For Quick Alerts
ALLOW NOTIFICATIONS  
For Daily Alerts

ನಾಯಿ ಕೊಳ್ಳುವ ಮುನ್ನ ನಿಯತ್ತು ಪರೀಕ್ಷಿಸಿ

|
Dog loyalty
ಈಗ ಶ್ವಾನಗಳಿರದ ಮನೆಗಳೇ ಕಡಿಮೆ. ಕೇವಲ ಸೆಕ್ಯುರಿಟಿಗೆಂದು ನಾಯಿಗಳನ್ನ ಸಾಕೊ ಕಾಲ ಇದಲ್ಲ. ನಾಯಿಗಳೂ ಕೂಡ ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಬೆರೆತುಹೋಗಿರುತ್ತವೆ. ನೀವೇನಾದ್ರೂ ನಾಯಿ ಸಾಕುವ ಯೋಚನೆ ಇಟ್ಟುಕೊಂಡಿದ್ದರೆ ಈ ಸಲಹೆಗಳನ್ನ ಪಾಲಿಸಿ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವ ರೀತಿ ನಾಯಿಯನ್ನ ಸಾಕಬಹುದು, ತಮ್ಮ ಯಜಮಾನನಿಗೆ ಯಾವ ನಾಯಿ ಹೆಚ್ಚು ನಿಯತ್ತಾಗಿರುತ್ತೆ ಎಂಬ ವಿಷಯವನ್ನು ತಿಳಿದುಕೊಂಡು ನಂತರ ನಾಯಿಯನ್ನು ಮನೆಗೆ ಕರೆದುಕೊಂಡು ಬನ್ನಿ.

1. ನೀವು ನಿಮ್ಮ ಕುಟುಂಬದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವಂತಹ ನಾಯಿಯನ್ನು ಸಾಕಲು ಬಯಸುತ್ತೀರ ಎಂದಾದರೆ ಲಾಬ್ರೊಡೋರ್ಸ್, ಬಾಕ್ಸರ್ಸ್, ಡಾಲ್ಮೆಶಿಯನ್ ಅಥವಾ ಗೋಲ್ಡನ್ ರಿಟ್ರೈವರ್ಸ್ ಈ ಜಾತಿಯ ನಾಯಿಗಳು ಇದಕ್ಕೆ ಸಿದ್ಧ. ಈ ನಾಯಿಗಳು ಕುಟುಂಬದ ಎಲ್ಲರೊಂದಿಗೂ ಹೊಂದಿಕೊಳ್ಳುತ್ತದೆ. ಮಕ್ಕಳೊಂದಿಗೆ ಆಡುವುದು, ಮನೆಒಡತಿಗೆ ಸಹಾಯ ಮಾಡುವುದು, ಯಜಮಾನ ಮನೆಗೆ ಬಂದಾಕ್ಷಣ ಆತನನ್ನು ಓಲೈಸುವುದು ಈ ಎಲ್ಲವನ್ನೂ ಈ ನಾಯಿಗಳು ಪ್ರೀತಿಯಿಂದ ಮಾಡುತ್ತವೆ. ನೀವು ಅದಕ್ಕೆ ಪ್ರೀತಿ ತೋರಿಸಿದರೆ ಸಾಕು, ಅವು ನಿಮಗಾಗಿ ಸೇವೆ ಮಾಡಲು ಸಿದ್ಧವಾಗಿರುತ್ತವೆ.

