For Quick Alerts
ALLOW NOTIFICATIONS  
For Daily Alerts

ನಾಯಿ, ಬೆಕ್ಕಿಗಿಂತ ಪಕ್ಷಿಗಳನ್ನು ಸಾಕಿದರೆ 6 ಲಾಭ!

By Super
|

ಮನುಷ್ಯನಿಗೆ ನಂಬಿಕೆಗೆ ಅರ್ಹವಾಗಿರುವ ಪ್ರಾಣಿ ನಾಯಿ, ಮುದ್ದಾಡಲು ಬೆಕ್ಕು ಇದ್ದರೆ ಮನೆಗೊಂದು ಮೆರಗು ಬರುತ್ತದೆ ಎನ್ನುವುದು ಹೆಚ್ಚಿನವರ ನಂಬಿಕೆ. ಇದನ್ನು ಪಾಲಿಸಿಕೊಂಡು ಹೋಗುವವರು ಬಹಳಷ್ಟು ಮಂದಿ. ನಾಯಿ, ಬೆಕ್ಕುಗಳೆಂದರೆ ಅಲರ್ಜಿಯಾಗುವವರು ನಮ್ಮಲ್ಲಿದ್ದಾರೆ. ಪಕ್ಷಿಗಳ ಮೇಲೆ ಪ್ರೀತಿಯಿದ್ದರೂ ಅದನ್ನು ಮನೆಯಲ್ಲಿ ಸಾಕು ಪ್ರಾಣಿಯನ್ನಾಗಿಸಲು ಯಾರೂ ಮನಸ್ಸು ಮಾಡುವುದಿಲ್ಲ. ನಾಯಿ ಬೆಕ್ಕುಗಳಿಗಿಂತ ಪಕ್ಷಿಗಳನ್ನು ಸಾಕುವುದರಲ್ಲಿ ಇರುವ ಖುಷಿಯೇ ಬೇರೆ.

ಈ ಪಕ್ಷಿಗಳಿಗೆ ಸಣ್ಣದೊಂದು ಗೂಡು ಇದ್ದರೆ ಅದರಲ್ಲೇ ಅವು ಹೊಂದಿಕೊಳ್ಳುತ್ತದೆ. ಪಕ್ಷಿಗಳನ್ನು ಹೆಚ್ಚಿನವರು ಸಾಕುವುದಕ್ಕೆ ಹಿಂದೇಟು ಹಾಕುವ ಕಾರಣ ಅವುಗಳನ್ನು ಖರೀದಿಸಲು ದೊಡ್ಡ ಮಟ್ಟದಲ್ಲಿ ಹಣ ವ್ಯಯಿಸಬೇಕಿಲ್ಲ. ನೀವು ಪಕ್ಷಿ ಪ್ರಿಯರಾಗಿದ್ದರೆ ನೀವ್ಯಾಕೆ ಪಕ್ಷಿಗಳನ್ನು ಸಾಕಬಾರದು? ಪಕ್ಷಿ ಸಾಕುವವರಿಗೆ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

1. ಪಕ್ಷಿಗಳ ಮಧುರ ಚಿಲಿಪಿಲಿ: ಹೆಚ್ಚಿನ ಎಲ್ಲಾ ಪಕ್ಷಿಗಳ ಚಿಲಿಪಿಲಿ ಮಧುರವಾಗಿರುತ್ತದೆ. ಪಕ್ಷಿಗಳು ತುಂಬಾ ಕೊಳಕು ಮತ್ತು ಹೇಸಿಗೆ ಹುಟ್ಟಿಸುವಂತವು ಎನ್ನುವುದು ಕೆಲವರ ನಂಬಿಕೆ. ಆದರೆ ಹಾಗೇನೂ ಇಲ್ಲ, ನಾಯಿ ಮತ್ತು ಬೆಕ್ಕುಗಳ ಸಹವಾಸವೇ ಬೇಡವೆನ್ನುವವರಿಗೆ ಪಕ್ಷಿ ಸಾಕುವುದು ಅತ್ಯುತ್ತಮ ಆಯ್ಕೆ.

