For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ: ಕೈಯಲ್ಲಿ ಹಣ ಉಳಿಯಬೇಕೆಂದರೆ ಮನೆ ವಾಸ್ತು ಹೀಗಿರಬೇಕು

|

ಪ್ರತಿಯೊಬ್ಬರು ನಮ್ಮ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ನೆಲೆಸಿರಬೇಕು, ಹಣದ ಕೊರತೆ ಉಂಟಾಗಬಾರದು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಬಡವ ತನ್ನ ದಾರಿದ್ರ್ಯವೆಲ್ಲಾ ಹೋಗುವಂತೆ ಮಾಡು ದೇವರೇ ಎಂದು ಪ್ರಾರ್ಥಿಸಿದರೆ ಹಣವಂತ ತನ್ನ ಮನೆಯ ಐಶ್ವರ್ಯವನ್ನು ಮತ್ತಷ್ಟು ಹೆಚ್ಚಿಸು ದೇವರೇ ಎಂದು ಪ್ರಾರ್ಥಿಸುತ್ತಾರೆ.

Vastu Tips for Money

ಹಣವೆಂಬುವುದು ಪ್ರತಿಯೊಬ್ಬರ ಬದುಕಿನಲ್ಲಿ ತುಂಬಾನೇ ಮುಖ್ಯ. ಹಣವಿಲ್ಲದೆ ಜೀವನ ನಡೆಸುವುದು ಈಗೀನ ಜಗತ್ತಿನಲ್ಲಿ ಸಾಧ್ಯನೇ ಇಲ್ಲ.. ಕುಡಿಯುವ ನೀರಿನಿಂದ ಹಿಡಿದು ಉಸಿರಾಡುವ ಆಮ್ಲಜನಕದವರೆಗೆ ದುಡ್ಡು ಕೊಟ್ಟರೆ ಮಾತ್ರ ಸಿಗುವುದು. ಆದ್ದರಿಂದ ಎಲ್ಲದಕ್ಕೂ ದುಡ್ಡಿದ್ದರೆ ಮಾತ್ರ ಜೀವನ ನಡೆಯುವುದು.

ವಾಸ್ತು ಶಾಸ್ತ್ರವು ಮನೆಯಲ್ಲಿ ಹಣ ಇರಬೇಕಾದರೆ ಅಥವಾ ಹಣ ನಿಮ್ಮ ಕೈಯಲ್ಲಿ ಉಳಿಯಬೇಕಾದರೆ ಕೆಲವೊಂದು ವಾಸ್ತು ಟಿಪ್ಸ್‌ ಅನ್ನು ಮನೆಯಲ್ಲಿ ಅಳವಡಿಸುವುದು ಒಳ್ಳೆಯದು ಎಂದು ಹೇಳಲಾಗಿದೆ, ಬನ್ನಿ ಅದೇನೆಂದು ನೋಡೋಣ:

ಕುಬೇರ ಯಂತ್ರ ಉತ್ತರ, ಪೂರ್ವ, ಈಶಾನ್ಯ ಭಾಗದಲ್ಲಿ ಇಡಬೇಕು

ಕುಬೇರ ಯಂತ್ರ ಉತ್ತರ, ಪೂರ್ವ, ಈಶಾನ್ಯ ಭಾಗದಲ್ಲಿ ಇಡಬೇಕು

ಈ ಭಾಗಗಳನ್ನು ಕುಬೇರ ಮೂಲೆ ಎಂದು ಕರೆಯಲಾಗುವುದು. ಈ ಭಾಗದಲ್ಲಿ ಚಪ್ಪಲಿ ಇಡುವುದು, ದೊಡ್ಡ ಪೀಠೋಪಕರಣಗಳನ್ನು ಇಡುವುದ ಮಾಡಬಾರದು. ಈ ಭಾಗದಲ್ಲಿ ಟಾಯ್ಲೆಟ್ ಕೂಡ ಇರಬಾರದು. ಮನೆಯ ಎಲ್ಲಾ ಉತ್ತರ ಭಾಗದಲ್ಲಿ ಕುಬೇರ ಯಂತ್ರ ಇಡುವುದರಿಂದ ಹೊಸ ಹಣಕಾಸಿನ ಅವಕಾಶಗಳು ದೊರೆಯುವುದು.

