For Quick Alerts
ALLOW NOTIFICATIONS  
For Daily Alerts

ನಿಮ್ಮ ನಾಯಿಗೆ ನೀವು ತುಂಬಾ ಆಪ್ತರಾಗುವುದು ಹೇಗೆ?

|

ಎಲ್ಲರಿಗೂ ತಮ್ಮ ತಮ್ಮ ಸಾಕು ಪ್ರಾಣಿಗಳ ಜೊತೆಗೆ ಹೇಗೆ ಪ್ರೀತಿಯಿಂದ ಇರಬೇಕೆಂಬುದು ತಿಳಿದಿರಬೇಕು. ಸಾಕು ಪ್ರಾಣಿಗಳೊಂದಿಗೆ ಹಾಗೂ ಇತರ ಪ್ರಾಣಿಗಳ ಜೊತೆಗೆ ಹೇಗೆ ಪ್ರೀತಿಯಿಂದಿರಬೇಕು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ:

1. ನಿಮ್ಮ ಮುದ್ದಿನ ಮೊಲ, ನಾಯಿ ಅಥವಾ ಬೆಕ್ಕಿನ ಮೈಯ್ಯನ್ನು ಹೆಚ್ಚು ಹೆಚ್ಚು ಸವರಿ. ಹೆಚ್ಚಿನ ಪ್ರಾಣಿಗಳು ಹೀಗೆ ತಮ್ಮ ಮೈಯ್ಯನ್ನು ಸವರಿಸಿಕೊಳ್ಳಲು ಇಷ್ಟಪಡುತ್ತವೆ. ಆದರೆ ಅವು ಇಷ್ಟ ಪಡದೇ ಇದ್ದರೆ ಬಿಟ್ಟು ಬಿಡಿ, ಯಾಕೆಂದರೆ ಇಷ್ಟಪಡದಿದ್ದಲ್ಲಿ ಅವು ನಿಮ್ಮನ್ನು ದ್ವೇಷಿಸುವ ಸಾಧ್ಯತೆ ಹೆಚ್ಚಿದೆ.

How to Be Nice to Your Pets

2. ಸಾಕುಪ್ರಾಣಿಗಳಿಗೆ ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಆಹಾರ ಹಾಕಬೇಡಿ. ಅವು ನಿಜವಾಗಿಯೂ ಹಸಿದಿರುವ ಹಾಗೂ ಕೇವಲ ಆಹಾರ ಬೇಕು ಎಂದು ಬಯಸುವ ಸಮಯಗಳನ್ನು ವಿಂಗಡಿಸಿ ಹಾಗೂ ನೆನಪಿನಲ್ಲಿಡಿ.

3. ಅವುಗಳ ಆಹಾರದ ಬಟ್ಟಲು ಮತ್ತು ದ್ರವ ಪದಾರ್ಥಗಳನ್ನು ಸೇವಿಸುವ ಬಟ್ಟಲುಗಳನ್ನು ಕನಿಷ್ಟ ದಿನಕ್ಕೊಮ್ಮೆಯಾದರೂ ತೊಳೆಯಿರಿ. ಇದು ನಮ್ಮ ಬಟ್ಟಲುಗಳನ್ನು ತೊಳೆದಂತೆಯೇ ಎಂದು ನೆನಪಿಡಿ. ನೀವು ಒಂದೇ ಬಟ್ಟಲಿನಲ್ಲಿ ವಾರವಿಡೀ ಊಟ ಮಾಡುತ್ತೀರಾ ಅಥವಾ ಒಂದು ಸಲ ಕುಡಿದಿಟ್ಟ ಕಪ್ಪಿನಲ್ಲಿ ಅಥವಾ ಬೋಗುಣಿಯಲ್ಲಿ ಒಂದು ತಿಂಗಳ ತನಕ ಮತ್ತೆ ಮತ್ತೆ ಏನನ್ನಾದರೂ ಕುಡಿಯುತ್ತೀರಾ? ಇಲ್ಲ ತಾನೇ?

