For Quick Alerts
ALLOW NOTIFICATIONS  
For Daily Alerts

ಓದಿನಲ್ಲಿ ಮಕ್ಕಳ ಏಕಾಗ್ರತೆ ಹೆಚ್ಚಲು ಮನೆಯ ವಾಸ್ತು ಹೀಗಿರಲಿ

|

ಮಕ್ಕಳು ಅಧ್ಯಯನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದರೆ ಪೋಷಕರು ಚಿಂತೆ ಮಾಡುವುದು ಸಹಜ. ಶಾಲೆಯಲ್ಲಿ ಮಕ್ಕಳ ಚಟುವಟಿಕೆ, ಏಕಾಗ್ರತೆ ಮತ್ತು ಪರೀಕ್ಷೆಗಳು ಅವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆದರೆ ಚಿಂತಿಸಬೇಡಿ! ನಿಮ್ಮ ಮಗುವಿನ ಅಧ್ಯಯನದ ಆರಂಭದಲ್ಲಿ ಹೀಗಾದರೆ ಸುಲಭವಾಗಿ ನಿಮ್ಮ ಮಗು ಅಧ್ಯಯನ ಮಾಡುವ ಸ್ಥಳವನ್ನು ಬದಲಾಯಿಸಿ ಸುಲಭ ಪರಿಹಾರ ಕಂಡುಕೊಳ್ಳಬಹುದು. ಹೇಗೆ ಗೊತ್ತೆ ಮುಂದೆ ಓದಿ.

Vastu Tips For Children Concentration In Studies

ಜಲ, ಅಗ್ನಿ, ವಾಯು, ಆಕಾಶ, ಗಾಳಿ, ಭೂಮಿ ಐದು ಅಂಶಗಳು ಮತ್ತು 16 ವಾಸ್ತು ವಲಯಗಳಲ್ಲಿ ಅವುಗಳ ಹೇಗೆ ವ್ಯವಸ್ಥೆ ಮಾಡಲಾಗಿದೆ, ಹೇಗೆ ಮನೆಯನ್ನು ನಿರ್ಮಿಸಲಾಗಿದೆ ಎಂಬುದರ ಮೇಲೆ ನಿಮ್ಮ ಜೀವನವು ನಿಖರವಾದ ಆಕಾರವನ್ನು ನಿರ್ಧರಿಸುತ್ತದೆ ಎಂಬುದನ್ನು ವಾಸ್ತು ಶಾಸ್ತ್ರವು ಬಹಿರಂಗಪಡಿಸಿದೆ.

ನೀವು ಮನೆಯನ್ನು ಅಥವಾ ಕೋಣೆಯನ್ನು ಕೆಡವದೆ ಅಗತ್ಯವಿಲ್ಲದೇ ಸರಳ ವಾಸ್ತು ಪರಿಹಾರಗಳೊಂದಿಗೆ ತೊಂದರೆಯನ್ನು ಹೇಗೆ ಪರಿಹರಿಸಬೇಕೆಂದು ನಿಮಗೆ ತಿಳಿಸುತ್ತದೆ.

ದಕ್ಷಿಣದಲ್ಲಿ ಮಕ್ಕಳ ಅಧ್ಯಯನ

ದಕ್ಷಿಣದಲ್ಲಿ ಮಕ್ಕಳ ಅಧ್ಯಯನ

ನಿಮ್ಮ ಮಗುವಿಗೆ ಅಧ್ಯಯನ ಮಾಡುವಾಗ ಹೆಚ್ಚು ಗಮನಹರಿಸಲು ಸಾಧ್ಯವಾಗದಿದ್ದರೆ ಮತ್ತು ಚಡಪಡಿಕೆಯಾಗಿದ್ದರೆ, ಅಥವಾ ಅವನ ಫಲಿತಾಂಶಗಳು ಮತ್ತು ಕಾರ್ಯಕ್ಷಮತೆ ಇಳಿಯಲು ಪ್ರಾರಂಭಿಸಿದರೆ, ಅವನು ನಕಾರಾತ್ಮಕ ವಲಯಗಳಾದ ಪಶ್ಚಿಮ ವಾಯುವ್ಯ, ದಕ್ಷಿಣ ದಕ್ಷಿಣ- ಪಶ್ಚಿಮ ಅಥವಾ ಪೂರ್ವ ಆಗ್ನೇಯ ದಿಕ್ಕಿನಲ್ಲಿ ಅಧ್ಯಯನ ಮಾಡುತ್ತಿದ್ದಾನೆ ಎಂದು ಅರ್ಥ. ನಂತರ ಅವರು ಕಂಪ್ಯೂಟರ್ ಅನ್ನು ಮನರಂಜನೆಗಾಗಿ ಬಳಸುತ್ತಾರೆಯೇ ಹೊರತು ಅಧ್ಯಯನ-ಸಂಬಂಧಿತ ಉದ್ದೇಶಗಳಿಗಾಗಿ ಅಲ್ಲ. ದಕ್ಷಿಣದಲ್ಲಿ, ಮಕ್ಕಳು ಅಧ್ಯಯನ ಮಾಡಿದರೆ ತುಂಬಾ ನಿರಾಳರಾಗುತ್ತಾರೆ.

