For Quick Alerts
ALLOW NOTIFICATIONS  
For Daily Alerts

ಬಿಳಿ, ಕೆಂಪು, ಕಂದು ಹಾಗೂ ಕಪ್ಪು ಅಕ್ಕಿಗಳಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ಯಾವ ಅಕ್ಕಿಯಲ್ಲಿ ಪೋಷಕಾಂಶ ಸಮೃದ್ಧವಾಗಿದೆ?

|

ಭಾರತೀಯ ಅಡುಗೆ ಪದ್ಧತಿಯಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸಿದೆ. ಅನ್ನವಿಲ್ಲದೇ ಊಟ ಸಂಪೂರ್ಣವಾಗದು. ಪ್ರದೇಶಕ್ಕೆ ಅನುಗುಣವಾಗಿ ವಿವಿಧ ಬಗೆಯ ಅಕ್ಕಿಯನ್ನು ಬಳಕೆ ಮಾಡುತ್ತಾರೆ. ಅವುಗಳಲ್ಲಿ ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ ಮತ್ತು ಕಪ್ಪು ಅಕ್ಕಿ ಮುಖ್ಯವಾದುದಾಗಿವೆ. ಪ್ರತಿ ವಿಧವು ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅದರ ಪೌಷ್ಠಿಕಾಂಶದ ಮೌಲ್ಯಗಳ ಬಗ್ಗೆ ತಿಳಿಯಲು ಇಡೀ ಲೇಖನವನ್ನು ಓದಿ.

ಎಲ್ಲಾ ರೀತಿಯ ಅಕ್ಕಿಯು ನೀಡುವ ಮುಖ್ಯ ಪೋಷಕಾಂಶವೆಂದರೆ ಕಾರ್ಬೋಹೈಡ್ರೇಟ್. ಆದರೆ ಕೆಲವು ಅಕ್ಕಿಯಲ್ಲಿ ಹೆಚ್ಚಿದ್ದರೆ, ಕೆಲವು ಅಕ್ಕಿಯಲ್ಲಿ ಇದರ ಪ್ರಮಾಣ ಕಡಿಮೆ ಇರುತ್ತದೆ. ಇನ್ನೂ ಕೆಲವು ತಮ್ಮ ಸಂಸ್ಕರಣಾ ಹಾಗೂ ಪಾಲಿಶ್ ಪ್ರಕ್ರಿಯೆಯಲ್ಲಿ ತಮ್ಮ ಪೋಷಕಾಂಶಗಳ ಮಟ್ಟವನ್ನು ಕಳೆದುಕೊಂಡಿರುತ್ತವೆ. ಹಾಗಾದರೆ ಈ ನಾಲ್ಕು ಬಗೆಯ ಅಕ್ಕಿಗಳಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇವುಗಳಲ್ಲಿರುವ ಪೋಷಕಾಂಶಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಬಿಳಿ, ಕೆಂಪು, ಕಂದು ಹಾಗೂ ಕಪ್ಪಕ್ಕಿಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬಿಳಿ ಅಕ್ಕಿ:

ಬಿಳಿ ಅಕ್ಕಿ:

ಬಿಳಿ ಅಕ್ಕಿಯನ್ನು ಭಾರತದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುವುದು. ಹೊಳೆಯುವ ಬಿಳಿ ಬಣ್ಣವನ್ನು ಪಡೆಯಲು ಇದು ಉನ್ನತ ಮಟ್ಟದ ಸಂಸ್ಕರಣೆ ಮತ್ತು ಪಾಲಿಶ್ ಗಳನ್ನು ಮಾಡಲಾಗುತ್ತದೆ. ಆಗ ಇದು ಥಯಾಮಿನ್ ಮತ್ತು ವಿಟಮಿನ್ ಬಿ ಗಳಂತಹ ಕೆಲವು ಅಗತ್ಯ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಇದು ಹೆಚ್ಚು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲದಿದ್ದರೂ, ಶಕ್ತಿಯ ಮೂಲಕವಾಗಿದೆ. ಏಕೆಂದರೆ ಇದು ಕಾರ್ಬೋಹೈಡ್ರೇಟ್ ಗಳಿಂದ ತುಂಬಿದ್ದು, ನಿಮ್ಮ ದೇಹಕ್ಕೆ ಇತರ ಅಕ್ಕಿ ರೂಪಾಂತರಗಳಿಗಿಂತ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಬಿಳಿ ಅಕ್ಕಿ ತೂಕ ಹೆಚ್ಚಳಕ್ಕೆ ಕಾರಣವಾಗುವುದರಿಂದ ಪ್ರತಿದಿನ ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು.

ಕೆಂಪು ಅಕ್ಕಿ:

ಕೆಂಪು ಅಕ್ಕಿ:

ಕೆಂಪು ಅಕ್ಕಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ? ಕೆಂಪು ಅಕ್ಕಿಗೆ ಆ ಬಣ್ಣ ಹೇಗೆ ಬರುವುದು ಎಂದು ನಿಮಗೆ ತಿಳಿದಿದೆಯೇ? ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕದಿಂದ ಕೆಂಪು ಅಕ್ಕಿ ತನ್ನ ಬಣ್ಣವನ್ನು ಪಡೆಯುತ್ತದೆ. ಕೆಂಪು ಅಕ್ಕಿಯಲ್ಲಿ ಕಬ್ಬಿಣ, ನಾರಿನಂಶ ತುಂಬಿದ್ದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೀವೇನಾದರೂ ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ ಕೆಂಪು ಅಕ್ಕಿಯನ್ನು ಬಳಸಬಹುದು ಏಕೆಂದರೆ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ, ಇದು ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಕೆಂಪು ಅಕ್ಕಿ ಜನಪ್ರಿಯವಾಗಿದೆ.

