ಮಾತ್ರವಲ್ಲದೆ, ಕೋಳಿ ಸಾರನ್ನು ಮನೆಯಲ್ಲೇ ತಯಾರಿಸಿದ್ದು ಅಥವಾ ಹೊರಗಿನಿಂದ ತರಿಸಿಕೊಂಡು ನಾಯಿಗೆ ನೀಡಬಹುದು. ಇದರಿಂದ ಅದರ ಜೀರ್ಣಕ್ರಿಯೆ ಸಮಸ್ಯೆ ಸುಧಾರಣೆ ಆಗುವುದು. ಕೋಳಿ ಎಲುಬುಗಳ ಬಗ್ಗೆ ನೀವು ಹೆಚ್ಚಿನ ಗಮನಹರಿಸಬೇಕು. ನೀವು ನಾಯಿಗೆ ಮಾಂಸ ನೀಡುತ್ತಲಿದ್ದರೆ ಆಗ ಎಲ್ಲಾ ರೀತಿಯ ಎಲುಬು ತೆಗೆದು ಅದಕ್ಕೆ ಕೊಡಿ. ಕೆಲವೊಂದು ಸಲ ಮೂಳೆಗಳು ಕಡಿಯುವ ವೇಳೆ ಹಲ್ಲುಗಳು ತುಂಡಾಗಬಹುದು, ಬಾಯಿಯಲ್ಲಿ ಗಾಯವಾಗಬಹುದು ಅಥವಾ ಕರುಳಿಗೆ ಗಾಯವಾಗಬಹುದು. ಇದಕ್ಕೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು.

ಮೀನು

ಮೀನು

ಮನುಷ್ಯರು ತಿನ್ನುವ ಆಹಾರದಲ್ಲಿ ಮೀನನ್ನು ನಾಯಿಗಳು ತಿನ್ನಬಹುದು. ಆದರೆ ಹಸಿಯಾಗಿ ಅಲ್ಲ. ಕೆಲವೊಂದು ರೀತಿಯ ಮೀನುಗಳು ನಾಯಿಗಳಿಗೆ ತುಂಬಾ ಆರೋಗ್ಯಕಾರಿ. ಸಾಲ್ಮನ್, ಓಶಿಯನ್ ವೈಟ್ ಫಿಶ್, ಹೆರಿಂಗ್ ಇತ್ಯಾದಿಗಳು ತುಂಬಾ ಆರೋಗ್ಯಕಾರಿ. ಈ ಮೀನುಗಳಲ್ಲಿ ಪಾದರಸದ ಮಟ್ಟವು ಬೇರೆ ಮೀನುಗಳಿಗಿಂತ ತುಂಬಾ ಕಡಿಮೆ ಆಗಿರುವುದು. ಬೇರೆ ಮಾಂಸದಿಂದ ನಾಯಿಗೆ ಅಲರ್ಜಿ ಇದ್ದರೆ ಆಗ ನೀವು ಮೀನನ್ನು ನೀಡಬಹುದು. ಇದರಲ್ಲಿ ಕೂಡ ಉತ್ತಮ ಮಟ್ಟದ ಪ್ರೋಟೀನ್ ಅಂಶವಿದೆ.

ನಾಯಿಗಳಿಗೆ ನೀಡಲೇಬಾರದ ಆಹಾರಗಳು

ನಾಯಿಗಳಿಗೆ ನೀಡಲೇಬಾರದ ಆಹಾರಗಳು

ಯಾವ ಆಹಾರಗಳನ್ನು ನಾಯಿಗಳಿಗೆ ನೀಡಬಹುದು ಎಂದು ತಿಳಿದ ಬಳಿಕ ಯಾವುದನ್ನು ನಾಯಿಗಳಿಗೆ ನೀಡಬಾರದು ಎನ್ನುವ ಬಗ್ಗೆ ಕೂಡ ಗಮನಿಸಬೇಕು. ಮೇಲೆ ಹೇಳಿರುವಂತೆ ದ್ರಾಕ್ಷಿ ಮತ್ತು ಒಣದ್ರಾಕ್ಷಿ ನೀಡಬಾರದು. ಅದೇ ರೀತಿಯಾಗಿ ಈರುಳ್ಳಿ, ಬೆಳ್ಳುಳ್ಳಿ, ಅವಕಾಡೊ ಮತ್ತು ಸಕ್ಕರೆ ಅಂಶ ಕ್ಸಿಲಿಟಾಲ್ ಹೊಂದಿರುವಂತಹ ಆಹಾರ ನೀಡಬೇಡಿ. ನಾಯಿಗಳಿಗೆ ನೆಲಗಡಲೆ ಬೆಣ್ಣೆಯು ಇಷ್ಟವಾಗಿರುವುದು. ಆದರೆ ಕೆಲವು ಉತ್ಪನ್ನಗಳಲ್ಲಿ ಇದಕ್ಕೆ ಕ್ಸಿಲಿಟಾಲ್ ಮಿಶ್ರಣ ಮಾಡಿರುವರು. ಇದರ ಬಗ್ಗೆ ಗಮನಿಸಿ. ಮನುಷ್ಯ ಸೇವಿಸುವ ಆಹಾರವು ನಾಯಿಯ ಆಹಾರ ಪಟ್ಟಿಯಲ್ಲಿ ಇರದೇ ಇದ್ದರೆ ಅದನ್ನು ದಿನದ ಆಹಾರ ಕ್ರಮದಲ್ಲಿ ಶೇ.10ಕ್ಕಿಂತ ಹೆಚ್ಚು ನೀಡಬಾರದು.

English summary

Foods That Are Good and Bad For Dogs

Normally we give home foods to out pet dog. But Some expensive Breed will not adjusted to home food, it has it's own diet style. But other Dog will have human foods, Here are information about Which Are Food Good And Bad for Your Dog.
X
Desktop Bottom Promotion