For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಬೆರಗುಗೊಳಿಸಬಹುದಾದ ಸಾಕುಪ್ರಾಣಿಗಳ 7 ವಿಶಿಷ್ಟ ವರ್ತನೆಗಳು

By Super
|

ನಿಮ್ಮ ಮುದ್ದಾದ ಸಾಕು ಪ್ರಾಣಿಗಳು ಏನನ್ನು ಹೇಳಲು ತವಕಿಸುತ್ತಿವೆ ಎಂಬುದರ ಕುರಿತು ಎಂದಾದರೂ ಆಶ್ಚರ್ಯಗೊoಡಿದ್ದೀರಾ ?! ಸಾಕು ಪ್ರಾಣಿಗಳ ರಹಸ್ಯಮಯವಾದ ಆಡುಭಾಷೆಗಳು ನಮಗೂ ಅರ್ಥವಾಗುವoತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು.

ಎಲ್ಲಾ ಪ್ರಾಣಿಗಳಿಗೂ ಸಹ ತಮ್ಮದೇ ಆದಂತಹ ಸಂವಹನದ ವಿಧಾನವೊಂದಿರುತ್ತದೆ. ನಮಗೆ ಮಾತ್ರ ಕೆಲವೊಂದು ಬಾರಿ ಅದು ಅರ್ಥವಾಗುವುದಿಲ್ಲ ಅಷ್ಟೆ. ಆದಾಗ್ಯೂ, ನಿಮ್ಮ ಸಾಕುಪ್ರಾಣಿಯನ್ನು ಅರ್ಥಮಾಡಿಕೊಳ್ಳುವುದು ಅತೀ ಮುಖ್ಯ. ಈ ಕೆಳಗೆ ನೀಡಲಾಗಿರುವ ಸಾಕುಪ್ರಾಣಿಗಳ ರಹಸ್ಯಭಾಷೆಗಳ ಕುರಿತ ಕೆಲವು ಆಸಕ್ತಿದಾಯಕ ವಿಚಾರಗಳು ನಿಮಗೂ ಸಹ ಸಹಕಾರಿಯಾಗಬಲ್ಲವು.

ನಿಮ್ಮ ನಾಯಿಯ ಅಭ್ಯಾಸ ಬದಲಿಸಿ

Hamster ಗಳು ಗೂಡಿನ ಕಂಬಿಗಳನ್ನು ಚೀಪುವುದು.

Hamster ಗಳು ಗೂಡಿನ ಕಂಬಿಗಳನ್ನು ಚೀಪುವುದು.

ಮುದ್ದಿನ hamster, ಗೂಡಿನ ಕಂಬಿಗಳನ್ನು ಚೀಪಲು ಆರಂಭಿಸಿದಾಗ ಅದರಿಂದ ಉಂಟಾಗುವ ಸಹಿಸಲಸಾಧ್ಯವಾದ ಕರ್ಕಶ ಸದ್ದು ಅತ್ಯಂತ ಭಯಾನಕ ಎಂದೇ ನನ್ನ ಅನಿಸಿಕೆ. ಆದರೆ, hamster ನ ಇಂತಹ ವರ್ತನೆಯಿಂದ ನೀವು ತಿಳಿದುಕೊಳ್ಳಬೇಕಾದದ್ದು ಏನೆಂದರೆ, ನೀವು ನಿಮ್ಮ hamster ನ ಕಡೆಗೆ ಗಮನ ನೀಡದೇ ಅದು ಬೇಸರಗೊಂಡಿದೆ ಮತ್ತು ಅದರ ವರ್ತನೆಗೆ ನಿಮ್ಮ ಈ ಅಚಾತುರ್ಯವೇ ಕಾರಣ ಎಂಬುದು.

