For Quick Alerts
ALLOW NOTIFICATIONS  
For Daily Alerts

ಪಕೋಡಾವನ್ನು ಆರೋಗ್ಯಕರವಾಗಿಸಲು ಸಲಹೆಗಳು.. ಹೀಗೆ ಮಾಡಿದರೆ, ಆರೋಗ್ಯಕ್ಕೆ ಯಾವುದೇ ಹಾನಿಯಿರುವುದಿಲ್ಲ

|

ಬಿಸಿಬಿಸಿ ಗರಿಗರಿಯಾದ ಪಕೋಡಾ, ಬಜ್ಜಿ ಯಾರಿಗೆ ಇಷ್ಟ ಇಲ್ಲವಿಲ್ಲ ಹೇಳಿ? ಆದರೆ ಈ ಹೆಚ್ಚು ತಿನ್ನಲು ಭಯ. ಏಕೆಂದರೆ ಹುರಿದ ತಿಂಡಿಗಳು, ಆರೋಗ್ಯ ಹಾಳು ಮಾಡುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಹೆಚ್ಚಿನವರು ಇದನ್ನು ತಿನ್ನಲು ಹೊಗುವುದಿಲ್ಲ, ಆದಷ್ಟು ನಿರಾಕರಿಸುತ್ತಾರೆ. ಆದರೆ ನಾವಿಂದು, ಈ ಪಕೋಡಾಗಳನ್ನು ಆರೋಗ್ಯಕರಗೊಳಿಸುವ ಕೆಲವೊಂದು ವಿಧಾನಗಳನ್ನು ಹೇಳುತ್ತೇವೆ. ಈ ಟಿಪ್ಸ್ ಗಳಿಂದ ನಿಮ್ಮ ಫೇವರೆಟ್ ಪಕೋಡಾಗಳನ್ನು ಯಾವುದೇ ಭಯವಿಲ್ಲದೇ ತಿನ್ನಬಹುದು.

ಪಕೋಡಾ, ಬಜ್ಜಿ ತಯಾರಿಸುವಾಗ ಅವು ಆರೋಗ್ಯಕರವಾಗಿರಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಡೀಪ್ ಫ್ರೈ ಮಾಡಿ:

ಡೀಪ್ ಫ್ರೈ ಮಾಡಿ:

ಇದು ಸಂಪೂರ್ಣವಾಗಿ ಸತ್ಯ. ಏರ್ ಫ್ರೈ ಮಾಡುವ ಬದಲು ಪಕೋಡಾವನ್ನು ಡೀಪ್ ಫ್ರೈ ಮಾಡಿ. ಏಕೆಂದರೆ ಅವುಗಳನ್ನು ಹುರಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಆಗುತ್ತದೆ ಜೊತೆಗೆ ಕೊಬ್ಬುಗಳು ಶೇಖರಣೆಯಾಗುವುದಿಲ್ಲ. ಆದರೆ ನೀವು ಎರಡು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಆರೋಗ್ಯಕ್ಕೆ ಉತ್ತಮವಾದ ತೈಲಗಳನ್ನು ಬಳಸಿ ಮತ್ತು ಎರಡನೆಯದಾಗಿ, ಎಣ್ಣೆಯನ್ನು ಒಂದಕ್ಕಿಂತ ಹೆಚ್ಚು ಬಾರಿ, ತೈಲವನ್ನು ಮರುಬಳಕೆ ಮಾಡಬೇಡಿ. ಅಷ್ಟೇ ಅಲ್ಲ, ಡೀಪ್ ಫ್ರೈಯಿಂಗ್ ಒಳ್ಳೆಯದು ಎಂದಾಕ್ಷಣ ಪಕೋಡಾ ಹೆಚ್ಚು ಸೇವಿಸಬಹುದು ಎಂದರ್ಥವಲ್ಲ, ಮಿತವಾಗಿದ್ದರೆ ಉತ್ತಮ.

ಬಿಸಿಚಹಾದೊಂದಿಗೆ ಸೇವಿಸಿ:

ಬಿಸಿಚಹಾದೊಂದಿಗೆ ಸೇವಿಸಿ:

ಆಲ್ಕೋಹಾಲ್ ಎಷ್ಟು ಹಾನಿಕಾರಕ ಎಂದು ನಮಗೆ ತಿಳಿದಿದೆ. ಆದಾಗ್ಯೂ, ಮಳೆಗಾಲದಲ್ಲಿ ಒಂದು ಗ್ಲಾಸ್ ಬಿಯರ್ ಜೊತೆಗೆ ಒಂದು ತಟ್ಟೆಯ ಬಜ್ಜಿಬೇಕೆಂದು ಜನರು ಭಾವಿಸುತ್ತಾರೆ. ಆದರೆ ಬಿಯರ್ ಕುಡಿಯುವ ಬದಲು, ನೀವು ಒಂದು ಕಪ್ ಚಹಾದೊಂದಿಗೆ ಮಳೆಗಾಲವನ್ನು ಆನಂದಿಸಬಹುದು. ಇದರ ಜೊತೆಯಲ್ಲಿ, ಪಕೋಡಾದಲ್ಲಿ ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಿರುತ್ತದೆ, ಇವೆರಡೂ ನಿಮಗೆ ರಾತ್ರಿ ಅಥವಾ ಮರುದಿನ ಬೆಳಿಗ್ಗೆ ಹೊಟ್ಟೆಭಾರದ ಭಾವನೆಯನ್ನು ಉಂಟುಮಾಡುತ್ತದೆ.

