For Quick Alerts
ALLOW NOTIFICATIONS  
For Daily Alerts

ಮುದ್ದಿನ ನಾಯಿಮರಿಗಳ ಆಹಾರ ಕ್ರಮ ಹೀಗಿರಲಿ

By CM prasad
|

ಮಾನವನ ನಿಯತ್ತಿಗಿಂತ ಪ್ರಾಣಿಗಳ ನಿಯತ್ತು ಹೆಚ್ಚು ಪ್ರಸ್ತುತವಾದುದೆಂದು ಹಿಂದಿನ ಕಾಲದಿಂದ ಹೇಳಿಕೊಂಡು ಬರಲಾಗುತ್ತಿದೆ. ಮಾನವನು ಕೂಡ ಇದನ್ನು ಒಪ್ಪುತ್ತಾನೆ. ಇದು ಜಗಜ್ಜಾಹೀರಾದ ಸಂಗತಿ ಕೂಡ. ಈ ವಿಚಾರ ತಿಳಿದಿದ್ದರೂ ಸಹ ಮಾನವನು ಕೃತಘ್ಞ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಇದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆ. ಇನ್ನು ಪ್ರಾಣಿಗಳಲ್ಲೇ ಹೆಚ್ಚು ನಿಯತ್ತಿನ ಪ್ರಾಣಿಯ ವಿಷಯವನ್ನು ತಿಳಿದುಕೊಳ್ಳೋಣ. ಹೌದು, ನಾವು ಮಾತನಾಡುತ್ತಿರುವುದು ನೀವು ತಿಳಿದಂತೆ ಶ್ವಾನದ ಬಗ್ಗೆಯೇ ಆಗಿದೆ. ನಾಯಿಗೆ ನೀಡಬಾರದ 10 ಆಹಾರಗಳು

ಶ್ವಾನವು ಸಾಕಲು ಅತ್ಯಂತ ಸ್ವೀಕಾರಾರ್ಹ ಪ್ರಾಣಿಯಾಗಿದ್ದು, ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿದೆ. ನಾಯಿಗಿಂತ ಮೆಚ್ಚಿನ ಸಾಕುಪ್ರಾಣಿ ಮತ್ತೊಂದಿಲ್ಲವೆಂದು ನಿಮಗೆ ಖಂಡಿತವಾಗಿಯೂ ಮನವರಿಕೆಯಾಗುತ್ತದೆ. ನಿಮ್ಮ ಮನೆಗೆ ಚೆನ್ನಾಗಿ ಹೊಂದಿಕೊಂಡರಂತೂ ನಿಮ್ಮ ಮನೆಯ ಸದಸ್ಯನಾಗಿ ನಿಮ್ಮ ಆರೈಕೆಯನ್ನು ನಿರೀಕ್ಷಿಸುತ್ತಿರುತ್ತದೆ. ಇದಕ್ಕೆ ತಕ್ಕಂತೆ ಶ್ವಾನವೂ ಸಹ ತನ್ನ ಸಂಪೂರ್ಣವಾದ ನಿಷ್ಠೆಯನ್ನು ನಿಮ್ಮ ಮೇಲೆ ಹಾಗೂ ನಿಮ್ಮ ಮನೆಯ ಸದಸ್ಯರ ಮೇಲೆ ತೋರಿಸುತ್ತದೆ.

ಶ್ವಾನವನ್ನು ಹೆಚ್ಚು ಆನಂದವಾಗಿಡಲು ಅದರ ಸಮರ್ಪಕ ಆರೈಕೆ ಹಾಗೂ ನೀವು ನೀಡುವ ಆಹಾರ ವಿಧಾನವೂ ಸಹ ಕಾರಣವಾಗುತ್ತದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಿದ್ಧ ಆಹಾರ ವಿಧಾನಗಳು ಹೆಚ್ಚು ಪ್ರಚಲಿತವಾಗುತ್ತಿದ್ದು, ಈ ಆಹಾರಗಳು ಶ್ವಾನದ ಆರೋಗ್ಯಕ್ಕೆ ಮತ್ತು ಬೆಳವಣೆಗೆಗೆ ಹೆಚ್ಚು ಅನುಕೂಲಕರವಾಗಿವೆ. ವಿವರಗಳಿಗೆ ಮುಂದೆ ಓದಿ....