ಅಂಕಿಅಂಶಗಳ ಪ್ರಕಾರ, ಆಮೆ ಮತ್ತು ಮೊಲಗಳ ನಂತರ, ಮೂರನೆಯ ಅತೀ ಹೆಚ್ಚು ನಿರ್ಲಕ್ಷಿತ ಸಾಕುಪ್ರಾಣಿಯು hamster ಆಗಿದೆ. ಪರಿಸ್ಥಿತಿಯನ್ನು ಸುಧಾರಿಸಲು, ನಿಮ್ಮ hamster ನ ಗೂಡನ್ನು ಮರುವಿನ್ಯಾಸಗೊಳಿಸಿರಿ ಅಥವಾ ಈಗಿರುವುದಕ್ಕಿಂತ ದೊಡ್ಡ ಗೂಡನ್ನು ವ್ಯವಸ್ಥೆಗೊಳಿಸಿರಿ. ಮಾತ್ರವಲ್ಲದೇ, hamster ಗೂಡಿನಲ್ಲಿ, ಅವನ ಆಟಕ್ಕಾಗಿ ಕೆಲವೊಂದು ಗೊoಬೆಗಳಿರುವುದನ್ನು ಖಚಿತಪಡಿಸಿಕೊಳ್ಳಿರಿ ಹಾಗೂ ಅವನು ಗೂಡಿನ ಕಂಬಿಗಳನ್ನು ಚೀಪುವುದನ್ನು ತಪ್ಪಿಸಲು ಕೆಲವು ರಟ್ಟಿನ ಪೆಟ್ಟಿಗೆ ಮತ್ತು ಕಾಗದಗಳು ಗೂಡಿನಲ್ಲಿರುವುದನ್ನು ಖಾತರಿಪಡಿಸಿಕೊಳ್ಳಿರಿ.

ನಾಯಿಯು ತನ್ನ ಕಾಲನ್ನು ನಿಮ್ಮ ಪಾದದ ಮೇಲೆ ಇಡುವುದು.

ನಾಯಿಯು ತನ್ನ ಕಾಲನ್ನು ನಿಮ್ಮ ಪಾದದ ಮೇಲೆ ಇಡುವುದು.

ನಿಮ್ಮ ನಾಯಿಯು ಮೇಲಿನ ವರ್ತನೆಯನ್ನು ಪದೇ ಪದೇ ತೋರ್ಪಡಿಸುತ್ತಿದ್ದರೆ, ಅದರರ್ಥ ನೀವು ಅವನೊಂದಿಗೆ ಇನ್ನೂ ಹೆಚ್ಚಿನ ಸಮಯ ಕಳೆಯಬೇಕೆಂಬುದು ಹಾಗೂ ಅವನಿಗೆ ಹೆಚ್ಚು ಸಮೀಪವಾಗಿರಬೇಕೆoಬುದು. ಸಾಮಾನ್ಯವಾಗಿ ನಾಯಿಗಳನ್ನು ದೀರ್ಘಕಾಲದವರೆಗೆ ಒಂಟಿಯಾಗಿ ಇರಗೊಟ್ಟಾಗ, ಆತನ ಯಜಮಾನು ಬಹುಕಾಲದ ನಂತರ ಮರಳಿಬಂದಾಗ ಅಥವಾ ಅವನಿಗೆ, ನಿಮ್ಮ ಮತ್ತು ಅವನ ಸ್ನೇಹದ ಕುರಿತು ಭಯವುಂಟಾದಾಗ ಅಥವಾ ತನ್ನೊಳಗೇ ಭಯ ಆವರಿಸಿಕೊಂಡಾಗ ಈ ರೀತಿಯಾಗಿ ವರ್ತಿಸುತ್ತಾನೆ.

ಇದಕ್ಕೆ ಉದಾಹರಣೆ ನೀಡಬೇಕೆoದರೆ, ನನ್ನ ನಾಯಿಯು ಪಟಾಕಿಯ ಜೋರಾದ ಸಿಡಿತದ ಶಬ್ಹಗಳನ್ನು ಕೇಳಿದಾಗ ಅಥವಾ ಹೊರಗಡೆ ಜೋರಾದ ಗುಡುಗಿನ ಸದ್ದನ್ನು ಆಲಿಸಿದಾಗ, ಅವನು ನನ್ನ ಸಮೀಪವೇ ಬಿದ್ದುಕೊಳ್ಳುತ್ತಾನೆ ಹಾಗೂ ತನ್ನ ಪಾದವನ್ನು ನನ್ನ ಪಾದದ ಮೇಲೆ ಇರಿಸುತ್ತಾನೆ. ನಿಮ್ಮ ಸಾಕುನಾಯಿಯ ಈ ವರ್ತನೆಯ ಕುರಿತು ಅರ್ಥೈಸಿಕೊಳ್ಳುವುದು ಮುಖ್ಯ ಹಾಗೂ ಅಗತ್ಯ ಬಿದ್ದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.

