For Quick Alerts
ALLOW NOTIFICATIONS  
For Daily Alerts

ಕ್ವಾರೆಂಟೈನ್ ಚಿಂತೆ ಬಿಡಿ, ಸವಿಯಿರಿ ಕಲ್ಲಂಗಡಿ ಐಸ್‌ಕ್ಯಾಂಡಿ, ಸ್ಮೂತಿ, ಜ್ಯೂಸ್

|

ಕ್ವಾರೆಂಟೈನ್‌ ಆದಾಗಿನಿಂದ ಜನರ ಬದುಕಿನ ಶೈಲಿಯೇ ಬದಲಾಗಿದೆ. ಊಟ-ತಿಂಡಿ ಎಲ್ಲದಕ್ಕೂ ಆನ್‌ಲೈನ್ ಮೊರೆ ಹೋಗಿದ್ದವರು ಇದೀಗ ಮನೆಯೂಟ ರುಚಿ ನೋಡುತ್ತಿದ್ದಾರೆ. ಇನ್ನು ಮನೆಯಲ್ಲಿ ಅಮ್ಮಂದಿರು ಮಕ್ಕಳಿಗೆ ರುಚಿಕರವಾದ ತಿಂಡಿ-ತಿನಿಸುಗಳನ್ನು ಮಾಡಿ ನೀಡುತ್ತಿದ್ದಾರೆ.

Watermelon Recipes For Summer

ಬೇಸಿಗೆಯಲ್ಲಿ ಐಸ್‌ಕ್ಯಾಂಡಿ, ಜ್ಯೂಸ್‌, ಸ್ಮೂತಿ ಇಂಥ ತಣ್ಣನೆಯ ಆಹಾರ ಸವಿಯುವ ಮನಸ್ಸಾಗುವುದು. ಈ ಸಮಯದಲ್ಲಿ ಯಾವ ಜ್ಯೂಸ್‌ ಅಂಗಡಿಯೂ ಇಲ್ಲ, ಕ್ಯಾಂಡಿಯೂ ಸಿಗಲ್ಲ, ಬಹುಶಃ ಅದೆಲ್ಲಾ ಶುರುವಾಗುವ ಹೊತ್ತಿಗೆ ಮಳೆಗಾಲ ಶುರುವಾಗಿರುತ್ತದೆ, ಅಯ್ಯೋ ಈ ವರ್ಷ ಐಸ್‌ಕ್ಯಾಂಡಿ ಸವಿಯುವುದೇ ಇಲ್ವಾ ಅಂತ ಬೇಸರ ಪಡಬೇಡಿ, ಐಸ್‌ಕ್ಯಾಂಡಿಯನ್ನು ನೀವು ಸುಲಭವಾಗಿ ಮನೆಯಲ್ಲಿಯೇ ಮಾಡಿದ್ದೇವೆ. ಅಲ್ಲದೆ ಸ್ಮೂತಿ, ಜ್ಯೂಸ್ ರುಚಿಯೂ ಸವಿಯಬಹುದು.

ಬೇಸಿಗೆಯಲ್ಲಿ ಕಲ್ಲಂಗಡಿ ತುಂಬಾ ಸಿಗುತ್ತವೆ. ಇಲ್ಲಿ ನಾವು ಕಲ್ಲಂಗಡಿಯಿಂದ ಐಸ್‌ಕ್ಯಾಂಡಿ, ಸ್ಮೂತಿ, ಜ್ಯೂಸ್ ಬೇಸಿಗೆಯಲ್ಲಿ ಸವಿಯಲು ಸೂಕ್ತವಾದ ಕೆಲವೊಂದು ರೆಸಿಪಿಗಳನ್ನು ನೀಡಿದ್ದೇವೆ ನೋಡಿ:

1. ಕಲ್ಲಂಗಡಿ ಐಸ್‌ ಕ್ಯಾಂಡಿ

1. ಕಲ್ಲಂಗಡಿ ಐಸ್‌ ಕ್ಯಾಂಡಿ

ಬೇಕಾಗುವ ಸಾಮಗ್ರಿ

ಕಲ್ಲಂಗಡಿ ಹಣ್ಣು 5 ಕಪ್

ಸಕ್ಕರೆ ಅಥವಾ ಜೇನು (ರುಚಿಗೆ ತಕ್ಕಷ್ಟು)

ಚಿಟಿಕೆಯಷ್ಟು ಉಪ್ಪು

ಅರ್ಧ ಇಂಚಿನಷ್ಟು ಶುಂಠಿ

ಮಾಡುವ ವಿಧಾನ

ಬೀಜ ತೆಗೆದು ಕಲ್ಲಂಗಡಿ, ಸಕ್ಕರೆ, ಚಿಟಿಕೆಯಷ್ಟು ಉಪ್ಪು, ಶುಂಠಿ ಹಾಕಿ ರುಬ್ಬಿ, ಅದನ್ನು ಕ್ಯಾಂಡಿ ಮೌಲ್ಡ್‌ನಲ್ಲಿ ಹಾಕಿ 4 ತಾಸು ಫ್ರಿಡ್ಜ್‌ನಲ್ಲಿ ಇಡಿ. ನಂತರ ತೆಗೆದು ಮಕ್ಕಳಿಗೆ ಸವಿಯಲು ನೀಡಿ.

