For Quick Alerts
ALLOW NOTIFICATIONS  
For Daily Alerts

ಟೆಟ್ರಾ ಪ್ಯಾಕ್ ಹಾಲು ಮತ್ತು ಪ್ಯಾಕೆಟ್ ಹಾಲು: ಆರೋಗ್ಯಕ್ಕೆ ಯಾವುದು ಒಳ್ಳೆಯದು?

|

ನಮ್ಮ ದೈನಂದಿನ ಜೀವನದ ಅವಿಭಾಜ್ಯ ಆಹಾರ ಎಂದರೆ ಅದು ಹಾಲು. ಪ್ರತಿಯೊಬ್ಬರೂ ಒಂದಲ್ಲ ಒಂದು ರೂಪದಲ್ಲಿ ಹಾಲನ್ನು ಸೇವಿಸುವವರೇ. ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಮೂಳೆಯ ಜೊತೆಗೆ, ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವುದು ಈ ಅಮೃತ.

ಇಷ್ಟು ಪ್ರಾಮುಖ್ಯತೆ ಪಡೆದಿರುವ ಹಾಲು ಯಾವ ಗುಣಮಟ್ಟದ್ದು ಎಂದು ಎಂದಾದರೂ ಯೋಚಿಸಿದ್ದೀರಾ? ಹೌದು ಉತ್ತಮ ಪೋಷಕಾಂಶಕ್ಕಾಗಿ ನಾವು ಎಂತಹ ಹಾಲು ನಾವು ಸೇವಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾಲಿನ ವಿಧಗಳಲ್ಲಿ ಆರೋಗ್ಯಕ್ಕೆ ಯಾವ ಹಾಲು ಸೂಕ್ತ ಎಂಬುದನ್ನು ಈ ಕೆಳಗೆ ನೀಡಿದ್ದೇವೆ:

ಕಾರ್ಟನ್ ಹಾಲು:

ಕಾರ್ಟನ್ ಹಾಲು:

ಟೆಟ್ರಾ ಪ್ಯಾಕ್ ಹಾಲು ಎಂದೂ ಕರೆಯಲ್ಪಡುವ ಕಾರ್ಟನ್ ಹಾಲು ಸುರಕ್ಷಿತ ಹಾಲಿನ ಆಯ್ಕೆ ಎಂದು ಹಲವರ ನಂಬಿಕೆ. ಟೆಟ್ರಾ ಪ್ಯಾಕ್‌ಗಳ ಪ್ಯಾಕೇಜಿಂಗ್ ಅನ್ನು ಸಾಮಾನ್ಯವಾಗಿ ಯುಹೆಚ್ ಟಿ (ಅಲ್ಟ್ರಾ-ಹೈ ತಾಪಮಾನ) ವಿಧಾನವನ್ನು ಬಳಸಿ ಮಾಡಲಾಗುತ್ತದೆ. ಇದರಲ್ಲಿ, ಹಾಲನ್ನು ಕೆಲವು ಸೆಕೆಂಡುಗಳ ಕಾಲ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿ ನಂತರ ತಣ್ಣಗಾಗಿಸಿ, ತಕ್ಷಣ ಟೆಟ್ರಾ ಪ್ಯಾಕ್‌ಗಳಲ್ಲಿ ತುಂಬಿಸಲಾಗುತ್ತದೆ. ಇದು ಹಾಲಿನಲ್ಲಿರುವ ಎಲ್ಲಾ ಸೂಕ್ಷ್ಮ ಜೀವಿಗಳು ಮತ್ತು ರೋಗಕಾರಕಗಳನ್ನು ನಿವಾರಿಸುತ್ತದೆ.

ಹಸಿ ಹಾಲು:

ಹಸಿ ಹಾಲು:

ಹಳ್ಳಿಗಳಲ್ಲಿ ಇದು ಹೆಚ್ಚು ಜಾರಿಯಲ್ಲಿದೆ. ಯಾವುದೇ ಪಾಶ್ಚರೀಕರಿಸಿದ ವಿಧಾನ ಬಳಸದೇ ನೇರವಾಗಿ ಹಾಲಿನ ಮಾರಾಟಗಾರರಿಂದ ಹಾಲು ಕೊಳ್ಳುತ್ತಾರೆ. ಅಥವಾ ಡೈರಿಯಿಂದ ನೇರವಾಗಿ ಖರೀದಿಸುತ್ತಾರೆ. ಹಾಲಿನ ಗುಣಮಟ್ಟವನ್ನು ಹಾಳು ಮಾಡದಿದ್ದರೆ ಅಂದರೆ ಹಾಲಿಗೆ ನೀರು ಬೆರೆಸದಿದ್ದರೆ, ಕಚ್ಚಾ ಹಾಲು ಆರೋಗ್ಯಕರ ಆಯ್ಕೆಯಾಗಿದೆ.