ಸಾಕುನಾಯಿಯು ಎವೆಯಿಕ್ಕದೆ ನಿಮ್ಮನ್ನೇ ನೋಡುವುದು.

ಸಾಕುನಾಯಿಯು ಎವೆಯಿಕ್ಕದೆ ನಿಮ್ಮನ್ನೇ ನೋಡುವುದು.

ಒಂದು ವೇಳೆ ನಿಮ್ಮ ಸಾಕುನಾಯಿಯು ನಿಮ್ಮನ್ನೇ ಮೊನಚಾದ ದೃಷ್ಟಿಯಿಂದ ಎವೆಯಿಕ್ಕದೆ ನೋಡುತ್ತಿದ್ದರೆ ಅವನು ನಿಮ್ಮಿಂದ ಏನನ್ನೋ ಬಯಸುತ್ತಿದ್ದಾನೆಂದು ನೀವು ತಿಳಿಯಬೇಕು. ತನ್ನ ಯಜಮಾನನಿಂದ ಯಾವುದಾದರೊಂದು ರುಚಿಕರವಾದ ವಸ್ತುವನ್ನು ಪಡೆಯಲು ಇದು ಅವನ ಚತುರವಾದ ಉಪಾಯವಾಗಿದೆ. ನಿಜಕ್ಕೂ ಇವನು ತುಂಬಾ ಚಾಲಾಕು ಅಲ್ಲವೇ..?! ನನಗೆ ಗೊತ್ತು, ಯಾರೂ ಕೂಡ ಅಂತಹ ಮೊನಚಾದ ನೋಟದಿಂದ ತಮ್ಮನ್ನು ನೋಡುವುದನ್ನು ಬಯಸುವುದಿಲ್ಲ ಮತ್ತು ಅಂತಹ ನೋಟಕ್ಕೆ ಮರುಳಾಗಿ ಆಹಾರವನ್ನು ನೀಡುವುದೂ ಇಲ್ಲ.

ಇಲ್ಲಿ ಅಡಗಿರುವ ವಿಷಯವೇನೆಂದರೆ, ಪ್ರತೀ ಬಾರಿಯೂ ನೀವು ಆತನ ತೀಕ್ಷ್ಣ ನೋಟವನ್ನು ನಿರ್ಲಕ್ಷಿಸುತ್ತಾ ಬಂದರೆ, ಅವನು ಅದನ್ನು ಪದೇ ಪದೇ ಪುನರಾವರ್ತಿಸುತ್ತಾನೆ. ಅದಕ್ಕೂ ಕೂಡ ನಿಮ್ಮಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದರೆ, ಅವನು ನಿಮ್ಮನ್ನು ದೂಷಿಸುವ ರೀತಿಯಲ್ಲಿ ಜೋರಾಗಿ ಕಿರಿಚಿಕೊಳ್ಳುತ್ತಾನೆ, ಬೊಗಳುತ್ತಾನೆ, ಅಥವಾ ತನ್ನ ಬೇಡಿಕೆಯು ಈಡೇರಲ್ಪಡುವವರೆಗೂ ಸಹ ನಿಮ್ಮ ಕಾಲುಗಳ ಕೆಳಗೆಯೇ ಸುಳಿದಾಡಲಾರoಭಿಸುತ್ತಾನೆ. ಆಗ ನೀವು "ಹೀಗೆ ಮಾಡಬೇಡ" ಎಂದು ಕಿರುಚಾಡುವ ಬದಲು ನೀವು ಅವನ ಬೆನ್ನನ್ನು ಮೃದುವಾಗಿ ನೇವರಿಸಿರಿ ಅಥವಾ ಅವನೊಂದಿಗೆ ಸ್ವಲ್ಪ ಸಮಯ ಆಟವಾಡುತ್ತಾ ಕಳೆಯಿರಿ. ತನ್ನ ಯಜಮಾನನೊಂದಿಗೆ ಒಂದು ಬಗೆಯ ಆಧ್ಯಾತ್ಮಿಕ ಸoಪರ್ಕವನ್ನಿರಿಸಿಕೊಳ್ಳುವುದು ನಾಯಿಯ ಮಟ್ಟಿಗೆ ಬಹಳ ಮುಖ್ಯವಾದದ್ದು. ಇಲ್ಲವಾದಲ್ಲಿ ಅವನು ಹೆಚ್ಚು ಆಕ್ರಮಣಶೀಲನಾಗುತ್ತಾನೆ.

