For Quick Alerts
ALLOW NOTIFICATIONS  
For Daily Alerts

ಬಾಳೆಹಣ್ಣು ಹಾಳಾಗದಂತೆ ತಡೆಯಲು ಟಿಪ್ಸ್

|

ಒಂದು ಗೊನೆ ಅಥವಾ ಒಂದು ಚಿಪ್ಪು ಬಾಳೆ ಹಣ್ಣು ಮನೆಯಲ್ಲಿರುತ್ತದೆ. ಅಷ್ಟೇನು ಹಣ್ಣಾಗಿರಲ್ಲ ಅಂತ ಅದರತ್ತ ಗಮನ ಕೊಟ್ಟಿರಲ್ಲ, ಮಾರನೇಯ ದಿನ ನೋಡಿದರೆ ಎಲ್ಲಾ ಹಣ್ಣಾಗಿರುತ್ತೆ. ಅಷ್ಟೂ ಬಾಳೆಹಣ್ಣು ತಿನ್ನಲು ಸಾಧ್ಯವಾಗುವುದಿಲ್ಲ, ನಾಳೆಗೆ ಇಡೋಣ ಅಂದ್ರೆ ಅಷ್ಟೊತ್ತಿಗೆ ಅದು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ, ಅದು ತಿನ್ನಲು ಇಷ್ಟವಾಗಲ್ಲ, ಸುಮ್ಮನೆ ಬಿಸಾಡಬೇಕಾಗುತ್ತೆ.

Very Dangerous To Keep These Things In A Child’s Room

ಕೈ ಸುಡುವ ರೇಟ್‌ನಲ್ಲಿ ಕೊಂಡ ಹಣ್ಣುಗಳನ್ನು ಬಿಸಾಡಲು ಹೊಟ್ಟೆ ಉರಿಯುತ್ತೆ, ಆದರೆ ನೀವು ಬಾಳೆಹಣ್ಣು ಹಾಳಾಗದಂತೆ ಈ ಕೆಳಗಿನ ಟಿಪ್ಸ್ ಬಳಸಿ ತಡೆಯಬಹುದಾಗಿದೆ. ಬನ್ನಿ ಅವು ಏನು ಎಂದು ನೋಡೋಣ:

1. ಬಾಳೆಹಣ್ಣನ್ನು ನೇತು ಹಾಕಿ

1. ಬಾಳೆಹಣ್ಣನ್ನು ನೇತು ಹಾಕಿ

ಬಾಳೆಕಾಯಿಯನ್ನು ಗಿಡದಿಂದ ಕಡಿದ ಬಳಿಕ ಅದು ಹಣ್ಣಾಗಲು ಆರಂಭಿಸುತ್ತದೆ. ನೀವು ಕೊನೆ ಕಡಿದು ಹಾಗೇ ಇಟ್ಟರೆ ಬೇಗನೆ ಹಣ್ಣಾಗುತ್ತದೆ, ಅದೇ ನೇತು ಹಾಕಿದರೆ ಎಲ್ಲಾ ಹಣ್ಣು ಒಟ್ಟಿಗೆ ಹಣ್ಣಾಗುವುದಿಲ್ಲ.

2. ಬಾಳೆಕಾಯಿ ಕೊಂಡುಕೊಳ್ಳಿ

2. ಬಾಳೆಕಾಯಿ ಕೊಂಡುಕೊಳ್ಳಿ

ನೀವು ಬಾಳೆಹಣ್ಣು ಕೊಳ್ಳುವ ಬದಲು ಸ್ವಲ್ಪ ಕಾಯಿ ಇರುವುದನ್ನು ಕೊಂಡು ತಂದು ಹಣ್ಣು ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಎರಡು ಪ್ರಯೋಜನ:

1. ಬಾಳೆಹಣ್ಣು ಹಣ್ಣಾಗಿ ಹಾಳಾಗುವುದನ್ನು ತಡೆಯಬಹುದು

2. ನೀವೇ ಹಣ್ಣು ಮಾಡುವುದರಿಂದ ಅದಕ್ಕೆ ಹಣ್ಣಾಗಲು ರಾಸಾಯನಿಕ ಬಳಸಿರಬಹುದು ಎಂಬ ಆತಂಕವೂ ಬೇಡ.

