For Quick Alerts
ALLOW NOTIFICATIONS  
For Daily Alerts

ಒಂಟಿ ಹೃದಯಕ್ಕೆ ಇದು ಬೆಸ್ಟ್ ಸಂಗಾತಿ

|
Pets are good companion for lonely people
ಬೇಸರದಿಂದ ಒಂಟಿ ಕುಳಿತಿದ್ದಾಗ, ನಿಮ್ಮ ಮುದ್ದು ನಾಯಿ ನಿಮ್ಮ ತೊಡೆಯ ಮೇಲೆ ಕೂತು ಮುದ್ದುಗರೆದರೆ ನಿಮ್ಮ ಎಲ್ಲ ಚಿಂತೆ ದೂರವಾದಂತ ಅನುಭವ ನಿಮಗಾಗಿದೆಯಲ್ಲವೇ? ಹೌದು. ಸಾಕು ಪ್ರಾಣಿಗಳು ನಿಮಗೆ ಒಳ್ಳೆ ಸ್ನೇಹಿತರಂತೆ.

ಒಂಟಿಯಾಗಿರುವವರಿಗೆ ಸಾಕು ಪ್ರಾಣಿಗಳು ಒಳ್ಳೆಯ ಸಂಗಾತಿಗಳಾಗುತ್ತವೆ, ಅದರಲ್ಲೂ ಪುರುಷರಿಗೆ ಸಾಕು ಪ್ರಾಣಿಗಳು ಚಿಂತೆಯನ್ನು ಮರೆತು ಸಂತಸದಿಂದಿರಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ನಾಯಿ, ಬೆಕ್ಕು, ಇನ್ನಿತರ ಸಾಕು ಪ್ರಾಣಿಗಳು ಮನುಷ್ಯರಿಗೆ, ಅದರಲ್ಲೂ ಒಂಟಿಯಾಗಿರುವವರಿಗೆ ಒಳ್ಳೆಯ ಸ್ನೇಹಿತರಂತೆ ಇರುತ್ತವೆ. ಒತ್ತಡದಲ್ಲಿದ್ದವರಿಗೆ, ಒಡೆದ ಹೃದಯಗಳಿಗೆ ಇದು ಚಿಂತೆ ಮರೆಸಲು ಸಹಾಯ ಮಾಡುತ್ತದೆ. ಮುದ್ದು ಪ್ರಾಣಿಗಳೊಂದಿಗೆ ಮುದ್ದುಗರೆಯುತ್ತಾ ಕೂತರೆ ಕಾಲ ಕಳೆಯುವುದೇ ತಿಳಿಯುವುದಿಲ್ಲ ಎಂದಿದೆ ಸಂಶೋಧನೆ ನಡೆಸಿದ ಆಸ್ಟ್ರೇಲಿಯಾದ ಯುನಿಟಿ ವೆಲ್ ಬೀಯಿಂಗ್ ಇಂಡೆಕ್ಸ್.

ಸಾಕು ಪ್ರಾಣಿಗಳು ತಮ್ಮ ಪ್ರೀತಿ ತೋರಿಸಿದರೆ ಒಡೆದ ಹೃದಯಗಳಿಗೆ ಚೈತನ್ಯ ದೊರಕುತ್ತದೆ. ನಿರಾಸೆಯಾದಾಗ, ಜೀವನದಲ್ಲಿ ಒಂಟಿತನ ಹೆಚ್ಚಾಗಿ ಕಾಡಿದಾಗ ಮನುಷ್ಯರು ಪ್ರಾಣಿಗಳನ್ನು ತಮ್ಮ ಸ್ನೇಹಿತರಂತೆ ತಿಳಿಯುತ್ತಾರೆ ಎಂದು ಸಂಶೋಧನೆ ನಡೆಸಿದ ಡೇನಿಯಲ್ ಹಾಗನ್ ತಿಳಿಸಿದ್ದಾರೆ.

English summary

Pets are Good Companion for Lonely People | Pet Care | ಸಾಕು ಪ್ರಾಣಿ ಒಂಟಿಯಾಗಿರುವವರಿಗೆ ಉತ್ತಮ ಸಂಗಾತಿ

For all those people who are single and lonely, consider a sweet relationship with a little fury friend that would melt your worries away. Pets have found to have a positive influence on people, especially men, according to Australian Unity Wellbeing Index.
Story first published: Thursday, September 15, 2011, 12:57 [IST]
X
Desktop Bottom Promotion