For Quick Alerts
ALLOW NOTIFICATIONS  
For Daily Alerts

ಯಾವ ಬಣ್ಣದ ಸ್ವಸ್ತಿಕ್‌ ಮನೆಗೆ ಶುಭಕರ

|

ಜಗತ್ತು ಎಷ್ಟೇ ಮುಂದುವರಿಯುತ್ತಿದ್ದರೂ ಕೂಡ ದೈವಿಕ ಶಕ್ತಿಯ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಒಳಿತಿಗಾಗಿ ಪ್ರಾರ್ಥಿಸುವುದು ಭಗವಂತನನ್ನು ಮಾತ್ರ. ದೇವರೇ ಸರ್ವಕಾರ್ಯಗಳಿಗೂ ಕಾರಣ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಆ ನಿಟ್ಟಿನಲ್ಲಿ ಹಲವು ಆಚಾರ-ವಿಚಾರ, ನಂಬಿಕೆಗಳು ನಮ್ಮಲ್ಲಿವೆ. ಅವುಗಳಲ್ಲೊಂದು ಸ್ವಸ್ತಿಕ ಬರೆಯುವ ಪದ್ಧತಿ. ಹೌದು ಸ್ವಸ್ತಿಕ್ ಬರೆದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ರೂಢಿಯಲ್ಲಿದೆ.

swastik is good
ವಾಸ್ತುಶಾಸ್ತ್ರದಲ್ಲಿ ಸ್ವಸ್ತಿಕ್ ಗೆ ವಿಶೇಷ ಸ್ಥಾನವಿದೆ. ಸ್ವಸ್ತಿಕ್ ಬರೆಯುವಾಗ ಬೇರೆಬೇರೆ ವಸ್ತುಗಳಿಂದ ಬರೆಯುವುದುಂಟು. ಇಂತಹ ನಿರ್ಧಿಷ್ಟ ದಿಕ್ಕಿನಲ್ಲಿ, ಇಂತಹ ನಿರ್ಧಿಷ್ಟ ಪ್ರದೇಶದಲ್ಲಿ ಬರೆದರೆ ಅದರ ಪರಿಣಾಮಗಳ ಬಗ್ಗೆ ವಿಭಿನ್ನ ನಂಬಿಕೆಗಳುಂಟು. ಹಾಗಾದ್ರೆ ಸ್ವಸ್ತಿಕ್ ಮನೆಯ ಯಾವ ಭಾಗದಲ್ಲಿ?, ಹೇಗಿದ್ದರೆ?, ಏನು ಪರಿಣಾಮ? ಎಂಬ ಬಗ್ಗೆ ಕೆಲವು ವಿಚಾರಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ.
ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

1. ಹಳದಿ ಬಣ್ಣದ ಸ್ವಸ್ತಿಕವನ್ನು ಗೋಡೆಯಲ್ಲಿ ಉತ್ತರ ಭಾಗಕ್ಕೆ ರಚಿಸಿದರೆ ಅಂದರೆ ಅರಿಶಿಣದಿಂದ ಸ್ವಸ್ತಿಕ್ ಅನ್ನು ಬರೆದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಮತ್ತು ಮಂಗಳ ಕಾರ್ಯ ಮಾಡುವಾಗ ಕೆಂಪು ಬಣ್ಣದ ಸ್ವಸ್ವಿಕ್ ಬರೆಯುವುದು ಶುಭಕರ ಎಂಬ ಭಾವನೆ ಇದೆ.