ಮೊಲವು ಮೃದುವಾಗಿ ತನ್ನ ಮೂಗಿನಿಂದ ನಿಮ್ಮನ್ನು ನೇವರಿಸುತ್ತದೆ.

ಮೊಲವು ಮೃದುವಾಗಿ ತನ್ನ ಮೂಗಿನಿಂದ ನಿಮ್ಮನ್ನು ನೇವರಿಸುತ್ತದೆ.

ಬೆಕ್ಕುಗಳು ಅಥವಾ ನಾಯಿಗಳಂತೆ, ಮೊಲಗಳು ಅಷ್ಟಾಗಿ ಪ್ರಚಲಿತವಲ್ಲದ ಸಾಕುಪ್ರಾಣಿಗಳಾಗಿರುವುದರಿoದ, ವಾಡಿಕೆಯಂತೆ ಜನರಿಗೆ ಮೊಲಗಳ ವರ್ತನೆಯ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲ. ಏನೇ ಆದರೂ ಒಂದು ವೇಳೆ ನಿಮ್ಮ ಮನೆಯಲ್ಲಿಯೇ ಮೊಲವನ್ನು ಹೊಂದಿರುವ ಅದೃಷ್ಟವಂತರು ನೀವಾಗಿದ್ದರೆ, ನಿಮಗೆ ಬಹುಶಃ ಆತನ ವಿವಿಧ ಮನಸ್ಥಿತಿಗಳನ್ನು ಅರಿಯಲು ಚೆನ್ನಾಗಿ ತಿಳಿದಿರಬಹುದು. ಉದಾಹರಣೆಗೆ, ನಿಮ್ಮ ಸಾಕು ಮೊಲದ ಬಾಯಿಯಲ್ಲಿ ಏನೂ ಇಲ್ಲದಿದ್ದರೂ ಸಹ ಅವನು ಏನನ್ನೋ ಚೀಪುತ್ತಿರುವಂತೆ ನಿಮಗೆ ಕಂಡುಬಂದರೆ,

ಅದರರ್ಥ ಅವನು ಒಳ್ಳೆಯ ಮೂಡ್ ನಲ್ಲಿ ಇದ್ದಾನೆ ಎಂಬುದು. ಆದರೆ, ಅವನ್ನನ್ನು ನೀವು ನಿಮ್ಮ ಕೈಯಲ್ಲಿ ಹಿಡಿದುಕೊಂಡಾಗ ಒಂದು ವೇಳೆ ನಿಮಗೆ ಅವನು ಒರಟನಂತೆ ಕಂಡುಬಂದರೆ ಅದರರ್ಥ ಅವನು ಯಾವುದೋ ಕಾರಣಕ್ಕಾಗಿ ನಿಮ್ಮನ್ನು ನಂಬುವುದಿಲ್ಲ ಅಥವಾ ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂದು (ಪ್ರಾಯಶಃ ನೀವು ಅವನನ್ನು ತುಂಬಾ ಹೊತ್ತಿನ ವರೆಗೆ ಒಂಟಿಯಾಗಿ ಬಿಟ್ಟಿರಬಹುದು ಅಥವಾ ಅವನನ್ನು ನಿರ್ಲಕ್ಷಿಸಿರಬಹುದು). ಅವನು ಮೂಗಿನಿಂದ ನಿಮ್ಮನ್ನು ಮೃದುವಾಗಿ ನೇವರಿಸಿದನೆoದಾದರೆ ಅದರರ್ಥ ಅವನು ನಿಮ್ಮನ್ನು ಕಾಣಲು ಖುಷಿಯಾಗಿದ್ದಾನೆ ಎಂಬುದು ಹಾಗೂ ಇದು ಅವನು ನಿಮ್ಮನ್ನು ಆಹ್ವಾನಿಸುವ ವಿಧಾನವಾಗಿರುತ್ತದೆ.

ಬೆಕ್ಕು ಗಟ್ಟಿಯಾಗಿ ಬಾಯಿ ಮುಕ್ಕಳಿಸುವಂತೆ ಸದ್ದು ಮಾಡುತ್ತದೆ.

ಬೆಕ್ಕು ಗಟ್ಟಿಯಾಗಿ ಬಾಯಿ ಮುಕ್ಕಳಿಸುವಂತೆ ಸದ್ದು ಮಾಡುತ್ತದೆ.