ಆಸ್ವಾದಿಸುತ್ತಾ ಸೇವಿಸಿ:

ಆಸ್ವಾದಿಸುತ್ತಾ ಸೇವಿಸಿ:

ಯಾವುದೇ ಆಹಾರವಾದರೂ, ಅದನ್ನು ಆಸ್ವಾದಿಸುತ್ತಾ,ಅನುಭವಿಸುತ್ತಾ ತಿನ್ನಬೇಕೇ ಹೊರತು, ಅಯ್ಯೋ ತಿಂದಮೇಲೆ ಏನಾಗುತ್ತೋ ಅನ್ನೋ ಭಯವಿಟ್ಟುಕೊಂಡಲ್ಲ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಪರಿಣಾಮ ಬೀರುವುದು. ಆದ್ದರಿಂದ ತಿನ್ನುವಾಗ ನಿಮ್ಮ ತೂಕ, ಕ್ಯಾಲೋರಿಗಳ ಯೋಚನೆ ಬೇಡ. ಬದಲಾಗಿ ಕೆಲವು ಸಂಗೀತವನ್ನು ಹಾಕಿ ಮತ್ತು ಅದನ್ನು ಹಾಡುತ್ತಾ, ಪಕೊಡಾ ತಿನ್ನಿ. ಆಗ ನಿಮ್ಮಲ್ಲಿ ಬದಲಾವಣೆಯನ್ನು ಖಂಡಿತವಾಗಿ ನೋಡುತ್ತೀರಿ.

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸಿ:

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸಿ:

ರುಚಿಕರವಾದ ಭಜ್ಜಿ, ಪಕೋಡಾಗಳನ್ನು ಒಬ್ಬರೇ ತಿನ್ನುವುದಕ್ಕಿಂತ, ಅದನ್ನು ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇದರಿಂದ ಕುಟುಂಬದಲ್ಲಿ ಸಂತೋಷವನ್ನು ಹರಡಿ. ಇದು ಖಂಡಿತವಾಗಿಯೂ ನಿಮ್ಮನ್ನು ಹಾಗೂ ನಿಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ಸಂತೋಷವಾಗಿರಿಸುತ್ತದೆ. ಈ ಸಂತೋಷವು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ ಏಕೆಂದರೆ ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹವನ್ನು ಮುನ್ನಡೆಸುತ್ತದೆ ಎಂದು ನೀವು ಕೇಳಿರಬಹುದು.

ಮರುದಿನ ಹೆಚ್ಚು ವರ್ಕೌಟ್ ಅಗತ್ಯವಿಲ್ಲ:

ಮರುದಿನ ಹೆಚ್ಚು ವರ್ಕೌಟ್ ಅಗತ್ಯವಿಲ್ಲ:

ಹೆಚ್ಚಿನವರು ಈ ಕೆಲಸ ಮಾಡುತ್ತಾರೆ. ಇಂದು ಪಕೋಡಾ ತಿಂದಿದ್ದೇವೆ ಎಂದು ನಾಳೆ ಜಿಮ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇದು ಸರಿಯಲ್ಲ. ಯಾವುದೇ ಆಹಾರ ಸೇವಿಸುವುದುದರ ಬಗ್ಗೆ ನಿಮ್ಮಲ್ಲಿ ಗಿಲ್ಟ್ ಫೀಲ್ ಇರಬಾರದು. ಅದರ ಬದಲಾಗಿ ಆತ್ಮ ತೃಪ್ತಿ ಇರಬೇಕು, ಆಗ ನೀವು ಏನೇ ತಿಂದರೂ ಆರೋಗ್ಯ ಚೆನ್ನಾಗಿ ಇರುತ್ತೆ. ಹೆಚ್ಚು ತಲೆಕೆಡಿಸಿಕೊಂಡಾಗಲೇ ಎಲ್ಲವೂ ಗೊಂದಲಮಯವಾಗುವುದು. ಆದ್ದರಿಂದ ಪಕೋಡಾವನ್ನುಮುಕ್ತವಾಗಿ ಆನಂದಿಸಿ, ನಿಮ್ಮ ಕುಟುಂಬದೊಂದಿಗೆ ಮೋಜು ಮತ್ತು ವಿಶ್ರಾಂತಿ ಸಮಯವನ್ನು ಕಳೆಯಿರಿ.

English summary

Tips To Make Healthy Bhajiya Or Pakoras in kannada

Here we talking about Tips To Make Healthy Bhajiya Or Pakoras in kannada, read on
X
Desktop Bottom Promotion