For Quick Alerts
ALLOW NOTIFICATIONS  
For Daily Alerts

ಲ್ಯಾರ್ಬಡರ್ ನಾಯಿಯ ಆರೈಕೆ ಹೀಗಿರಲಿ

|

ಲ್ಯಾರ್ಬಡರ್ ನಾಯಿ ಬಹು ಬೇಗ ತನ್ನ ಯಜಮಾನನ ಪ್ರೀತಿಯನ್ನು ಗಳಿಸಿಬಿಡುತ್ತದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಸರಿಯಾಗಿ ಬುದ್ಧಿ ಕಲಿಸಿ ಸಾಕಿದರೆ, ಮನೆಯಲ್ಲಿ ಯಾವುದೇ ಕಾವಲುಗಾರನ ಅವಶ್ಯಕತೆಯಿಲ್ಲ, ಅಷ್ಟು ಚೆನ್ನಾಗಿ ಮನೆಯನ್ನು ನೋಡಿಕೊಳ್ಳುತ್ತದೆ ಹಾಗೂ ಈ ಜಾತಿಯ ನಾಯಿಯನ್ನು ಆರೈಕೆ ಮಾಡುವುದು ಕೂಡ ಸುಲಭ.

ಕೆಲವು ಜಾತಿಯ ನಾಯಿಗಳಿಗೆ ಪ್ರತ್ಯೇಕ ಆಹಾರಕ್ರಮವಿರುತ್ತದೆ. ಆದರೆ ಇವಕ್ಕೆ ಹಾಗೇನು ಇಲ್ಲ, ಸಾಮಾನ್ಯವಾಗಿ ನಾವು ತಿನ್ನುವ ಆಹಾರಗಳನ್ನೇ ಇವಕ್ಕೆ ಕೊಡಬಹುದು. ಅದರಲ್ಲೂ ಈ ಕೆಳಗಿನ ತರಕಾರಿಗಳನ್ನು ಕೊಡುವುದರಿಂದ ಇವುಗಳು ಕಾಯಿಲೆ ಬೀಳುವುದನ್ನು ತಡೆಯಬಹುದು.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆ ಹಾಕಿ ಮಾಡಿದ ಅಡುಗೆಯನ್ನು ಕೊಡಿ. ಸೂರ್ಯಕಾಂತಿ ಎಣ್ಣೆ ನಾಯಿಯ ರೋಮದ ಆರೋಗ್ಯಕ್ಕೆ ಮತ್ತು ಅದರ ಹೊಳಪನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ಅನ್ನು ನಿಮ್ಮ ನಾಯಿಯ ಆಹಾರಕ್ರಮದಲ್ಲಿ ವಾರದಲ್ಲಿ ಒಂದು ಬಾರಿಯಾದರೂ ಸೇರಿಸುವುದು ಒಳ್ಳೆಯದು.

ಸೇಬು

ಸೇಬು

ಸಿಪ್ಪೆ ಸುಲಿಯದೆ ಹಾಗೇ ಸೇಬನ್ನು ಕತ್ತರಿಸಿ ಕೊಡುವುದು ಕೂಡ ಒಳ್ಳೆಯದು. ಸೇಬು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮೊಸರು

ಮೊಸರು

ಕೆಲವೊಂದು ನಾಯಿಗಳು ಮೊಸರು ಮುಟ್ಟುವುದಿಲ್ಲ, ನಿಮ್ಮ ನಾಯಿ ತಿನ್ನುವುದಾದರೆ ಇದನ್ನು ಕೊಡುವುದು ಒಳ್ಳೆಯದು.

ಮೊಟ್ಟೆ

ಮೊಟ್ಟೆ

ದಿನಕ್ಕೆ ಒಂದು ಮೊಟ್ಟೆ ಕೊಟ್ಟರೆ ನಾಯಿ ದಷ್ಟಪುಷ್ಟವಾಗಿ ಆರೋಗ್ಯದಿಂದ ಕೂಡಿರುತ್ತದೆ.

ನೀರು

ನೀರು

ದೊಡ್ಡ ನಾಯಿಯಾದರೆ ದಿನದಲ್ಲಿ ಎರಡು ಲೀಟರ್ ಚಿಕ್ಕ ಪ್ರಾಯದ ನಾಯಿಗೆ ಒಂದು ಲೀಟರ್ ರಷ್ಟು ನೀರು ಕೊಡುವುದು ಒಳ್ಳೆಯದು. ನಾಯಿಗೆ ಶುದ್ಧ ನೀರನ್ನೇ ಕೊಡಿ, ಇಲ್ಲದಿದ್ದರೆ ಕಾಯಿಲೆ ಬೀಳುತ್ತದೆ.

ಉಳಿದ ಆಹಾರಗಳು

ಉಳಿದ ಆಹಾರಗಳು

ತಾಜಾ ಆಹಾರಗಳನ್ನು ಕೊಡಿ. ಅಳಸಿದ ಆಹಾರಗಳನ್ನು ಹಾಕಬೇಡಿ, ಅಳಸಿದ ಆಹಾರಗಳನ್ನು ತಿಂದರೆ ನಾಯಿಗೆ ಅಲರ್ಜಿ ಉಂಟಾಗುತ್ತದೆ.

English summary

Labrador Health Problems: Foods To Eat

Looking after your pet dog can be easy, if you only know how. As a responsible labrador owner, your job is to see that your dog faces no health problems. Therefore, we have a list of foods which is safe to treat your Labrador and avoid health problems in the future.
X
Desktop Bottom Promotion