ಸಂವಹನದ ಈ ರೂಪವನ್ನು ಪರಿಸ್ಥಿತಿ, ಸoದರ್ಭಗಳಿಗನುಗುಣವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಆದಾಗ್ಯೂ, ಇದರ ಸರ್ವೇಸಾಮಾನ್ಯವಾದ ಅರ್ಥವೇನೆಂದರೆ, "ನಾವಿಬ್ಬರೂ ಸ್ನೇಹಿತರಾಗಿರೋಣ" ಎಂಬುದಾಗಿ. ನೀವಿಬ್ಬರೂ ಪರಸ್ಪರ ಭಿನ್ನಾಭಿಪ್ರಾಯಗಳನ್ನು ತಳೆದ ನಂತರ ಪ್ರಾಯಶಃ ಅವನು ಪುನಃ ಮೈತ್ರಿಯನ್ನು ಸ್ಥಾಪಿಸಲು ಬಯಸಿರಬೇಕು. ಆದರೆ, ನಿಮ್ಮ ಪ್ರೀತಿಯ ಬೆಕ್ಕು, ಇದನ್ನು ನಿಯಮಿತವಾಗಿ ಪದೇ ಪದೇ ಪುನರಾವರ್ತಿಸಿದರೆ, ಅದರರ್ಥ ಅವನು ಒಂದು ರೀತಿಯ ಅಭದ್ರತೆಯ ಭಾವನೆಯನ್ನು ಹೊಂದುತ್ತಿರುವನು ಎಂದು ಅಥವಾ ಕೆಲವೊಮ್ಮೆ ಇದೊಂದು ಕೇವಲ ಆತನ ಹವ್ಯಾಸವೂ ಆಗಿರಬಹುದು. ಮತ್ತೂ ಕೆಲವೊಮ್ಮೆ ಇಂತಹ ಸಂವಹನ ಕ್ರಿಯೆಯು ಆತನ ಸಹಜವಾದ ತೃಪ್ತಿಯ ಸೂಚಕವೂ ಆಗಿರಬಹುದು.

ಬೆಕ್ಕು ನಿಧಾನವಾಗಿ ಕಣ್ಣು ಮಿಟುಕಿಸುತ್ತದೆ.

ಬೆಕ್ಕು ನಿಧಾನವಾಗಿ ಕಣ್ಣು ಮಿಟುಕಿಸುತ್ತದೆ.

ಕೆಲವೊಮ್ಮೆ, ನೀವು ನಿಮ್ಮ ಬೆಕ್ಕಿನ ಕಣ್ಣ ನೋಟಕ್ಕೆ ಪ್ರತಿಕ್ರಿಯೆಯಾಗಿ, ನೀವೂ ಸಹ ಕೆಲಕಾಲ ಅವನ ಕಣ್ಣುಗಳನ್ನೇ ನೋಡಿದಾಗ, ಅವನು ಕಣ್ಣುಗಳನ್ನು ನಿಧಾನವಾಗಿ ಮಿಟುಕಿಸುವುದನ್ನು ನೀವು ಕೆಲವೊಮ್ಮೆ ಗಮನಿಸಿರಬಹುದು. ಇದರ ಅರ್ಥವಾದರೂ ಏನಿರಬಹುದು ?! ನಿಜಕ್ಕೂ ಇದೊಂದು ಅತೀ ಶುಭ ಸೂಚನೆಯಾಗಿದೆ. ಯಾಕೆಂದರೆ ಅವನ ಈ ರೀತಿಯ ವರ್ತನೆಯು, ಆತನಿಗೆ ನಿಮ್ಮಲ್ಲಿ ನಂಬಿಕೆಯಿದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನೀವು ನಿಜಕ್ಕೂ ಸೂಕ್ಷ್ಮವಾಗಿ ಗಮನಿಸುವ ಸ್ವಭಾವವುಳ್ಳವರಾದರೆ, ಕೆಲವೊಮ್ಮೆ ಮನುಷ್ಯರೂ ಸಹ ಸಂಭಾಷಣೆಯ ವೇಳೆ ಕೆಲವೊಮ್ಮೆ ನಿಧಾನವಾಗಿ ಕಣ್ಣು ಮಿಟುಕಿಸುವುದನ್ನು ನೀವು ಗಮನಿಸಿರಬಹುದು. ಇದರರ್ಥವೇನೆoದರೆ, ಅವರು ನಿಮ್ಮ ಮಾತುಗಳನ್ನು ಗಮನವಿಟ್ಟು ಆಲಿಸುತ್ತಿದ್ದಾರೆ ಹಾಗೂ ಅವರು ನಿಮ್ಮಲ್ಲಿ ತಮ್ಮ ನಂಬುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದರ್ಥ.

