For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕೆ ಮನೆಯ ವಾಸ್ತು ಹೀಗಿರಲಿ

|

ಆರೋಗ್ಯ ಪ್ರತಿಯೊಬ್ಬರಿಗೂ ಅತೀ ಅಗತ್ಯ. ಆರೋಗ್ಯವಿಲ್ಲದೆ ಇದ್ದರೆ ಆಗ ವಿವಿಧ ರೀತಿಯ ಸಮಸ್ಯೆಗಳು ಕಾಡುವುದು. ಆರೋಗ್ಯವು ಸಂಪತ್ತನ್ನು ಹೆಚ್ಚಿಸಿದರೆ, ಅದೇ ಅನಾರೋಗ್ಯವು ಸಂಪತ್ತನ್ನು ಕರಗಿಸುವುದು. ಹೀಗಾಗಿ ಉತ್ತಮ ಆರೋಗ್ಯವಂತ ಜೀವನ ನಡೆಸಲು ಕೆಲವೊಂದು ವಾಸ್ತುಶಾಸ್ತ್ರದ ವಿಧಾನಗಳನ್ನು ಅಳವಡಿಸಿಕೊಂಡು ಹೋಗಬೇಕು. ವಾಸ್ತು ಕೇವಲ ನಿರ್ಮಾಣ ಕಾರ್ಯಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ಆರೋಗ್ಯಕ್ಕೂ ಇದನ್ನು ಅಳವಡಿಸಿಕೊಳ್ಳಬಹುದು.

Vastu Tips For Good Health

ಉತ್ತಮ ಆರೋಗ್ಯ ಹಾಗೂ ಮನೆಯಲ್ಲಿ ಕುಟುಂಬ ಸದಸ್ಯರು ಸಂತೋಷವಾಗಿ ಇರಬೇಕಾದರೆ ಪಾಲಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಮಲಗುವ ದಿಕ್ಕು

ಮಲಗುವ ದಿಕ್ಕು

ಸಂಪೂರ್ಣ ಆರೋಗ್ಯ ಪಡೆಯಬೇಕಾದರೆ ದಕ್ಷಿಣಕ್ಕೆ ತಲೆಯಿಟ್ಟು ಮಲಗಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾತ ಮತ್ತು ಕಫ ದೇಹ ಪ್ರಕೃತಿ ಹೊಂದಿರುವಂತಹವರು ಎಡ ಬದಿಗೆ ಮಲಗಬೇಕು ಮತ್ತು ಪಿತ್ತ ಪ್ರವೃತ್ತಿ ಹೊಂದಿರುವ ದೇಹದವರು ಬಲದ ಬದಿಗೆ ಮಲಗಬೇಕು.

ಮನೆಯ ಮೆಟ್ಟಿಲು

ಮನೆಯ ಮೆಟ್ಟಿಲು

ಮನೆಯಲ್ಲಿ ಮೆಟ್ಟಿಲುಗಳು ಮನೆಯ ಮಧ್ಯಭಾಗದಲ್ಲಿ ಇರಲೇಬಾರದು. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರುವುದು. ಹೀಗಾಗಿ ಒಂದೇ ಬದಿಗೆ ಇದನ್ನು ಅಳವಡಿಸಿ.

ಬ್ರಹ್ಮಸ್ಥಾನ ಖಾಲಿ

ಬ್ರಹ್ಮಸ್ಥಾನ ಖಾಲಿ

ಮನೆಯ ಮಧ್ಯ ಭಾಗವನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುತ್ತದೆ. ಈ ಭಾಗವು ಯಾವಾಗಲೂ ಖಾಲಿಯಾಗಿ ಇರಬೇಕು. ಕೇಂದ್ರ ಭಾಗದಲ್ಲಿ ಯಾವುದೇ ಪೀಠೋಪಕರಣಗಳನ್ನು ಇಡಬೇಡಿ. ಈ ಭಾಗವು ಖಾಲಿಯಾಗಿರಲಿ. ಮನೆಯ ಕೇಂದ್ರ ಭಾಗದಿಂದ ಕೆಲವು ಕಂಬಗಳು ಹೋಗಿರುವುದು ಒತ್ತಡ ಹಾಗೂ ಮನಸ್ಥಿತಿಯಲ್ಲಿ ಗೊಂದಲ ಉಂಟು ಮಾಡುವುದು.

ಸ್ಪಟಿಕದ ಜಾಲರಿ

ಸ್ಪಟಿಕದ ಜಾಲರಿ

ಮನೆಯ ಮಧ್ಯ ಭಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡಬೇಡಿ. ಬ್ರಹ್ಮಸ್ಥಾನವು ಎಲ್ಲಾ ಕಂಬ ಅಥವಾ ಪೀಠೋಪಕರಣಗಳಿಂದ ಮುಕ್ತವಾಗಿ ಇರಬೇಕು. ಈ ಭಾಗವು ಖಾಲಿ ಇರಲಿ. ಸ್ಪಟಿಕದ ಜಾಲರಿ ಇದಕ್ಕೆ ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಮನೆಯಲ್ಲಿ ಧನಾತ್ಮಕ ಶಕ್ತಿಯು ಬರುವುದು.

ಅಗ್ನಿಯ ಸಮತೋಲನ

ಅಗ್ನಿಯ ಸಮತೋಲನ

ಮನೆಯಲ್ಲಿ ಅಗ್ನಿಯ ಅಸಮತೋಲನದಿಂದಾಗಿ ಅನಾರೋಗ್ಯವು ಕುಟುಂಬ ಸದಸ್ಯರನ್ನು ಬಾಧಿಸಬಹುದು. ಇದಕ್ಕೆ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಿಕೊಂಡು ಹೋಗಬೇಕು. ಮನೆಯು ದಕ್ಷಿಣ ಭಾಗಕ್ಕೆ ಮುಖಮಾಡಿ ಇಳಿಜಾರಾಗಿ, ಜನರೇಟರ್ ಕೋಣೆಯು ವಾಯುವ್ಯ ದಿಕ್ಕು ಮತ್ತು ನೀರಿನ ಭೂಗರ್ಭದ ಟಾಂಕ್‌ ಆಗ್ನೇಯ ಭಾಗದಲ್ಲಿ ಇದ್ದರೆ ಆಗ ಅಗ್ನಿಯ ಸಮತೋಲನವು ಇಲ್ಲ ಎಂದು ಹೇಳಬಹುದು.

ಆಗ್ನೇಯ ದಿಕ್ಕಲ್ಲಿ ದೀಪ

ಆಗ್ನೇಯ ದಿಕ್ಕಲ್ಲಿ ದೀಪ

ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಭಾಗದಲ್ಲಿ ಇರುವಂತಹ ಪ್ರವೇಶದ್ವಾರದ ಗೇಟ್ ಅನ್ನು ಆದಷ್ಟು ಮಟ್ಟಿಗೆ ಮುಚ್ಚಿಡಿ. ಮರದ ಗೇಟ್ ಮಾಡಿಕೊಂಡು ಹೊರಗಿನ ರಸ್ತೆಯು ಕಾಣದಂತೆ ಮಾಡಿ. ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಮನೆಯ ಆಗ್ನೇಯ ದಿಕ್ಕಿನಲ್ಲಿ ದೀಪ ಬೆಳಗಿ.

English summary

Vastu Tips That Promote Good Health

Here we are discussing about Vastu Tips For Good Health. Implementing some simple Vastu tips in homes can ensure the health and happiness of the family members. Read more.
X
Desktop Bottom Promotion