For Quick Alerts
ALLOW NOTIFICATIONS  
For Daily Alerts

ಹಣ್ಣು-ತರಕಾರಿಗಳಲ್ಲಿನ ಕೀಟನಾಶಕ ತೆಗೆಯಲು ಇಲ್ಲಿವೆ ಸೂಪರ್ ಟಿಪ್ಸ್‌ಗಳು

|

ನಮ್ಮ ಆರೋಗ್ಯ ಚೆನ್ನಾಗಿರಲೆಂದು ಹಣ್ಣುಗಳನ್ನು ತಿನ್ನುತ್ತೇವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಇದೇ ಹಣ್ಣುಗಳಿಂದ ನಮ್ಮ ಆರೋಗ್ಯ ಕೆಡುವ ಸಂಭವವಿದೆ. ಹೌದು, ಹಣ್ಣುಗಳು ಹೆಚ್ಚು ಕಾಲ ಫ್ರೆಶ್‌ ಆಗಿರಲೆಂದು ಅದಕ್ಕೆ ರಾಸಾಯನಿಕರ, ಕೀಟನಾಶಕಗಳನ್ನು ಸಿಂಪಡಿಸಿರುತ್ತಾರೆ. ಇದನ್ನರಿಯದ ನಾವು ಅದನ್ನು ಸರಿಯಾಗಿ ಸ್ವಚ್ಛಗೊಳಿಸದೇ ಸೇವಿಸುತ್ತೇವೆ.

ಮಾರುಕಟ್ಟೆಯಿಂದ ತಂದ ಹಣ್ಣುಗಳನ್ನು ಸೇವಿಸುವ ಮೊದಲು ಅದನ್ನು ತೊಳೆಯುತ್ತೇವೆ ಅಥವಾ ಕನಿಷ್ಠ ಪಕ್ಷ ಅದನ್ನು ನಮ್ಮ ಅಂಗಿಯಿಂದ ಉಜ್ಜಿ ತಿನ್ನುತ್ತೇವೆ. ಆದರೆ, ಈ ಎರಡೂ ವಿಧಾನಗಳು ಯಾವುದೇ ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲ. ಏಕೆಂದರೆ, ತೊಳೆಯುವುದರಿಂದ ಅಥವಾ ಉಜ್ಜುವುದರಿಂದ ಹಣ್ಣುಗಳಲಲ್ಲಿರುವ ಕೀಟನಾಶಕಗಳು ಮತ್ತು ರಾಸಾಯನಿಕಗಳು ದೂರವಾಗುವುದಿಲ್ಲ. ಅದು ಕೇವಲ ನಮ್ಮ ಸಮಾಧಾನಕ್ಕಷ್ಟೇ ಸೀಮಿತವಾಗಿರುತ್ತದೆ. ಹಾಗಾದರೆ ಈ ಹಣ್ಣು-ತರಕಾರಿಗಳಲ್ಲಿರುವ ರಾಸಾಯನಿಕಗಳನ್ನು ತೆಗೆಯುವುದು ಹೇಗಪ್ಪ ಎಂದು ಯೋಚಿಸುತ್ತೀದ್ದೀರಾ? ಈ ಸ್ಟೋರಿ ಓದಿ, ನಿಮಗೇ ತಿಳಿಯುತ್ತೆ.

ಈ ಸುಲಭ ವಿಧಾನಗಳಿಂದ ನೀವು ರಾಸಾಯನಿಕ-ಮುಕ್ತ ಹಣ್ಣುಗಳನ್ನು ಆನಂದಿಸಬಹುದು. ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ತಿನ್ನುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಿರಿ:

ತಿನ್ನುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಿರಿ:

ವಿಜ್ಞಾನ ಮತ್ತು ಪರಿಸರ ಕೇಂದ್ರದ ಪ್ರಕಾರ, 2% ಉಪ್ಪಿನಾಂಶವಿರುವ ನೀರಿನಿಂದ ಹಣ್ಣುಗಳನ್ನು ತೊಳೆಯುವುದು ತರಕಾರಿಗಳು ಮತ್ತು ಹಣ್ಣುಗಳ ಮೇಲ್ಮೈಯಲ್ಲಿ ಸಾಮಾನ್ಯವಾಗಿ ಇರುವ ಕೀಟನಾಶಕಗಳ ಅವಶೇಷಗಳನ್ನು ತೆಗೆದುಹಾಕುತ್ತದೆ. ತಣ್ಣೀರು ಅಥವಾ ಕೋಲ್ಡ್ ನೀರಿನಿಂದ ತೊಳೆಯುವುದರಿಂದ 75 ರಿಂದ 80% ನಷ್ಟು ಕೀಟನಾಶಕ ಅವಶೇಷಗಳನ್ನು ತೆಗೆದುಹಾಕುತ್ತದೆ.