4. ನಿಮ್ಮ ಸಾಕುಪ್ರಾಣಿಗಳ ಬಗ್ಗೆ ಕೊಂಚ ಗಮನ ವಹಿಸಿ. ಸಾಕು ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ನಾಯಿ ನಿಮ್ಮಿಂದ ಸಾಧ್ಯವಾದಷ್ಟೂ ಹೆಚ್ಚಿನ ಗಮನವನ್ನು, ಆರೈಕೆಯನ್ನು ಬಯಸುತ್ತದೆ. ಆದರೆ ನೆನಪಿಡಿ ಈ ಆರೈಕೆ ನಿಮ್ಮ ಹಿಡಿತದಲ್ಲಿರಬೇಕು. ಸಾಮಾನ್ಯ ಅರ್ಥದಲ್ಲಿ ಹೇಳಬೇಕೆಂದರೆ ನಿಮ್ಮ ಸಾಕು ಪ್ರಾಣಿ ನಿಮ್ಮ ಇರುವುದು ನಿಮಗೆ ತಿಳಿದಿದೆ ಎಂದು ಅದಕ್ಕೆ ಅರ್ಥಮಾಡಿಸುವಂತಿರಲಿ. ಕೇವಲ ‘ಹಾಯ್. ಏನೋ ಟಾಮಿ ಹೇಗಿದ್ದಿ?' ಕೂಡ ಸಾಕು. ನೀವು ಹೇಳುವುದು ಅವುಗಳಿಗೆ ಅರ್ಥವಾಗುತ್ತದೆ ಎಂದಲ್ಲ ಆದರೆ ಅವುಗಳನ್ನು ನೀವು ಗಮನಿಸುತ್ತೀರಿ ಎಂದು ಅವುಗಳ ಗಮನಕ್ಕೆ ಬಂದರೆ ಸಾಕು.

5. ನಾಯಿಗಳನ್ನು ವಾಯು ವಿಹಾರಕ್ಕೆ ಕರೆದುಕೊಂಡು ಹೋಗಿ. ಹೆಚ್ಚಿನ ನಾಯಿಗಳು ಇಡೀ ದಿನ ಮನೆಯೊಳಗೆ ಅಥವಾ ಒಂದೇ ಗೂಡಿನಲ್ಲಿ ಇರಲು ಬಯಸುವುದಿಲ್ಲ. ಅವು ಹೊರಗೆ ಹೋಗಲು ಬಯಸುತ್ತವೆ. ಹೊರಗೆ ಹೋದಾಗ ಬೇರೆ ನಾಯಿಗಳನ್ನು ನೋಡುವ ಸಾಧ್ಯತೆಗಳಿವೆ. ನೀವು ಹೊರಗೆ ವಾಯು ವಿಹಾರಕ್ಕೆ ಹೋದಾಗ ನಿಮ್ಮ ಪರಿಚಯಸ್ಥರನ್ನು ಭೇಟಿ ಆದರೆ ನಿಮಗೆ ಸಂತೋಷವಾಗುತ್ತದೆ ತಾನೇ? ಅದೇ ರೀತಿ ನಿಮ್ಮ ಸಾಕು ಪ್ರಾಣಿಗಳಿಗೆ.

6. ಮುಟ್ಟುವುದು, ಸವರುವುದು ಇಂತಹ ನಿಮ್ಮ ಸ್ಪರ್ಶ ಅವುಗಳಿಗೆ ಅಗತ್ಯ ಇದು ಅವುಗಳು ನಿಮ್ಮ ಜೊತೆಗೆ ಮತ್ತಷ್ಟು ಸಲಿಗೆಯಿಂದಿರಲು ಸಹಾಯವಾಗುತ್ತದೆ. ನಿಮ್ಮ ಸಾಕು ಪ್ರಾಣಿಯೊಂದಿಗೆ ಆಟವಾಡಿ, ಅವುಗಳಿಗೆ ಮೆತ್ತಗೆ ತಟ್ಟಿ, ಅಥವಾ ಅವುಗಳ ಜೊತೆಗೆ ಹುಲ್ಲುಹಾಸಿನ ಮೇಲೆ ಕುಳಿತು ಕೆಲವು ಸಮಯ ಕಳೆಯಿರಿ.