ಕಂದು ಅಕ್ಕಿ ಅಥವಾ ಬ್ರೌನ್ ರೈಸ್:

ಕಂದು ಅಕ್ಕಿ ಅಥವಾ ಬ್ರೌನ್ ರೈಸ್:

ಇದನ್ನು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ನೀವು ಡಯೆಟ್ ನಲ್ಲಿದ್ದರೆ ಇದರ ಅನ್ನವನ್ನು ತಿನ್ನಲು ಶಿಪಾರಸ್ಸು ಮಾಡಲಾಗುತ್ತದೆ. ಇದು ಬಿಳಿ ಅಕ್ಕಿಯಂತೆ ಸಂಸ್ಕರಣ ಪ್ರಕ್ರಿಯೆಗೆ ಹೋಗುವುದಿಲ್ಲ. ಆದ್ದರಿಂದ ಇದು ಬಿಳಿ ಅಕ್ಕಿಗಿಂತ ಹೆಚ್ಚು ಪೌಷ್ಟಿಕವಾಗಿದೆ. ಏಕೆಂದರೆ ಸಂಸ್ಕರಣಾ ಪ್ರಕ್ರಿಯೆಗೆ ತೆರಳಿದಾಗಲೇ ಅದರ ಹೆಚ್ಚಿನ ಪಾಲು ಪೋಷಕಾಂಶ ನಷ್ಟವಾಗುವುದು. ಆದರೆ ಈ ಕಂದು ಅಕ್ಕಿಯನ್ನು ಬಹಳ ಎಚ್ಚರಿಕೆಯಿಂದ ಬೇಯಿಸಬೇಕು ಎಂಬುದನ್ನು ಗಮನಿಸಿ, ಏಕೆಂದರೆ ಅವು ಬೇಗನೆ ಮೆತ್ತಗಾಗುತ್ತವೆ. ಪ್ರತಿದಿನ ಒಂದು ಕಪ್ ಬ್ರೌನ್ ರೈಸ್ ಅನ್ನು ಸೇವಿಸುವುದರಿಂದ ಮಧುಮೇಹ ಬರುವ ಅಪಾಯವನ್ನು 60%ರಷ್ಟು ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ. ಬ್ರೌನ್ ರೈಸ್ ಕಬ್ಬಿಣ, ಮೆಗ್ನೀಶಿಯಂನಿಂದ ತುಂಬಿದ್ದು, ಸತುವಿನ ಉತ್ತಮ ಮೂಲವಾಗಿದೆ.

ಕಪ್ಪು ಅಕ್ಕಿ:

ಕಪ್ಪು ಅಕ್ಕಿ:

ಕಪ್ಪು ಅಕ್ಕಿಯನ್ನು 'ನಿಷೇಧಿತ ಅಕ್ಕಿ' ಎಂದೂ ಕರೆಯುತ್ತಾರೆ. ಇದು ಶತಮಾನಗಳಿಂದಲೂ ಚೀನೀ ಪಾಕಪದ್ಧತಿಯ ಭಾಗವಾಗಿದೆ. ಈ ಹಿಂದೆ ಇದನ್ನು ರಾಜಮನೆತನದವರಿಗೆ ಮಾತ್ರ ಮೀಸಲಿಡಲಾಗಿತ್ತು. ಕಪ್ಪಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್, ಫೈಟೊಕೆಮಿಕಲ್ಸ್, ಫೈಟೊನ್ಯೂಟ್ರಿಯಂಟ್‌ಗಳು, ವಿಟಮಿನ್ ಇ, ಪ್ರೋಟೀನ್ ಮತ್ತು ಕಬ್ಬಿಣ ಮೊದಲಾದ ಪೋಷಾಂಶಗಳಿವೆ. ಕಪ್ಪು ಅಕ್ಕಿಯು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದೂ ಹೇಳಲಾಗುತ್ತದೆ. ಮೂಲಭೂತವಾಗಿ, ಕಪ್ಪು ಅಕ್ಕಿಯ ಒಂದು ಸೇವೆಯು ಸುಮಾರು 160 ಕ್ಯಾಲೊರಿಗಳನ್ನು ಹೊಂದಿದ್ದು, ನಿಯಮಿತವಾಗಿ ತಿನ್ನಲು ಸಾಮಾನ್ಯ ಬಿಳಿ ಅಕ್ಕಿಯ ಆರೋಗ್ಯಕರ ಪರ್ಯಾಯವಾಗಿದೆ.

Read more about: home kitchen ಮನೆ
English summary

White, Red, and Black Rice: Know the Differences and Benefits in Kannada

Here we talking about White, red, and black rice: Know the differences and benefits in kannada, read on
Story first published: Monday, August 9, 2021, 13:31 [IST]
X
Desktop Bottom Promotion