ಪಶ್ಚಿಮ ನೈಋತ್ಯದಲ್ಲಿ ಅಧ್ಯಯನ ಟೇಬಲ್

ಪಶ್ಚಿಮ ನೈಋತ್ಯದಲ್ಲಿ ಅಧ್ಯಯನ ಟೇಬಲ್

ನಿಮ್ಮ ಮಗುವಿನ ಅಧ್ಯಯನ ಟೇಬಲ್ ನ್ನು ಇಡಲು ಉತ್ತಮ ಸ್ಥಳವೆಂದರೆ ಪಶ್ಚಿಮ ನೈಋತ್ಯ, ಇದು ಶಿಕ್ಷಣ ಮತ್ತು ಉಳಿತಾಯ ಕ್ಷೇತ್ರ. ಬಣ್ಣ ಸಂಯೋಜನೆಯನ್ನು ಬಿಳಿ, ಆಫ್-ವೈಟ್ ಅಥವಾ ಕ್ರೀಮ್ ರೀತಿಯಲ್ಲಿರಿಸಿ. ಮಹಾವಾಸ್ತು ಸಮಾಲೋಚನೆಯ ಸಹಾಯದಿಂದ ಮನೆಯ ಯಾವುದೇ ಸ್ಥಳವು ಪೀಡಿತವಾಗಿದೆಯೇ ಎಂದು ಪರಿಶೀಲಿಸಿ. ಶಾಲೆಯ ಪುಸ್ತಕಗಳು ಮತ್ತು ಇತರ ಓದುವ ವಸ್ತುಗಳನ್ನು ಮೇಜಿನ ಬಳಿ ಪುಸ್ತಕದ ಕಪಾಟಿನಲ್ಲಿ ಜೋಡಿಸಿಡಿ. ಬಿಳಿ / ಹಳದಿ ಬಲ್ಬ್ ಬಳಸಿ ಕೋಣೆಯನ್ನು ಚೆನ್ನಾಗಿ ಬೆಳಗಿಸಿ. ಈ ರೀತಿ ಮಾಡುವುದರಿಂದ ಈ ಸ್ಥಳದಲ್ಲಿನ ಶಕ್ತಿ, ಓದುವ ಮತ್ತು ಬರೆಯುವಲ್ಲಿ ಗಮನಹರಿಸಲು ನಿಮ್ಮ ಮಗುವಿಗೆ ಅನುವು ಮಾಡಿಕೊಡುತ್ತದೆ.

