For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಡ್ರೈ ಆಗಿ ಇಡಲು ಇಲ್ಲಿವೆ ಟಿಪ್ಸ್ ಗಳು

|

ಪ್ರತಿಯೊಬ್ಬರೂ ಮಳೆಗಾಲವನ್ನು ಇಷ್ಟಪಡುತ್ತಾರೆ. ಆದರೆ ಈ ಋತುವಿನಲ್ಲಿ, ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವೊಂದು ಆಹಾರ ಪದಾರ್ಥಗಳು ತೇವಾಂಶದಿಂದಾಗಿ ಹಾಳಾಗುತ್ತವೆ. ಅಂತಹ ಪದಾರ್ಥಗಳಲ್ಲಿ ಸಕ್ಕರೆ ಮತ್ತು ಉಪ್ಪು ಕೂಡ ಸೇರಿಕೊಂಡಿವೆ. ನಿರಂತರ ಮಳೆಯಿಂದ ಉಂಟಾಗುವ ತೇವಾಂಶದಿಂದಾಗಿ ಸಕ್ಕರೆ ಮತ್ತು ಉಪ್ಪು ಜಿಗುಟಾಗಿ, ನೀರಾದಂತೆ ಭಾಸವಾಗುವುದು. ಅಂತಹ ಪರಿಸ್ಥಿತಿಯಲ್ಲಿ, ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ಸುಲಭವಾಗಿ ಈ ಸಮಸ್ಯೆಯನ್ನು ಕೊನೆಗೊಳಿಸಬಹುದು.

ಮಳೆಗಾಲದಲ್ಲಿ ಉಪ್ಪು ಮತ್ತು ಸಕ್ಕರೆ ಅಂಟುಅಂಟಾಗುವುದನ್ನು ತಡೆಯಲು ಈ ಕೆಳಗಿನ ವಿಧಾನಗಳನ್ನು ಬಳಸಬಹುದು:

ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸಬೇಡಿ:

ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸಬೇಡಿ:

ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಕ್ಕರೆ ಅಥವಾ ಉಪ್ಪು ಸಂಗ್ರಹ ಮಾಡಿಟ್ಟರೆ, ತೇವಾಂಶ ಅದರೊಳಗೆ ಸೇರುವ ಸಾಧ್ಯತೆ ಹೆಚ್ಚಾಗಿರುವುದು. ಅದಕ್ಕಾಗಿ ಮಳೆ ಬೀಳಲು ಪ್ರಾರಂಭವಾದ ತಕ್ಷಣ, ಪ್ಲಾಸ್ಟಿಕ್ ಪೆಟ್ಟಿಗೆಯಿಂದ ಸಕ್ಕರೆಯನ್ನು ತೆಗೆದು, ಅದನ್ನು ಗಾಜಿನ ಜಾರ್ ಗೆ ಹಾಕಿಡಿ. ಇದಲ್ಲದೆ, ಸಕ್ಕರೆಯನ್ನು ಏನಕ್ಕಾದರು ಬಳಸಲು ತೆಗೆಯುವಾಗ ಯಾವಾಗಲೂ ಒಣ ಚಮಚವನ್ನು ಬಳಸಿ. ಒದ್ದೆಯಾದ ಚಮಚವು ಸಕ್ಕರೆ ಉಂಡೆಯಾಗಲು ಕಾರಣವಾಗುವುದು.

ಅಕ್ಕಿ ಜೊತೆ ಇಡಿ:

ಅಕ್ಕಿ ಜೊತೆ ಇಡಿ:

ಡಬ್ಬಿಯಲ್ಲಿ ಸಕ್ಕರೆ ಅಥವಾ ಉಪ್ಪನ್ನು ತುಂಬಿಡುವ ಮೊದಲು ಅವುಗಳಲ್ಲಿ ಸ್ವಲ್ಪ ಧಾನ್ಯಗಳನ್ನು ಹಾಕಿ ಇಡಿ. ಇದಕ್ಕಾಗಿ ಸ್ವಲ್ಪ ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಹಾಕಿ ಕಟ್ಟಿ ಇಡಿ. ಅದನ್ನು ಉಪ್ಪು ಅಥವಾ ಸಕ್ಕರೆ ಡಬ್ಬಿಯಲ್ಲಿ ಹಾಕಿಡಿ. ಇದನ್ನು ಮಾಡುವುದರಿಂದ, ಅಕ್ಕಿ ಸಕ್ಕರೆ ಮತ್ತು ಉಪ್ಪಿನಲ್ಲಿರುವ ಹೆಚ್ಚುವರಿ ಮಾಯಿಶ್ಚರೈಸರ್ ಅನ್ನು ಹೀರಿಕೊಳ್ಳುತ್ತದೆ, ಅವುಗಳನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ಮತ್ತು ಒಣಗಿರುವಂತೆ ಮಾಡುವುದು.

