For Quick Alerts
ALLOW NOTIFICATIONS  
For Daily Alerts

ಗಗನಕ್ಕೇರಿದ ಟೊಮೊಟೋ ಬೆಲೆ: ಅದೇ ರುಚಿಗಾಗಿ ಈ ಪರ್ಯಾಯ ಪದಾರ್ಥಗಳನ್ನು ಬಳಸಿ

|

ಅಕಾಲಿಕ ಮಳೆಯಿಂದಾಗಿ, ನಾಡಿನಲ್ಲಿ ಟೊಮೊಟೋ ಬೆಲೆ ಗಗನಕ್ಕೇರಿದೆ. ಕೆಜಿಗೆ 100 ರೂ.ಗಡಿದಾಟಿರುವ ಟೊಮೊಟೋ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ತಮ್ಮ ಆಹಾರದಲ್ಲಿ ಟೊಮೊಟೋ ಹಾಕುವುದೋ, ಬೇಡವೋ ಎನ್ನುವ ಚಿಂತೆಯಲ್ಲಿದ್ದಾರೆ. ಆದ್ದರಿಂದ ನಾವಿಂದು ಟೊಮೊಟೋ ಬದಲು, ಅದೇ ರುಚಿಯನ್ನು ಪಡೆಯಲು ಬೇರೆ ಯಾವ ಪರ್ಯಾಯ ಪದಾರ್ಥಗಳನ್ನು ಬಳಸಬಹುದು ಎಂಬುದನ್ನು ಹೇಳಲಿದ್ದೇವೆ. ಟೊಮೊಟೋ ರುಚಿಗೆ ಸಮನಾದ ಪದಾರ್ಥಗಳು ಇಲ್ಲದಿದ್ದರೂ, ಈ ಪರ್ಯಾಯ ಪದಾರ್ಥಗಳು, ಒಂದು ಮಟ್ಟಿಗೆ ಅದೇ ಟೇಸ್ಟನ್ನು ನೀಡುತ್ತವೆ.

ಟೊಮೊಟೋ ಬದಲಿಗೆ ಬಳಸಬಹುದಾದ ಪರ್ಯಾಯ ಪದಾರ್ಥಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಹಸಿ(ಕಾಯಿ)ಮಾವಿನಕಾಯಿ ಪುಡಿ:

ಹಸಿ(ಕಾಯಿ)ಮಾವಿನಕಾಯಿ ಪುಡಿ:

ಇದು ಟೊಮೆಟೊಗಳಂತೆ ಹುಳಿ ಮತ್ತು ಸಿಹಿಯಾಗಿದ್ದು, ಅಗ್ಗವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಈ ಪದಾರ್ಥವನ್ನು ನಿಮ್ಮ ಒಗ್ಗರಣೆಗೆ ಸೇರಿಸಿಕೊಂಡರೆ, ಅದೇ ರುಚಿ ಸಿಗುವುದು. ನೀವು ಮಾಡಬೇಕಾಗಿರುವುದು ನಿಮ್ಮ ಆಹಾರಕ್ಕೆ ಒಂದು ಟೀಚಮಚ ಅಥವಾ ಚಮಚವನ್ನು ಸೇರಿಸುವುದು ಅಷ್ಟೇ. ಇದು ಟೊಮೊಟ್ಯೋ ನೀಡುವ ರುಚಿಯನ್ನೇ ನೀಡುವುದು.

ಹುಣಸೆಹಣ್ಣು:

ಹುಣಸೆಹಣ್ಣು:

ಟೊಮೆಟೊಗಳ ಬದಲಿಗೆ ನೀವು ಬಳಸಬಹುದಾದ ಇನ್ನೊಂದು ಅಂಶವೆಂದರೆ ಹುಣಸೆ ಹಣ್ಣು. ಇದನ್ನು ಬಳಸಲು ಸುಲಭವಾಗಿದ್ದು, ಸ್ವಲ್ಪ ಹುಣಸೆಹಣ್ಣನ್ನು 15-20 ನಿಮಿಷಗಳ ಕಾಲ ನೆನೆಸಿ, ತಿರುಳು ಮತ್ತು ಬೀಜವನ್ನು ತೆಗೆದುಹಾಕಿ, ಸೋಸಿಕೊಂಡು, ನಿಮ್ಮ ಒಗ್ಗರಣೆಗಳಿಗೆ ಸೇರಿಸಿ. ಹುಣಸೆಹಣ್ಣು ಕೂಡ ಗ್ರೇವಿ ದಪ್ಪವಾಗಲು ಸಹಾಯ ಮಾಡುತ್ತದೆ, ಆದ್ದರಿಂದ ಬಡಿಸುವ ಮೊದಲು ನಿಮ್ಮ ಭಕ್ಷ್ಯದ ಸ್ಥಿರತೆಯನ್ನು ಪರಿಶೀಲಿಸಿ.