2. ಜೇಬಿಗೆ ಕತ್ತರಿ ಬೀಳಲ್ಲ: ನಾಯಿ ಮತ್ತು ಬೆಕ್ಕುಗಳು ತಿನ್ನುವಷ್ಟು ಆಹಾರ ಪಕ್ಷಿಗಳಿಗೆ ಬೇಕಿಲ್ಲ. ದಿನದಲ್ಲಿ ಸ್ವಲ್ಪ ಕಾಳುಗಳು ಮತ್ತು ನೀರು ಇದ್ದರೆ ಪಕ್ಷಿಗಳು ಬದುಕುತ್ತವೆ. ಮನೆಯಲ್ಲಿರುವ ತರಕಾರಿ ಮತ್ತು ಹಣ್ಣುಹಂಪಲುಗಳ ಚೂರುಗಳು ಪಕ್ಷಿಗಳಿಗೆ ಆಹಾರವಾಗುತ್ತದೆ.

3. ಜಾಣ ಪಕ್ಷಿಗಳು: ಪ್ರಾಣಿ ಸಂಕುಲದಲ್ಲಿ ಪಕ್ಷಿಗಳು ಅತೀ ಜಾಣ್ಮೆಯವು. ಗಿಳಿ ಸಹಿತ ಕೆಲವು ಪಕ್ಷಿಗಳು ಮಾನವನ ಮಾತುಗಳನ್ನು ಅನುಕರಿಸಬಲ್ಲವು.

4. ಸುಲಭ ನಿರ್ವಹಣೆ: ನಾಯಿ ಮತ್ತು ಬೆಕ್ಕುಗಳಂತೆ ಪಕ್ಷಿಗಳತ್ತ ಅತೀ ಗಮನ ನೀಡಬೇಕೆಂದಿಲ್ಲ. ನಾಯಿಗಳಂತೆ ಅವುಗಳನ್ನು ವಾಕಿಂಗ್ ಗೆ ಕರೆದುಕೊಂಡು ಹೋಗಬೇಕಿಲ್ಲ. ಬೆಕ್ಕುಗಳಂತೆ ಅವುಗಳೊಂದಿಗೆ ಆಟವಾಡಬೇಕಿಲ್ಲ. ಅವುಗಳ ಗೂಡುಗಳನ್ನು ಸ್ವಚ್ಛಗೊಳಿಸುವುದು ತುಂಬಾ ಸುಲಭ.

5. ಸಣ್ಣ ಜಾಗ ಸಾಕು: ಜಾಗದ ಸಮಸ್ಯೆಯಿರುವ ಕಡೆ ನಾಯಿ-ಬೆಕ್ಕುಗಳು ಓಡಾಡಿಕೊಂಡಿರುವುದು ತುಂಬಾ ಕಷ್ಟ. ಇಂತಹ ಮನೆಗಳಿಗೆ ಪಕ್ಷಿಗಳೇ ಸೂಕ್ತ ಆಯ್ಕೆ.

6.ಚಿಲಿಪಿಲಿ ಸಹಾನುಭೂತಿ:
ಪಕ್ಷಿಗಳು ನಾಯಿ ಮತ್ತು ಬೆಕ್ಕುಗಳಿಗಿಂತ ಹೆಚ್ಚಾಗಿ ತನ್ನ ಯಜಮಾನನೊಂದಿಗೆ ಹೊಂದಿಕೊಳ್ಳುತ್ತದೆ. ಯಜಮಾನನ ದಿನದ ಬೇಸರವನ್ನು ಪಕ್ಷಿಗಳು ಕೇಳಿಸಿಕೊಳ್ಳುತ್ತವೆ ಮತ್ತು ಚಿಲಿಪಿಲಿಯ ಮೂಲಕ ಸಹಾನುಭೂತಿ ವ್ಯಕ್ತಪಡಿಸುತ್ತವೆ.

English summary

Top 6 Reasons To Get A Pet Bird

Most people choose to get a dog or a cat as a household pet. Not you, though: You're bold and not afraid to think outside the box. Why not consider getting a pet bird, then? They're not as messy as you think and they're a ton of fun!
X
Desktop Bottom Promotion