For Quick Alerts
ALLOW NOTIFICATIONS  
For Daily Alerts

ನಿಮ್ಮ ಮುದ್ದಿನ ಮೊಲದ ಕಾಳಜಿಗಾಗಿ ಸರಳ ಸಲಹೆಗಳು

By Super
|

ಮೊಲಗಳು ನಾವು ಸಾಕಬಹುದಾದ ಪ್ರಾಣಿಗಳಲ್ಲಿಯೇ ಅತ್ಯಂತ ಸುಲಭವಾಗಿ ಆರೈಕೆ ಮಾಡಬಹುದಾದ ಪ್ರಾಣಿಗಳಾಗಿವೆ. ಏಕೆಂದರೆ ಇವುಗಳನ್ನು ನಿರ್ವಹಣೆ ಮಾಡುವುದು ಸುಲಭ ಜೊತೆಗೆ, ಇವು ಮಕ್ಕಳ ಜೊತೆಗೆ ಸುಲಭವಾಗಿ ಬೆರೆತು ಆಡುತ್ತವೆ. ಆದರೆ ಇವುಗಳ ವಿಪರೀತವಾದ ಸಂತಾನೋತ್ಪತ್ತಿ ದರವು ನಮಗೆ ಕಿರಿ ಕಿರಿಯನ್ನು ತರಬಹುದು. ಒಂದು ವೇಳೆ ನೀವು ಮೊಲವನ್ನು ಸಾಕಬೇಕೆಂದು ಬಯಸಿದಲ್ಲಿ, ಮೊದಲು ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ಅದು ನಾಯಿ ಮತ್ತು ಬೆಕ್ಕಿನಂತಹ ಪ್ರಾಣಿಯಲ್ಲ ಎಂಬುದು.

ಇದು ಬೆಕ್ಕಿನಂತೆಯೇ ತುಪ್ಪಳವನ್ನು ಮತ್ತು ಸ್ವಚ್ಛತೆಯನ್ನು ಹೊಂದಿರುವ ಪ್ರಾಣಿಯಾಗಿದ್ದರು, ಇದರ ಆರೋಗ್ಯದ ಅಗತ್ಯತೆಗಳು ಇದನ್ನು ಸಂಪೂರ್ಣವಾಗಿ ಭಿನ್ನವಾದ ಪ್ರಾಣಿಯನ್ನಾಗಿಸಿದೆ. ಮೊಲಗಳು ನಾವು ಸಾಕಬಹುದಾದ ಪ್ರಾಣಿಗಳಲ್ಲಿಯೇ ಅತ್ಯಂತ ಸುಲಭವಾಗಿ ಆರೈಕೆ ಮಾಡಬಹುದಾದ ಪ್ರಾಣಿಗಳಾಗಿವೆ. ಏಕೆಂದರೆ ಇವುಗಳನ್ನು ನಿರ್ವಹಣೆ ಮಾಡುವುದು ಸುಲಭ ಜೊತೆಗೆ, ಇವು ಮಕ್ಕಳ ಜೊತೆಗೆ ಸುಲಭವಾಗಿ ಬೆರೆತು ಆಡುತ್ತವೆ. ನಾಯಿ, ಬೆಕ್ಕಿಗಿಂತ ಪಕ್ಷಿಗಳನ್ನು ಸಾಕಿದರೆ 6 ಲಾಭ!