ನೆಲ್ಲಿಕಾಯಿ:

ನೆಲ್ಲಿಕಾಯಿ:

ಚಳಿಗಾಲದ ಆಗಮನದೊಂದಿಗೆ, ನೀವು ಟೊಮೆಟೊಗಳ ಬದಲಿಗೆ ತಾಜಾ ನೆಲ್ಲಿಕಾಯಿಯನ್ನು ಸಹ ಬಳಸಬಹುದು, ಆದರೆ ಇದು ಸ್ವಲ್ಪ ಹುಳಿಯಾಗಿರುವುದರಿಂದ, ಇದನ್ನು ಆಹಾರಕ್ಕೆ ಸೇರಿಸುವಾಗ ಜಾಗರೂಕರಾಗಿರಿ. ಯಾವುದೇ ಆಹಾರಕ್ಕೆ ಸೇರಿಸುವ ಮೊದಲು, ಇದನ್ನು ಸಕ್ಕರೆಯೊಂದಿಗೆ ನೀರಿನಲ್ಲಿ ನೆನೆಸಿ, ನಂತರ ಅದನ್ನು ಮಿಶ್ರಣ ಮಾಡಲು ಸೂಚಿಸಲಾಗುತ್ತದೆ.

ಸೋರೆಕಾಯಿ:

ಸೋರೆಕಾಯಿ:

ಆಹಾರಕ್ಕೆ ಟೊಮೆಟೊಗಳ ಬದಲಿಗೆ ಸೋರೆಕಾಯಿಯನ್ನು ಸೇರಿಸಬಹುದು. ಇದು ರುಚಿಯೊಂದಿಗೆ ಅಷ್ಟೊಂದು ಹೋಲಿಕೆ ಇರದೇ ಇರುವುದರಿಂದ, ಸರಿಯಾದ ರುಚಿ ಪಡೆಯಲು ಇದಕ್ಕೆ ಹಸಿ ಮಾವಿನ ಪುಡಿ ಅಥವಾ ಹುಣಸೆಹಣ್ಣಿನಂತಹ ಇತರ ಹುಳಿ ಏಜೆಂಟ್ ಅನ್ನು ಸೇರಿಸಬೇಕಾಗುತ್ತದೆ.

ಮೊಸರು:

ಮೊಸರು:

ಟೊಮೆಟೊಗಳ ಬದಲಿಗೆ, ನೀವು ಸಾಮಾನ್ಯ ಮೊಸರು ಸೇರಿಸಬಹುದು. ಮೊಸರಿನ ಆಮ್ಲೀಯ ಸುವಾಸನೆಯು ಮಸಾಲೆಗಳೊಂದಿಗೆ ಚೆನ್ನಾಗಿ ಮಿಶ್ರಣಗೊಳ್ಳುತ್ತದೆ ಮತ್ತು ನಿಮಗೆ ಅದೇ ರುಚಿಯನ್ನು ನೀಡುತ್ತದೆ. ರುಚಿ ಪರಿಪೂರ್ಣವಾಗಲು, 2-3 ದಿನಗಳ ಹಳೆಯ ಮೊಸರನ್ನು ಹಾಕುವುದು ಉತ್ತಮ, ಏಕೆಂದರೆ ಆ ಮೊಸರು ಸ್ವಲ್ಪ ಹುಳಿ ಇರುತ್ತದೆ.

Read more about: home ಮನೆ
English summary

Tomato Price Hike: Tomato alternatives you can use at home in Kannada

Here we talking about Tomato Price Hike: Tomato alternatives you can use at home in Kannada, read on
Story first published: Friday, November 26, 2021, 18:05 [IST]
X
Desktop Bottom Promotion