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

2. ಕಣ್ಣು ಬೀಳುವುದು ಎಂದು ಹೇಳುತ್ತೀವಲ್ಲ ಅಂದರೆ ದೃಷ್ಟಿ ದೋಷದ ಪರಿಹಾರಕ್ಕೆ, ಕೆಟ್ಟ ಸಮಯದ ನಿವಾರಣೆಗೆ ಕಪ್ಪು ಬಣ್ಣದ ಸ್ವಸ್ವಿಕ್ ಅನ್ನು ರಚಿಸಲಾಗುತ್ತದೆ. ಇದ್ದಿಲು ಅಥವಾ ಇದ್ದಿಲಿನ ಪುಡಿಯಿಂದ ಈ ಸ್ವಸ್ವಿಕ್ ಅನ್ನು ಬರೆಯಲಾಗುತ್ತದೆ. ನಿಮ್ಮ ಕುಟುಂಬದ ಮೇಲೆ ಯಾರದ್ದಾದರೂ ಕೆಟ್ಟ ಕಣ್ಣಿದ್ದಲ್ಲಿ ಕಪ್ಪು ಬಣ್ಣದಿಂದ ಅಥವಾ ಇದ್ದಿಲಿನಿಂದ ಬರೆದಿರುವ ಸ್ವಸ್ತಿಕ್ ಅದನ್ನು ತೆಗೆಯುತ್ತದೆ ಎಂದು ಹೇಳಲಾಗುತ್ತದೆ.

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

3. ಕುಂಕುಮ ಅಥವಾ ರಂಗೋಲಿಯಿಂದ ಮನೆಯ ಹೊರಗಡೆ ಪ್ರವೇಶ ದ್ವಾರದ ಬಳಿ ಸ್ವಸ್ತಿಕ್ ಬರೆದರೆ ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಗಣೇಶ ದೇವರು ಸಂತೃಪ್ತನಾಗಲಿದ್ದು, ಇದು ವಿನಾಯಕನ ಚಿಹ್ನೆ ಎಂದು ಕೂಡ ಹೇಳಲಾಗುತ್ತದೆ. ಅಷ್ಟೇ ಅಲ್ಲ ಮನೆಗೆ ಒಳ್ಳೆಯ ಪರಿಣಾಮವನ್ನು ಇದು ಉಂಟುಮಾಡುತ್ತದೆ ಎಂಬ ನಂಬಿಕೆ ಇದೆ.

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

4. ರಾತ್ರಿ ನಿದ್ದೆಯ ಸಮಸ್ಯೆಯಿಂದ ಬಳಲುವ ವ್ಯಕ್ತಿಯು ತಾನು ಮಲಗುವ ಜಾಗದಲ್ಲಿ ತನ್ನ ತೋರು ಬೆರಳಿನಿಂದ ಕೆಂಪು ಬಣ್ಣದಲ್ಲಿ ಸ್ವಸ್ತಿಕ್ ಬರೆದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

ಯಾವ ಬಣ್ಣದ ಸ್ವಸ್ತಿಕ್‌ ಏನನ್ನು ಸೂಚಿಸುತ್ತದೆ

5. ಸ್ವಸ್ತಿಕ್ ಅನ್ನು ಸರಿಯಾದ ಜಾಗದಲ್ಲಿ, ಸರಿಯಾದ ಕ್ರಮದಲ್ಲಿ ಬರೆಯಬೇಕು. ಒಂದು ವೇಳೆ ಕೊಳಕು ಪ್ರದೇಶದಲ್ಲಿ, ಟಾಯ್ಲೆಟ್, ಬಚ್ಚಲು, ಇತ್ಯಾದಿ ಕಡೆಗಳಲ್ಲಿ ಸ್ವಸ್ವಿಕ್ ಚಿಹ್ನೆಯ ರಚನೆ ಇದ್ದಲ್ಲಿ ಅದು ಕೆಟ್ಟದ್ದನ್ನು ಹೆಚ್ಚಿಸಬಹುದು. ಒತ್ತಡವನ್ನು ಅಧಿಕಗೊಳಿಸುತ್ತದೆ. ಮನೆ ಮಂದಿಗೆ ಕಾಯಿಲೆ ತರಿಸುತ್ತದೆ ಎಂದು ನಂಬಲಾಗುತ್ತದೆ.

English summary

Which Color Swastik Is Wealthy For Home

Here we are discussing about to change your destiny which color swastik is good to you and home. Even today, there are many people who believe in God and leave no stone unturned in worshiping him.. In such a situation, people make swastikas at home even today, because by making swastikas, there is peace in the house. In such a situation, Swastika is considered very special in Vastu and its many benefits have been told, but Swastik made from different things gives different fruits. Today we are going to tell you about them. Let's know. Read more.
X
Desktop Bottom Promotion