ಉಪ್ಪುನೀರಿನಿಂದ ತೊಳೆಯಿರಿ:

ಉಪ್ಪುನೀರಿನಿಂದ ತೊಳೆಯಿರಿ:

ಇದು ಬಹುಶಃ ಅತ್ಯಂತ ಮೂಲಭೂತವಾಗಿ ಮಾಡಬೇಕಾದ ಕಾರ್ಯವಾಗಿದೆ. ಇದಕ್ಕೆ ನಿಮಗೆ ಬೇಕಾಗಿರುವುದು ದೊಡ್ಡ ಬೌಲ್, ಉಪ್ಪು ಮತ್ತು ನೀರು. ಒಂದು ಬೌಲ್‌ಗೆ ಎರಡು ಚಮಚ ಉಪ್ಪನ್ನು ನಾಲ್ಕು ಕಪ್ ಬೆಚ್ಚಗಿನ ನೀರಿಗೆ ಹಾಕಿ, ಹಣ್ಣುಗಳನ್ನು ಅದರಲ್ಲಿ 30-60 ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ, ಹಣ್ಣುಗಳನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಆದರೆ, ಈ ವಿಧಾನವು ಬೆರಿಗಳಿಗೆ ಸೂಕ್ತವಲ್ಲ, ಏಕೆಂದರೆ, ನೆನೆಸುವಿಕೆಯಿಂದ ಹಾನಿಗೊಳಗಾಗಬಹುದು ಮತ್ತು ಉಪ್ಪು ರುಚಿಯನ್ನು ಗಾಳಿಗೆ ತೂರಬಹುದು.

ಅಡುಗೆಸೋಡಾದ ಬಳಕೆ:

ಅಡುಗೆಸೋಡಾದ ಬಳಕೆ:

ಕೆಲವು ಅಧ್ಯಯನಗಳ ಪ್ರಕಾರ, ಅಡಿಗೆ ಸೋಡಾದಲ್ಲಿ ಹಣ್ಣುಗಳನ್ನು ನೆನೆಸುವುದರಿಂದ ರಾಸಾಯನಿಕಗಳ ಮಟ್ಟವನ್ನು 96%ರಷ್ಟು ಕಡಿಮೆ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಒಂದು ದೊಡ್ಡ ಬಟ್ಟಲಲ್ಲಿ ಅರ್ಧದಷ್ಟು ನೀರು ತುಂಬಿಸಿ. ಇದಕ್ಕೆ ಒಂದು ಚಮಚ ಅಡಿಗೆ ಸೋಡಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಸ್ವಚ್ಛಗೊಳಿಸಲು ಬಯಸುವ ಹಣ್ಣುಗಳನ್ನು ಹಾಕಿ, ಕೆಲವು ನಿಮಿಷಗಳ ಕಾಲ ನೆನೆಯಲು ಬಿಡಿ. ತದನಂತರ ಬ್ರಷ್‌ನೊಂದಿಗೆ ಹಣ್ಣನ್ನು ಸ್ವಚ್ಛವಾಗಿಸಲು ಪ್ರಯತ್ನಿಸಿ. ಆದರೆ, ಹಣ್ಣಿನ ಹೊರ ಚರ್ಮ ತೆಳುವಾಗಿದ್ದರೆ, ಈ ಹಂತವನ್ನು ಬಿಟ್ಟುಬಿಡಿ. ಒಣಗಿದ ಟವೆಲ್‌ನಿಂದ ಹಣ್ಣನ್ನು ಒರೆಸಿದ ನಂತರ ಅದನ್ನು ಆನಂದಿಸಿ.

ವಿನೆಗರ್ ನಿಂದ ತೊಳೆಯಿರಿ:

ವಿನೆಗರ್ ನಿಂದ ತೊಳೆಯಿರಿ:

ಹಣ್ಣುಗಳನ್ನು ಉಪ್ಪು ನೀರಿನಲ್ಲಿ ನೆನೆಸುವ ಬದಲು ಈ ಪರ್ಯಾಯ ವಿಧಾನವನ್ನು ಬಳಸಬಹುದು. ದೊಡ್ಡ ಬೌಲ್‌ನಲ್ಲಿ ನಾಲ್ಕು ಭಾಗಗಳಷ್ಟು ನೀರಿಗೆ, ಒಂದು ಭಾಗ ವಿನೆಗರ್ ಅನ್ನು ಸೇರಿಸಿ. ಎಲ್ಲಾ ಹಣ್ಣುಗಳನ್ನು ಈ ಮಿಶ್ರಣದಲ್ಲಿ 30-60 ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ, ಅದನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಕಲ್ಮಶಗಳನ್ನು ತೊಡೆದುಹಾಕಲು ಮತ್ತು ನಿಮ್ಮ ಹಣ್ಣನ್ನು ಹಾಳಾಗದಂತೆ ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ .

ಅರಿಶಿನ ಹಾಗೂ ಉಪ್ಪು:

ಅರಿಶಿನ ಹಾಗೂ ಉಪ್ಪು:

ಹಣ್ಣು ತರಕಾರಿಗಳನ್ನು ತೊಳೆಯಲು ಅರಿಶಿನ ಮತ್ತು ಉಪ್ಪು ಬಳಸಬಹುದು. ಏಕೆಂದರೆ ಇವುಗಳಲ್ಲಿ ಕ್ರಿಮಿನಾಶಕಗಳನ್ನು ಕೊಲ್ಲುವ ಅಂಶ ಇವೆ. ನೀರಿಗೆ ಅರಿಶಿನ ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ, ಆ ನೀರಿನಲ್ಲಿ ಹಣ್ನು-ತರಕಾರಿಗಳನ್ನು ತೊಳೆದು, ತದನಂತರ ಕೋಲ್ಡ್‌ ನೀರಿನಿಂದ ತೊಳೆಯುವುದರಿಂದ ಹಣ್ಣುಗಳಲ್ಲಿರುವ ಕೊಳೆಯನ್ನು ತೆಗೆದುಹಾಕಬಹುದು.

English summary

Simple Methods to Remove Toxins & Pesticides From Fruits in Kannada

Here we talking about Simple Methods to Remove Toxins & Pesticides From Fruits in Kannada, read on
Story first published: Saturday, October 9, 2021, 12:13 [IST]
X
Desktop Bottom Promotion