Easy Care Tips For Your Pet Rabbit

ಆದರೆ ಇವುಗಳ ವಿಪರೀತವಾದ ಸಂತಾನೋತ್ಪತ್ತಿ ದರವು ನಮಗೆ ಕಿರಿ ಕಿರಿಯನ್ನು ತರಬಹುದು. ಒಂದು ವೇಳೆ ನೀವು ಮೊಲವನ್ನು ಸಾಕಬೇಕೆಂದು ಬಯಸಿದಲ್ಲಿ, ಮೊದಲು ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ಅದು ನಾಯಿ ಮತ್ತು ಬೆಕ್ಕಿನಂತಹ ಪ್ರಾಣಿಯಲ್ಲ ಎಂಬುದು. ಇದು ಬೆಕ್ಕಿನಂತೆಯೇ ತುಪ್ಪಳವನ್ನು ಮತ್ತು ಸ್ವಚ್ಛತೆಯನ್ನು ಹೊಂದಿರುವ ಪ್ರಾಣಿಯಾಗಿದ್ದರು, ಇದರ ಆರೋಗ್ಯದ ಅಗತ್ಯತೆಗಳು ಇದನ್ನು ಸಂಪೂರ್ಣವಾಗಿ ಭಿನ್ನವಾದ ಪ್ರಾಣಿಯನ್ನಾಗಿಸಿದೆ.

ಇಲ್ಲಿ ನಾವು ಮೊಲವನ್ನು ಸಾಕು ಪ್ರಾಣಿಯನ್ನಾಗಿ ಸಾಕಬೇಕೆಂದು ಬಯಸುವವರಿಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ನೀವು ಮೊಲವನ್ನು ನಿಮ್ಮ ಮನೆಗೆ ತರುವ ಮೊದಲು ಈ ಎಲ್ಲಾ ಅಂಶಗಳು ಇವೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ನಂತರ ಆ ಮುದ್ದಾದ ಮೊಲಗಳನ್ನು ನಿಮ್ಮ ಮನೆಗೆ ತನ್ನಿ.

ಗೂಡು
ಮೊಲಗಳ ಗೂಡನ್ನು ಆಂಗ್ಲ ಭಾಷೆಯಲ್ಲಿ ಹಚ್ ಎಂದು ಕರೆಯುತ್ತಾರೆ. ಇದನ್ನು ಗೂಡು ಎಂದು ಕನ್ನಡದಲ್ಲಿ ಕರೆಯಬಹುದು. ಮೊಲಗಳನ್ನು ಇಡಲು ಸ್ವಲ್ಪ ಒಳ್ಳೆಯ ಸ್ಥಳಾವಕಾಶವಿರುವ ಗೂಡನ್ನು ಖರೀದಿಸಿ. ನಿಮ್ಮ ಮೊಲವು 3-4 ನೆಗೆತಗಳನ್ನು ನೆಗೆಯುವುಷ್ಟಾದರು ಸ್ಥಳಾವಕಾಶ ಆ ಗೂಡಿನಲ್ಲಿರಲಿ. ಒಂದು ವೇಳೆ ನೀವು ಹೊರಾಂಗಣದಲ್ಲಿ ಈ ಗೂಡುಗಳನ್ನು ಇರಿಸುವ ಯೋಜನೆ ಮಾಡಿದಲ್ಲಿ, ಇದಕ್ಕೆ ಮೇಲ್ಛಾವಣಿ ಮತ್ತು ಮಳೆ-ಗಾಳಿ-ಬಿಸಿಲಿನಿಂದ ಸರಿಯಾದ ರಕ್ಷಣೆಯನ್ನು ಒದಗಿಸಿ.