ಲಾಕರ್‌ ಹಾಗೂ ಇತರ ಸುರಕ್ಷಿತ ವಸ್ತುಗಳನ್ನು ನೈರುತ್ಯ ಭಾಗದಲ್ಲಿ ಇಡಬೇಕು

ಲಾಕರ್‌ ಹಾಗೂ ಇತರ ಸುರಕ್ಷಿತ ವಸ್ತುಗಳನ್ನು ನೈರುತ್ಯ ಭಾಗದಲ್ಲಿ ಇಡಬೇಕು

ನಿಮ್ಮ ಆಭರಣ, ಹಣ, ಮಹತ್ವವಾದ ದಾಖಲೆಗಳು ಇವುಗಳನ್ನು ನೈರುತ್ಯ ಭಾಗದಲ್ಲಿ ಇಡಬೇಕು. ಇಂಥ ಅಮೂಲ್ಯ ವಸ್ತುಗಳನ್ನು ಈ ಭಾಗದಲ್ಲಿ ಇಡುವುದರಿಂದ ಅವು ಹೆಚ್ಚಾಗುವುದು ಎಂದು ಹೇಳಲಾಗುವುದು. ಇಂಥ ವಸ್ತುಗಳನ್ನು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಇಡಲೇಬಾರದು. ಲಾಕರ್‌ ಬಾಗಿಲು ನೈರುತ್ಯ ದಿಕ್ಕಿನಲ್ಲಿರಬೇಕು.

 ಮನೆಯನ್ನು ಶುದ್ಧವಾಗಿ ಇಡಿ

ಮನೆಯನ್ನು ಶುದ್ಧವಾಗಿ ಇಡಿ

ಮನೆಯಲ್ಲಿ ಒಡೆದ ವಸ್ತುಗಳನ್ನು ಇಡುವುದು, ಗಲೀಜಾಗಿ ಇಡುವುದು ಮಾಡಬಾರದು. ಮನೆಯನ್ನು ತುಂಬಾ ಶುದ್ಧವಾಗಿ ಇಡಬೇಕು. ಮುರಿದ, ಬೇಡದ ವಸ್ತುಗಳನ್ನು ಬಿಸಾಡಿ. ಅದರಲ್ಲೂ ಮನೆಯ ಹಾಲ್‌ ತುಂಬಾ ಒಪ್ಪವಾಗಿಡಿ. ನಿಮ್ಮ ಮನೆಯ ಕಿಟಕಿ, ಬಾಗಿಲುಗಳಲ್ಲಿ ದೂಳು ಕೂರಲು ಬಿಡಬೇಡಿ, ಮನೆಯಲ್ಲಿ ಬಲೆ ಕಟ್ಟಿದ್ದರೆ ಅದನ್ನು ತೆಗೆಯಿರಿ.

ಮನೆಯ ಮುಂಬಾಗಿಲು ಒಡೆದಿರಬಾರದು

ಮನೆಯ ಮುಂಬಾಗಿಲು ಒಡೆದಿರಬಾರದು

ನಿಮ್ಮ ಮನೆಯ ಮುಂಬಾಗಲು ಒಡೆದಿರಬಾರದು, ಒಂದು ವೇಳೆ ಹಾಗಿದ್ದರೆ ಕೂಡಲೇ ಸರಿಪಡಿಸಿ. ಮನೆಯ ಮುಂಬಾಗಲು ನೋಡಲು ಸುಂದರವಾಗಿರಬೇಕು. ಮನೆಯ ಮುಂದುಗಡೆ ಹಸಿರು ಇರಲಿ, ಮನೆಯೊಳಗಡೆ ಬೆಳಕು ಸರಿಯಾಗಿ ಬೀಳುವಂತೆ ಇರಲಿ.