ಮಾನಸಿಕ ಸ್ಪಷ್ಟತೆಗೆ ಈಶಾನ್ಯ

ಮಾನಸಿಕ ಸ್ಪಷ್ಟತೆಗೆ ಈಶಾನ್ಯ

ಮತ್ತೊಂದು ಪ್ರಮುಖ ವಾಸ್ತು ವಲಯವೆಂದರೆ ಈಶಾನ್ಯ, ಇದು ಮಾನಸಿಕ ಸ್ಪಷ್ಟತೆ ಮತ್ತು ಬುದ್ಧಿವಂತಿಕೆಗೆ ಕಾರಣವಾಗಿದೆ. ಈ ವಲಯದಲ್ಲಿ ಏನಾದರೂ ಕಾಣೆಯಾಗುವುದು, ಅಥವಾ ತಪ್ಪಾದ ಬಣ್ಣವನ್ನು ಬಳಸಿದ್ದರೆ ಅಥವಾ ಅಡುಗೆಮನೆ ಅಥವಾ ಸ್ನಾನಗೃಹವನ್ನು ಹೊಂದಿದ್ದರೆ, ಏಕಾಗ್ರತೆಯನ್ನು ಅಭಿವೃದ್ಧಿಪಡಿಸುವುದು ಇಲ್ಲಿ ಕಷ್ಟಕರವಾಗಿರುತ್ತದೆ. ಗೋಡೆಗಳನ್ನು ಬಿಳಿ ಬಣ್ಣದಿಂದ ಪೇಂಟ್ ಮಾಡುವುದರ ಮೂಲಕ ಮತ್ತು ಸ್ವಸ್ತಿಕ ಚಿಹ್ನೆಯನ್ನು ಇಲ್ಲಿ ನೇತುಹಾಕುವ ಮೂಲಕ ಇಲ್ಲಿನ ಸಮಸ್ಯೆಯನ್ನು ನಿವಾರಿಸಬಹುದು. ಮಗುವಿನ ಅಧ್ಯಯನ ಟೇಬಲ್ ನ್ನು ಇಲ್ಲಿ ಇಡಬೇಡಿ; ಈ ನಿಯೋಜನೆಯು ಹಿರಿಯರಿಗೆ ಮತ್ತು ಧಾರ್ಮಿಕ ಮತ್ತು ತಾತ್ವಿಕ ಅನ್ವೇಷಣೆಗಳಲ್ಲಿ ತೊಡಗಿರುವವರಿಗೆ ಕೂಡ ಸರಿಹೊಂದುತ್ತದೆ.

ಕೌಶಲ್ಯಕ್ಕೆ ನೈಋತ್ಯ

ಕೌಶಲ್ಯಕ್ಕೆ ನೈಋತ್ಯ

ಇನ್ನು ಗುರುತಿಸಲ್ಪಡುವ ಮೂರನೇ ವಲಯವೆಂದರೆ, ಕೌಶಲ್ಯ ಮತ್ತು ಸಂಬಂಧ ಕ್ಷೇತ್ರವಾದ ನೈಋತ್ಯ ವಲಯ. ನಿಮ್ಮ ಗುರು ಮತ್ತು ಪೂರ್ವಜರ ಚಿತ್ರಗಳನ್ನು ಇಲ್ಲಿ ಇರಿಸಿದರೆ ಒಳಿತು. ಅವರ ಆಶೀರ್ವಾದವೇ ಜೀವನದಲ್ಲಿ ಮುಂದೆ ಸಾಗಲು ನಿಮಗೆ ಸಹಾಯ ಮಾಡುತ್ತದೆ. ಪೆನ್ನುಗಳು ಮತ್ತು ಪೆನ್ಸಿಲ್‌ಗಳನ್ನು ಹೊಂದಿರುವ ಪೆನ್ಸಿಲ್ ಸ್ಟ್ಯಾಂಡ್ ಒಂದನ್ನು ಸಹ ಇಲ್ಲಿ ಇರಿಸಿ. ಇದು ಅತ್ಯುತ್ತಮ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುತ್ತದೆ. ಇದು ಅಧ್ಯಯನ ಟೇಬಲ್ ಇಡಲು ಮತ್ತೊಂದು ಸೂಕ್ತ ಸ್ಥಳವಾಗಿದೆ. ಪುಸ್ತಕದ ಕಪಾಟನ್ನು ಸಹ ಇಲ್ಲಿ ಇಡಬಹುದು.

ಮೇಲೆ ತಿಳಿಸಲಾದ ಈ ಮೂರು ಸಕಾರಾತ್ಮಕ ವಲಯಗಳಲ್ಲಿ ಶೌಚಾಲಯ ಅಥವಾ ಡಸ್ಟ್‌ಬಿನ್ (ಕಸದ ಬುಟ್ಟಿ) ಇರಬಾರದು. ಆದ್ದರಿಂದ, ನಿಮ್ಮ ಮಗುವಿನ ಶಿಕ್ಷಣ ಸಾಮರ್ಥ್ಯವನ್ನು ಸುಧಾರಿಸಲು ಸರಳ ವಾಸ್ತು ಮಾಹಿತಿಗಳನ್ನು ಬಳಸಿ, ನಿಮ್ಮ ಮಗುವಿನ ಸಾಧನೆಗಳನ್ನು ಅವನು/ ಅವಳು ಉತ್ತುಂಗಕ್ಕೇರುವುದನ್ನು ನೋಡಿ ಆನಂದಿಸಿ.

English summary

Vastu Tips For Children Concentration In Studies

Here we are discussing about Vastu Tips For Children Concentration In Studies. The Vastu Shastra has revealed how the Five Elements of Water, Space, Air, Earth and Fire and their distribution in the 16 Vastu zones determine the exact shape your life takes. Read more.
X
Desktop Bottom Promotion