ಕಸ
ಮೊಲಗಳು ನೋಡಲು ಎಷ್ಟು ಸುಂದರವೋ, ಅಷ್ಟೇ ಗಲೀಜನ್ನು ಮಾಡುವ ಪ್ರಾಣಿಗಳಾಗಿವೆ. ಆದ್ದರಿಂದ ಇವುಗಳಿಗಾಗಿ ಒಂದು ಸಣ್ಣ ಲಿಟ್ಟರ್ ಬಾಕ್ಸ್ ಅಂದರೆ ಕಸದ ಬುಟ್ಟಿ ಖರೀದಿಸಿ. ಇದಕ್ಕಾಗಿ ಮಧ್ಯಮ ಮತ್ತು ದೊಡ್ಡ ಗಾತ್ರದ ಕಸದ ಬುಟ್ಟಿಗಳು ಒಳ್ಳೆಯದು. ಬೆಕ್ಕುಗಳಿಗಾಗಿ ಮಾಡಲಾಗಿರುವ ಲಿಟ್ಟರ್ ಬಾಕ್ಸ್ ಸಹ ಖರೀದಿಸಬಹುದು. ಮೊದಲು ಕಾಗದದಿಂದ ತಯಾರಿಸಿದ ಕ್ಯಾಟ್ ಲಿಟ್ಟರನ್ನು ತಳದಲ್ಲಿ ಹಾಸಿ ಮತ್ತು ಅದನ್ನು ಹುಲ್ಲಿನಿಂದ ಮುಚ್ಚಿ. ಇದನ್ನು ನಿಮ್ಮ ಮೊಲಗಳು ಯಾವುದೇ ಸಂಕೋಚವಿಲ್ಲದೆ, ತಮ್ಮ ಶೌಚಾಲಯವಾಗಿ ಬಳಸುತ್ತವೆ.

ವ್ಯಾಯಾಮ!
ನೀವು ನಿಮ್ಮ ಮೊಲಗಳನ್ನು ವಾಕ್ ಕರೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ನಿಮ್ಮ ಬಳಿ ದೊಡ್ಡದಾದ ಗೂಡು ಇದ್ದಲ್ಲಿ, ನಿಮ್ಮ ಮೊಲ ತನ್ನಷ್ಟಕ್ಕೆ ತಾನೇ ನೆಗೆದು-ಓಡಾಡುವ ಮೂಲಕ ಉತ್ತಮವಾದ ವ್ಯಾಯಾಮವನ್ನು ಪಡೆದುಕೊಳ್ಳುತ್ತದೆ. ಮನೆಯಲ್ಲೂ ಸಾಕಬಹುದಾದ 5 ಅಸಾಮಾನ್ಯ ಸಾಕುಪ್ರಾಣಿಗಳು

ಅಲಂಕಾರ
ಮೊಲಗಳು ತಮ್ಮ ಅಂದವನ್ನು ತಾವೇ ಕಾಪಾಡಿಕೊಳ್ಳುತ್ತವೆ. ಅವು ಅವುಗಳ ಸ್ವಚ್ಛತೆಯನ್ನು ತಾವೇ ನಿರ್ವಹಿಸಿಕೊಳ್ಳುತ್ತವೆ. ಆದರೆ ಈ ಪ್ರಕ್ರಿಯೆಗಾಗಿ ಅದು ತನ್ನ ತುಪ್ಪಳವನ್ನು ತಾನೇ ಹೆಚ್ಚಾಗಿ ಸೇವಿಸುತ್ತದೆ. ಇದಕ್ಕಾಗಿ ನಿಮ್ಮ ಸಹಾಯದ ಅಗತ್ಯ ಅದಕ್ಕೆ ಇರುತ್ತದೆ. ಅದಕ್ಕಾಗಿ ಮೊಲಗಳನ್ನು ವಾರದಲ್ಲಿ ಕೆಲವೊಮ್ಮೆ ಆಗಾಗ ಬ್ರಷ್ ಮಾಡಿ. ಇಲ್ಲವೇ ಅದು ಯಾವಾಗ ಕೂದಲನ್ನು ಹೆಚ್ಚು ಉದುರಿಸಿಕೊಳ್ಳಲು ಆರಂಭಿಸುತ್ತದೆಯೋ, ಆಗ ಅದರ ದೇಹವನ್ನು ಬ್ರಷ್ ಮಾಡಿ.

English summary

Easy Care Tips For Your Pet Rabbit

Rabbits are pretty easy pets to keep. They are not the high maintenance kind of pets and are extremely kid-friendly. But they also can be a nuisance because of their litter and high breeding rate. If you are planning to have a rabbit as pet then you must understand that it is not going to be the same as a cat or a dog.
X
Desktop Bottom Promotion