ಬ್ಲೋಟಿಂಗ್ ಕಾಗದದ ಬಳಕೆ:

ಬ್ಲೋಟಿಂಗ್ ಕಾಗದದ ಬಳಕೆ:

ಸಕ್ಕರೆಯನ್ನ ನೇರವಾಗಿ ಜಾರ್ ಗೆ ಹಾಕುವ ಮೊದಲು, ಬ್ಲೋಟಿಂಗ್ ಪೇಪರ್ ಬಳಸಿ. ಸಕ್ಕರೆಯನ್ನು ತೇವಾಂಶದಿಂದ ರಕ್ಷಿಸಲು, ಜಾರ್ ನೊಳಗೆ ಬ್ಲೋಟಿಂಗ್ ಪೇಪರ್ ಹಾಕಿ ನಂತರ ಸಕ್ಕರೆಯನ್ನು ತುಂಬಿ. ಅಥವಾ ಡಬ್ಬಿಯ ಬಾಯಿ ಮುಚ್ಚಳದ ಮೊದಲು ಒಂದು ಬ್ಲೋಟಿಂಗ್ ಪೇಪರ್ ಇಡಿ. ಅಕ್ಕಿಯಂತೆ, ಬ್ಲೋಟಿಂಗ್ ಪೇಪರ್ ಸಹ ಹೆಚ್ಚುವರಿ ಮಾಯಿಶ್ಚರೈಸರ್ ಅನ್ನು ಹೀರಿಕೊಳ್ಳುತ್ತದೆ . ಮಳೆಗಾಲದಲ್ಲಿ ಸಕ್ಕರೆ ಮತ್ತು ಉಪ್ಪು ಮಾತ್ರವಲ್ಲ, ಬಿಸ್ಕತ್ತು, ಕುಕೀಸ್ ಮತ್ತು ಚಿಪ್ಸ್ ಸಹ ಮೃದುವಾಗುತ್ತವೆ. ತೇವಾಂಶದಿಂದ ರಕ್ಷಿಸಲು ಈ ವಸ್ತುಗಳನ್ನು ಬ್ಲೋಟಿಂಗ್ ಪೇಪರ್‌ನಲ್ಲಿ ಸುತ್ತಿ, ಗಾಳಿಯಾಡದ ಕಂಟೇನರ್‌ಗಳಲ್ಲಿ ಇರಿಸಿ.

ಲವಂಗ :

ಲವಂಗ :

ಮಳೆಗಾಲದಲ್ಲಿ ಸಕ್ಕರೆಯನ್ನು ತೇವಾಂಶದಿಂದ ರಕ್ಷಿಸಲು, ನೀವು 5 ರಿಂದ 7 ಲವಂಗವನ್ನು ಬಟ್ಟೆಯಲ್ಲಿ ಕಟ್ಟಿ ಸಕ್ಕರೆ ಪೆಟ್ಟಿಗೆಯಲ್ಲಿ ಇಡಬಹುದು . ಇದನ್ನು ಮಾಡುವುದರಿಂದ, ಮಳೆಗಾಲದಲ್ಲಿ ಸಕ್ಕರೆಯಲ್ಲಿ ತೇವಾಂಶ ಇರುವುದಿಲ್ಲ. ಇದೇ ವಿಧಾನವನ್ನು ಉಪ್ಪಿಗೂ ಬಳಸಬಹುದು. ಉಪ್ಪಿನ ಡಬ್ಬಿಯಲ್ಲಿ ಲವಂಗ ಕಟ್ಟಿ ಇಡಿ. ಇದು ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುವುದು.

ಟೂತ್ ಪಿಕ್ ಗಳನ್ನು ಹಾಕಿ:

ಟೂತ್ ಪಿಕ್ ಗಳನ್ನು ಹಾಕಿ:

ಮಳೆಗಾಲದಲ್ಲಿ ಸಕ್ಕರೆಯನ್ನು ತೇವಾಂಶದಿಂದ ರಕ್ಷಿಸಲು ಟೂತ್ ಪಿಕ್ ಅನ್ನು ಸಹ ಬಳಸಬಹುದು. ಇದಕ್ಕಾಗಿ, ಸಕ್ಕರೆ ಜಾರ್ನಲ್ಲಿ 3 ರಿಂದ 4 ಟೂತ್ಪಿಕ್ಸ್ ಅನ್ನು ಮುಂಚಿತವಾಗಿ ಹಾಕಿ. ಇದು ಸಕ್ಕರೆಯಿಂದ ಹೆಚ್ಚುವರಿ ಮಾಯಿಶ್ಚರೈಸರ್ ಅನ್ನು ಹೀರಿಕೊಳ್ಳುವುದು. ಅದನ್ನು ಸಕ್ಕರೆಯಿಂದ ಸುಲಭವಾಗಿ ತೆಗೆಯಬಹುದು.

English summary

Monsoon Food Care Tips : Tips to Keep Sugar and Salt Dry During Monsoon

Here we talking about Monsoon Food Care Tips : Tips to Keep Sugar and Salt Dry During Monsoon, read on
Story first published: Thursday, June 24, 2021, 15:02 [IST]
X
Desktop Bottom Promotion