Just In
Don't Miss
- Movies
ಗಟ್ಟಿಮೇಳ ಧಾರಾವಾಹಿಯ ನಟಿ ಮಹತಿ ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು?
- News
ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Sports
ನಮ್ಮೂರ ಪ್ರತಿಭೆ: ಕ್ರೀಡೆಯನ್ನೇ ಉಸಿರಾಗಿಸಿಕೊಂಡ ಛಲಗಾರ: ಕಬಡ್ಡಿ ಅಂಗಳದ ಮಿನುಗು ತಾರೆ ಸುಕೇಶ್ ಹೆಗ್ಡೆ
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Finance
ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂ. ಪಡೆದ ಇಮುದ್ರಾ!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆಯತ್ತ ನಕಾರಾತ್ಮಕತೆ ಸುಳಿಯದಿರಲು ಈ ಬಣ್ಣಗಳನ್ನು ಗೋಡೆಗೆ ಬಳಸಿ
ನಮ್ಮ ಜೀವನದಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಂದು ಬಣ್ಣಗಳು ಸಂತೋಷ- ಉಲ್ಲಾಸವನ್ನು ತಂದರೆ, ಇನ್ನೂ ಕೆಲವು ನೋವು ಕಷ್ಟದ ಸಂಕೇತವಾಗಿ ನಿಲ್ಲುತ್ತವೆ. ಅದಕ್ಕೇ ಹೇಳುವುದು ನಮ್ಮ ಸುತ್ತ ಮುತ್ತ ಉತ್ಸಾಹ ಚಿಮ್ಮಿಸುವಂತಹ ಬಣ್ಣಗಳಿರಬೇಕೆಂದು..
ಆದರೆ, ಮನೆಯ ಗೋಡೆಗಳ ಬಣ್ಣಗಳ ವಿಚಾರಕ್ಕೆ ಬಂದಾಗ ಈ ಸಂಗತಿಯನ್ನು ಮರೆತೇ ಬಿಡುತ್ತೇವೆ. ಹೆಚ್ಚು ಕಾಲ ಮನೆಯಲ್ಲಿ ಕಳೆಯುವುದರಿಂದ, ಮನೆಯ ಬಣ್ಣಗಳು ಮನಸ್ಸಿಗೆ ಮುದ ನೀಡುವಂತಿರಬೇಕು. ಆಗ ಮಾತ್ರ ಹೊಸ ಹೊಸ ವಿಚಾರ, ಕೆಲಸಗಳನ್ನು ಮಾಡಲು ಸಾಧ್ಯ. ಅದಕ್ಕಾಗಿ ನಾವಿಂದು ಮನೆಯ ನಕಾರಾತ್ಮಕತೆ ದೂರ ಮಾಡಿ, ಸಕರಾತ್ಮಕ ಚಿಂತನೆಗಳನ್ನು ನೀಡುವ ಬಣ್ಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಕಾರಾತ್ಮಕತೆಯನ್ನು ನಾಶಮಾಡಲು ನಾವು ನಮ್ಮ ಮನೆಗಳಿಗೆ ಸೇರಿಸಬೇಕಾದ 4 ಬಣ್ಣಗಳು ಇಲ್ಲಿವೆ:

ಬಿಳಿ ಬಣ್ಣ:
ಬಿಳಿ ಶುಭ್ರತೆ ಹಾಗೂ ಉಲ್ಲಾಸದ ಸಂಕೇತ. ಒಂದು ಚಿಟಿಕೆ ಬಿಳಿ ಬಣ್ಣ ಎಂತಹ ಮನಸ್ಥಿತಿಯನ್ನು ತಕ್ಷಣವೇ ಬದಲಾಯಿಸುತ್ತದೆ. ಆದ್ದರಿಂದ, ನಿಮ್ಮ ಮನೆಗೆ ಬಿಳಿ ಬಣ್ಣ ಬಳಿಯಲು ಬಯಸಿದರೆ, ಅದರ ಬಗ್ಗೆ ಎರಡನೇ ಆಲೋಚನೆಯನ್ನು ಮಾಡಬೇಡಿ. ಬಣ್ಣ-ಬಣ್ಣದ ಪರದೆಗಳೊಂದಿಗೆ ಬಿಳಿ ಗೋಡೆಗಳು ಮನೆಯನ್ನು ಚೆನ್ನಾಗಿ ಬೆಳಗಿಸಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಲು, ಜೊತೆಗೆ ಸಂತೋಷದ ಕಂಪನಗಳನ್ನು ನೀಡಲು ಸಹಾಯ ಮಾಡುತ್ತದೆ. ನೀವೇನಾದರು ಕಷ್ಟದ ದಿನವನ್ನು ಎದುರಿಸುತ್ತಿದ್ದರೆ, ಸುತ್ತಲೂ ಬಿಳಿಯಿರುವ ಮನೆಗೆ ಹೋಗಲು ಪ್ರಯತ್ನಿಸಿ, ಅದು ನಿಮಗೆ ಆರಾಮ, ಭರವಸೆ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ಹಳದಿ ಬಣ್ಣ:
ಹಳದಿ ಸಂತೋಷವನ್ನು ಸೂಚಿಸುತ್ತದೆ. ಈ ಬಣ್ಣವು ಸ್ವಯಂಚಾಲಿತವಾಗಿ ಭರವಸೆ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಹಳದಿ ಬಣ್ಣದಿಂದ ಗೋಡೆಗೆ ಪೇಂಟ್ ಮಾಡಿ ಅಥವಾ ನಿಮ್ಮ ಲಿವಿಂಗ್ ರೂಮಿನಲ್ಲಿ ಕೆಲವು ಹಳದಿ ಪೀಠೋಪಕರಣಗಳನ್ನು ಇಡಿ, ನಂತರ ಮ್ಯಾಜಿಕ್ ನೋಡಿ. ಹಳದಿ ನಿಮ್ಮ ಮನೆಯ ಜೀವನಾಡಿಯಾಗುವುದು ಮಾತ್ರವಲ್ಲದೇ ದಿನವಿಡೀ ನಿಮಗೆ ಸಂತೋಷವನ್ನು ನೀಡುತ್ತದೆ. ನಿಮಗೆ ಹಳದಿ ಇಷ್ಟವಿಲ್ಲದಿದರೆ, ಬಿಳಿ ಅಥವಾ ತಟಸ್ಥ-ಬಣ್ಣದ ಗೋಡೆಗಳಿಗೆ ಹಳದಿ ಪರದೆಗಳನ್ನು ಆಯ್ಕೆಮಾಡಿ. ಇದು ನಿಮ್ಮ ಮನೆಗೆ ಸಕಾರಾತ್ಮಕತೆಯನ್ನು ತರುತ್ತದೆ.

ಕೆಂಪು ಬಣ್ಣ:
ಇದು ಪ್ರೀತಿಯ ಬಣ್ಣವಾಗಿದ್ದು, ಮನೆಯ ಭಾವನೆ ನೀಡುತ್ತದೆ. ಮನೆಯ ತುಂಬಾ ಕೆಂಪು ಬಳಿಯಲು ಇಷ್ಟವಿಲ್ಲದಿದ್ದರೆ, ಮನೆಯ ಅಲಂಕಾರಕ್ಕೆ ಕೆಂಪು ಬಣ್ಣವನ್ನು ಬಳಸಬಹುದು. ಅಂದರೆ, ಒಂದು ಮೂಲೆಯನ್ನು ಕೆಂಪು ಬಣ್ಣದಿಂದ ಚಿತ್ರಿಸಿ, ಅಥವಾ ಗೋಡೆಯ ಹ್ಯಾಂಗಿಂಗ್ಗಳು, ಪೋರ್ಟ್ರೇಟ್ಗಳನ್ನು ಆಯ್ಕೆ ಮಾಡಿ. ಇದು ಕೂಡ ಅಷ್ಟೇ ಫಲಿತಾಂಶ ನೀಡುವುದು. ಅಲ್ಲದೆ, ಕೆಂಪು ಕುಶನ್ಗಳು ಮತ್ತು ಕಾರ್ಪೆಟ್ಗಳನ್ನು ಅಥವಾ ಯಾವುದೇ ಕೆಂಪು ಬಣ್ಣದ ವಸ್ತುಗಳನ್ನು ಮನೆಯಲ್ಲಿ ಇಡಬಹುದು.

ಹಸಿರು ಬಣ್ಣ:
ಹಸಿರು ಬಣ್ಣವು ಸ್ವಲ್ಪ ಡಾರ್ಕ್ ಆಗಿದ್ದರೂ, ಅದು ನಕಾರಾತ್ಮಕತೆಯನ್ನು ಕೊಲ್ಲಲು ಬಹಳ ಒಳ್ಳೆಯದು. ಆದ್ದರಿಂದ ಗಾಳಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಒಳಾಂಗಣ ಸಸ್ಯಗಳನ್ನು ಆರಿಸಿಕೊಳ್ಳಿ, ಇದು ನಿಮ್ಮ ಮನೆಗೆ ಹಸಿರು ಬಣ್ಣವನ್ನು ಬಳಸಲು ಸರಿಯಾದ ಆಯ್ಕೆಯಾಗಿದೆ. ಗಿಡಗಳು ಬೆಳೆಯುವ ಹಾಗೂ ಅರಳುವ ರೀತಿ, ನಿಮ್ಮ ಜೀವನವೂ ಅರಳಿ ಸುಂದರವಾಗುತ್ತದೆ. ಅದಕ್ಕಾಗಿ ಈ ವ್ಯತ್ಯಾಸವನ್ನು ಗಮನಿಸಲು ಸಾಧ್ಯವಾಗುವಂತೆ ಗಿಡಗಳನ್ನು ತೆರೆದ ಜಾಗದಲ್ಲಿ ಇಡುವುದು ಒಳ್ಳೆಯದು.