ಕುದುರೆಯು ನೆಲದ ಮೇಲೆ ಉರುಳಾಡುತ್ತದೆ.

ಕುದುರೆಯು ನೆಲದ ಮೇಲೆ ಉರುಳಾಡುತ್ತದೆ.

ಕುದುರೆಗಳು ತಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆಯನ್ನು ತಳೆದಾಗ ಮಾತ್ರ ನೆಲದ ಮೇಲೆ ಉರುಳಾಡುತ್ತವೆ ಎಂಬುದು ಗಮನಾರ್ಹ ಅಂಶ. ಉದಾಹರಣೆಗೆ, ಅವುಗಳು ವನ್ಯ ಪರಿಸರದಂತಹ ಲಾಯಗಳಲ್ಲಿರುವಾಗ ತಾವು ಸಾಕಷ್ಟು ಸುರಕ್ಷಿತರಾಗಿದ್ದೇವೆ ಎಂದು ಭಾವಿಸುತ್ತವೆ. ಇದು ಅವುಗಳು ಒಳ್ಳೆಯ ಮೂಡ್ ನಲ್ಲಿರುವುದರ ಸೂಚನೆ. ಅದ್ದರಿಂದ ನೀವು ಕುದುರೆಯು ತನ್ನ ಈ ರೀತಿಯ ವರ್ತನೆಯ ಮೂಲಕ ತನ್ನ ಕೋಟ್ ಅಥವಾ ಮೇಲ್ವಸ್ತ್ರವನ್ನು ಹಾಳು ಮಾಡಿಕೊಳ್ಳುತ್ತದೆ ಎಂದು ಭಾವಿಸಬಾರದು.

ಕುದುರೆಯು ಪದೇ ಪದೇ ಮೇಲಿನ ವರ್ತನೆಯನ್ನು ಪುನರಾವರ್ತಿಸದ ಹೊರತು ನೀವು ಅದರ ಈ ವರ್ತನೆಯ ಕುರಿತು ಚಿಂತಿಸಬೇಕಾದ ಯಾವುದೇ ಕಾರಣವಿಲ್ಲ. ಹಾಗೊಂದು ವೇಳೆ, ಇದು ಪದೇ ಪದೇ ಪುನರಾವರ್ತನೆಗೊoಡರೆ ಅದರರ್ಥ ನಿಮ್ಮ ಕುದುರೆಗೆ ಯಾವುದೋ ತ್ವಚೆಯ ಸಮಸ್ಯೆಯಿದೆ ಮತ್ತು ಆ ಕಾರಣಕ್ಕಾಗಿ ನಿಮ್ಮ ತುರ್ತು ಗಮನದ ಅವಶ್ಯಕತೆ ಅದಕ್ಕಿದೆ ಎಂದರ್ಥ.

ಈ ಮೇಲಿನ ಮಾಹಿತಿಯು ನಿಮ್ಮ ಸಾಕುಪ್ರಾಣಿಗಳ ಕೆಲವೊಂದು ವರ್ತನೆಯ ಕುರಿತು ಅರ್ಥ ಮಾಡಿಕೊಳ್ಳಲು ಸಹಕಾರಿಯಾಯಿತಲ್ಲವೇ ?! ನಿಮ್ಮ ಸಾಕು ಪ್ರಾಣಿಗಳ ಮೂಲಕ ಬೇರೆ ಯಾವುದಾದರೂ ವರ್ತನೆಗಳ ಬಗ್ಗೆ ನಿಮಗೇನಾದರೂ ಅರಿವಾಗಿದೆಯೇ..?! ಅವುಗಳ ಆ ವರ್ತನೆಗಳನ್ನು ವಿವರಿಸಬಲ್ಲಿರಾ...?!

English summary

7 Secret Languages of Pets

Did you ever wonder what your pets are saying to you? Do you wish you could understand the secret languages of your pets? All animals have a way of communication of some kind –we just do not understand them at times.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more