ಸಾವಯವ ಹಾಲು:

ಸಾವಯವ ಹಾಲು:

ಇತ್ತೀಚಿನ ದಿನಗಳಲ್ಲಿ ಜಗತ್ತು ಸಾವಯವ ಆಹಾರ ಪದಾರ್ಥಗಳತ್ತ ಸಾಗುತ್ತಿದ್ದು, ಸಾವಯವ ಹಾಲನ್ನು ಕೂಡ ಬಿಟ್ಟಿಲ್ಲ. ಹಲವಾರು ಕಂಪನಿಗಳು ಮತ್ತು ಮಾರಾಟಗಾರರು ತಮ್ಮ ಹಾಲು ಆರೋಗ್ಯಕರ ಮತ್ತು ಸಾವಯವ ಎಂದು ಹೇಳಿಕೊಳ್ಳುತ್ತಾರೆ. ಇದರರ್ಥ ಮೂಲತಃ ಹಾಲು ನೀಡಿದ ಹಸುವಿಗೆ ಸಾವಯವ ಆಹಾರವನ್ನು ನೀಡಲಾಗುತ್ತದೆ (ರಾಸಾಯನಿಕಗಳೊಂದಿಗೆ ಚಿಕಿತ್ಸೆ ನೀಡಲಾಗುವುದಿಲ್ಲ). ಇದರರ್ಥ ಹಸುವಿಗೆ ಹಾರ್ಮೋನ್ ಚುಚ್ಚುಮದ್ದನ್ನು ನೀಡಲಾಗಿಲ್ಲ ಎಂದು, ಇದನ್ನು ಸಾಮಾನ್ಯವಾಗಿ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನೀಡಲಾಗುತ್ತದೆ.

ಪ್ಯಾಕೆಟ್ ಹಾಲು:

ಪ್ಯಾಕೆಟ್ ಹಾಲು:

ಪ್ಯಾಕೆಟ್ ಹಾಲು ಹೆಚ್ಚಿನ ಜನರು ಬಳಸುವ ಪಡೆಯುವ ಮತ್ತೊಂದು ಸಾಮಾನ್ಯ ಆಯ್ಕೆಯಾಗಿದೆ. ಹಾಲನ್ನು ಕೆಲವು ಪ್ರಮಾಣಿತ ತಾಪಮಾನದಲ್ಲಿ ಪಾಶ್ಚರೀಕರಿಸಲಾಗುತ್ತದೆ, ಅದು ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ. ಆದರೆ, ಈ ಪ್ರಕ್ರಿಯೆಯು ರೋಗಕಾರಕಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸುವುದಿಲ್ಲ. ಟೆಟ್ರಾ ಹಾಲಿಗೆ ಹೋಲಿಸಿದರೆ ಪ್ಯಾಕೆಟ್ ಹಾಲಿನ ಬಾಳಿಕೆ ಜೀವನವು ತುಂಬಾ ಕಡಿಮೆಯಾಗಿದೆ.

ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲು:

ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲು:

ಟೆಟ್ರಾ ಪಾಕ್ ಹಾಲನ್ನು ಉತ್ತಮವಾಗಿ ಪ್ಯಾಕ್ ಮಾಡಲಾಗಿದ್ದು ಅದು ಯಾವುದೇ ಸೂಕ್ಷ್ಮ ಜೀವಿಗಳು ಮತ್ತು ರೋಗಕಾರಕಗಳಿಂದ ರಕ್ಷಿಸಲ್ಪಡುತ್ತದೆ. ಇದು ಹಾಲು ಸುಲಭವಾಗಿ ಹಾಳಾಗುವುದಿಲ್ಲ. ತುಂಬಾ ಸಮಯದವರೆಗೆ ಬಳಸಬಹುದು. ಪ್ಯಾಕೇಜಿಂಗ್ ಸಮಯದಲ್ಲಿ ಎಲ್ಲಾ ರೋಗಕಾರಕಗಳನ್ನು ತೆಗೆದುಹಾಕಿರುವ ಕಾರಣ ಸಂರಕ್ಷಕಗಳನ್ನುಈ ಹಾಲಿಗೆ ಕಡಿಮೆ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಇದಲ್ಲದೆ, ಟೆಟ್ರಾ ಪಾಕ್ ಆರು ಪದರಗಳ ಪ್ಯಾಕೇಜಿಂಗ್ ಅನ್ನು ಹೊಂದಿರುತ್ತದೆ, ಇದು ಹಾಲು ಹಾಳಾಗದಂತೆ ರಕ್ಷಿಸುತ್ತದೆ.

ಯಾವುದು ಉತ್ತಮ?:

ಯಾವುದು ಉತ್ತಮ?:

ಸ್ಪಷ್ಟ ಉತ್ತರವೆಂದರೆ ಕಚ್ಚಾ ಹಾಲು ಅಥವಾ ಹಸಿ ಹಾಲು. ಯಾವುದು ಹಸುವಿನ ಮಾಲೀಕರಿಂದ ಅಥವಾ ಡೈರಿಯಿಂದ ನೇರವಾಗಿ ಮನೆಗೆ ಬರುತ್ತದೋ ಅದು ಉತ್ತಮ ಆದರೆ ಅದರ ಗುಣಮಟ್ಟವನ್ನು ನೀವು ಪರೀಕ್ಷಿಸಬೇಕು. ನೀವು 24 ಗಂಟೆಗಳ ಒಳಗೆ ಹಾಲನ್ನು ಬಳಸಿ ಮುಗಿಸುವುದಾದರೆ ಪ್ಯಾಕೆಟ್ ಹಾಲನ್ನು ಆರಿಸಿಕೊಳ್ಳಬಹುದು. ಮತ್ತೊಂದೆಡೆ, ನೀವು ಹಾಲನ್ನು ಹೆಚ್ಚು ಹೊತ್ತು ಸಂಗ್ರಹಿಸಬೇಕಾದರೆ, ಯಾವುದೇ ಸಂರಕ್ಷಕಗಳನ್ನು ಸೇರಿಸದೆ ದೀರ್ಘಕಾಲದ ಬಾಳಿಕೆ ಹೊಂದಿರುವುದರಿಂದ ಉತ್ತಮ ಆಯ್ಕೆ ಟೆಟ್ರಾ ಪಾಕ್.

English summary

Tetra Milk Vs Packet Milk: Is Carton Milk Better Than Packet Ones?

Here we talking about Tetra Milk Vs Packet Milk: Is carton milk better than packet ones?, read on
X