For Quick Alerts
ALLOW NOTIFICATIONS  
For Daily Alerts

ಶ್ರಾವಣದಲ್ಲಿ ತುಳಸಿ ಗಿಡ ಯಾವ ದಿಕ್ಕಿನಲ್ಲಿ ನೆಟ್ಟರೆ ಅದೃಷ್ಟ

|

ಶ್ರಾವಣ ಮಾಸವೆಂದರೆ ಶುಭದ ಮಾಸ. ಹಬ್ಬ-ಹರಿದಿನಗಳು, ವ್ರತಗಳು ಬರವುದರಿಮದ ಶ್ರಾವಣದ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಶ್ರಾವಣ ಮಾಸ ಶಿವನಿಗೆ ಮೀಸಲಿಟ್ಟ ಮಾಸ. ಈ ತಿಂಗಳು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಹಾಗೂ ಕಷ್ಟಗಳು ದೂರವಾಗುವುದು.

Planting Tulasi In shravan Masa Is Good Sign

ಶ್ರಾವಣ ಮಾಸದಲ್ಲಿ ಕೆಲವೊಂದು ವಿಷಯಗಳನ್ನು ಮಾಡಬಾರದು, ಉದಾಹರಣೆ ಈ ಮಾಸದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ. ವ್ರತವನ್ನು ಪಾಲಿಸಬೇಕು. ಇನ್ನು ಶ್ರಾವಣ ಮಾಸದಲ್ಲಿ ಅದರಲ್ಲೂ ಶ್ರಾವಣ ಸೋಮವಾರ, ಶುಕ್ರವಾರ ಕೆಲವೊಂದು ವಿಷಯ ಮಾಡಿದರೆ ಅದೃಷ್ಟವೂ ಲಭಿಸುವುದು. ಉದಾಹರಣೆ ಶ್ರಾವಣ ಸೋಮವಾರ ಮನೆಗೆ ವಿಭೂತಿ ತರುವುದು, ರುದ್ರಾಕ್ಷ ಧರಿಸುವುದು ಇವೆಲ್ಲಾ ಒಳ್ಳೆಯದು ಎಂದು ಹೇಳಲಾಗುತ್ತದೆ.

ಅದೇ ರೀತಿ ಶ್ರಾವಣದಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಕೂಡ ಶುಭ ಉಂಟಾಗುವುದು. ಯಾವ ತುಳಸಿ ಗಿಡ ನೆಡಬೇಕು, ಇದನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುವುದರ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಶಿವನ ಪೂಜೆಯಲ್ಲಿ ತುಳಸಿ ಬಳಸಲ್ಲ

ಶಿವನ ಪೂಜೆಯಲ್ಲಿ ತುಳಸಿ ಬಳಸಲ್ಲ

ಶಿವನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ. ವಿಷ್ಣುವಿನ ಎಲ್ಲಾ ಪೂಜೆಯಲ್ಲಿ ತುಳಸಿ ಬಳಸಲಾಗುವುದು. ತುಳಸಿ ವಿಷ್ಣುವಿಗೆ ಪ್ರಿಯವದವಳು ಎಂದು ಶಿವ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ. ಏಕೆ ಬಳಸುವುದಿಲ್ಲ ಎಂಬುವುದಕ್ಕೆ ಒಂದು ಪೌರಾಣಿಕ ಕತೆಯೂ ಇದೆ. ಶಂಕುಚುದ್ ಎಂಬ ಅಸುರನಿದ್ದ, ಆತನು ಬ್ರಹ್ಮನ ಕುರಿತು ತೀವ್ರ ತಪಸ್ಸು ಮಾಡುತ್ತಾನೆ. ಆತನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವತೆಗಳನ್ನೇ ಸೋಲಿಸುವ ಶಕ್ತಿ ಪಡೆಯುತ್ತಾನೆ. ಅಲ್ಲದೆ ಬ್ರಹ್ಮನು ಈತನಿಗೆ ಅತ್ಯಂತ ಪವಿತ್ರಳಾದ ತುಳಸಿಯನ್ನೂ ಮದುವೆಯಾಗುವಂತೆಯೂ ಆಶೀರ್ವದಿಸುತ್ತಾನೆ. ಈತ ತನ್ನ ತಪಸ್ಸಿನ ಬಲದಿಂದ ದೇವತೆಗಳಿಗೆ ಕಿರುಕುಳ ಕೊಡಲಾರಂಭಿಸುತ್ತಾನೆ. ಈತನ ಉಪಟಳಕ್ಕೆ ಕೊನೆ ಹಾಡಲು ನಿರ್ಧರಿಸಿದ ವಿಷ್ಣು ಶಂಕುಚುದ್ ರೂಪ ಧರಿಸಿ ತುಳಸಿ ಬಳಿ ಬರುತ್ತಾನೆ. ಇದರಿಂದ ತುಳಸಿಯ ಪವಿತ್ರತೆಗೆ ದಕ್ಕೆಯಾಗುವುದು. ಶಿವ-ಶಂಕುಚುದ್ ನಡುವೆ ಯುದ್ಧ ನಡೆಯುತ್ತದೆ. ಶಂಕುಚುದ್ ಶಕ್ತಿ ಕುಂದುವುದು, ಆತ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಇದರಲ್ಲಿ ತುಳಸಿಯ ತಪ್ಪು ಏನೂ ಇಲ್ಲದ ಕಾರಣ ಆತನಿಗೆ ದೈವಿಕ ಶಕ್ತಿ ಕರುಣಿಸುತ್ತಾನೆ. ಅಲ್ಲದೆ ವಿಷ್ಣುವಿಗೆ ಪ್ರಿಯವಾದವಳಾಗಿ ಇರುವಂತೆ ಆಶೀರ್ವಾದ ಮಾಡುತ್ತಾನೆ. ಹೀಗಾಗಿ ಶಿವನ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.