 3. ಅದರ ದಂಟನ್ನು ಪ್ಲಾಸ್ಟಿಕ್‌ ಕವರ್‌ನಿಂದ ಸುತ್ತಿ

3. ಅದರ ದಂಟನ್ನು ಪ್ಲಾಸ್ಟಿಕ್‌ ಕವರ್‌ನಿಂದ ಸುತ್ತಿ

ಇನ್ನು ಬಾಳೆ ಚಿಪ್ಪನ ಬುಡವನ್ನು ನೀವು ಪ್ಲಾಸ್ಟಿಕ್‌ ಕವರ್‌ನಿಂದ ಸುತ್ತಿಡುವುದರಿಂದ ಬೇಗನೆ ಕಪ್ಪಾಗುವುದನ್ನು ತಡೆಯಬಹುದು.

4. ಹಣ್ಣಾದ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿಡಿ

4. ಹಣ್ಣಾದ ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿಡಿ

ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವುದು ಒಳ್ಳೆಯ ಆಯ್ಕೆ ಅಲ್ಲ... ಆದರೆ ಬಾಳೆಹಣ್ಣು ತುಂಬಾ ಹಣ್ಣಾದಾಗ, ಅದನ್ನು ನಾಳೆ, ನಾಡಿದ್ದು ಬಳಸಲು ಬೇಕು ಎಂದರೆ ಫ್ರಿಡ್ಜ್‌ನಲ್ಲಿಡಿ. ಆದರೆ ಸ್ವಲ್ಪ ಹಣ್ಣಾದ ಬಾಳೆಹಣ್ಣು ಇಡಬೇಡಿ. ಇಡುವುದಾದರೆ ತುಂಬಾ ಹಣ್ಣಾದ ಬಾಳೆಹಣ್ಣು ಅಷ್ಟೇ ಇಡಿ.

5. ಹಣ್ಣನ್ನು ಫ್ರೀಜ್ ಮಾಡುವುದು

5. ಹಣ್ಣನ್ನು ಫ್ರೀಜ್ ಮಾಡುವುದು

ಬಾಳೆಹಣ್ಣು ತುಂಬಾ ಹಣ್ಣಾಗಿದ್ದರೆ ನಾಳೆ ಅದರಿಂದ ಏನಾದರೂ ಡೆಸರ್ಟ್ ಮಾಡುವುದಾದರೆ ಅದರ ಸಿಪ್ಪೆ ಸುಲಿದು ಕತ್ತರಿಸಿ, ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಇದನ್ನು ರಸಾಯನ, ಫ್ರೂಟ್‌ ಸಲಾಡ್, ಬಾಳೆ ಹಣ್ಣಿನ ಜ್ಯೂಸ್ ಮಾಡಲು ಬಳಸಬಹುದು. ಈ ರೀತಿ ಫ್ರೀಜ್‌ ಮಾಡಿಟ್ಟರೆ ನೀವು ಒಂದು ವಾರದವರೆಗೂ ಬಳಸಬಹುದು.

6. ಬಾಳೆಹಣ್ಣಿನ ಬಾಕ್ಸ್ ಕೊಳ್ಳಿ

6. ಬಾಳೆಹಣ್ಣಿನ ಬಾಕ್ಸ್ ಕೊಳ್ಳಿ

ನೀವು ಬಾಳೆಹಣ್ಣನ್ನು ಲಂಚ್‌ ಬಾಕ್ಸ್ ಜೊತೆ ಕೊಂಡೊಯ್ಯ ಬಯಸುವುದಾದರೆ ಅದು ಕಿವುಚಿ ಹೋಗುವ ಸಾಧ್ಯತೆ ಹೆಚ್ಚು, ಅಲ್ಲದೆ ಅಂಥ ಬಾಳೆಹಣ್ಣು ತಿನ್ನಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಬಾಳೆಹಣ್ಣಿನ ಬಾಕ್ಸ್ ಇದೆ. ಅದರಲ್ಲಿ ಇಟ್ಟರೆ ಹಾಳಾಗುವುದಿಲ್ಲ.

Read more about: food tips ಆಹಾರ ಸಲಹೆ
English summary

Very Dangerous To Keep These Things In A Child’s Room

Here are tips to keep your banana from spoiling, read on..
Story first published: Thursday, March 4, 2021, 17:45 [IST]
X
Desktop Bottom Promotion