2. ನೀವು ಒಂಟಿಯಿದ್ದರೆ ಅಥವಾ ನಿಮಗೆ ನಾಯಿ ಸಾಕುವುದರಲ್ಲಿ ಆಸಕ್ತಿಯಿದ್ದು, ನಿಮ್ಮ ಕುಟುಂಬದವರಿಗೆ ಹೆಚ್ಚು ಆಸಕ್ತಿ ಇಲ್ಲದಿದ್ದರೆ ನೀವು ನಿಮಗೆಂದೇ ಈ ಜಾತಿಯ ನಾಯಿಗಳನ್ನು ಸಾಕಬಹುದು. ಪಗ್ಸ್, ಡಾಚ್ ಶಂಡ್ಸ್, ಚಿಲ್ಹೂಹಾಸ್ , ಫ್ರೆಂಚ್ ಬುಲ್ ಜಾತಿಯ ನಾಯಿಗಳು ಸೂಕ್ತ. ಇವುಗಳು ಕೇವಲ ತಮ್ಮ ಯಜಮಾನನಿಗೆ ಮಾತ್ರ ತನ್ನ ಸೇವೆಯನ್ನು ಮುಡಿಪಿಡುತ್ತವೆ. ಹಚ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ನಾಯಿಯೇ ಇದಕ್ಕೆ ಉದಾಹರಣೆ. ಅವು ಒಂಟಿಯಾಗಿರಲು ಇಷ್ಟ ಪಡುವುದಿಲ್ಲ. ಹಾಗಂತ ಎಲ್ಲರೊಂದಿಗೂ ಬೆರೆತುಕೊಳ್ಳುವುದೂ ಇಲ್ಲ. ಆದ್ದರಿಂದ ನೀವು ಎಲ್ಲೇ ಹೋದರೂ ನಿಮ್ಮನ್ನು ಹಿಂಬಾಲಿಸಿಕೊಂಡು ನಾಯಿನಿಷ್ಠೆ ತೋರಿಸುತ್ತದೆ.

3. ನೀವು ನಾಯಿಯಿಂದ ಹೆಚ್ಚು ನಿಷ್ಠೆ ಮತ್ತು ರಕ್ಷಣೆ ಬಯಸುತ್ತೀರ ಎಂದಾದರೆ ಮಸ್ತಿಫ್ಸ್, ರಾಟ್ ವೀಲರ್ಸ್, ಜರ್ಮನ್ ಶಫರ್ಡ್ ಮತ್ತು ಡಾಬರ್ ಮ್ಯಾನ್ ನಾಯಿಗಳ ಆಯ್ಕೆ ಸರಿ. ಅವು ನಿಮ್ಮೊಂದಿಗೆ ಆಡುವುದೂ ಇಲ್ಲ, ನಿಮ್ಮಿಂದ ಏನನ್ನೂ ಬಯಸುವುದೂ ಇಲ್ಲ. ಆದರೆ ನೀವು ಹಾಕುವ ಆಹಾರಕ್ಕೆ ಋಣಿಯಾಗಿ ಅವು ತಮ್ಮ ಕೆಲಸ ನಿಭಾಯಿಸುತ್ತವೆ. ಆದರೆ ಇದು ಯಾರನ್ನೂ ಹೆಚ್ಚು ಬಯಸುವುದಿಲ್ಲ. ಮಸ್ತಿಫ್ಸ್ ನಾಯಿ ಕೇವಲ ತನ್ನ ಯಜಮಾನ ಹೇಳಿದ್ದನ್ನು ಮಾತ್ರ ಅನುಸರಿಸುತ್ತದೆ. ಆದರೆ ಈ ನಾಯಿಗಳ ಆಯ್ಕೆಯಲ್ಲಿ ಎಚ್ಚರಿಕೆ ಇರಲಿ, ದೈತ್ಯಾಕಾರ ದೇಹ ಹೊಂದಿರುವ ಈ ನಾಯಿಗಳು ಅಪಾಯಕಾರಿಯೂ ಆಗಿರುತ್ತವೆ.

ಆದ್ದರಿಂದ ನಾಯಿಗಳನ್ನು ಸಾಕುವ ಮುನ್ನ ಅವುಗಳ ಗುಣವಿಶೇಷಗಳನ್ನು ತಿಳಿದುಕೊಂಡು ನಿಮಗೊಪ್ಪುವಂತೆ ಖರೀದಿಸಿ.

English summary

Which dog breed suits for you | Dogs behaviour and loyalty | ಯಾವ ರೀತಿ ಶ್ವಾನ ನಿಮಗೆ ಸೂಕ್ತ | ಶ್ವಾನದ ನಡವಳಿಕೆ ಮತ್ತು ನಿಷ್ಠೆ

If you are thinking about keeping a dog as your pet then you need to know their basic choice of masters. Here are a few categories based on basic dog psychology that will tell you which breed is suitable for your purpose.
Story first published: Tuesday, August 23, 2011, 17:02 [IST]
X
Desktop Bottom Promotion