7. ಧೈರ್ಯದಿಂದಿರಿ ಮತ್ತು ಅವುಗಳ ಮುಂದೆ ಉದಾಹರಣೆಯಂತಿರಿ.

8. ಅವುಗಳಿಗೆ ನೋವಾಗುವಂತೆ ನಡೆದುಕೊಳ್ಳಬೇಡಿ ಅಂದರೆ ಹೂಡೆಯುವುದು, ಒದೆಯುವುದು ಮಾಡಬೇಡಿ. ನೀವು ಪ್ರೀತಿಯಿಂದ ಮಾಡಿದ್ದೇ ಆದರೂ ನಿಮ್ಮ ಸಾಕು ಪ್ರಾಣಿ ಇದರಿಂದ ನಿಮ್ಮನ್ನು ದ್ವೇಷಿಸುವುದೇ ಹೊರತು ಪ್ರೀತಿಸುವುದಿಲ್ಲ.

9. ನಿಮ್ಮ ಸಾಕುಪ್ರಾಣಿಗಳನ್ನು ನಿಯಮಿತವಾಗಿ ಪ್ರಾಣಿವೈದ್ಯರಲ್ಲಿ ಕರೆದುಕೊಂಡು ಹೋಗಿ. ಇದು ನಿಮ್ಮ ಮುದ್ದಿನ ಸಾಕು ಪ್ರಾಣಿಗೆ ಇಷ್ಟವಾಗದೇ ಹೋಗಬಹುದು. ಆದರೆ ಈಗ ನೀವದಕ್ಕೆ ನೀಡುವ ಸ್ವಲ್ಪ ತೊಂದರೆ ಮುಂದೆ ಒಂದು ದಿನ ಅದು ರೋಗದಿಂದ ನರಳುವುದನ್ನು ತಡೆಯಬಹುದು ಎಂದಾದರೆ ಈಗಿನ ಅಲ್ಪ ತೊಂದರೆ ವಾಸಿಯಲ್ಲವೇ? ಆಗಾಗ ಏನಾದರು ಉಡುಗೊರೆ ರೂಪದಲ್ಲಿ ಹೊಸ ತಿಂಡಿ, ಉಡುಪು ತನ್ನಿ.

10. ನಿಮ್ಮ ಸಾಕು ಪ್ರಾಣಿ ನಿಮ್ಮದು. ಅದರ ಕುತ್ತಿಗೆಯ ಬಳಿ ಹಿಡಿದು ಜಗ್ಗುವುದು, ಶಿಕ್ಷೆಯ ರೀತಿಯಲ್ಲಿ ಅದಕ್ಕೆ ಹೊಡೆಯುವುದು ಹೀಗೆಲ್ಲಾ ಅದಕ್ಕೆ ಹೆದರಿಕೆ ಉಂಟಾಗುವ ರೀತಿ ವರ್ತಿಸದಿರಿ, ಆದರೆ ನೀವು ಅದು ಮಾಡಿದ್ದೆಲ್ಲಾ ಸರಿ ಎಂದು ಕೇಳುತ್ತಿರಬೇಡಿ.

11. ನಿಮ್ಮ ಸಾಕು ಪ್ರಾಣಿಯೊಂದಿಗೆ ಅಸಹನೆಯಿಂದ ವರ್ತಿಸದಿರಿ. ಅವು ನಿಮ್ಮ ಮಾತನ್ನು ಕೇಳಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎಂದು ನೆನಪಿಡಿ.

English summary

How to Be Nice to Your Pets | Pet Care Tips | ನಿಮ್ಮ ಸಾಕು ಪ್ರಾಣಿಯೊಂದಿಗೆ ಪ್ರೀತಿಯಿಂದಿರುವ ಸುಲಭೋಪಾಯಗಳು | ಸಾಕುಪ್ರಾಣಿಗಳಿಗೆ ಕೆಲ ಸಲಹೆಗಳು

Everyone needs to know how to be nice to their own pets! Here are a few tips to being nice to your pets and other animals.
Story first published: Thursday, January 24, 2013, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more