2. ಕಲ್ಲಂಗಡಿ ಜ್ಯೂಸ್

2. ಕಲ್ಲಂಗಡಿ ಜ್ಯೂಸ್

ಬೇಕಾಗುವ ಸಾಮಗ್ರಿ

' ಕಲ್ಲಂಗಡಿ 1 ಕಪ್

ಜೀರಿಗೆ 1 ಚಮಚ

ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ

ಚಿಟಿಕೆಯಷ್ಟು ಚಾಟ್‌ ಮಸಾಲ

ರುಚಿಗೆ ತಕ್ಕ ಉಪ್ಪು

ಅರ್ಧ ಕಪ್ ನೀರು

ಮಾಡುವ ವಿಧಾನ

  • ಜೀರಿಗೆಯನ್ನು ಹುರಿದು ಪುಡಿ ಮಾಡಿ ಇಡಿ.
  • ಈಗ ಕಲ್ಲಂಗಡಿಯನ್ನು ಸ್ವಲ್ಪ ನೀರು ಸೇರಿಸಿ ಜ್ಯೂಸ್ ಮಾಡಿ, ನಂತರ ಅದಕ್ಕೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಚಾಟ್‌ ಮಸಾಲ, ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಿದರೆ ಜ್ಯೂಸ್ ರೆಡಿ. ಇದನ್ನು ಫ್ರಿಡ್ಜ್‌ನಲ್ಲಿಟ್ಟು ಕುಡಿಯಲು ರುಚಿಕರವಾಗಿರುತ್ತದೆ.
  • 3. ಕಲ್ಲಂಗಡಿ ಪಂಚ್

    3. ಕಲ್ಲಂಗಡಿ ಪಂಚ್

    ಸಾಮಗ್ರಿ

    1 ದೊಡ್ಡ ಕಲ್ಲಂಗಡಿ

    1 ಕಪ್ ವೋಡ್ಕಾ

    ಅರ್ಧ ಕಪ್ ಸಕ್ಕರೆ

    15 ತುಳಸಿ ಎಲೆ

    ಮಾಡುವ ವಿಧಾನ

    ಒಂದು ದೊಡ್ಡ ಬೌಲ್‌ನಲ್ಲಿ ವೋಡ್ಕಾ, ಸಕ್ಕರೆ, ತುಳಸಿ ಎಲೆ, ಕಲ್ಲಂಗಡಿ ಹಣ್ಣು ಹಾಕಿ ಮಿಕ್ಸ್ ಮಾಡಿ 2 ಗಂಟೆ ಫ್ರಿಡ್ಜ್‌ನಲ್ಲಿಡಿ. ಇಷ್ಟು ಮಾಡಿದರೆ ಕಲ್ಲಂಗಡಿ ಪಂಚ್ ರೆಡಿ. ಇದಕ್ಕೆ ಉಪ್ಪು, ಕಾಳು ಮೆಣಸಿನ ಪುಡಿ ಉದುರಿಸಿ, ಪಂಚ್ ಸವಿಯಿರಿ.

    4. ಕಲ್ಲಂಗಡಿ ಸ್ಮೂತಿ ರೆಸಿಪಿ

    4. ಕಲ್ಲಂಗಡಿ ಸ್ಮೂತಿ ರೆಸಿಪಿ

    ಬೇಕಾಗುವ ಸಾಮಗ್ರಿ

    ಕಲ್ಲಂಗಡಿ 1 ಕಪ್

    ಬಾಳೆಹಣ್ಣು 1

    ವೆನಿಲ್ಲಾ ಯೋಗರ್ಟ್ ಅರ್ಧ ಕಪ್

    ಐಸ್‌ ಕ್ಯೂಬ್ಸ್

    ಸಕ್ಕರೆ ಅರ್ಧ ಚಮಚ

    ಮಾಡುವ ವಿಧಾನ

    ಬಾಳೆಹಣ್ಣು ಹಾಗೂ ಕಲ್ಲಂಡಿ ಹಣ್ಣನ್ನು(ಬೀಜ ತೆಗೆದು) ಬ್ಲೆಂಡ್ ಮಾಡಿ. ಈಗ ವೆನಿಲ್ಲಾ ಯೋಗರ್ಟ್ ಸೇರಿಸಿ, ಸಕ್ಕರೆ ಸೇರಿಸಿ ಬ್ಲೆಂಡ್ ಮಾಡಿ.

    ಈಗ ಲೋಟಕ್ಕೆ ಐಸ್‌ಕ್ಯೂಬ್ಸ್ ಹಾಕಿ, ಸ್ಮೂತಿ ಸುರಿದು ಸವಿಯಿರಿ.

English summary

Watermelon Recipes For Summer

To make watermelon all the more interesting, Boldsky brings to you a list of seven mouthwatering watermelon recipes which is sure to give your taste-buds a chilling thrill.
Story first published: Wednesday, April 15, 2020, 16:49 [IST]
X
Desktop Bottom Promotion