ಶ್ರಾವಣದಲ್ಲಿ ತುಳಸಿ ಗಿಡ ನೆಟ್ಟರೆ ಒಳ್ಳೆಯದು

ಶ್ರಾವಣದಲ್ಲಿ ತುಳಸಿ ಗಿಡ ನೆಟ್ಟರೆ ಒಳ್ಳೆಯದು

ತುಳಸಿಯನ್ನು ಶಿವನ ಪೂಜೆಗೆ ಬಳಸಲ್ಲ, ಆದರೆ ಶ್ರಾವಣದಲ್ಲಿ ತುಳಸಿ ಗಿಡ ನೆಡುವುದರಿಂದ ಅದೃಷ್ಟ ಉಂಟಾಗುವುದು ಎಂದು ಹೇಳಲಾಗುತ್ತದೆ. ತುಳಸಿಯಲ್ಲಿ ಕೃಷ್ಣ ತುಳಸಿ ಹಾಗೂ ಲಕ್ಷ್ಮಿ ತುಳಸಿ ಎರಡೂ ಗಿಡ ಜೊತೆಗೆ ನೆಡಬೇಕು.

 ವಾಸ್ತ ಪ್ರಕಾರ ತುಳಸಿ ಗಿಡ ಯಾವ ದಿಕ್ಕಿನಲ್ಲಿರಬೇಕು

ವಾಸ್ತ ಪ್ರಕಾರ ತುಳಸಿ ಗಿಡ ಯಾವ ದಿಕ್ಕಿನಲ್ಲಿರಬೇಕು

ವಾಸ್ತು ಪ್ರಕಾರ ತುಳಸಿ ಗಿಡವನ್ನು ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಒಳ್ಳೆಯದು. ಇದು ಮನೆಯನ್ನು ಋಣಾತ್ಮಕ ಶಕ್ತಿಯಿಂದ ರಕ್ಷಣೆ ಮಾಡುತ್ತದೆ. ತುಳಸಿ ಗಿಡ ಮನೆ ಮುಂದೆ ಇದ್ದರೆ ಶುಭ ಉಂಟಾಗುವುದು.

ತುಳಸಿ ಗಿಡದ ಅಕ್ಕ-ಪಕ್ಕ ಬಾಳೆ ಗಿಡ ನೆಟ್ಟರೆ ಮತ್ತಷ್ಟು ಒಳ್ಳೆಯದು ಎನನ್ನುತ್ತಾರೆ. ಇದರಿಂದ ಧನ, ಧಾನ್ಯ ವೃದ್ಧಿಯಾಗುವುದು.

ತುಳಸಿ ಶ್ರೇಯಸ್ಸಿನ ಸಂಕೇತ ಹಾಗೂ ಆರೋಗ್ಯಕ್ಕೂ ಒಳ್ಳೆಯದು

ತುಳಸಿ ಶ್ರೇಯಸ್ಸಿನ ಸಂಕೇತ ಹಾಗೂ ಆರೋಗ್ಯಕ್ಕೂ ಒಳ್ಳೆಯದು

ತುಳಸಿ ಮನೆಯ ಮುಂದೆ ಇದ್ದರೆ ಶ್ರೇಯಸ್ಸು ಉಂಟಾಗುವುದು. ತುಳಸಿ ಗಿಡಕ್ಕೆ ನಿತ್ಯ ನೀರು ಎರೆಯುವುದು, ಪೂಜೆ ಮಾಡುವುದು ಮಾಡುವುದರಿಂದ ಮನೆಯವರಿಗೆ ಒಳಿತಾಗುತ್ತದೆ. ಅಲ್ಲದೆ 3-4 ಎಲೆಯನ್ನು ಬಾಯಿಗೆ ಜಗಿದರೆ ಇದರಿಂದ ಕೆಮ್ಮು, ಅಸ್ತಮಾದಂಥ ಕಾಯಿಲೆ ಬರುವುದನ್ನು ತಡೆಗಟ್ಟಬಹುದು. ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ ಮನೆಯಾದರೆ ತುಳಸಿ ಗಿಡವೊಂದು ಇರಲೇಬೇಕು.

English summary

Planting Tulasi In Shravana Masa Is Good Sign

Here we have told why one should plant tulasi(Basil) in shravan masa, Read on
X
Desktop Bottom Promotion