ಈಶಾನ್ಯ ಭಾಗದಲ್ಲಿ ಚಿಕ್ಕ ಅಕ್ವೇರಿಯಂ ಅಥವಾ ಚಿಕ್ಕ ಫೌಂಟೇನ್ ಇರಲಿ

ಈಶಾನ್ಯ ಭಾಗದಲ್ಲಿ ಚಿಕ್ಕ ಅಕ್ವೇರಿಯಂ ಅಥವಾ ಚಿಕ್ಕ ಫೌಂಟೇನ್ ಇರಲಿ

ನೀರು ಬೀಳುವಂತೆ ಮನೆಯ ಈಶಾನ್ಯ ಭಾಗದಲ್ಲಿ ಇರುವುದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಇಂಥ ಸ್ಥಳದ ಸ್ವಚ್ಛತೆ ಕಡೆ ಗಮನ ಹರಿಸಬೇಕು. ಇದು ಗಲೀಜಾಗಿ ಇರಬಾರದು. ಇದರಿಂದ ಮನೆಯಲ್ಲಿ ಹಣವು ಉತ್ತಮ ಸ್ಥಿತಿಯಲ್ಲಿರುವುದು.

ಈಶಾನ್ಯ, ಆಗ್ನೇಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇರಲೇಬಾರದು

ಈಶಾನ್ಯ, ಆಗ್ನೇಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇರಲೇಬಾರದು

ನೀರಿನ ಟ್ಯಾಂಕ್ ಅನ್ನು ಈಶಾನ್ಯ, ಆಗ್ನೇಯ ದಿಕ್ಕಿನಲ್ಲಿ ಇರಬಾರದು, ಇದ್ದರೆ ಇದರಿಂದ ಮನೆಯ ಸದಸ್ಯರಲ್ಲಿ ಅನೇಕ ರೀತಿಯ ಒತ್ತಡಗಳು, ಆರೋಗ್ಯ ಸಮಸ್ಯೆಗಳು ಇದ್ದು ಹಣ ಖರ್ಚಾಗುವುದು.

 ನೀರು ಪೋಲಾಗಬಾರದು

ನೀರು ಪೋಲಾಗಬಾರದು

ಮನೆಯ ನಲ್ಲಿ, ಪೈಪ್‌ಗಳಲ್ಲಿ ನೀರು ಸೋರಿಕೆಯಾಗಿ ಪೋಲಾಗದಂತೆ ನೋಡಿಕೊಳ್ಳಿಕೊಳ್ಳಿ. ನಲ್ಲಿಯಲ್ಲಿ ಲೀಕೇಜ್ ಇದ್ದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

 ಮನೆಯ ಆಗ್ನೇಯ ದಿಕ್ಕಿನಲ್ಲಿ ಟಾಯ್ಲೆಟ್ ಇರಬಾರದು

ಮನೆಯ ಆಗ್ನೇಯ ದಿಕ್ಕಿನಲ್ಲಿ ಟಾಯ್ಲೆಟ್ ಇರಬಾರದು

ಟಾಯ್ಲೆಟ್‌ ಹಾಗೂ ಬಾತ್‌ರೂಂ ವಾಸ್ತು ಪ್ರಕಾರ ನಿರ್ಮಿಸದಿದ್ದರೆ ಮನೆಗೆ ದೋಷ ಉಂಟಾಗುವುದು. ಇದರಿಂದ ನಿದ್ದೆಗೆ ತೊಂದರೆಯಾಗುವುದು, ಮನೆಯ ಒಡೆಯನಿಗೆ ನೆಮ್ಮದಿ ಇರಲ್ಲ. ಆದ್ದರಿಂದ ಟಾಯ್ಲೆಟ್ ಅನ್ನು ಆಗ್ನೇಯ, ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ.

English summary

Vastu Tips for Money : Vastu Tips For Increasing & Saving Money in kannada

Vastu Tips for Money : Vastu Tips For Increasing & Saving Money in kannada, Read on...
X
Desktop Bottom Promotion