ಗೋಧಿ ಮಿಶ್ರಿತ ಓಟ್ ಮೀಲ್ ವಿಧಾನ

ಗೋಧಿ ಮಿಶ್ರಿತ ಓಟ್ ಮೀಲ್ ವಿಧಾನ

ಇದರಲ್ಲಿ ಕರಗುವ ನಾರಿನ ಅಂಶ ಕೂಡಿದ್ದು, ಶ್ವಾನದ ದೇಹದ ಸಾಮರ್ಥ್ಯ ಹೆಚ್ಚಿಸಲು ಇದು ನಿಜಕ್ಕೂ ಒಳ್ಳೆಯ ಆಹಾರ. ಗೋಧಿಯಿಂದ ಅಡ್ಡಪರಿಣಾಮ ಉಂಟಾಗುವ ನಾಯಿಗಳಿಗೆ ಈ ಆಹಾರವು ಪರ್ಯಾಯವಾಗಿ ನೀಡಬಹುದಾಗಿದೆ. ಇದಕ್ಕೆ ಏನನ್ನೂ ಬೆರೆಸದೇ ಬೇಯಿಸಿದ ಪದ್ಧತಿಯಲ್ಲಿ ನೀಡುವುದನ್ನು ಮರೆಯಬೇಡಿ. ಅಂದರೆ ಸಕ್ಕರೆ, ಉಪ್ಪು ಅಥವಾ ಪರಿಮಳಯುಕ್ತ ಪದಾರ್ಥವನ್ನು ಬೆರೆಸಬಾರದು.

ಮೊಸರುಯುಕ್ತ ಅಥವಾ ಯೋಗರ್ಟ್ ಪದಾರ್ಥ

ಮೊಸರುಯುಕ್ತ ಅಥವಾ ಯೋಗರ್ಟ್ ಪದಾರ್ಥ

ಇದು ಹಾಲಿನ ಪದಾರ್ಥವಾಗಿದ್ದು, ಸ್ವಲ್ಪ ವಿಭಿನ್ನ ಆಹಾರ. ಇದರಲ್ಲಿ ಉಪಯುಕ್ತವಾದ ಬ್ಯಾಕ್ಟೀರಿಯಾ ಸತ್ವವು ಹೆಚ್ಚಿದ್ದು, ಕ್ಯಾಲ್ಷಿಯಮ್ ಮತ್ತು ಪ್ರೊಟೀನ್ ಸತ್ವಗಳಿಂದ ಕೂಡಿದೆ. ಬೇಸಿಗೆಯಲ್ಲಿ ಹೆಪ್ಪುಗಟ್ಟಿದ ಮೊಸರನ್ನು ನೀಡಿದರೆ ಒಳಿತು ಆದರೆ ಅದಕ್ಕೆ ಏನನ್ನೂ ಬೆರೆಸದೇ ನೀಡುವುದು ಸೂಕ್ತ.

ಕೋಳಿ ಮಾಂಸ

ಕೋಳಿ ಮಾಂಸ

ಬೇಯಿಸಿದ ಕೋಳಿ ಮಾಂಸದ ಆಹಾರವು ಶ್ವಾನಕ್ಕೆ ಉತ್ತಮ ಆಹಾರಗಳಲ್ಲೊಂದಾಗಿದೆ. ಇದರಲ್ಲಿ ಹೆಚ್ಚಿನ ನಾರಿನ ಅಂಶ ಕೂಡಿದ್ದು, ಕ್ಯಾಲ್ಷಿಯಮ್ ಮತ್ತು ಪ್ರೊಟೀನ್ ಸತ್ವಗಳೂ ಸಹ ಹೆಚ್ಚಿರುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಪೂರ್ಣವಾದ ಆಹಾರವಾಗಲು ಮೊಟ್ಟೆಯಿರದೆ ಸಾಧ್ಯವಾಗದು. ಇದರಲ್ಲಿ ಹೆಚ್ಚು ಜೀರ್ಣವಾಗುವ ಪ್ರೊಟೀನ್ ಹೆಚ್ಚಿರುತ್ತದೆ. ರೈಬೋಫ್ಲೇವಿನ್ ಮತ್ತು ಸೆಲೆನಿಯಮ್ ಸತ್ವಗಳೂ ಕೂಡಿರುತ್ತದೆ. ಬಿಳಿ ಅಂಶವು ನಾಯಿಗಳಿಗೆ ತೊಂದರೆಯನ್ನುಂಟು ಮಾಡುವುದರಿಂದ ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಶ್ವಾನಕ್ಕೆ ನೀಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಗಳು

ಮೊಟ್ಟೆಗಳು

ಶ್ವಾನಗಳಿಗೆ ಸಂಸ್ಕರಿಸಿದ ಆಹಾರಕ್ಕಿಂತ ಪರ್ಯಾಯವಾದ ಉತ್ತಮ ಆಹಾರಪದ್ಧತಿಗಳು ಬಳಕೆ ಮಾಡಬಹುದಾಗಿದೆ. ಒಟ್ಟಾರೆಯಾಗಿ ಈ ವಿಧಾನಗಳಿಂದ ನಿಮ್ಮ ಶ್ವಾನವನ್ನು ಹೆಚ್ಚು ಆರೈಕೆಯಿಂದ ಪೋಷಣೆ ಮಾಡಬಹುದಾಗಿದೆ.

English summary

Healthy Foods For Your Dog

Of all the animals kept as pets, dogs are undoubtedly the most popular. And when you own a dog, you will not disagree with the fact that there is no other best friend than a pet dog. It is equal to a family member and gets due care from you. In return, the dog too expresses its whole-hearted dedication to you and the members of your family.
X
Desktop Bottom Promotion